TUMAKURU:SHAKTHIPEETA FOUNDATION
ಡಾ.ಜಗನ್ನಾಥ್ ರವರು ದಿನಾಂಕ:04.05.2025 ರಂದು ತುಮಕೂರಿನ ಶಕ್ತಿಪೀಠ ಭವನದಲ್ಲಿ ನಡೆದ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಭೆಯಲ್ಲಿ ಭಾಗವಹಿಸಿ, ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಧಾರ್ಮಿಕವಾಗಿ, ವೈಜ್ಞಾನಿಕವಾಗಿ, ಯಾವ ದಿಕ್ಕಿನಲ್ಲಿ, ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಅಧ್ಯಯನ ಮಾಡಿ ವರದಿ ನೀಡುವುದಾಗಿ ಘೋಷಣೆ ಮಾಡಿದ್ದರು.
ಅಳಿವಿನಂಚಿನಲ್ಲಿರುವ ಗಿಡಗಳು ಸೇರಿದಂತೆ 1120 ಕಳೆ-ಬೆಳೆ ಅಧ್ಯಯನ ವರದಿ ನೀಡಿದ ನಂತರ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ 1120 ಕೃಷಿ ಆಶ್ರಮಗಳ/ ಆಸಕ್ತ ರೈತರ ಸಹಭಾಗಿತ್ವದಲ್ಲಿ, ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ಆಲೋಚನೆ ನಡೆಸಲಾಗಿತ್ತು.
ಈಗ ಅವರು ಸುಮಾರು 18 ಇಲಾಖೆಗಳ ಅಡಿಯಲ್ಲಿನ 1120 ಕಳೆ-ಬೆಳೆ ಸಂಶೋಧನಾ ವರದಿಯನ್ನು ಶೀಘ್ರವಾಗಿ ನೀಡಲಿದ್ದಾರೆ. 1060 ಪ್ರಭೇಧಗಳ ಪಟ್ಟಿ ಪೂರ್ಣಗೊಂಡಿದೆಯAತೆ, ಇನ್ನೂ ಕೇವಲ 60 ಪ್ರಭೇಧಗಳನ್ನು ಅಂತಿಮಗೊಳಿಸುವುದು ಬಾಕಿ ಇದೆಯಂತೆ. ನಿಜಕ್ಕೂ ಅವರ ತಾಳ್ಮೆಗೆ ಮೆಚ್ಚಲೇ ಬೇಕು.
ಆ ವರದಿಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಿಗೆ ಸಲ್ಲಿಸಲಾಗುವುದು. ಎಲ್ಲಾ ಇಲಾಖೆಗಳ ಡೃಢಿಕೃತದೊಂದಿಗೆ ಶಕ್ತಿಪೀಠ ಕ್ಯಾಂಪಸ್‌ನಲ್ಲಿ, ಪ್ರಾತ್ಯಾಕ್ಷಿಕವಾಗಿ 1120 ಕಳೆ-ಬೆಳೆಗಳನ್ನು ಹಾಕಿ ಬೆಳೆಸಲಾಗುವುದು.
ಜೊತೆ-ಜೊತೆಯಲ್ಲಿ 1120 ಆಸಕ್ತ ರೈತರ ಸಹಭಾಗಿತ್ವದಲ್ಲಿ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸುವ ಕಾರ್ಯವೂ ನಡೆಯಲಿದೆ. ಜಗನ್ನಾಥ್ ರವರು ವೈಯಕ್ತಿಕವಾಗಿ ಅಥವಾ ಯಾವುದಾದರೂ ಸಂಸ್ಥೆಯ ಮೂಲಕ ತಂಡದೊAದಿಗೆ ವರದಿ ನೀಡಲಿದ್ದಾರೋ ಅದು ಅವರ ವಿವೇಚನೆಗೆ ಬಿಟ್ಟಿದ್ದು.
ಅವರ ಮಾರ್ಗದರ್ಶನದಲ್ಲಿ ಶ್ರಮಿಸಲು ಗೋವಿಂದರಾಜು ತಂಡವೂ ಮುಂದಾಗಿದೆ. ಇವರು ‘ಶಕ್ತಿಪೀಠ ವನ’ ದ ಪರಿಕಲ್ಪನೆಯ ಬಗ್ಗೆ ಡಾ.ಜಗನ್ನಾಥ್ ರವರಿಗೆ ಒಂದು ವರದಿ ನೀಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಕಾರ್ಯಾರಂಭವನ್ನು ಮಾಡಿದ್ದಾರೆ. ಜಗನ್ನಾಥ್ ರವರು ಹೇಳಿದ ಪ್ರಭೇಧಗಳು ಭಾರತ ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ, ಸಂಗ್ರಹ ಮಾಡಿ, ಶಕ್ತಿಪೀಠ ಕ್ಯಾಂಪಸ್‌ಗೆ ತಲುಪಿಸುವ ಕೆಲಸ ಮಾಡಲು ಮುಂದಾಗಿದ್ದಾರೆ.
2025-26 ನೇ ಸಾಲಿನಲ್ಲಿ ಅಧ್ಯಯನ ಪೂರ್ಣಗೊಂಡು 2026-27 ರಲ್ಲಿ ಬೀಜ, ಗಿಡ, ಬಳ್ಳಿ ಸಂಗ್ರಹ ಮಾಡುವ ವರ್ಷವಾಗಲಿದೆ. ಇದೊಂದು ವಿಶೀಷ್ಠವಾದ ಆಲೋಚನೆ. ಡಾ.ನಾಗಭೂಷಣ್ ರವರು ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸುವವರ ಆಸಕ್ತ ರೈತರ ಪಟ್ಟಿಯನ್ನು ಸಹ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ., ಅವರಿಗೆ ಸರ್ಕಾರಗಳಿಂದ ಯಾವ ರೀತಿಯ ನೆರವು ದೊಕಿಸಬೇಕು ಎಂಬ ಬಗ್ಗೆ ಶಕ್ತಿಪೀಠ ಫೌಂಡೇಷನ್ ಶ್ರಮಿಸಲಿದೆ.
ಮಹೇಶ್ ಕುಮಾರ್ ರವರು 1120 ಕಳೆ-ಬೆಳೆ ಪ್ರಸ್ತಾವನೆಯನ್ನು ಸಿದ್ಧಪಡಿಸಲು ಆರಂಭ ಮಾಡಿದ್ದಾರೆ. ಇವರು ಪ್ರಸ್ತಾವನೆ ಸಿದ್ಧಪಡಿಸಿದ ನಂತರ ಸರ್ಕಾರಗಳಿಗೆ ಸಲ್ಲಿಸಲಾಗುವುದು.
ಸತ್ಯಾನಂದ್ ರವರು ಮತ್ತು ಅವರ ತಂಡ ಈಗಾಗಲೇ ಕ್ಯಾಂಪಸ್‌ನ ಸಂಪೂರ್ಣ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಗಿಡ ಹಾಕಲು ಗುಂಡಿಯನ್ನು ಸಿದ್ಧಪಡಿಸಲಾಗಿದೆ.
ಎಸ್.ಪಿ. ರಾಜೇಶ್ ಮತ್ತು ತಂಡದವರು ಗಿಡಹಾಕಿಸಿದ ನಂತರ ಶೇ 100 ರಷ್ಟು ಸಾವಯವ ಮಾದರಿಯಲ್ಲಿ ಗಿಡಗಳನ್ನು ಬೆಳೆಸಲು ಮಾರ್ಗದರ್ಶನ ನೀಡುವುದಾಗಿ ಘೋಶಿಸಿದ್ದಾರೆ.
ಗುರುಸಿದ್ಧಾರಾದ್ಯರವರು ಮತ್ತು ಗೋವಿಂದಪ್ಪನವರು ಆರಂಭದಿAದಲೂ ಗಿಡಗಳ ಸಂಗ್ರಹಣೆಗೆ ಶ್ರಮಿಸಿದ್ದಾರೆ. ರಾಜ್ಯದ್ಯಾಂತ ಸುಮಾರು 108 ನಾಟಿ ವೈಧ್ಯರ ತಂಡ ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಗಿಡ ಬಳ್ಳಿ, ಬೀಜ ಹಾಕಲು ಸಹಕರಿಸಿದ್ದು ಇತಿಹಾಸ
ಒಂದು ಶಕ್ತಿಪೀಠ ವನ ನಿರ್ಮಾಣ ಮಾಡಬೇಕಾದರೆ ಹಲವಾರು ಜನರ ಶ್ರಮ ಅಗತ್ಯ ಇದೆ. ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲಿರುವ ಪಾರಂಪರಿಕ ವೈಧ್ಯರ, ನಾಟಿ ವೈಧ್ಯರ, ಹಕೀಮರ ಸಹಕಾರದ ಅಗತ್ಯವೂ ಇದೆ. ನೂರಾರು ಬೀಜ ಸಂಗ್ರಹಗಾರರ, ನರ್ಸರಿಗಳ ಸಹಕಾರವೂ ಬೇಕಾಗಿದೆ.
ವರದಿಯನ್ನು ಜಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ. ಮುಂದಿನ ಕೆಲಸ ತಾಯಿ ಶಕ್ತಿದೇವತೆಯ ಆದೇಶದಂತೆ ನಡೆಯಲಿದೆ.
