TUMAKURU:SHAKTHIPEETA FOUNDATION
ದಿನಾಂಕ:20.02.2026 ರಂದು ಬೆಂಗಳೂರಿನಲ್ಲಿ, ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮಧ್ಯೆ ಸ್ವಾರಸ್ಯಕರ ಚರ್ಚೆಯ ಕೆಲವು ತುಣುಕುಗಳು.
ಜೊತೆಯಲ್ಲಿ ಮಾಜಿ ಸಚಿವರಾದ ಶ್ರೀ ಬಸವರಾಜ ರಾಯ ರೆಡ್ಡಿಯವರು ಮತ್ತು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಶ್ರೀ ಬಿ.ಆರ್. ಪಾಟೀಲ್ರವರು ಇದ್ದರು.
ಸಿದ್ಧರಾಮಯ್ಯನವರು ಬಡ್ಜೆಟ್ ತಯಾರಿಯಲ್ಲಿ ಇದ್ದರು, ಅವರ ಸಿಬ್ಬಂಧಿಗಳು ಮುಖ್ಯ ಮಂತ್ರಿಯವರಿಗೆ ತಿಳಿಸಿದಾಗ, ಸಭೆಯಿಂದ ಹೊರಬಂದು ಸಮಾಲೋಚನೆ ನಡೆಸಿ, ಊಟ ಮಾಡಲು ಹೇಳಿ ಮತ್ತೆ ಸಭೆಗೆ ಹೋದರು. ಮತ್ತೆ ಅವರು ಬಂದಾಗ ಬಸವರಾಜ್ರವರು ಊಟ ಮಾಡಿ ಎದ್ದರು, ನಾನೂ ಎದ್ದು ನಿಂತಾಗ, ಏಯ್ ನೀನೂ ಊಟ ಮಾಡಪ್ಪ, ತಟ್ಟೆಯಲ್ಲಿ ಊಟ ಬಿಡಬಾರದೂ, ಎಂದು ನನ್ನ ಊಟದ ತಟ್ಟೆ ಗಮನಿಸಿ ಹೇಳಿದಾಗ ಅಲ್ಲಿದ್ದ ಎಲ್ಲರೂ ನಕ್ಕರು.
ಬಸವರಾಜ್ ರವರು ಸಾರ್, ಪ್ರಧಾನ ಮಂತ್ರಿಯವರಿಗೆ ಫಾರ್ಮರ್ ಕಾರಿಡಾರ್ ಮತ್ತು ಕೃಷಿಕರ ಪ್ಯಾಕೇಜ್ ಬಗ್ಗೆ ಪತ್ರ ಬರೆಯಲು ಮನವಿ ಮಾಡಿದಾಗ, ಮುಖ್ಯ ಮಂತ್ರಿಯವರು ನಿಮ್ಮ ಮೋದಿಯವರು, ನಮಗೆ ದುಡ್ಡು ಕೊಡಲ್ಲಾ ಬಸವರಾಜ್ ಎಂದರು. ಮೋದಿಯವರು ಹೆಚ್ಚಿಗೆ ಅನುದಾನ ನೀಡುತ್ತಾರೆ ಸಾರ್ ಎಂದಾಗ, ಅಧಿಕಾರಿಗಳಿಗೆ ಏ ನೋಡ್ರಪ್ಪಾ ಬಸವರಾಜ್ ಹೇಳುತ್ತಾರೆ, ಪತ್ರ ಬರೆಯಿರಪ್ಪಾ ಎಷ್ಟು ದುಡ್ಡು ಕೊಡಿಸುತ್ತಾರೆೆ ನೋಡೋಣಾ ಎಂದಾಗ ಅಲ್ಲಿದ್ದವರು ಮತ್ತೆ ನಕ್ಕರು.
ಮುಖ್ಯ ಮಂತ್ರಿಯವರಿಗೆ, ಶ್ರೀ ಬಿ.ಆರ್. ಪಾಟೀಲ್ ರವರು ಸಾರ್ ಬಸವರಾಜ್ ಕೈಕುಲಕಿದರೆ, ಕೈ ಕಬ್ಬಿಣ ಇದ್ದ ಹಾಗೆ ಇದೆ ಸಾರ್ ಎಂದರು, ಬಸವರಾಯ ರೆಡ್ಡಿಯವರು ನೋಡಿಸಾರ್ 88 ವರ್ಷವಾದರೂ ಬಸವರಾಜ್ ಹೇಗಿದ್ದಾರೆ ಎಂದಾಗ, ಮುಖ್ಯ ಮಂತ್ರಿಯವರು ಬಸವರಾಜ್ 100 ವರ್ಷ ಬದುಕುತ್ತಾರೆ, ಅವರ ಲವಲವಿಕೆ ಸ್ವಲ್ಪವೂ ಕಡಿಮೆ ಆಗಿಲ್ಲಾ ಎಂದಾಗ ಅಲ್ಲಿದ್ದವರೂ ನಕ್ಕರು.
ಗೋಡೆಕೆರೆ ಸಿದ್ಧರಾಮೇಶ್ವರ ದೇವಾಲಯಕ್ಕೆ ಅನುದಾನ ನೀಡಲು, ಮುಖ್ಯ ಮಂತ್ರಿಯವರಲ್ಲಿ ಬಸವರಾಜ್ ರವರು ಮನವಿ ಮಾಡಿದರು, ನಾನು ಗುರುಸಿದ್ಧರಾಮೇಶ್ವರರು ನಿಮ್ಮ ದೇವರು ಸಾರ್, ಮುಜರಾಯಿ ದೇವಾಲಯ ಎಂದಾಗ, ಗುರುಸಿದ್ಧರಾಮೇಶ್ವರರು ಬಸವರಾಜ್ ರವರ ಸಮುದಾಯದ ಗುರುಗಳೂ ಹೌದಪ್ಪಾ ಎಂದು ಹಾಸ್ಯ ಭರಿತವಾಗಿ ನಕ್ಕರು ?
