28th March 2024
Share

TUMAKURU:SHAKTHIPEETA FOUNDATION

ಕೊರೊನಾ ಯೋಜನೆಗಳಿಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯ ಸಭೆಯನ್ನು ಸಂಸದ ಹಾಗೂ ದಿಶಾ ಸಮಿತಿ ಅಧ್ಯಕ್ಷ ಶ್ರೀ ಜಿ.ಎಸ್.ಬಸವರಾಜ್ ರವರು ಕರೆಯಲು ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ.

 ಅವರು ಪತ್ರದಲ್ಲಿಯೇ ಯಾವ ಅಂಶಗಳ ಬಗ್ಗೆ ಚರ್ಚಿಸಬೇಕು ಎಂಬ  ಅಜೆಂಡಾವನ್ನು ನೀಡಿದ್ದಾರೆ. ಅವರು ಇಲ್ಲ, ಇವರು ಇಲ್ಲ, ಮಾಹಿತಿ ಇಲ್ಲ ಎಂಬ  ಉತ್ತರ ಯಾವುದೇ ಇಲಾಖೆಯ ಅಧಿಕಾರಿಗಳಿಂದ ಬರಬಾರದು ಇದು ತುರ್ತು ಸಭೆ. ಯಾವುದೇ ಇಲಾಖೆಯ ಅಧಿಕಾರಿಗಳಿಗೆ ಸಭೆಗೆ ಹಾಜರಾಗದಂತ ತುರ್ತು ಇದ್ದಲ್ಲಿ ಯಾವುದೇ ಮಾಹಿತಿಗೆ ಕೊರತೆ ಆಗಬಾರದು.

 ಈ ಸಭೆಯ ವಿಶೇಷತೆ ಎಂದರೆ ಮೊದಲನೇ ಅಲೆ ಕೊರೊನಾ ಅನುಭವ ಮತ್ತು ಎರಡನೇ ಅಲೆ ಕೊರೊನಾ ಪಡುತ್ತಿರುವ ಕಷ್ಟದ ಅನುಭವಗಳ ಹಿನ್ನಲೆಯಲ್ಲಿ, ತಜ್ಞರು ಹೇಳುವ ಪ್ರಕಾರ ಮೂರು ಮತ್ತು ನಾಲ್ಕನೇ ಹಂತದ ಕೊರೊನಾ ಅಲೆ ಬಂದರೂ, ತುಮಕೂರು ಜಿಲ್ಲೆಯಲ್ಲಿ ಯಾವುದಕ್ಕೂ ಕೊರತೆಯಾಗದಂತೆ ಯಾವ ಯಾವ ವಿಚಾರಗಳಲ್ಲಿ ಮುಂಜಾಗ್ರತೆ ಕ್ರಮವಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಏನೇನು ಮಾಡಬೇಕು. ನಿರ್ಧಾಕ್ಷಿಣ್ಯವಾಗಿ ಪಟ್ಟಿ ಮಾಡಿಕೊಡಿ, ಒಂದು ವೇಳೆ ನಿಮಗೆ ಸತ್ಯ ಹೇಳಲು ಕಷ್ಟವಾದರೆ ಮೊದಲೇ ಪಟ್ಟಿ ಮಾಡಿ ನಮಗೆ ಕೊಡಿ. ನಾವು ಸಭೆಯಲ್ಲಿ ವಿಷಯದ ಬಗ್ಗೆ ಚರ್ಚೆ ಮಾಡಿ ಸಭೆ ನಡವಳಿಕೆ ಮಾಡಿಸಿ ಕೇಂದ್ರ ಅಥವಾ ರಾಜ್ಯ ಸರ್ಕಾರಕ್ಕೆ ಕಳುಹಿಸಿ ಪ್ರಯತ್ನ ಮಾಡೋಣ.

 ಪಿಪಿಪಿ ಮಾದರಿಯಲ್ಲಿ ಸ್ಥಳೀಯವಾಗಿ ಹೂಡಿಕೆ ಮಾಡುವವರು ಕೊರೊನಾಗೆ ಸಂಬಂಧಿಸಿದಂತೆ ಯಾವ ಯೋಜನೆ ರೂಪಿಸಬಹುದು. ಯಾವುದಕ್ಕೆ ಎಷ್ಟು ಹಣ ಬೇಕಾಗುವುದು ಎಂಬ ಸ್ಪಷ್ಟ ಪ್ರಸ್ತಾವನೆ ಮತ್ತು ಮಾಹಿತಿಗಳನ್ನು ಸಿದ್ಧಗೊಳಿಸಿ. 

ಕೊರೊನಾಗೆ ಸಂಬಂಧಿಸಿದ ಎಲ್ಲಾ ವಿಷಯವಾರು ಯಾವುದಕ್ಕೂ ಕೊರತೆ ಆಗಬಾರದು ಸ್ವಲ್ಪ ಜಾಸ್ತಿ ಆದರೂ ಪರವಾಗಿಲ್ಲ ಯಾವೊಬ್ಬ ಸೋಂಕಿತರಿಗೂ ಇದಕ್ಕೆ ಕೊರತೆ ಆಗುವುದು ಎಂಬ ಭಾವನೆ ಬರಬಾರದು. ಸೋಂಕಿತರೆಲ್ಲರೂ ಮನೆಯಲ್ಲಿಯೇ ಕುಳಿತು ನಾನು ಯಾವ ಆಸ್ಪತ್ರೆಗೆ ದಾಖಲಾಗಬೇಕು ಎಂಬ ಬಗ್ಗೆ ಡಿಜಿಟಲ್ ಆಯ್ಕೆ ಮಾಡಿಕೊಳ್ಳಲು ವೆಬ್‍ಸೈಟ್ ಮಾಡಲೇ ಬೇಕು. ಹಾಗೆಯೇ ಸೋಂಕಿತರು ಅಥವಾ ಅವರ ಪೋಷಕರು ಕಾಮೆಂಟ್ ಮಾಡಲು ಅವಕಾಶ ಕಲ್ಪಿಸಿ, ಜೊತೆಗೆ ದಿಶಾ ಸಮಿತಿ ಸದಸ್ಯರು ತಮ್ಮ ಅಭಿಪ್ರಾಯ ಕಾಮೆಂಟ್ ಮಾಡಲು ಅವಕಾಶವಿರಬೇಕು.

ಜೊತೆಗೆ ತುಮಕೂರು ಜಿಲ್ಲೆಯ ಪಕ್ಷಾತೀತವಾಗಿ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಏನು ಮಾಡಬಹುದು ಎಂಬ ಮಾಹಿತಿಯನ್ನು ನಮಗೆ ನೀಡಿ, ಅವರೆಲ್ಲರೊಂದಿಗೆ ಚರ್ಚಿಸಿ ಅವರಿಂದ ಆಗುವ ಎಲ್ಲಾ ಕೆಲಸಗಳನ್ನು ಮಾಡಿಸಲು ಪ್ರಯತ್ನ ಮಾಡೋಣ.

ನಾಮಕವಸ್ತೆ ಸಭೆ ಆಗಬಾರದು, ನಿರ್ಧಿಷ್ಟವಾದ ಅಂಕಿ ಅಂಶಗಳೊಂದಿಗೆ, ಸೋಂಕಿತರು ಹೆಚ್ಚಾಗಿ ಇರುವ ಭಾಗಗಳಿಗೆ ಮಾತ್ರ ಅಗತ್ಯ ವ್ಯವಸ್ಥೆ ಆಗಬೇಕು, ಅಭಿವೃದ್ಧಿ ಅನುದಾನ ನೀಡಿದಂತೆ ತಾರತಮ್ಯ ರೀತಿಯಲ್ಲಿ ಹಂಚಿಕೆ ಮಾಡಬಾರದು ರಾಜಕೀಯ ಇಲ್ಲಿ ಬರಬಾರದು, ಎಲ್ಲವೂ ಪಾರದರ್ಶಕವಾಗಿರ ಬೇಕು.’

ಕೇಂದ್ರ ಸರ್ಕಾರದ ಅನುದಾನ, ಯೋಜನೆ ಎಲ್ಲವೂ ಡಿಜಿಟಲ್ ಆಗಲೇ ಬೇಕು. ಪಾರದರ್ಶಕವಾಗಿರ ಬೇಕು. ಯಾವುದೇ ಒಂದು ಯೋಜನೆ ಫಲಾನುಭವಿಯ ಆಯ್ಕೆ ಯಾವುದೇ ತೋಂದರೆ ಆದರೂ ಸಂಬಂಧಿಸಿದ ಅಧಿಕಾರಿಗಳೆ ನೇರಹೊಣೆ ಹೊರಬೇಕಾಗುತ್ತದೆ.

ಇರುವ ಅವವ್ಯವಸ್ಥೆ, ತೊಂದರೆ ಮುಚ್ಚಿಕೊಂಡು ಅಧಿಕಾರಿಗಳು ಏಕೆ ನೋವು ಅನುಭವಿಸಬೇಕು, ಎಲ್ಲವೂ ಸರಿಯಾಗಿರಬೇಕು ಎಂದರೆ ಸರ್ಕಾರಗಳಿಂದ, ಜನಪ್ರತಿನಿಧಿಗಳು ಎಲ್ಲವನ್ನು ಮಂಜೂರು ಮಾಡಿಸುವುದು ಅವರ ಕರ್ತವ್ಯ. ಅವರ ಕೆಲಸ ಮತದಾರರಿಗೆ ಉತ್ರರದಾಯಿತ್ವವೂ ಹೌದು.

ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿಗಳವಾರು ಮತ್ತು 11 ನಗರ ಸ್ಥಳೀಯ ಸಂಸ್ಥೆವಾರು ಜಿಐಎಸ್ ಆಧಾರಿತ ಮಾಹಿತಿ ಲಭ್ಯವಾಗಲೇ ಬೇಕು. ದಿಶಾ ಸಮಿತಿಯ ನಾಮನಿರ್ದೇಶಿತ ತಂಡ ಪರಿಣಿತ ತಜ್ಞರ ಸಹಕಾರದಿಂದ ಪ್ರತಿಯೊಂದು ವಿಷಂiÀiದ ಬಗ್ಗೆಯೂ ಅನಾಲೀಸಿಸ್ ಮಾಡಲಿದೆ. ಇದು ನಮ್ಮ ಹಕ್ಕು ಅಥವಾ ಕರ್ತವ್ಯ.

ಕೊರೊನಾ ಹಿನ್ನಲೆಯಲ್ಲಾದರೂ ತುಮಕೂರು ಜಿಲ್ಲೆಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಹಾಲಿ ಇರುವ ವ್ಯವಸ್ಥೆಗಳು ಮತ್ತು ಮುಂದೆ ಮಾಡಬೇಕಾಗಿರುವ ಯೋಜನೆಗಳ ಮಾಹಿತಿ ಬೆರಳ ತುದಿಯಲ್ಲಿರಲಿ. ಕೊರೊನಾ ನಿಖರವಾದ ಮಾಹಿತಿಯಿಂದ  ಜನತೆಗೂ ಚುನಾಯಿತ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕಾರ್ಯ ಸಮಾಧಾನವಾಗಲಿ.

ಕೊರೊನಾ ಅಲೆ ಕಡಿಮೆ ಆಗುವವರೆಗೂ ದಿಶಾ ಸಮಿತಿ ನಾಮ ನಿರ್ಧೇಶನ ಸದಸ್ಯರ  ಕೆಲಸ ಸೋಂಕಿತರ ಭಾವನೆಗಳಿಗೆ ಸ್ಪಂಧಿಸುವುದು ಹಾಗೂ ಜನತೆಗೆ ಆತ್ಮಸ್ಥೈರ್ಯ ತುಂಬುವುದಾಗಿದೆ. ಅಷ್ಟೆ ಅಲ್ಲಾ ಕೊರೊನಾಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಗೆ ಅಗತ್ಯವಿರುವ ಯಾವುದೇ ಪರಿಕರ, ಯೋಜನೆಗಳ ಮಂಜೂರಾತಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಡತದ ಅನುಸರಣೆ ಮಾಡುವುದಾಗಿದೆ.

ದಯವಿಟ್ಟು ಉದಾಸೀನ ಮಾಡಬೇಡಿ, ನಾವು ನೇರವಾಗಿ ಪ್ರಧಾನ ಮಂತ್ರಿಯವರ ಕಚೇರಿಗೆ ದಿನ ನಿತ್ಯದ ದಿನಚರಿ ಬಗ್ಗೆ ಸಂಸದರ ಕಚೇರಿಯಿಂದ ಕಳುಹಿಸಲು ಚಿಂತನೆ ನಡೆಸಿದ್ದೇವೆ. ಕೊರೊನಾ ಅಡಿ ಇರುವ ಕೇಂದ್ರದ ಎಲ್ಲಾ ಯೋಜನೆಗಳು ಶೇ 100 ರಷ್ಟು ಬಳಕೆ ಆಗಲೇ ಬೇಕು. ಸೋ0ಕಿತರಿಗೆ ಅಡಚಣೆಯಾಗಲೇ ಬಾರದು.

ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಶ್ರೀ ಜಿ.ಎಸ್.ಬಸವರಾಜ್‍ರವರು ಮತ್ತು ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಒಂದು ಸಲಹೆ ನೀಡಿದ್ದರು ಮಾಧ್ಯಮಗಳಲ್ಲಿ ಬರುವ ಯಾವುದೇ ವರದಿಗೆ ಸತ್ಯಾಂಶ ನೀಡಿ ಅದನ್ನು ಅವರು ಪ್ರಕಟಿಸಲಿ. ಜನತೆ ತೀರ್ಮಾನಿಸಲಿ ಎಂಬುದಾಗಿತ್ತು. ಹಾಗೇಯೇ ನಿಜವಾದ ಸೋಂಕಿತರು ಸೋಶಿಯಲ್ ಮೀಡಿಯಾ ಅಥವಾ ಮಾಧ್ಯಮಗಳಲ್ಲಿ ನೀಡುವ ಹೇಳಿಕೆಗಳಿಗೆ ಉತ್ತರ ನೀಡಲೇ ಬೇಕು ಇದು ಪ್ರಜಾಪ್ರಭುತ್ವದ ವ್ಯವಸ್ಥೆ.

ಇಷ್ಟೆಲ್ಲಾ ಯಾಕೆ ಬರೆಯಬೇಕು ಎಂದರೆ, ಅಧಿಕಾರಿಗಳು ಒಂದು ವರಸೆ ಶುರು ಮಾಡಿದ್ದಾರೆ, ಕುಂದರನಹಳ್ಳಿ ರಮೇಶ್ ರವರಿಗೆ ಎಲ್ಲಾ ಗೊತ್ತು, ನಮಗೆ ಮೊದಲೇ ಹೇಳಿದರೆ ನಾವು ಪ್ರಿಪೇರ್ ಆಗಿ ಬರುತ್ತೇವೆ, ಸಭೆಯಲ್ಲಿ ಪ್ರಶ್ನೆ ಮಾಡುತ್ತಾರೆ, ನಮ್ಮ ಮರ್ಯಾದೆ ಹೋಗುತ್ತದೆ ಎನ್ನುತ್ತಾರೆ.

ಆದ್ದರಿಂದ ಮೊದಲೇ ಈ ವಿಚಾರ ತಿಳಿಸಲಾಗಿದೆ. ಇದ್ಯಾವುದು ನಮ್ಮ ವಿಚಾರ ಅಲ್ಲ, ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಯೋಜನೆಗಳ ಗೈಡ್‍ಲೈನ್ಸ್‍ನಲ್ಲಿರುವ ಅಂಶಗಳು ಅಷ್ಟೆ.

                                  -ತುಮಕೂರು ಜಿಲ್ಲೆಯ ದಿಶಾ ನಾಮ ನಿರ್ದೇಶನ ಸದಸ್ಯರ ತಂಡ.