TUMAKURU:SHAKTHI PEETA FOUNDATION
ಕಳೆದ ಹಲವಾರು ವರ್ಷಗಳಿಂದ ‘ಜ್ಞಾನಿಗಳ ಕನೆಕ್ಟ್’ ಮಾಡುತಿದ್ದ, ಕೃಷಿ ಆಶ್ರಮಗಳ ಅಭಿಯಾನ ಇನ್ನೂ ಮುಂದೆ ‘ಕಾರ್ಪೋರೇಟ್ ಕಲ್ಚರ್’ ಮಾದರಿಯಲ್ಲಿ, ‘ದುಡಿಮೆಯೊಂದಿಗೆ ಸೇವೆ’ ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಯೊಂದು ಕೃಷಿ ಆಶ್ರಮವೂ ತಮ್ಮ ಖರ್ಚುವೆಚ್ಚ – ಆದಾಯ ಪ್ರಕಟಣೆ ಮಾಡುವ ಪರಿಪಾಠ ಬರಬೇಕು.
ಕೃಷಿ ಆಶ್ರಮದವರ ಮಕ್ಕಳ ಯುವ ಜನಾಂಗಕ್ಕೆ ಹಾಗೂ ಕೃಷಿ ಆಶ್ರಮದವರ ಮೂಲಕವೇ ಸೂಕ್ತ ಸಂಭಾವನೆ ನೀಡುವ ಮೂಲಕ ಹೆಚ್ಚಿನ ಸೇವೆ ಪಡೆಯಲು ನಿರ್ಧರಿಸಲಾಗಿದೆ.
ಯಾವುದೂ ಉಚಿತ ಸೇವೆ ಬೇಡ, ಪ್ರತಿಯೊಂದಕ್ಕೂ ಒಂದು ಮೌಲ್ಯ ನಿಗಧಿಪಡಿಸಿ, ಒಳ್ಳೆಯ ಗುಣಮಟ್ಟದ ಸೇವೆ ಒದಗಿಸೋಣ. ನಾವು ಹಣ ಪಡೆಯುವುದಿಲ್ಲ ಎನ್ನುವವರು ದಾನಿಗಳೆಂದು ಘೋಷಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಶಕ್ತಿಪೀಠ ಫೌಂಡೇಷನ್ ಕೃಷಿ ಆಶ್ರಮಗಳ ಮಾನಿಟರಿಂಗ್ ಸೆಲ್- ನಾಲೇಡ್ಜ್ ಬ್ಯಾಂಕ್ – ರಾಜ್ಯ ಮಟ್ಟದ ಕಚೇರಿ – ರಾಜ್ಯ ಮಟ್ಟದ ಮ್ಯೂಸಿಯಂ – ರಾಜ್ಯ ಮಟ್ಟದ ಕ್ಯಾಂಪಸ್ ಸ್ಥಾಪನೆಗೆ ವಿಶೇಷ ಆಸಕ್ತಿ ವಹಿಸಲಿದೆ. ನಿರ್ವಹಣೆ ಮಾಡುವ ಹೊಣೆಗಾರಿಕೆಯನ್ನೂ ಹೊರಗುತ್ತಿಗೆ ನೀಡಲಾಗುವುದು,
ಜನ ಜಾಗೃತಿ ಆಂದೋಲನಕ್ಕೆ ಕೃಷಿ ಆಶ್ರಮಗಳ ಟಾಸ್ಕ್ ಪೋರ್ಸ್ ನಿರ್ಣಯಗಳ ನಂತರ, ಯಾವುದೇ ಆರ್ಥಿಕ ವ್ಯವಹಾರಗಳಿಗೆ ಡಾ.ನಾಗಭೂಷಣ್, ಡಾ.ಜಗನ್ನಾಥ್ ಮತ್ತು ಡಾ.ಸಂತೋಷ್ ರವರ ಅನುಮತಿ ಆದೇಶ ಹಾಗೂ ಉನ್ನತ ಮಟ್ಟದ ತಾಂತ್ರಿಕ ಸಮಿತಿ, ಟ್ರೆಡಿಷನಲ್ ನಾಲೇಡ್ಜ್ ಸೆಲ್, ಲೀಗಲ್ ಸೆಲ್ ಮತ್ತು ಆಡಿಟ್ ಸೆಲ್ ಅಭಿಪ್ರಾಯ ಕಡ್ಡಾಯ ಸೂಕ್ತ.
ಆರ್ಥಿಕ ಸಂಗ್ರಹದ ಮಾಡೆಲ್ ಸೇರಿದಂತೆ, ವನಲೋಕ ಪೌಂಡೇಷನ್ ಹೊಣೆಗಾರಿಕೆ ಪಡೆದು ಕೊಳ್ಳುವ ಬಗ್ಗೆ ಪ್ರಾರಂಭಿಕ ಚರ್ಚೆ ಆರಂಭವಾಗಿದೆ. ಹಣದ ವ್ಯವಹಾರಕ್ಕೂ, ಶಕ್ತಿಪೀಠ ಫೌಂಡೇಷನ್‍ಗೂ ಯಾವುದೇ ಸಂಭಂದವಿರುವುದಿಲ್ಲಾ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಗಬೇಕಾಗಿರುವ, ಎಲ್ಲಾ ಕೆಲಸಗಳ ಹೊಣೆಗಾರಿಕೆಯನ್ನು ಶಕ್ತಿಪೀಠ ಫೌಂಡೇಷನ್ ಹೊರಲಿದೆ.
ಪ್ರತಿಯೊಬ್ಬರಿಗೂ ಅನುಮತಿ ಪಡೆದು ಮಾಡಿದ, ಖರ್ಚುವೆಚ್ಚಗಳು, ಭತ್ಯೆಗಳು ನೇರವಾಗಿ ಡಿಜಿಟಲ್ ಪಾವತಿಯಾಗಲಿದೆ. ಮೊದಲ ವ್ಯವಹಾರ ಆರಂಭವಾಗಿದೆ.

ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿ ಶಕ್ತಿಪೀಠ ಇ ಪೇಪರ್‍ನಲ್ಲಿ ಪ್ರಕಟವಾಗಲಿದೆ. ಇಲ್ಲಿ ಹಿಡನ್ ಅಜೆಂಡಾ ಆರಂಭದಿಂದಲೇ ಇರಬಾರದು.