TUMAKURU:SHAKTHIPEETA FOUNDATION
ಶಕ್ತಿಪೀಠಗಳು ಎಂದರೆ ಶಿವನ ಪತ್ನಿ ಸತಿಯ ದೇಹದ ಭಾಗಗಳು ಮತ್ತು ಆಭರಣಗಳು ಬಿದ್ಧ ಸ್ಥಳ ಎಂದು ಪ್ರಖ್ಯಾತಿಯಾಗಿವೆ. ನಾನು ಶಕ್ತಿಪೀಠ ಆರಾಧಕ, ಹಲವಾರು ದೇಶಗಳಲ್ಲಿ ಶಕ್ತಿಪೀಠಗಳು ಇವೆ. ಈ ಬಗ್ಗೆ ಕಳೇದ 10 ವರ್ಷಗಳಿಂದ ಅಧ್ಯಯನ ಮತ್ತು ಸಂಶೋಧನೆ ನಡೆಯುತ್ತಿದೆ.
ನಾನು ಮೊದಲು ಆಲೋಚನೆ ಮಾಡಿದ್ದು ಸತಿಯ ಮಾನವ ಆಕಾರವನ್ನೇ ಭೂಮಿಯ ಮೇಲೆ ನಿರ್ಮಾಣ ಮಾಡಿ, ಯಾವ,ಯಾವ ಭಾಗಗಳು ಎಲ್ಲೆಲ್ಲಿ ಬಿದ್ದಿವೆ ಎಂಬ ಪ್ರಾತ್ಯಾಕ್ಷಿಕೆ ಅಥವಾ ಭೂಮಿಯ ಮೇಲೆ ಭಾರತ ನಕ್ಷೆ ನಿರ್ಮಾಣ ಮಾಡಿ, ಅಕ್ಕ-ಪಕ್ಕದಲ್ಲಿನ ದೇಶಗಳಲ್ಲಿ ಸತಿಯ ಬಾಗಗಳು ಬಿದ್ದಿರುವ ಸ್ಥಳಗಳು ಗುರುತುಗಳ ಪ್ರಾತ್ಯಾಕ್ಷಿಕೆ ನಿರ್ಮಾಣ ಮಾಡೋಣವೇ ಎಂಬ ಗೊಂದಲ ಇತ್ತು.
ಅಂತಿಮವಾಗಿ ದೇವಿಯ ಆದೇಶದಂತೆ ಆಯ್ಕೆ ಮಾಡಿದ್ದು ಭಾರತ ನಕ್ಷೆ ನಿರ್ಮಾಣ, ಇದೊಂದು ಸವಾಲದರೂ ಭೂಮಿಯ ಮೇಲೆ ನಿರ್ಮಾಣ ಮಾಡಲಾಗಿದೆ. 108 ಶಕ್ತಿಪೀಠಗಳನ್ನು ಗುರುತು ಮಾಡಲಾಗಿದೆ. ಬಹಳಷ್ಟು ಗೊಂದಲಗಳಿವೆ, ಜೊತೆಗೆ ಕೇಂದ್ರ ಸರ್ಕಾರದ ಉದ್ದೇಶಿತ 30 ನದಿ ಜೋಡಣೆಗಳನ್ನು ಗುರುತು ಮಾಡಲಾಗಿದೆ.
ಕಳೆದ 5-6 ವರ್ಷಗಳಿಂದ ಕೃತಕ ಹಿಂದೂ ಮಾಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಗಳಲ್ಲಿ ಸುಮಾರು ಒಂದು ಕೋಟಿ ಲೀಟರ್ ನೀರು ಸಂಗ್ರಹವಾಗಲಿದೆ. ವರ್ಷ ಪೂರ್ತಿ ನೀರು ಇರಲಿದೆ.
ಅಭಿವೃದ್ಧಿ ಪೀಠ, ಶಕ್ತಿಪೀಠ ಮತ್ತು ಜಲಪೀಠಗಳ ಕ್ಯಾಂಪಸ್ ಮಾಸ್ಟರ್ ಪ್ಲಾನ್ ಭೂಮಿಯ ಮೇಲೆ ಇಳಿದಿದೆ. ಮೊದಲು 1000 ಪ್ರಭೇದಗಳ ಗಿಡಗಳನ್ನು ಹಾಕಲು ಚಿಂತನೆ ನಡೆಸಲಾಗಿತ್ತು, ಜಮೀನಿನನಲ್ಲಿ ಹಾಲಿ ಇದ್ದ ಪ್ರಭೇಧಗಳು ಮತ್ತು ವಿವಿಧ ಕಡೆ ಸಂಗ್ರಹ ಮಾಡಿದ ಸುಮಾರು 480 ಕ್ಕೂ ಹೆಚ್ಚು ಪ್ರಭೇಧಗಳ ಗಿಡಗಳು ಬೆಳೆಯುತ್ತಿವೆ.
ಪಂಚವಟಿ ಮತ್ತು ನವಗ್ರಹಗಳ ಗಿಡಗಳನ್ನು ಹೊರತು ಪಡಿಸಿದರೆ, ಉಳಿದ ಗಿಡಗಳು ವೈಜ್ಞಾನಿಕ, ಇತಿಹಾಸ, ಪುರಾಣ, ನಂಬಿಕೆ, ಧಾರ್ಮಿಕ ಯಾವುದು ಅಳವಡಿಕೆಯಾಗಲಿಲ್ಲ ಎಂಬ ಭಾವನೆ ನನಗೆ ಬಂದಿತು.
ಆ ವೇಳೆಗೆ ಕೃಷಿ ಆಶ್ರಮಗಳ ಸಂಪರ್ಕ ಬಂದಾಗ ಡಾ.ಜಗನ್ನಾಥ್ ರಾವ್ ರವರು ವೈಜ್ಞಾನಿಕ, ಇತಿಹಾಸ, ಪುರಾಣ, ನಂಬಿಕೆ, ಧಾರ್ಮಿಕವಾಗಿ, ಯಾವ ಸ್ಥಳದಲ್ಲಿ, ಯಾವ ಗಿಡಹಾಕಬೇಕು, ಏಕೆ ಹಾಕಬೇಕು ಎಂಬ ಮಾಹಿತಿಗಳನ್ನು ಸರ್ಟಿಫಕೇಷನ್ ಸಹಿತ ನೀಡುವ ಭರವಸೆ ನೀಡಿದರು, ಜೊತೆಗೆ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ ರಚಿಸುತ್ತಿರುವ 1120 ಕೃಷಿ ಆಶ್ರಮಗಳು ತಲಾ ಒಂದೊ0ದು ಪ್ರಭೇಧಗಳ, 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಆರಂಭಿಸುವ ಆಲೋಚನೆಗಳು ಚಿಗುರಿದವು.
ಡಾ.ಜಗನ್ನಾಥ್ ರಾವ್ ರವರ ಅಧ್ಯಯನ ಮತ್ತು ಸಂಶೋಧನೆ ಪ್ರಗತಿಯಲ್ಲಿದೆ, ಈಗಾಗಲೇ 1060 ಪ್ರಭೇಧಗಳ ಪಟ್ಟಿ ಸಿದ್ಧವಾಗಿದೆಯಂತೆ, ಉಳಿದ 60 ಪ್ರಭೇಧಗಳ ಹುಡುಕಾಟ ನಡೆಯುತ್ತಿದೆಯಂತೆ.
ಆಗ್ರೋಸ್ಪೇಸ್ ಸಂಸ್ಥಾಪಕರಾದ ಎಂ.ಜಿ.ಗೋವಿ0ದರಾಜುರವರನ್ನು, ದಿನಾಂಕ:19.01.2026 ರಂದು ಬೆಂಗಳೂರಿನಲ್ಲಿ ನಡೆದ ಕೃಷಿ ಆಶ್ರಮಗಳ ಸಭೆಯಲ್ಲಿ ಡಾ.ಜಗನ್ನಾಥ್ ರಾವ್ ಪರಿಚಯ ಮಾಡಿಸಿದರು. ನಂತರ ಅವರ ಮನೆಗೆ ಹೋಗಿ ಅವರೊಂದಿಗೆ ಸಮಾಲೋಚನೆ ನಡೆಸಿದಾಗ ‘108 ಶಕ್ತಿಪೀಠ ವನ’ ಎಂಬ ವಿಶೀಷ್ಠ ಮಾದರಿಯನ್ನೇ ವಿನೂತನವಾಗಿ ಸೃಷ್ಠಿ ಮಾಡೋಣ ಎಂಬ ಚರ್ಚೆ ನಡೆಯಿತು.
ಕಳೆದ 3 ದಿನಗಳಲ್ಲಿ 108 ಶಕ್ತಿಪೀಠಗಳಿಗೂ ಒಂದೊAದು ಮುಖ್ಯ ಪ್ರಭೇಧ ಮತ್ತು ಇತರೆ 9 ಸೇರಿದಂತೆ 1080 ಪ್ರಭೇಧಗಳ ಶಕ್ತಿಪೀಠ ವನ ನಿರ್ಮಾಣ ಮಾಡಲು ನೀಲಿ ನಕ್ಷೆ ಬಹುತೇಕ ಸಿದ್ಧವಾದಂತೆ ಕಾಣುತ್ತಿದೆ. ನಕ್ಷೆಯಲ್ಲಿ ಜಿಐಎಸ್ ಆಧಾರಿತ ಗುರತು ಮಾಡುವುದು ಮಾತ್ರ ಬಾಕಿ ಇದೆ ಎನಿಸುತ್ತಿದೆ. ನಿರಂತರವಾಗಿ ವಾಟ್ಸ್ ಅಫ್ ಗ್ರೂಪನಲ್ಲಿ ಚರ್ಚೆ ಆರಂಭವಾಗಿದೆ.
ನನ್ನ ಪ್ರಶ್ನೆಗಳಿಗೆ ಧಾರ್ಮಿಕ ಉತ್ತರಗಳನ್ನು ಅವರು ನೀಡುತ್ತಿದ್ದಾರೆ. ಈಗ ಅವರದ್ದು ಒಂದು ಅಧ್ಯಯನ ಮತ್ತು ಸಂಶೋಧನೆ ವರದಿ ಪಡೆಯುವುದು ಒಳ್ಳೆಯ ಬೆಳವಣಿಗೆ.
- ಡಾ.ಜಗನ್ನಾಥ್‌ರಾವ್ ನೇತೃತ್ವದ 1120 ಕಳೆ-ಬೆಳೆ ಅಧ್ಯಯನ ಮತ್ತು ಸಂಶೋಧನೆ ವರದಿಯೊಂದಿಗೆ ‘108 ಶಕ್ತಿಪೀಠ ವನ’ ನೀಲಿ ನಕ್ಷೆ.
- ಗೋವಿಂದರಾಜು ನೇತೃತ್ವದ ‘108 ಶಕ್ತಿಪೀಠ ವನ’ ಅಧ್ಯಯನ ಮತ್ತು ಸಂಶೋಧನೆ ವರದಿ ನೀಲಿ ನಕ್ಷೆ.
ಈ ಎರಡು ವರಧಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಕ್ಷಮ ಪ್ರಾಧಿಕಾರಗಳೊಂದಿಗೆ ಚರ್ಚೆ ನಡೆಸಿ, ಪರಿಣಿತರ ಹಲವಾರು ಸಭೆಗಳನ್ನು ಆಯೋಜಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸುಮಾರು 12 ಎಕರೆ 15 ಗುಂಟೆ ಜಮೀನಿನನಲ್ಲಿ ‘108 ಶಕ್ತಿಪೀಠ ವನ’ ಪರಿಕಲ್ಪನಾ ವರಧಿ ಅನುಷ್ಠಾನ ಗೊಳಿಸಲು ನಿರ್ಧರಿಸಲಾಗಿದೆ.
ಇನ್ನೂ ಯಾರಾದರೂ ‘108 ಶಕ್ತಿಪೀಠ ವನ’ ದ ಬಗ್ಗೆ ಜ್ಞಾನವುಳ್ಳವರು ಇದ್ದವರು 9886774477 ಕರೆ ಮಾಡಿ,
1120 ಕೃಷಿ ಆಶ್ರಮಗಳ/ಆಸಕ್ತ ರೈತರ/ನಾಟಿ ವೈಧ್ಯರ/ಪಾರಂಪರಿಕ ವೈಧ್ಯರ/ಹಕೀಮರ ಪಟ್ಟಿ ಸಹಿತ ಕಳೆ-ಬೆಳೆ ವಿಶೇಷ ಪ್ಯಾಕೇಜ್ ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಮಂಜೂರು ಮಾಡಿಸಿ, ‘ಅವರ ಮನೆ ಬಾಗಿಲಿಗೆ ತಲುಪಿಸುವ ನಿರ್ಧಿಷ್ಠ ಗುರಿ ಶಕ್ತಿಪೀಠ ಫೌಂಡೇಷನ್ ನ ಆಧ್ಯತೆಯಾಗಿದೆ. ಪ್ರತಿಫಲ ಶಕ್ತಿದೇವತೆಗೆ ಸೇರಿದ್ದು.’
ಡಾ.ನಾಗಭೂಷಣ್ ರವರು ನನಗೆ ಆಗಾಗ ಹೇಳುತ್ತಾರೆ, ಸಾರ್ ಅಳಿವಿನಂಚಿನಲ್ಲಿರುವ ಗಿಡಗಳನ್ನು ಹಂಚಿಕೆ ಮಾಡುತ್ತಿದ್ದೇವೆ, ನಾಳೆ ಏನೂ ಆಗದಿದ್ದರೆ ಎಂಬ ಆತಂಕ ಅವರದ್ದಾಗಿದೆ. ‘ಕೃಷಿ ಆಶ್ರಮಗಳ ಮೌನ ಕ್ರಾಂತಿ’ ಈಗಾಗಲೇ ಸುಮಾರು 300 ಜನ ನೊಂದಾಯಿಸಿಕೊ0ಡಿದ್ದಾರೆ ಎಂಬುದು ಸಣ್ಣ ವಿಷಯವಲ್ಲ.
‘ಸೆಂಟರ್ ಆಫ್ ಎಕ್ಸಲೆನ್ಸ್ – ಫಾರ್ಮರ್ ನಾಲೇಡ್ಜ್ ಬ್ಯಾಂಕ್’ ಡಿಜಿಟಲ್ ಪ್ಲಾಟ್ ಫಾರಂನಲ್ಲಿ ವೈಜ್ಞಾನಿಕ ಚರ್ಚೆಗಳು ಶೀಘ್ರದಲ್ಲಿ ಆರಂಭವಾಗಲಿದೆ. ತುಮಕೂರಿನ ಚಿರಂತನ ಫೌಂಡೇಷನ್‌ನ ಸತ್ಯಾನಂದ್‌ರವರ ನೇತೃತ್ವದ ತಂಡ ಹಗಲು ಇರಳು ಶ್ರಮಿಸುತ್ತಿದ್ದಾರೆ. ಎಸ್.ಪಿ.ರಾಜೇಶ್ ನೇತೃತ್ವದ ಜ್ಞಾನ ಸೇತು ಫೌಂಡೇಷನ್ ಮುಂಗಡ ಹಣ ನೀಡಲು ಮುಂದಾದರೂ ಅವರು ಪಡೆಯುತ್ತಿಲ್ಲ. ಇಬ್ಬರೂ ಸಹ ಸಾವಯವ ಕೃಷಿ ಪ್ರೇಮಿಗಳು ಎಂಬುದು ವಿಶಿಷ್ಠ.
ಡಾ.ಅಶೋಕ್ ದಳವಾಯಿರವರ ಅಧ್ಯಕ್ಷತೆಯ ಸಭೆಯಲ್ಲಿ ಡಿಜಿಟಲ್ ಪ್ಲಾಟ್ ಫಾರಂ ಬಗ್ಗೆ ಸಮಾಲೋಚನೆ ನಡೆಸಿ, ನಂತರ ಮಾನ್ಯ ಮುಖ್ಯ ಮಂತ್ರಿಯವರ, ಉಪಮುಖ್ಯಮಂತ್ರಿಯವರ, ಕೃಷಿ ಸಚಿವರ ಮತ್ತು ಕೇಂದ್ರ ಸಚಿವರುಗಳ ನೇತೃತ್ವದಲ್ಲಿ ಲೋಕಾರ್ಪಣೆ ಮಾಡಿಸುವ ಗುರಿ ಇದೆ. ‘ಸೆಂಟರ್ ಆಫ್ ಎಕ್ಸಲೆನ್ಸ್ – ಫಾರ್ಮರ್ ನಾಲೇಡ್ಜ್ ಬ್ಯಾಂಕ್’ ಡಿಜಿಟಲ್ ಪ್ಲಾಟ್ ಫಾರಂ ನಿರಂತರವಾಗಿ ನಡೆಯಲು ಆರ್ಥಿಕ ವ್ಯವಸ್ಥೆಯ ರೂಪುರೇಷೆ ನಿರ್ಧರಿಸುವುದು ಒಂದು ಸವಾಲಾಗಿದೆ.
