23rd August 2025
Share

TUMAKURU:SHAKTHI PEETA FOUNDATION

  ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರತಿಯನ್ನು ಬಿಡುಗಡೆ ಮಾಡಿದಾಗ 545 ಆರ್ ಅಂಡ್ ಡಿ ಮಾಡಲು ಪಟ್ಟಿ ಮಾಡಿದ್ದೆ, ನಂತರ 753 ಕ್ಕೆ ಹೆಚ್ಚುವರಿಯಾಗಿತ್ತು. ಕೃಷಿ ಆಶ್ರಮಗಳ ಜೊತೆ ಒಡನಾಟ ಇಟ್ಟು ಕೊಂಡಾಗ, 108 ಕೃಷಿ ಆಶ್ರಮಗಳು, ನಂತರ 1008 ಕೃಷಿ ಆಶ್ರಮಗಳು, ಮತ್ತೆ ಜ್ಞಾನಿಗಳೊಂದಿಗೆ ಸಮಾಲೋಚನೆ ಮಾಡಿದಾಗ, ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 5 ರಂತೆ, ಅಂದರೆ 5 * 224 = 1120 ಕೃಷಿ ಆಶ್ರಮ ರಚಿಸಿ, ಒಂದೊಂದು ಕಳೆ- ಬೆಳೆ ಸಂಶೋಧನೆ, ನಾಲೇಡ್ಜ್ ಬ್ಯಾಂಕ್, ಮ್ಯೂಸಿಯಂ’ ಸ್ಥಾಪಿಸಲು ಸಲಹೆ ನೀಡಿದರು.

ಈ ಹಿನ್ನಲೆಯಲ್ಲಿ ‘1120 ಕೃಷಿ ಆಶ್ರಮಗಳಿಗೆ  ನಂಬರ್ ಒನ್ ಕರ್ನಾಟಕ @ 2047  ಘೋಷಣೆಯೊಂದಿಗೆ  ಹೆಚ್ಚುವರಿ ಹೊಣೆಗಾರಿಕೆ’ ನೀಡಲು ಒಂದು ಪಟ್ಟಿ ಸಿದ್ಧಪಡಿಸಲಾಗಿದೆ. ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಭೆಯಲ್ಲಿ ಸಮಾಲೋಚನೆ ನಡೆಸಿ ಮುಂದುವರೆಯಲಾಗುವುದು.