10th February 2026
Share

TUMAKURU:SHAKTHIPEETA FOUNDATION

ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ. ದೇವೇಗೌಡರವರು, ರಾಜ್ಯಸಭೆಯಲ್ಲಿ ಕರ್ನಾಟಕ ರಾಜ್ಯದ ನೀರಾವರಿ ಬಗ್ಗೆ ಮಾತನಾಡಿರುವುದು, ಇಳಿವಯಸ್ಸಿನಲ್ಲಿ ಅವರ ಕಾಳಜಿ ನಿಜಕ್ಕೂ ಹೆಮ್ಮೆಯ ವಿಚಾರ.

ಮಾಜಿಮುಖ್ಯ ಮಂತ್ರಿ ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು, ಕೋಲಾರ ಜಿಲ್ಲೆಗೆ ಸುಮಾರು 10 ಟಿ.ಎಂ.ಸಿ ನೀರು ಕೊಡಿಸಲು, ಆಂದ್ರ ಪ್ರದೇಶದ ಮುಖ್ಯಮಂತ್ರಿಯವರೊAದಿಗೆ ಸಮಾಲೋಚನೆ ಮಾಡುತ್ತೇನೆ. ಇದು ಒಂದು ಪ್ರಯತ್ನ ಎಂದಿರುವುದು ಸ್ವಾಗಾತಾರ್ಹ.

ಇದೂವರೆಗೂ ನಮ್ಮನ್ನು ಆಳಿದ ಎಲ್ಲಾ ಪಕ್ಷಗಳ ಸರ್ಕಾರಗಳು ನಮ್ಮ ಅಲೋಕೇಷನ್ ನೀರನ್ನೇ ಬಳಸುತ್ತಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ನದಿ ಜೋಡಣೆ ಯೋಜನೆಗೆ ಆಯವ್ಯಯದಲ್ಲಿ ಮಂಡಿಸಿದ್ದರೂ, ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದರೂ, ನಮ್ಮ ರಾಜ್ಯದ ಜನರಲ್ಲಿ ಪರ- ವಿರೋಧ ವ್ಯಕ್ತವಾಗಿದೆ ಇದಕ್ಕೆ  ಯಾರು ಹೊಣೆ ?

ಕೇಂದ್ರ ಸರ್ಕಾರ 2014 ರಲ್ಲಿಯೇ ಪಶ್ಚಿಮಾಭಿಮುಖವಾಗಿ ಹರಿಯುವ ನದಿ ನೀರು ಯೋಜನೆ ರೂಪಿಸಲು ನಿರ್ಣಯ ಮಾಡಿದೆ. ವಿವಿಧ ನದಿ ಪಾತ್ರಗಳ ಹೆಚ್ಚುವರಿ ನೀರಿನ ಬಳಕೆ ಬಗ್ಗೆ, ಪ್ರವಾಹ ಸಂದರ್ಭದಲ್ಲಿನ ನೀರು ಬಳಕೆ ಮಾಡುವ ಬಗ್ಗೆ, ಡ್ಯಾಂಗಳಲ್ಲಿ ಹೂಳು ತುಂಬಿ, ನಮ್ಮ ಅಲೋಕೇಷನ್ ನೀರು ವಿವಿಧ ರಾಜ್ಯಗಳಿಗೆ ಹರಿದು ಹೋಗುತ್ತಿರುವ ನೀರಿನ ಬಳಕೆ ಬಗ್ಗೆ,  ಯಾವ ಯಾವ ಸರ್ಕಾರ ಏನೇನು ಮಾಡಿದೆ ಸಾರ್ವಜನಿಕರ ಮುಂದೆ ಬಹಿರಂಗ ಪಡಿಸಲಿ.

2019 ರಲ್ಲಿಯೇ ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಅಧ್ಯಕ್ಷತೆಯ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿ, ಈ ಬಗ್ಗೆ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಪತ್ರ ಬರೆದರೂ ಇನ್ನೂ ಉತ್ತರ ಬಂದಿಲ್ಲ.

ಅಷ್ಟೆ ಅಲ್ಲ ಕೇಂದ್ರ ಸರ್ಕಾರ ಘೋಷಣೆ ಆಡಿದ್ದ ಮೂಲಭೂತ ಸೌಕರ್ಯಗಳ ಪೈಪ್ ಲೈನ್ ಯೋಜನೆಯಡಿಯಲ್ಲಿ, ಆಗಿನ ಯೋಜನಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ಹಾಗೂ ಈಗಿನ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರು ಬಹುತೇಕ ನೀರಾವರಿ ಯೋಜನೆಗಳನ್ನು  ಅಪ್ ಲೋಡ್ ಮಾಡಿದ್ದಾರೆ. ಅದು ಏನಾಗಿದೆ ಎಂದು ಹೇಳುವವರು ಯಾರು ?

ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಬೇಡವೇ ? ಈ ಬಗ್ಗೆ ತಮ್ಮ ತಮ್ಮ ಪಕ್ಷಗಳ ಸ್ಪಷ್ಟ ಅಭಿಪ್ರಾಯ ಘೋಷಣೆ ಮಾಡಲು, ರಾಜ್ಯದ ಎಲ್ಲಾ ಪಕ್ಷಗಳಿಗೆ ಬಹಿರಂಗ ಮನವಿ ಮಾಡಲಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಹೆಚ್.ಡಿ. ದೇವೇಗೌಡರವರು ಮತ್ತು ಹೆಚ್.ಡಿ.ಕುಮಾರಸ್ವಾಮಿರವರ ಜೊತೆ ಸಮಾಲೋಚನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಕುಂದರನಹಳ್ಳಿ ರಮೇಶ್, ಮಾಜಿ ಸದಸ್ಯ, ರಾಜ್ಯ ಮಟ್ಟದ ದಿಶಾ ಸಮಿತಿ, ಕರ್ನಾಟಕ, ಭಾರತ ಸರ್ಕಾರ.