10th February 2026
Share

TUMAKURU:SHAKTHIPEETA FOUNDATION

ಗಂಗಮಲ್ಲಮ್ಮ ಅಲ್ಲ ಗಂಗಮಾಳಮ್ಮ, ಇದು ಈ ಗ್ರಾಮದ ದೇವತೆ ಅಲ್ಲ, ಸುಮಾರು 800 ಕ್ಕೂ ಹೆಚ್ಚು ವರ್ಷಗಳ ಹಿಂದೆ, ಒಂದು ಹೆಸರಾಂತ, ನದಿ ತಟದಿಂದ, ಸಾವಿರಾರು ಕೀಮೀ ದೂರದಿಂದ, ಈ ಊರಿಗೆ ಬಂದಿರುವ ದೇವತೆ. ಒಬ್ಬ ಹೆಣ್ಣು ಮಗಳು ಅಥವಾ ಸೊಸೆ ಈ ದೇವತೆ ಇಲ್ಲಿಗೆ ಬಂದು ನೆಲಸಲು ಕಾರಣ. ಇದೊಂದು ಬಹಳ ಶಕ್ತಿ ಹೊಂದಿರುವ ದೇವತೆ. ಈಗ ಈ ದೇವತೆ ಹೆಚ್ಚೆಚ್ಚು ಜಾಗೃತಗೊಳ್ಳಿದ್ದಾರೆ.

ಇದೇ ಕಾರಣದಿಂದ ಈ ಊರಿನ ಪಕ್ಕದಲ್ಲಿ ಹೆಚ್.ಎ.ಎಲ್ ಘಟಕ ಬಂದಿರುವುದು, ಇದೇ ಕಾರಣದಿಂದ ಈ ಊರಿನ ಅಕ್ಕ-ಪಕ್ಕದಲ್ಲಿ ಹೇಮಾವತಿ, ಎತ್ತಿನಹೊಳೆ ನೀರು ಹರಿಯುತ್ತಿರುವುದು. ಸುಮಾರು 18 ಜನರು ತಾವು ವಾಸಗಳಿದ್ದ ಮನೆಯ ನಿವೇಶನಗಳನ್ನು ಜಾತಿಭೇವವಿಲ್ಲದೆ ದೇವಾಲಯಕ್ಕೆ ದಾನ ಮಾಡಿರುವುದು ಆ ದೇವಿಯ ಇಚ್ಚೆ.

ಇದನ್ನು ಪೂಜಿಸುತ್ತಿರುವುದು, ಇಲ್ಲಿಗೆ ತಂದಿರುವವರು ಕುಂಚಿಟಿಗರಾದರೂ, ಅವರೇ ಲಿಂಗಾಯಿತರನ್ನು ಈ ಊರಿಗೆ ಕರೆತಂದಿದ್ದರೂ, ಯಾವುದೇ ಒಂದು ವಿವಾದ ಆಗದೇ ಊರಿನಲ್ಲಿ ಇರುವ ಎಲ್ಲರೂ ಒಪ್ಪುವ ಗ್ರಾಮದೇವತೆ ಇದಾಗಿದೆ.

ಈ ದೇವತೆ ಯಾವ ಊರಿನದು, ಮೂಲ ಎಲ್ಲಿದೆ, ದೇವತೆ ಹೊತ್ತು ಬರುವಾಗ, ಬರುವವರು ಎಲ್ಲೆಲ್ಲಿ ತಂಗಿದ್ದರು, ಎಲ್ಲೆಲ್ಲಿ ಈ ದೇವಾಲಯ ಮಾಡಿದ್ದಾರೆ. ಇಲ್ಲಿಗೆ ಬಂದು ನೆಲಸಲು ಏನು ಕಾರಣ ಎಂಬ ಈ ಮೂಲ ಹುಡುಕಿ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಧಾರ್ಮಿಕ/ವೈಜ್ಞಾನಿಕ ವರದಿ ನೀಡುತ್ತೇನೆ.

ಇತಿಹಾಸಕಾರರು, ವಿಜ್ಞಾನಿಗಳು, ವೈಧಿಕರು, ತಂತ್ರಮ0ತ್ರಾಧಿಕಾರಿಗಳು, ಪ್ರಗತಿಪರರು ಸೇರಿದಂತೆ, ಯಾರು, ಯಾವುದೇ ಪ್ರಶ್ನೆ ಕೇಳಲಿ, ನಾನು ಆಧಾರ ಸಹಿತ ಉತ್ತರಿಸುತ್ತೇನೆ, ಯಾವುದೇ ನ್ಯಾಯಾಲಯದಲ್ಲಿ ದಾವೆ ಹೂಡಿದರೂ ಪ್ರತಿಪಾದನೆ ಮಾಡುತ್ತೇನೆ. ಇದು ನನ್ನ ಧೃಢ ನಿಲುವು.

ಇದಕ್ಕೂ ಶಕ್ತಿಪೀಠಕ್ಕೂ ಸಂಭ0ದ ಏನು, ಇದಕ್ಕೂ ಜಲಪೀಠಕ್ಕೂ ಸಂಭ0ದ ಏನು, ಇದಕ್ಕೂ ಅಭಿವೃದ್ಧಿ ಪೀಠಕ್ಕೂ ಸಂಭ0ದ ಏನು,ಇದಕ್ಕೂ ವೃಕ್ಷಪೀಠಕ್ಕೂ ಸಂಭ0ದ ಏನು, ಎಂಬ ಬಗ್ಗೆಯೂ ವೈಜ್ಞಾನಿಕ ವರದಿ ನೀಡುತ್ತೇನೆ. ನನಗೆ ಇಷ್ಟೇ ಹಣ ಕೊಡಿ ಎಂಬ ಬೇಡಿಕೆ ಇಲ್ಲ. ಹಣದ ಅವಶ್ಯ ಕತೆ ಇದೆ. ಆ ಖರ್ಚುವೆಚ್ಚಗಳನ್ನು ಸರಿದೂಗಿಸುವವರು ಮತ್ತು ಸರ್ಕಾರಗಳೊಂದಿಗೆ ಪತ್ರ ವ್ಯವಹರಿಸುವವರು ಬೇಕು.

ನಾನು ಹೇಳುವುದು, ವಿಜ್ಞಾನವೋ ಅಥವಾ ಮೂಢನಂಬಿಕೆಯೋ ಎನ್ನುವುದು, ಈ ಗಂಗಮಾಳಮ್ಮನ/ ವಿಶ್ವದ 108 ಶಕ್ತಿಪೀಠಗಳ, ಪ್ರತಿ ಗ್ರಾಮಗಳಲ್ಲಿ ಇರುವ ಗ್ರಾಮದೇವತೆಗಳ  ಮೂಲಕ ಒಂದು ನಿರ್ಧಾರಕ್ಕೆ ಬರಲಿ ಎಂದು ಬಿಕಾಮ್ ಪಧವೀಧರರು, ವಕೀಲರು, ಅಷ್ಟಮಂಗಳಲದಲ್ಲಿ ಡಾಕ್ಟರೇಟ್ ಪಡೆದಿರುವ ಸಾಧಕರೊಬ್ಬರೂ ಪ್ರತಿಪಾದಿಸಿದ್ದಾರೆ. (ಅವರ ಹೆಸರನ್ನು ಉದ್ದೇಶ ಪೂರ್ವಕವಾಗಿ ಗೌಪ್ಯವಾಗಿ ಇಡಲಾಗಿದೆ) ದೃಢಿಕೃತ ವರದಿ ನೀಡಿದ ನಂತರ ಪ್ರಕಟಿಸಲು ನಿರ್ಧಾರ ಮಾಡಲಾಗಿದೆ.

ದಿನಾಂಕ:06.02.2026 ರಂದು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕಿನ, ನನ್ನ ಹುಟ್ಟೂರು ಕುಂದರನಹಳ್ಳಿಗೆ ಆಗಮಿಸಿದ್ದ ವೈಧಿಕ್ ಮತ್ತು ಇಂಜಿನಿಯರಿ0ಗ್ ತಂಡ ಮತ್ತು ಕೆಲವು ಭಕ್ತರು ಮಾತ್ರ ಇದ್ದರು.

ಈಗ ಆ ದೇವತೆಯ ಭಕ್ತರು, ಆರಾಧಕರು, ಗ್ರಾಮದ ಪ್ರಮುಖರು, ದೇವಾಲಯಕ್ಕೆ ನಿವೇಶನ ನೀಡಿರುವ ದಾನಿಗಳು, ದೇವಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿರುವವರು. ರಾಜ್ಯ ಸರ್ಕಾರದ ಅಧಿಕಾರಿಗಳು, ಕೇಂದ್ರ ಸರ್ಕಾರದ ಅಧಿಕಾರಿಗಳು, ಶಕ್ತಿಪೀಠ ಕ್ಯಾಂಪಸ್‌ನಲ್ಲಿ 1120 ಪ್ರಭೇಧಗಳನ್ನು ಹಾಕಿ ಬೆಳಸಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ 1120 ರೈತ ಜ್ಞಾನಿಗಳ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಪ್ರತಿನಿಧಿಗಳು ಮತ್ತು ಶಕ್ತಪೀಠ ಫೌಂಡೇಷನ್ ಪದಾಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ, ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ನಿರ್ಧಾರ ಮಾಡಲಾಗಿದೆ.

ಆರಂಭಿಕ ಖರ್ಚುವೆಚ್ಚಗಳಿಗೆ ಗಂಗಮಲ್ಲಮ್ಮ ದೇವರ ಭಕ್ತರು, ಕೃಷಿ ಆಶ್ರಮದ ನೇತಾರರು ಮತ್ತು ನನ್ನ ಆತ್ಮೀಯರ (ಹೆಸರು ಪ್ರಚಾರ ಮಾಡ ಬಯಸದ) ಒಂದು ಕುಟುಂಬ, ಒಂದು ಲಕ್ಷದವರೆಗೂ ದಾನ ಮಾಡಲು ಮುಂದೆ ಬಂದಿದ್ದಾರೆ. ಈಗಾಗಲೇ ರೂ 10000 ಗಳನ್ನು ಡಿಜಿಟಲ್ ಮೂಲಕ ದಾನ ನೀಡಿದ್ದಾರೆ, ಆ ಹಣವನ್ನು ಈಗಾಗಲೇ, ಆ ಸಾಧಕರಿಗೆ ಡಿಜಿಟಲ್ ಮೂಲಕ ರವಾನಿಸಲಾಗಿದೆ.  ಎಷ್ಟು ಖರ್ಚು ಬರಬಹುದು ಎಂಬ ಬಗ್ಗೆಯೂ ಲೆಕ್ಕಹಾಕಲು ಮನವಿ ಮಾಡಲಾಗಿದೆ.

ಕುಂದರನಹಳ್ಳಿಯಿ0ದ ಆರಂಭಿಸಿ, ಬೆಂಗಳೂರಿನ ರಾಜ್ಯ ಸರ್ಕಾರ ಮತ್ತು ದೆಹಲಿಯ ಕೇಂದ್ರ ಸರ್ಕಾರದವರೆಗೆ, ರಾಜ್ಯದ 1120 ರೈತ ಜ್ಞಾನಿಗಳ ನೇತೃತ್ವದಲ್ಲಿ ಮರಗಿಡಗಳ ಧಾರ್ಮಿಕ/ವಿಜ್ಞಾನದ ಬಗ್ಗೆ, ಒಂದು ನಿರ್ಧಾರಕ್ಕೆ ಮುನ್ನುಡಿ ಬರೆಯಲಿದ್ದಾರೆ, ಗಂಗಮಲ್ಲಮ್ಮ ದೇವರ ಭಕ್ತರ ತಂಡ.

ಆಸಕ್ತರು ನನ್ನೊಂದಿಗೆ ಸಮಾಲೋಚನೆ ನಡೆಸಲು ಬಹಿರಂಗ ಮನವಿ.