TUMAKURU:SHAKTHI PEETA FOUNDATION
ನಾನು ದಿನಾಂಕ:29.08.2025 ರಂದು, ನನ್ನ ವಾಹನದ ಆರ್.ಸಿ ರಿನ್ಯೂವಲ್ ಕೆಲಸದ ನಿಮಿತ್ತ, ತುಮಕೂರು ಆರ್.ಟಿ.ಓ ಕಚೇರಿಗೆ ಭೇಟಿ ನೀಡಿದ್ದೆ. ಅಲ್ಲಿದ್ದ ತುಮಕೂರು ಡ್ರೈವಿಂಗ್ ಸ್ಕೂಲ್ ಅಸೋಶಿಯೇಷನ್ ಅಧ್ಯಕ್ಷರಾದ ಶ್ರೀ ಶಿವಕುಮಾರ್ ರವರು, ಆರ್.ಟಿ.ಓ ರವರಾದ ಶ್ರೀ ಪ್ರಸಾದ್ ರವರ ಕಚೇರಿಯಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿ, ತರಭೇತಿ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ 12 ಎಕರೆ ಜಮೀನು ಮಂಜೂರು ಮಾಡಿದ್ದಾರೆ. ಅದು ನ್ಯಾಯಾಲಯದಲ್ಲಿ ಇದೆ, ಏನಾದರೂ ಮಾಡಿ ಜಮೀನು ಕೊಡಿಸಿ ಎಂಬ ಬೇಡಿಕೆ ಇಟ್ಟರು.

ನಾನು ಬಹಳ ಹಿಂದೆ, ಆರ್.ಟಿ.ಓ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ರಾಜೇಶ್ ಅವರ ಮನವಿ ಮೇರೆಗೆ, ಆ ಜಮೀನು ಮಂಜೂರು ಮಾಡಲು ಆಗಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀ ಮೋಹನ್ ರಾಜ್‍ರವರ ಜೊತೆ ಮಾತನಾಡಿದ್ದು ನನೆಪಿಗೆ ಬಂತು. ಆರ್.ಟಿ.ಓ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ನರಸಿಂಹಮೂರ್ತಿರವರು ಆನೇಕ ಭಾರಿ ಈ ಬಗ್ಗೆ ಚರ್ಚೆ ನಡೆಸಿದ್ದರು.
ಶಿವಕುಮಾರ್ ರವರ ಮನವಿ ಮೇರೆಗೆ, ಅವರಿಗೆ ನಾನೊಂದು ವಿನೂತನ ಪ್ರಸ್ತಾವನೆ ಮುಂದಿಟ್ಟೆ. ಆರ್.ಟಿ.ಓ ರವರ ಸಮ್ಮುಖದಲ್ಲಿ ಚರ್ಚೆಯಾಗುತ್ತಿದೆ. ನಿಮ್ಮ ಬೇಡಿಕೆ ಜೊತೆಗೆ ತುಮಕೂರು ನಗರದಲ್ಲಿ ಇರುವ ಎಲ್ಲಾ ಬಾಡಿಗೆ ಸರ್ಕಾರಿ ಕಚೇರಿಗಳಿಗೆ, ಸರ್ಕಾರಿ ಹಾಸ್ಟೆಲ್‍ಗಳಿಗೂ ಸರ್ಕಾರಿ ಜಮೀನು ಮಂಜೂರು ಮಾಡಿಸೋಣ,
ಇದಕ್ಕೋಸ್ಕರವೇ ಇಬ್ಬರ ನೌಕರರನ್ನು ನೇಮಿಸಿಕೊಂಡು ಸಮೀಕ್ಷೆ ನಡೆಸಿ, ಎಲ್ಲಾ ಹೋರಾಟಗಾರರ ಸಹಕಾರ ಪಡೆದು, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು, ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣನವರು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‍ರವರು, ತುಮಕೂರು ಗ್ರಾಮಾಂತರ ಶಾಸಕರಾದ ಶ್ರೀ ಸುರೇಶ್ ಗೌಡರವರೊಂದಿಗೂ ಸಮಾಲೋಚನೆ ಎಲ್ಲರಿಗೂ ಜಮೀನು ಮಂಜೂರು ಮಾಡಿಸುವ ಆಂದೋಲನ ಕೈಗೊಳ್ಳೋಣ ಎಂಬ ನನ್ನ ಬೇಡಿಕೆಗೆ ಅವರು ಸ್ಪಂಧಿಸಿ, ದಿನಾಂಕ:03.09.2025 ರಂದು ಅಸೋಶಿಯನ್ ಕಾರ್ಯಕಾರಿ ಸಭೆ ನಡೆಸಿ, ಆ ಇಬ್ಬರು ನೌಕರರಿಗೆ ತಗುಲುವ ವೆಚ್ಚವನ್ನು ನಾವೇ ಕೊಡಲು ಪ್ರಯತ್ನ ಮಾಡುತ್ತೇನೆ. ಎಂಬ ಅವರ ಮಾತು ನಿಜಕ್ಕೂ ಮೆಚ್ಚುವಂತಿತ್ತು.
ತುಮಕೂರು ನಗರದಲ್ಲಿ ಸುಮಾರು 100 ಕ್ಕೂ ಹೆಚ್ಚು ಡ್ರೈವಿಂಗ್ ಸ್ಕೂಲ್‍ಗಳು ಇವೆಯಂತೆ, ಅವರ ಈ ನಿರ್ಣಯ ಕಾರ್ಯರೂಪಕ್ಕೆ ಬಂದರೆ, ತುಮಕೂರು ನಗರದ ಇತಿಹಾಸದಲ್ಲಿ ಸೇರ್ಪಡೆಯಾಗಲಿದೆ.
ಆರ್.ಟಿ.ಓ ಶ್ರೀ ಪ್ರಸಾದ್ ರವರು ನಮ್ಮ ಮಾತು ಕೇಳಿಸಿಕೊಂಡು ಮೌನವಾಗಿದ್ದರು. ಅಲ್ಲಿಂದ ಶಕ್ತಿಭವನಕ್ಕೆ ಬಂದರೆ, ನನ್ನ ಸ್ನೇಹಿತರ ಮಗಳು ವರ್ಷಿತ ಮತ್ತು ಅವರ ಸಹಪಾಠಿ ವಿಕಾಸ್ ಇಬ್ಬರು ಕೆ.ಎ.ಎಸ್ ಉದ್ಯೋಗ ಆಕಾಂಕ್ಷಿಗಳು, ನಮಗೆ ಯಾವುದಾದರೂ ಕೆಲಸ ಕೊಡಿಸಿ, ಕೆಲಸ ಮಾಡಿಕೊಂಡು ನಾವು ಆಫೀಸರ್ ಆಗಬೇಕು ಎಂಬ ಮನದಾಳದ ಮಾತು ಹಂಚಿಕೊಂಡರು. ನಿಜಕ್ಕೂ ಕಾಕತಾಳೀಯ ಪಲಿತಾಂಶ ಕಾದು ನೋಡೊಣ.