19th April 2024
Share

TUMAKURU:SHAKTHI PEETA FOUNDATION

ಕೋವಿಡ್ ವಿಷಯವಾಗಿ ಮಾನ್ಯ ಮುಖ್ಯ ಮಂತ್ರಿಯವರಿಗೆ ಒಂದು ಪತ್ರವನ್ನು ಬರೆಯಲಾಗಿದೆ ತಾವೂ ಏನಾದರೂ ಸಲಹೆಗಳನ್ನು ನೀಡಿದಲ್ಲಿ ಸೇರ್ಪಡೆ ಮಾಡಲಾಗುವುದು. ಇದರಲ್ಲಿ ಯಾವುದಾದರೂ ಅನಗತ್ಯವಾಗಿದ್ದಲ್ಲಿ ಮತ್ತೊಮ್ಮೆ ಸಮಾಲೋಚನೆ ನಡೆಸಲಾಗುವುದು.

ಗೆ                                                                                         ದಿನಾOಕ:10.05.2021

ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪವರು.

ಮಾನು ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ.

ಹಾಗೂ

ಅಧ್ಯಕ್ಷರು. ರಾಜ್ಯ ಮಟ್ಟದ ದಿಶಾ ಸಮಿತಿ.

ವಿಧಾನ ಸೌಧ, ಮೂರನೇ ಮಹಡಿ, ಬೆಂಗಳೂರು.

ಇವರಿಂದ.

ಕುಂದರನಹಳ್ಳಿ ರಮೇಶ್.

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ. ಕರ್ನಾಟಕ ಸರ್ಕಾರ.

ಪಾರ್ವತಿ ನಿಲಯ, 1 ನೇ ಮುಖ್ಯ ರಸ್ತೆ, ಜಯನಗರ ಪೂರ್ವ,  ಶೆಟ್ಟಿಹಳ್ಳಿ ಮುಖ್ಯ ರಸ್ತೆ. ತುಮಕೂರು-572102.

ಮೊ:9886774477

ಇವರ ಮುಖಾಂತರ

ಶ್ರೀಮತಿ ಶಾಲಿನಿ ರಜನೀಶ್

ಸದಸ್ಯ ಕಾರ್ಯದರ್ಶಿ, ರಾಜ್ಯ ಮಟ್ಟದ ದಿಶಾ ಸಮಿತಿ.

ಬಹುಮಹಡಿಗಳ ಕಟ್ಟಡ, 7 ನೇ ಪ್ಲೋರ್.

ಬೆಂಗಳೂರು.

ಮಾನ್ಯರೇ.

ವಿಷಯ: ಲಾಕ್ಡೌನ್ ಜೊತೆಗೆ ಕೊರೊನಾ ಮಹಾಮಾರಿಯ ಜನಾಂದೋಲನದ ಬಗ್ಗೆ.

ನಾನೊಬ್ಬ ರೈತನಾದರೂ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ವಿವಿಧ ಇಲಾಖೆಗಳಿಗೆ ಹೊಣೆಗಾರಿಕೆ ನೀಡುವ ಬಗ್ಗೆ ಕೆಲವು ಅಭಿಪ್ರಾಯಗಳನ್ನು ನೀಡಲು ಬಯಸಿದ್ಧೇನೆ.

ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರ ಇದ್ದರೂ ಕೋರೊನಾ ವಿಷಯ ಬಂದಾಗ ಸರ್ವಪಕ್ಷಗಳ ಸರ್ಕಾರದಂತೆ ಸಾಮೂಹಿಕವಾಗಿ ಯೋಜನೆ ರೂಪಿಸಬೇಕಿದೆ. ರಾಜಕೀಯ  ಇಲ್ಲಿ ಬರಬಾರದು ಎಂಬ ಭಾವನೆ ಜನಸಾಮಾನ್ಯರದ್ದಾಗಿದೆ.’

ಮೊದಲನೇ ಕೊರೊನಾ ಅಲೆ ಪೂರ್ಣಗೊಂಡಿದೆ, ಎರಡನೇ ಕೊರೊನಾ ಅಲೆ ಅಬ್ಬರಿಸುತ್ತಿದೆ. ಮುಂದೆ ಎಷ್ಟೆ ಅಲೆ ಬಂದರೂ ಸಿದ್ಧತೆ ಮಾಡಿಕೊಳ್ಳ ಬೇಕಾದ ಅಂಶಗಳು ಇದರಲ್ಲಿ ಸೇರಿವೆ. ಕರ್ನಾಟಕ ರಾಜ್ಯದ ಅರೋಗ್ಯ ಸಮಗ್ರ ಅಭಿವೃದ್ಧಿ ಮಾಸ್ಟರ್ ಪ್ಲಾನ್ ಇದಾಗಲಿದೆ, ಇವುಗಳಲ್ಲದೆ ವಿವಿಧ ವರ್ಗದವರ ಅಭಿಪ್ರಾಯವನ್ನು ಕ್ರೋಢಿಕರಿಸಿ ಉತ್ತಮವಾದ ಯೋಜನೆ ರೂಪಿಸಬಹುದಾಗಿದೆ. ಶೀಘ್ರವಾಗಿ ಅಗತ್ಯ ಕ್ರಮಕೈಗೊಳ್ಳಲು ಈ ಮೂಲಕ ಮನವಿ.

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಒಳ್ಳೆಯ ಯೋಜನೆಗಳನ್ನು ರೂಪಿಸಿದೆ, ಆರ್ಥಿಕವಾಗಿಯು ಸಮರ್ಥವಾಗಿದೆ.  ಗ್ರಾಮಪಂಚಾಯಿತಿ ಸದಸ್ಯರಿಂದ ಮುಖ್ಯ ಮಂತ್ರಿಯವರಿಗೂ, ಗ್ರಾಮಲೆಕ್ಕಿಗರಿಂದ ಮುಖ್ಯ ಕಾರ್ಯದರ್ಶಿಯವರಿಗೂ ಹೊಣೆಗಾರಿಕೆ/ ಜವಾಬ್ಧಾರಿ ಹಂಚಿದ್ದಾರೆ. ಆದರೆ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಅಕೌಂಟಬಲಿಟಿ ಮತ್ತು ಪಾರದರ್ಶಕತೆ ಬೇಕು ಹೊಸದಾಗಿ ಏನೂ ಮಾಡಬೇಕಾಗಿಲ್ಲ.

‘ಆಪ್ ಅಂದ್ರೆ ಪ್ರೈಮರಿ ಪಾಠಶಾಲಾ ಮಾಸ್ಟರ್ ಇದ್ದಹಾಗೆ, ಮಾಸ್ಟರ್ ಹೇಲಿದ್ದನ್ನು ಹುಡುಗರು ಕೇಳಬೇಕು, ಹುಡುಗರು ಪ್ರಶ್ನೆ ಮಾಡಿದರೆ, ನಿಮಗೆ ಗೊತ್ತಾಗಲ್ಲ ಸುಮ್ಮನೆ ಕುಳಿತು ಕೊಳ್ರೋ ಎನ್ನುತ್ತಾರೆ. ಹಾಗೆಯೇ ಆಪ್ ಟೈಪ್ ಮಾಡುವುದು ಅಷ್ಟೆ, ರಿಯಲ್ ಗ್ರೌಂಡ್ ರಿಯಾಲಿಟಿನೇ ಬೇರೆ ಇರುತ್ತದೆ. ಇದರ ಬಗ್ಗೆ ಕ್ರಮ ಸರಿಯಾಗಿ ಆಗಿಲ್ಲ.

ಕೊರೊನಾ ಸೋಂಕಿತರು ಯಾರಿಗೂ ಹೇಳದೆ ಸುಸ್ತು ಆಗುವವರೆಗೂ ಮನೆಯಲ್ಲಿಯೇ ಇರುತ್ತಾರೆ, ಸುಸ್ತಾದಾಗ ಆಸ್ಪತ್ರೆಗೆ ಬರುತ್ತಾರೆ, ಬಂದು ಒಂದೆರಡು ದಿವಸದಲ್ಲಿ ಸಾಯುತ್ತಾರೆ, ಸರ್ಕಾರ ಕೊಲೆ ಮಾಡಿತು ಎನ್ನುತ್ತಾರೆ.

ಅದ್ದರಿಂದ ಇಲಾಖಾವಾರು ನಿರ್ಧಿಷ್ಟ ಹೊಣೆಗಾರಿಕೆ ನೀಡುವ ಮೂಲಕ ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಸಹಕಾರದಿಂದ ಸಾಮೂಹಿಕ ಆಂದೋಲನ ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ರೀತಿ ನಡೆದರೆ ಯಾವ ದಂದೆಯೂ ನಡೆಯಲ್ಲ, ಯಾರಿಗೂ ಅನುಮಾನವೂ ಬರಲ್ಲ ಎನಿದೆಯೋ ಅದನ್ನು ನೇರವಾಗಿ ಜನತೆಯ ಮುಂದೆ ಇಡಿ, ನೀವೂ ಈ ವಯಸ್ಸಿನಲ್ಲಿ ಏಕೆ ಅಪವಾದ ಹೊತ್ತುಕೊಳ್ಳುತ್ತೀರಿ ಎಂಬ ಅಂಶವನ್ನು ತಮ್ಮ ಆಧ್ಯಗಮನಕ್ಕೆ ತರಬಯಸುತ್ತೇನೆ.

ಕೇಂದ್ರ ಸರ್ಕಾರ ರಾಜ್ಯ ಮಟ್ಟದ ದಿಶಾ ಸಮಿತಿ ಮತ್ತು ಜಿಲ್ಲಾ ಮಟ್ಟದ ದಿಶಾ ಸಮಿತಿ ಮಾಡಿರುವ ಉದ್ದೇಶವೇ ಕೇಂದ್ರದ ಅನುದಾನ ಸದ್ಭಳಕೆ, ತಪ್ಪಾಗಿದ್ದರೆ ಶಿಕ್ಷೆಗೆ ಶೀಪಾರಸ್ಸು, ಇನ್ನೂ ಅಗತ್ಯವಿದ್ದರೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿದೆ. ಪ್ರಧಾನಿಯವರೇ ಸಮಿತಿ ರಚಿಸಿದ್ದರೂ ಉಪಯೋಗಿಸಿಕೊಳ್ಳದೆ ಇದ್ದರೆ ಹೇಗೆ ಎಂಬ ಚಿಂತೆ ನನಗಿದೆ. ಈ ಸಮಿತಿಗಳಲ್ಲಿ ನಿರ್ಣಯ ಮಾಡಿ ಕೇಂದ್ರಕ್ಕೆ ರವಾನಿಸಿ, ಕೆಂದ್ರದ ಮೇಲೆ ಒತ್ತಡ ಅಥವಾ ಜವಾಬ್ಧಾರಿ ಬೀಳಲಿದೆ.

1.ರಾಜ್ಯ ಮಟ್ಟದ ದಿಶಾ ಸಮಿತಿ ಸಭೆ.

ಇದು ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ರಚಿಸಿರುವ ಸರ್ವಪಕ್ಷಗಳ ಚುನಾಯಿತ ಸದಸ್ಯರ, ಎಲ್ಲಾ ಇಲಾಖೆ ಅಧಿಕಾರಿಗಳ ಮತ್ತು ಸಂಘ ಸಂಸ್ಥೆಗಳ ಸದಸ್ಯರನ್ನು ಒಳಗೊಂಡ ಸಮಿತಿ ಆಗಿರುವುದರಿಂದ ಹಾಗೂ ಕೇಂದ್ರ ಸರ್ಕಾರದ ಅನುದಾನದ ಸಮರ್ಪಕ ಬಳಕೆ, ದುರುಪಯೋಗವಾಗಿದ್ದಲ್ಲಿ ತನಿಖೆ ಮತ್ತು ಕೇಂದ್ರ ಸರ್ಕಾರದ ಹೊಸ ಯೋಜನೆಗಳಿಗೆ ಶ್ರಮಿಸುವ ಸಮಿತಿಯಾಗಿರುವುದರಿಂದ ಈ ಸಮಿತಿಯನ್ನೇ ತಾತ್ಕಲಿಕವಾಗಿ ಕೋವಿಡ್ ಕೋರ್ ಕಮಿಟಿಯಾಗಿ ಮಾಡಬಹುದಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಇತರೆ ಅಧ್ಯಯನ ವರದಿ ಹಾಗೂ ಕೈಗೊಂಡ ಯೋಜನೆಗಳ ಮಾಹಿತಿ.

ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಆಪ್, ಲಿಂಕ್, ವೆಬ್ ಸೈಟ್‍ಗಳ ಮಾಹಿತಿ.

ಈ ಸಮಿತಿಗೆ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳು ಮತ್ತು ಸರ್ವಪಕ್ಷಗಳ ಅಧ್ಯಕ್ಷರನ್ನು ಸೇರ್ಪಡೆ ಮಾಡುವುದು ಒಳ್ಳೆಯದು.

ಕೊರೊನಾ ಸಂಬಂಧ ವಿವಿಧ ಸಚಿವರಿಗೆ ಹಂಚಿಕೆ ಮಾಡಿರುವ ಹೊಣೆಗಾರಿಕೆಯ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಬಹುದು.

ಪ್ರತಿಯೊಂದು ಇಲಾಖೆಯ ಹೊಣೆಗಾರಿಕೆಗಳ ಮತ್ತು ಜಿಲ್ಲಾ ಮಟ್ಟದ ವಿವಿಧ ಸಮಿತಿಗಳ ಕಾರ್ಯನಿರ್ವಹಣೆ ಪರಿಶೀಲನೆ ಮಾಡುವುದು.

ಕೋವಿಡ್ ವಾರಿಯರಸ್ಸ್ ಗಳಿಗೆ ಮತ್ತು ಹೊಸದಾಗಿ ನೇಮಕ ಮಾಡುವವರ ಕೆಲಸ ಒತ್ತಡ ಕಡಿಮೆ ಮಾಡುವುದು, ಆತ್ಮಸ್ಥೈರ್ಯ ತುಂಬುವುದು ಹಾಗೂ ಪ್ರೋತ್ಸಾಹ ಧನ ನೀಡುವುದು ಇತ್ಯಾದಿ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನುದಾನ ಬಳಕೆ, ಉಳಿಕೆ ಮತ್ತು ಅಗತ್ಯತೆಯ ಬಗ್ಗೆ ಪ್ರತಿ ದಿನದ ಮಾಹಿತಿ ಪರಿಶೀಲಿಸುವುದು.

ರಾಜ್ಯದ ಎಲ್ಲಾ ಶಾಸಕರ ಮತ್ತು ಸಂಸದರ ಕಚೇರಿಗಳನ್ನು ತಾತ್ಕಾಲಿಕವಾಗಿ ಕೋವಿಡ್ ವಾರ್ ರೂಂಗಳಾಗಿ ಪರಿವರ್ತಿಸುವುದು.

ವಿಧಾನ ಪರಿಷತ್ ಸದಸ್ಯರ ಮತ್ತು ರಾಜ್ಯ ಸಭಾ ಸದಸ್ಯರ ಕಚೇರಿಗಳು ಆಯಾ ಜಿಲ್ಲೆಯ ಕೋವಿಡ್ ದೂರುಗಳನ್ನು ಪರಿಶೀಲಿಸುವ ತಾತ್ಕಾಲಿಕ ವಾರ್ ರೂಂಗಳಾಗಿ ಮಾಡಬೇಕು.

ಕೋವಿಡ್ ಹೊಸ ದಾಳಿಯಾಗಿರುವುದರಿಂದ ಹೊಸದಾಗಿ ಜಿಎಸ್‍ಟಿ ಮಾಡಿದಾಗ ದಿನಕ್ಕೊಂದು ಮಾರ್ಗದರ್ಶಿ ಸೂತ್ರ ಮಾಡಿದ ಹಾಗೆ ಅಗತ್ಯ ಬಿದ್ದಾಗ ಕೋವಿಡ್ ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡುವುದು.

ಯಾವುದೇ ಡಿಆರ್‍ಡಿಓ ಮೆಡಿಸನ್ ಇರಲಿ, ಆಯುಷ್ ಇಲಾಖೆ ಮೆಡಿಸನ್ ಇರಲಿ ಅಥವಾ ಹೊಸ ಅಂಶಗಳು ಬಂದಾಗ ಪರಿಶೀಲನೆ ಮಾಡಿ ಸಂಬಂಧಿಸಿವರ ತಾಂತ್ರಿಕ ವರದಿ ಪಡೆದು ಜನತೆಗೆ ತಿಳಿಸಬೇಕು.

2.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಅಭಿವೃದ್ಧಿ ಇಲಾಖೆ.  

2.1.ಗ್ರಾಮ ಮಟ್ಟದ ಕೋವಿಡ್  ಟಾಸ್ಕ್ ಪೋರ್ಸ್. (ಈಗಾಗಲೇ ರಚಿಸಲಾಗಿದೆ ನೀರಿಕ್ಷೀತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.) ಹೋಂ ಐಸೋಲೇಷನ್ ದಿನಚರಿ.  ಯಾರು ಹೋಂ ಎಸೋಲೋಷೆನ್ ಮಾಡಬೇಕು, ಯಾರು ಕೋವಿಡ್ ಕೇರ್ ಸಂಟರ್‍ನಲ್ಲಿರ ಬೇಕು, ಯಾರು ಆಸ್ಪತ್ರೆಗೆ ಹೋಗಬೇಕು ಎಂಬ ನಿರ್ಣಯವನ್ನು ಈ ಹಂತದಲ್ಲಿ ಮಾಡಲು ಕ್ರಮಕೈಗೊಳ್ಳಬೇಕು. ಯಾವುದೇ ಗ್ರಾಮದಿಂದ ಯಾರು ಗ್ರಾಮ ಬಿಟ್ಟು ಏಕೆ ಹೋಗಬೇಕು ಎಂಬ ಅಗತ್ಯದ ಬಗ್ಗೆ ನಿರ್ಣಯ ಮಾಡಬೇಕು. ಗ್ರಾಮ ಮಟ್ಟದ ಕೋವಿಡ್ ಕೇರ್ ಸೆಂಟರ್ ಜವಾಬ್ಧಾರಿ ಹೊರಬೇಕು.

ಆಶಾ ಕಾರ್ಯಕರ್ತರವಾರು ವಿವಿಧ ವರ್ಗದ ಅಂದರೆ ಗುಣಮುಖರಾದವರು,  ಸಾವು ಸಂಭವಿಸಿರುವವರು ಸೋಂಕಿತರ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ಸಾವು ಸಂಭವಿಸಿದವರ ಕುಟುಂಬಗಳ ಸ್ಥಿತಿಗತಿ ಮತ್ತು ಸರ್ಕಾರದಿಂದ ಮಾಡಿರುವ ಅಥವಾ ಮಾಡಬೇಕಾಗಿರುವ ಅನೂಕೂಲಗಳ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ವಲಸೆ ಬಂದಿರುವವರ ಪಟ್ಟಿ ಮತ್ತು ಸರ್ಕಾರದಿಂದ ಮಾಡಿರುವ ಅಥವಾ ಮಾಡಬೇಕಾಗಿರುವ ಅನೂಕೂಲಗಳ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ವಿವಿಧ ವರ್ಗವಾರು ಊಟ, ವಸತಿ, ಪ್ರವಾಸ ಇತ್ಯಾದಿ  ಪಲಾನುಭವಿಗಳ ಪಟ್ಟಿ ಮತ್ತು ಸರ್ಕಾರದಿಂದ ಇವರಿಗೆ ಮಾಡಿರುವ ಅಥವಾ ಮಾಡಬೇಕಾಗಿರುವ ಅನೂಕೂಲಗಳ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ಕೇಂದ್ರ ಸರ್ಕಾರದಿಂದ ಗಣತಿ ಮಾಡಿರುವ ವಿವಿಧ ರೋಗಿಗಳ ಪಟ್ಟಿ. 

ಆಶಾ ಕಾರ್ಯಕರ್ತರ ಗ್ರಾಮೀಣ ವ್ಯಾಪ್ತಿಯ ಜಿಐಎಸ್ ಲೇಯರ್.

ಆಶಾ ಕಾರ್ಯಕರ್ತರ ವಾರು ಆಯುಷ್ಮಾನ್ ಭಾರತ್ ಮತ್ತು ಅರೋಗ್ಯ ಕರ್ನಾಟಕ ಕಾರ್ಡ್‍ಗಳ ವಿತರಣೆ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ಲಸಿಕೆ ಪಡೆದವರ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ಲಸಿಕೆ ಪಡೆಯ ಬೇಕಾದವರ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿಯ ಸ್ಮಶಾನಗಳ ಮೂಲಭೂತ ಸೌಕರ್ಯ.

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ವಿವಿಧ ಸಂಘಸಂಸ್ಥೆಗಳ, ಸೇವಾ ಮನೋಭಾವುಳ್ಳ ಸರ್ವಪಕ್ಷಗಳ ರಾಜಕಾರಣಿಗಳ, ಸಮಾಜ ಸೇವಕರ, ಪರಿಣಿತರ, ನಾಟಿ ವೈದ್ಯರ ಪಟ್ಟಿ ಮಾಡುವುದು.

2.2 ಗ್ರಾಮ ಪಂಚಾಯಿತಿ ಮಟ್ಟದ ಕೋವಿಡ್  ಟಾಸ್ಕ್ ಪೋರ್ಸ್. (ಈಗಾಗಲೇ ರಚಿಸಲಾಗಿದೆ ನೀರಿಕ್ಷೀತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.) ಗ್ರಾಮ ಪಂಚಾಯಿತಿ ಮಟ್ಟದ ಕೋವಿಡ್ ಕೇರ್ ಸೆಂಟರ್. ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ ಪೋರ್ಸ್ ಸಭೆ ನಡವಳಿಕೆ ಪರಿಶೀಲನೆ ಮತ್ತು ಅಗತ್ಯ ಕ್ರಮ.

3. ಪೌರಾಡಳಿತ ಮತ್ತು ನಗರಾಡಳಿತ ಇಲಾಖೆ .

3.1ವಾರ್ಡ್ ಮಟ್ಟದ ಕೋವಿಡ್  ಟಾಸ್ಕ್ ಪೋರ್ಸ್. (ಈಗಾಗಲೇ ರಚಿಸಲಾಗಿದೆ ನೀರಿಕ್ಷೀತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.) ಹೋಂ ಐಸೋಲೇಷನ್ ದಿನಚರಿ.  ಯಾರು ಹೋಂ ಎಸೋಲೋಷೆನ್ ಮಾಡಬೇಕು, ಯಾರು ಕೋವಿಡ್ ಕೇರ್ ಸಂಟರ್‍ನಲ್ಲಿರ ಬೇಕು, ಯಾರು ಆಸ್ಪತ್ರೆಗೆ ಹೋಗಬೇಕು ಎಂಬ ನಿರ್ಣಯವನ್ನು ಈ ಹಂತದಲ್ಲಿ ಮಾಡಲು ಕ್ರಮಕೈಗೊಳ್ಳಬೇಕು. ವಾರ್ಡ್ ಮಟ್ಟದ ಕೋವಿಡ್ ಕೇರ್ ಸೆಂಟರ್ ಹೊಣೆಗಾರಿಕೆ.

ಆಶಾ ಕಾರ್ಯಕರ್ತರವಾರು ವಿವಿಧ ವರ್ಗದ ಅಂದರೆ ಗುಣಮುಖರಾದವರು,  ಸಾವು ಸಂಭವಿಸಿರುವವರು ಸೋಂಕಿತರ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ಸಾವು ಸಂಭವಿಸಿದವರ ಕುಟುಂಬಗಳ ಸ್ಥಿತಿಗತಿ ಮತ್ತು ಸರ್ಕಾರದಿಂದ ಮಾಡಿರುವ ಅಥವಾ ಮಾಡಬೇಕಾಗಿರುವ ಅನೂಕೂಲಗಳ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ವಲಸೆ ಬಂದಿರುವವರ ಪಟ್ಟಿ ಮತ್ತು ಸರ್ಕಾರದಿಂದ ಮಾಡಿರುವ ಅಥವಾ ಮಾಡಬೇಕಾಗಿರುವ ಅನೂಕೂಲಗಳ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ವಿವಿಧ ವರ್ಗವಾರು ಊಟ, ವಸತಿ, ಪ್ರವಾಸ ಇತ್ಯಾದಿ  ಪಲಾನುಭವಿಗಳ ಪಟ್ಟಿ ಮತ್ತು ಸರ್ಕಾರದಿಂದ ಇವರಿಗೆ ಮಾಡಿರುವ ಅಥವಾ ಮಾಡಬೇಕಾಗಿರುವ ಅನೂಕೂಲಗಳ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ಕೇಂದ್ರ ಸರ್ಕಾರದಿಂದ ಗಣತಿ ಮಾಡಿರುವ ವಿವಿಧ ರೋಗಿಗಳ ಪಟ್ಟಿ. 

 ನಗರ ಸ್ಥಳೀಯ ಸಂಸ್ಥೆಗಳ ಆಶಾ ಕಾರ್ಯಕರ್ತರ  ವ್ಯಾಪ್ತಿಯ ಜಿಐಎಸ್ ಲೇಯರ್. 

ಆಶಾ ಕಾರ್ಯಕರ್ತರ ವಾರು ಆಯುಷ್ಮಾನ್ ಭಾರತ್ ಮತ್ತು ಅರೋಗ್ಯ ಕರ್ನಾಟಕ ಕಾರ್ಡ್‍ಗಳ ವಿತರಣೆ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ಲಸಿಕೆ ಪಡೆದವರ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ಲಸಿಕೆ ಪಡೆಯ ಬೇಕಾದವರ ಪಟ್ಟಿ.

ಆಶಾ ಕಾರ್ಯಕರ್ತರ ವ್ಯಾಪ್ತಿಯ ಸ್ಮಶಾನಗಳ ಮೂಲಭೂತ ಸೌಕರ್ಯ

ಆಶಾ ಕಾರ್ಯಕರ್ತರ ವ್ಯಾಪ್ತಿವಾರು ವಿವಿಧ ಸಂಘಸಂಸ್ಥೆಗಳ, ಸೇವಾ ಮನೋಭಾವುಳ್ಳ ಸರ್ವಪಕ್ಷಗಳ ರಾಜಕಾರಣಿಗಳ, ಸಮಾಜ ಸೇವಕರ, ಪರಿಣಿತರ, ನಾಟಿ ವೈದ್ಯರ ಪಟ್ಟಿ ಮಾಡುವುದು.

4.ಯೋಜನಾ ಇಲಾಖೆ.

4.1 ಶಾಸಕರ ಅಧ್ಯಕ್ಷತೆಯ ಕೆಡಿಪಿ ಕೋವಿಡ್  ಟಾಸ್ಕ್ ಪೋರ್ಸ್.

ಆಯಾ ಕ್ಷೇತ್ರದ ಮಾಜಿ ಶಾಸಕರುಗಳನ್ನು ಮತ್ತು ಸರ್ವಪಕ್ಷಗಳ ಅಧ್ಯಕ್ಷರನ್ನು ಸೇರ್ಪಡೆ ಮಾಡಬಹುದಾಗಿದೆ. ಆನ್ ಲೈನ್ ಮೂಲಕ ಸಂಕಿತರ ಜೊತೆ ಮಾತನಾಡುವುದು, ಫೇಸ್ ಬುಕ್ ಅಥವಾ ಇತರೆ ಸೋಶಿಯಲ್ ಮೀಡಿಯಾ ಮೂಲಕ ಆತ್ಮ ಸ್ಥೈರ್ಯ ತುಂಬುವುದು, ಆಯಾ ವಿಧಾನಸಭಾ ಕ್ಷೇತ್ರದ ಎಲ್ಲಾ ಹಂತದ ಸಮಿತಿಗಳ ಪ್ರಗತಿಪರಿಶೀಲನೆ,   ಕೋವಿಡ್ ಕೇರ್ ಸೆಂಟರ್ ಮತ್ತು ವಿವಿಧ ಆಸ್ಪತ್ರೆಗಳ ದಿನಚರಿ ಪರಿಶೀಲನೆ ಮಾಡುವುದು.

ವಿಧಾನ ಸಭಾ ಕ್ಷೇತ್ರದ ಮಟ್ಟದ ಕೋವಿಡ್ ಆಸ್ಪತ್ರೆ, ಮೊಬೈಲ್ ಕೋವಿಡ್ ಲಸಿಕೆ ಕೇಂದ್ರ, ಮೊಬೈಲ್ ಆಕ್ಸಿಜನ್ ಘಟಕ, ಮೊಬೈಲ್ ಚಿತಾಗಾರ, ಮೊಬೈಲ್ ಕೋವಿಡ್ ಟೆಸ್ಟ್, ಇತರೆ ಕಾಯಿಲಿಗಳಿಗೆ ಮೊಬೈಲ್ ಆಸ್ಪತ್ರೆ ಇತ್ಯಾದಿ ಮಾಡಲಿ. ಗ್ರಾಮಪಂಚಾಯಿತಿ ಮಟ್ಟದ ಕೋವಿಡ್ ಟಾಸ್ಕ್ ಪೋರ್ಸ್ ಸಭೆ ನಡವಳಿಕೆ ಪರಿಶೀಲನೆ.

4.2 ನಗರ ವಿಧಾನ ಸಭಾ ಕ್ಷೇತ್ರಗಳ ಕೆಡಿಪಿ ಸಮಿತಿಗಳನ್ನು ಹೊಸದಾಗಿ ರಚಿಸಬೇಕು. ಆಯಾ ಕ್ಷೇತ್ರದ ಮಾಜಿ ಶಾಸಕರುಗಳನ್ನು ಮತ್ತು ಸರ್ವಪಕ್ಷಗಳ ಅಧ್ಯಕ್ಷರನ್ನು ಸೇರ್ಪಡೆ ಮಾಡಬಹುದಾಗಿದೆ.

4.3 ಲೋಕಸಭಾ ಸದಸ್ಯರ ಅಧ್ಯಕ್ಷತೆಯ ದಿಶಾ ಕೋವಿಡ್  ಟಾಸ್ಕ್ ಪೋರ್ಸ್.

ಕೇಂದ್ರ ಸರ್ಕಾರದ ಅನುದಾನಗಳ ಪರಿಶೀಲನೆ ಆಯಾ ಜಿಲ್ಲೆಯ ಸಂಸದರು, ರಾಜ್ಯ ಸಭಾ ಸದಸ್ಯರು, ಮಾಜಿ ಸಚಿವರು, ಮಾಜಿ ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರುಗಳನ್ನು ಮತ್ತು ಸರ್ವಪಕ್ಷಗಳ ಅಧ್ಯಕ್ಷರನ್ನು ಸೇರ್ಪಡೆ ಮಾಡಬಹುದಾಗಿದೆ.

ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಗೆ ಶಿಪಾರಸ್ಸು ಮಾಡುವುದು.

ಸಾರ್ವಜನಿಕರಿಂದ, ಸಂಘಸಂಸ್ಥೆಗಳಿಂದ, ಮಾದ್ಯಮದವರಿಂದ, ವಿವಿಧ ಹಂತದ ಸಮಿತಿಗಳಿಂದ ಕೇಂದ್ರ ಸರ್ಕಾರದ ಅನುದಾನದ ದುರುಪಯೋಗ ಬಂದಲ್ಲಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಕ್ಕಾಗಿ ರಾಜ್ಯ ಮಟ್ಟದ ದಿಶಾ ಸಮಿತಿಗೆ ಕಳುಹಿಸುವುದು.

4.4 ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೋವಿಡ್  ಟಾಸ್ಕ್ ಪೋರ್ಸ್.-

ಜಿಲ್ಲೆಯ ಸಂಪೂರ್ಣ ಕೋವಿಡ್ ಜವಾಬ್ದಾರಿ ಈಗಾಗಲೇ ನೀಡಲಾಗಿದೆ.

5.ಆರೋಗ್ಯ ಇಲಾಖೆ.

ದಿನಾಂಕ:30.04.2021 ರಂದು ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ರಾಜ್ಯದ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದ ಪ್ರಕಾರ ಮಾಡಿರುವ ಪಟ್ಟಿಯ ಜವಬ್ದಾರಿ.

ಆಯಾ ಜಿಲ್ಲೆಯಲ್ಲಿರುವ ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳವಾರು ಹೊಣೆಗಾರಿಕೆ ಮತ್ತು ಮುಖ್ಯಸ್ಥರ ಪಟ್ಟಿ.

ಸೋಂಕಿತರ ಸ್ಠೆಜ್(ಕಡಿಮೆ, ಮಧ್ಯಮ ಮತ್ತು ತೀವೃ)ವಾರು ಯಾರು ನಿರ್ಣಯ ಮಾಡಬೇಕು ಮತ್ತು ಹೇಗೆ ನಿರ್ಣಯ ಮಾಡುವುದು.

ಆಯಾ ಜಿಲ್ಲೆಯಲ್ಲಿರುವ ಆಯುಷ್ಮಾನ್ ಅರೋಗ್ಯ ಮಿತ್ರರ ಪಟ್ಟಿ ಮತ್ತು ಕರ್ತವ್ಯಗಳ ಮಾಹಿತಿ.

ಆಯಾ ಜಿಲ್ಲೆಗೆ ರೆಮ್ಡಿಸಿವಿರ್ ಬಂದಿರುವುದು ಮತ್ತು ವಿತರಣೆ ಮಾಡಿರುವ ಪಟ್ಟಿ.

ಆಯಾ ಜಿಲ್ಲೆಗೆ ಆಕ್ಸಿಜನ್ ಸರಬರಾಗಿರುವ ಮತ್ತು ವಿತರಣೆ ಮಾಡಿರುವವರ ಪಟ್ಟಿ,

ಆಯಾ ಜಿಲ್ಲೆಯ ಆಂಬುಲೆನ್ಸ್‍ಗಳು ಮತ್ತು ಅವುಗಳು ಕೋವಿಡ್ ಬಂದಾಗಿನಿಂದ ಅವುಗಳ ಬಳಕೆ ಮಾಹಿತಿ.

ಆಯಾ ಜಿಲ್ಲೆಗೆ ಕೋವಿಡ್ ಆರಂಭವಾದಗಿನಿಂದ ಕೇಂದ್ರ ಸರ್ಕಾರದ ವಿವಿದ ಯೋಜನೆಯಡಿ ಮಂಜೂರಾದ ಅನುದಾನಗಳ ಪಟ್ಟಿ.

ಆಯಾ ಜಿಲ್ಲೆಗೆ ಕೋವಿಡ್ ಆರಂಭವಾದಗಿನಿಂದ ರಾಜ್ಯ ಸರ್ಕಾರದ ವಿವಿದ ಯೋಜನೆಯಡಿ ಮಂಜೂರಾದ ಅನುದಾನಗಳ ಪಟ್ಟಿ.

ಜಿಲ್ಲೆಯ ವಿವಿಧ ಆಸ್ಪತ್ರೆಗಳವಾರು ಡಾಕ್ಟರ್ ಮತ್ತುನೌಕರರ ಹುದ್ದೆ, ಖಾಲಿ ಇರುವ ಹುದ್ದೆಗಳ ಪಟ್ಟಿ.

ಆಯಾ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಆಕ್ಸಿಜನ್ ಸರಬರಾಜು ಬೆಡ್‍ಗಳ ಪಟ್ಟಿ ಮತ್ತು ಹಂಚಿಕೆ ಮಾಡಿರುವ ಪಟ್ಟಿ.

ಆಯಾ ಜಿಲ್ಲೆಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೆಂಟಿಲೇಟರ್ ಸಹಿತ ಬೆಡ್‍ಗಳ ಪಟ್ಟಿ.

ಆಯಾ ಜಿಲ್ಲೆಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಐಸಿಯು ಬೆಡ್‍ಗಳ ಸಾಮಾಥ್ರ್ಯದ ಮಾಹಿತಿ.

ಆಯಾ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್‍ಗಳ ಮಾಹಿತಿ.

ಆಯಾ ಜಿಲ್ಲೆಯ ಆಯುಷ್ಮಾನ್ ಭಾರತ್ ಮತ್ತು ಅರೋಗ್ಯ ಕರ್ನಾಟಕ ಕಾರ್ಡ್ ಪಡೆಯಲು ಅರ್ಹರ  ಪಟ್ಟಿ.

6.ವೈಧ್ಯಕೀಯ ಶಿಕ್ಷಣ ಇಲಾಖೆ.

ಎಲ್ಲಾ ವಿಧವಾದ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗೆ ಬಳಸಬಹುದಾದ ಜಿಐಎಸ್ ಆಧಾರಿತ ಮಾಹಿತಿ.

7. ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣ ಇಲಾಖೆ.

ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಕೋವಿಡ್ ಕೇರ್ ಸೆಂಟರ್ ಮಾಡಬಹುದಾದ ಶಾಲಾ ಕಟ್ಟಡಗಳು, ಹೈಟೆಕ್ ಶಾಲೆ, ಹಾಸ್ಟೆಲ್ಸ್, ಜಿಐಎಸ್ ಲೇಯರ್ ಮತ್ತು ಹೊಸದಾಗಿ ಮಾಡಬೇಕಾಗಿರುವ ಶೌಚಾಲಯ ಮತ್ತು ಮೂಲಭೂತ ಸೌಕರ್ಯಗಳ ಮಾಹಿತಿ.

ವಿಶ್ವವಿದ್ಯಾಲಯಗಳಲ್ಲಿರುವ ಅಧ್ಯಯನ ಪೀಠ, ಸಂಶೋದನಾ ಕೇಂದ್ರಗಳಿಂದ ಜಿಲ್ಲಾವಾರು ಕೋವಿಡ್ ಕಾರ್ಯಕ್ರಮಗಳನ್ನು ಅನಾಲೀಸಿಸ್ ಮಾಡಿಸುವುದು.

8.ಗ್ರಹ ಇಲಾಖೆ.

ಜೈಲುಗಳಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಬಹುದಾದ ಜಿಐಎಸ್ ಲೇಯರ್.

ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಪೋಲೀಸ್ ಬೀಟ್ ವ್ಯಾಪ್ತಿಯ ಜಿಐಎಸ್ ಲೇಯರ್ ಮತ್ತು ಆ ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್ ಸೇರಿಸಲು ಸೋಂಕಿತರ ಮನವೊಲಿಸುವ ಹೋಣೆಗಾರಿಕೆ.

9.ರೆವಿನ್ಯೂ ಇಲಾಖೆ.

ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಸ್ನಶಾನಗಳ ಮೂಲಭೂತ ಸೌಕರ್ಯಗಳ ಜಿಐಎಸ್ ಲೇಯರ್.

ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ 5 ಎಕರೆಯಿಂದ ರಿಂದ ನೂರು ಎಕರೆ ಸರ್ಕಾರಿ ಜಾಗ ಹುಡುಕಿ ಆರೋಗ್ಯ ಯೋಜನೆಗಳಿಗೆ ನಿಗದಿ ಮಾಡುವುದು.

ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕನಿಷ್ಟ 5 ಎಕರೆಯಿಂದ ಸಿಗುವಷ್ಟು ಎಕರೆ ಸರ್ಕಾರ ಜಾಗ ಹುಡುಕಿ ಆರೋಗ್ಯ ಯೋಜನೆಗಳಿಗೆ ನಿಗದಿ ಮಾಡುವುದು.

10.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.

ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ ಆಂದೋಲನದಲ್ಲಿ ಭಾಗವಹಿಸುವಂತೆ ಮಾಡುವುದು ಮತ್ತು ಹೊಣೆಗಾರಿಕೆ ನೀಡುವುದು.

ಸ್ತ್ರಿ ಶಕ್ತಿ ಸಂಘಟನೆಗಳು ಕೋವಿಡ್ ಆಂದೋಲನದಲ್ಲಿ ಭಾಗವಹಿಸುವಂತೆ ಮಾಡುವುದು ಮತ್ತು ಹೊಣೆಗಾರಿಕೆ ನೀಡುವುದು.

11.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ.

ಯುವ ಸಂಘಟನೆಗಳು ಕೋವಿಡ್ ಆಂದೋಲನದಲ್ಲಿ ಭಾಗವಹಿಸುವಂತೆ ಮಾಡುವುದು ಮತ್ತು ಹೊಣೆಗಾರಿಕೆ ನೀಡುವುದು.

12.ಸಾರಿಗೆ ಇಲಾಖೆ.

ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಅಂಬುಲೇನ್ಸ್ ಮಾದರಿ ಸರ್ಕಾರಿ ಬಸ್ ಸೌಕರ್ಯ ಒದಗಿಸುವುದು.

13.ಕೈಗಾರಿಕಾ ಇಲಾಖೆ.

ಆಕ್ಸಿಜಿನ್ ಘಟಕ ಮತ್ತು ಗೋಡಾನ್ ಸ್ಥಾಪನೆಗಳ ಹೊಣೆಗಾರಿಕೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಪಿಪಿಪಿ ಸಮಿತಿಯಲ್ಲಿ ಕೋವಿಡ್‍ಗೆ ಸಂಬಂಧಿಸಿದ ಯೋಜನೆಗಳ ಹೊಣೆಗಾರಿಕೆ. ದಾನಿಗಳು, ಸಿಎಸ್‍ಆರ್‍ಫಂಡ್, ಸ್ಥಳೀಯ ಹೂಡಿಕೆ ಹೀಗೆ ಯಾರೇ ಏನೇ ಮಾಡಿದರು ಅದು ಇಲ್ಲಿ ದಾಖಲೆಯಾಗಲೇ ಬೇಕು.

ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಕೋವಿಡ್ ಕೇರ್ ಸೆಂಟರ್ ಗಳಿಗೆ ಆಯಾ ವ್ಯಾಪ್ತಿಯ ಸರ್ವಪಕ್ಷಗಳ ನಾಯಕರುಗಳಿಂದ, ಕೈಗಾರಿಕೋದ್ಯಮಿಗಳಿಂದ, ದಾನಿಗಳಿಂದ  ವಿವಿಧ ಸಲಕರಣೆಗಳ/ದೇಣಿಗೆ ನೀಡಲು ಪ್ರೇರಪಣೆ.

14.ಇಂಧನ ಇಲಾಖೆ

ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಕೋವಿಡ್ ಕೇರ್ ಸೆಂಟರ್ ಗಳಿಗೆ ನಿರಂತರ ವಿದ್ಯುತ್ ಸರಬರಾಜು ಮತ್ತು ಹೊಸದಾಗಿ ಅರ್ಜಿ ಹಾಕಿದ 24 ಗಂಟೆಯೊಳಗೆ ಕೋವಿಡ್ ಕೇರ್‍ಸೆಂಟರ್ ಗಳಿಗೆ ನಿರಂತರ ವಿದ್ಯುತ್ ಸರಬರಾಜು.

15.ಗಣಿ ಇಲಾಖೆ

ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಕೋವಿಡ್ ಕೇರ್ ಸೆಂಟರ್‍ಗಳಿಗೆ ಗಣಿ ಅಭಾಧಿತ ಪ್ರದೇಶಗಳ ಹಣ ದಿಂದ ಮೂಲಭೂತ ಸೌಕರ್ಯ ಒದಗಿಸುವುದು.

16. ಸಹಕಾರ ಇಲಾಖೆ ಮತ್ತು ಲೀಡ್ ಬ್ಯಾಂಕ್.

ಕೋವಿಡ್ ಸೋಂಕಿತರ ಮನೆ ಬಾಗಿಲಿಗೆ ಅಗತ್ಯವಿರುವ ಸಾಲವನ್ನು ಸಿಬಿಲ್ ಪರಿಗಣಿಸದೆ ಮತ್ತು ಬಾಕಿದಾದರರು, ಸುಸ್ತಿದಾರರು ಎನ್ನದೆ ಸಾಲ ವಿತರಣೆ.

ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಬಿಪಿಎಲ್ ಅಥವಾ ಎಪಿಎಲ್ ಎನ್ನದೆ ಪ್ರತಿಯೊಂದು ಕಟುಂಬವೂ ಆಯುಷ್ಮಾನ್ ಮತ್ತು ಅರೋಗ್ಯ ಕರ್ನಾಟಕ ಕಾರ್ಡ್‍ಗಳ ಸೇರಿದಂತೆ ಒಂದಲ್ಲ ಒಂದು ವಿವಿಧ ಆರೋಗ್ಯ ಇನ್ಸುರೆನ್ಸ್ ಪಡೆಯಲು ಆಂದೋಲನ ರೂಪಿಸುವುದು.

ಸಹಕಾರ ಸಂಘಗಳ ಧರ್ಮ ನಿಧಿಯಿಂದ ಕೋವಿಡ್ ಕೇರ್ ಸೆಂಟರ್‍ಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು. 

ಸಹಕಾರ ಸಂಘಗಳ ಸದಸ್ಯರಿಗೆ ಧರ್ಮ ನಿಧಿಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವುದು.

ಆತ್ಮನಿರ್ಭರ ಯೋಜನೆಯಡಿ ಆಯಾ ಜಿಲ್ಲೆಯ ಪಲಾನುಭವಿಗಳಿಗೆ ಸಹಾಯ ಮಾಡುವುದು.

17.ಪ್ರವಾಸೋಧ್ಯಮ ಇಲಾಖೆ ಮುಜರಾಯಿ ಇಲಾಖೆ. ವಕ್ ಮತ್ತು ಹಜ್ ಇಲಾಖೆ.

ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಇರುವ ಎಲ್ಲಾ ಜಾತಿಯ ಮಠಮಾನ್ಯಗಳು ರೆಸಾರ್ಟ್, ಹೋಟೆಲ್, ಪುಣ್ಯ ಕ್ಷೇತ್ರ, ದೇವಾಲಂiÀiಗಳು ಮತ್ತು ವಕ್ ಸಮಿತಿ ಕಟ್ಟಡಗಳನ್ನು ಉಚಿತವಾಗಿ, ಬಾಡಿಗೆ ಆಧಾರದಲ್ಲಿ ಪಡೆಯುವುದು ಅಥವಾ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಕೋವಿಡ್ ಕೇರ್ ಸೆಂಟರ್ ಆಗಿ ಮಾಡುವುದು ಮತ್ತು ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸುವುದು. 

18.ಐಟಿಬಿಟಿ ಇಲಾಖೆ. ಗೌರ್ವನೆನ್ಸ್ ಅಂಕಿ ಅಂಶಗಳ ಇಲಾಖೆ.

ಎನ್.ಐ.ಸಿ. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್. ಎನ್.ಆರ್.ಡಿ.ಎಂ.ಎಸ್, ಕೆ.ಎಂ.ಡಿ.ಎಸ್, ಸ್ಮಾರ್ಟ್ ಸಿಟಿ ಐಸಿಸಿಸಿ, ಇವುಗಳು ಕೋವಿಡ್ ಮತ್ತು ಅರೋಗ್ಯ ಇಲಾಖೆಗೆ ಸಂಭಂಧಿಸಿದ ಪ್ರತಿಯೊಂದು ಯೋಜನೆಗಳ ಇತಿಹಾಸ ಸಹಿತ ಜಿಐಎಸ್ ಲೇಯರ್ ಮಾಡಿ ಪಾರದರ್ಶಕತೆಯಿಂದ ಸಾರ್ವಜನಿಕರಿಗೆ  ಮಾಹಿತಿ ನೀಡುವುದು.

ಕೊರೊನಾ ಮತ್ತು ಅರೋಗ್ಯ ಇಲಾಖೆಯ ಎಲ್ಲಾ ಯೋಜನೆಗಳ ಲೈವ್ ಡೇಟಾ ಸಂಗ್ರಹ ಮಾಡುವುದು.

ಆರೋಗ್ಯ ಇಲಾಖೆಯಿಂದ ಆಯಾ ಜಿಲ್ಲೆಯಲ್ಲಿ ಜಿಐಎಸ್ ಪೋರ್ಟಲ್‍ನಲ್ಲಿ ಅಫ್ ಲೋಡ್ ಮಾಡಿರುವ ಜಿಐಎಸ್ ಲೇಯರ್‍ಗಳ ಪಟ್ಟಿ.

ಆರೋಗ್ಯ ಇಲಾಖೆಯ ಪ್ರಗತಿಯಲ್ಲಿರುವ, ನೆನೆಗುದಿಗೆ ಬಿದ್ದಿರುವ, ಮಂಜೂರಾಗಿರುವ, ಮಂಜೂರಾಗ ಬೇಕಾ ಗಿರುವ, ಹೊಸ ಪ್ರಸ್ತಾವನೆಗಳ ಯೋಜನೆಗಳ ಜಿಐಎಸ್ ಲೇಯರ್  ಮಾಹಿತಿ.

2025 ರ ವಿಷನ್ ಡಾಕ್ಯುಮೆಂಟ್ ಪ್ರಕಾರ ಆಯಾ ಜಿಲ್ಲೆಗೆ ಆರೋಗ್ಯ ಇಲಾಖೆ ಸಿದ್ಧಪಡಿಸಿದ್ದ ವಿಷನ್ ಡಾಕ್ಯುಮೆಂಟ್ ಜಿಐಎಸ್ ಲೇಯರ್ ಮಾಹಿತಿ.

ಡಾ,ಡಿ.ಎಂ.ನಂಜುಂಡಪ್ಪ ವರದಿಯ ಪ್ರಕಾರ ಕೈಗೊಂಡಿರುವ ಕ್ರಮಗಳ ಪಟ್ಟಿ, ಏನು ಮಾಡಬೇಕಾಗಿತ್ತು, ಏನೇನು ಮಾಡಿದೆ. ಎಂಬ ಜಿಐಎಸ್ ಲೇಯರ್ ಮಾಹಿತಿ

19.ವಾರ್ತಾ ಮತ್ತು ಪ್ರಚಾರ ಇಲಾಖೆ.

ಕೋವಿಡ್‍ಗೆ ಸಂಭಂದಿಸಿದ ದಿನಚರಿಗಳನ್ನು ಆಯಾ ಜಿಲ್ಲಾವಾರು ಪ್ರಚಾರ ಮಾಡುವುದು.

20.ಆಯುಷ್ ಇಲಾಖೆ ಮತ್ತು ಅರಣ್ಯ ಇಲಾಖೆ.

ಆಯುಷ್ ಇಲಾಖೆ ಕೊರೊನಾ ಹಿನ್ನಲೆಯಲ್ಲಿ ಕೈಗೊಂಡಿರುವ ಕ್ರಮಗಳ ಪಟ್ಟಿ ಹಾಗೂ ಪಲಾನುಭವಿಗಳ ಪಟ್ಟಿ.

ಆಯುಷ್ ಇಲಾಖೆಯ ಪ್ರಗತಿಯಲ್ಲಿರುವ, ನೆನೆಗುದಿಗೆ ಬಿದ್ದಿರುವ, ಮಂಜೂರಾಗಿರುವ, ಮಂಜೂರಾಗ ಬೇಕಾ ಗಿರುವ, ಹೊಸ ಪ್ರಸ್ತಾವನೆಗಳ ಯೋಜನೆಗಳ ಮಾಹಿತಿ.

ಆಯುಷ್ ಇಲಾಖೆಯಿಂದ ಜಿಐಎಸ್ ಪೋರ್ಟಲ್‍ನಲ್ಲಿ ಅಫ್ ಲೋಡ್ ಮಾಡಿರುವ ಜಿಐಎಸ್ ಲೇಯರ್‍ಗಳ ಪಟ್ಟಿ.

ಆಯುಷ್ ಇಲಾಖೆಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪಟ್ಟಿ.

ಆಯುಷ್ ಇಲಾಖೆಯ ವಿವಿಧ ಆಸ್ಪತ್ರೆಗಳು ಡಾಕ್ಟರ್, ನೌಕರರ ಹುದ್ದೆ ಮತ್ತು ಖಾಲಿ ಇರುವ ಪಟ್ಟಿ.

2025 ರ ವಿಷನ್ ಡಾಕ್ಯುಮೆಂಟ್ ಪ್ರಕಾರ ಆಯಾ ಜಿಲ್ಲೆಗೆ ಆಯುಷ್ ಇಲಾಖೆ ಸಿದ್ಧಪಡಿಸಿದ್ದ ವಿಷನ್ ಡಾಕ್ಯುಮೆಂಟ್ ಮಾಹಿತಿ.

ಆಯುಷ್ ಇಲಾಖೆಯ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಆಪ್, ಲಿಂಕ್, ವೆಬ್ ಸೈಟ್‍ಗಳ ಮಾಹಿತಿ.

ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ವಿವಿಧ ಔಷಧಿ ಗಿಡಗಳನ್ನು ಬೆಳೆಸಲು ಯೋಜನೆ ರೂಪಿಸುವುದು.

ಆಯಾ ಜಿಲ್ಲೆಯ ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಯೋಗ, ಪ್ರಾಣಯಾಮ ಇತ್ಯಾದಿ ಕಾರ್ಯಕ್ರಮ ರೂಪಿಸುವುದು,

21. ಕಾರ್ಮಿಕ ಇಲಾಖೆ

ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಯಾವುದೇ ಕಾರ್ಮಿಕರು ಹಸಿವುನಿಂದ ಸಾಯದಂತೆ ಅಥವಾ ಬಳದಂತೆ ಯೋಜನೆ ರೂಪಿಸುವುದು.

22.ಸ್ಕಿಲ್ ಡೆವಲಪ್ಮೆಂಟ್ ಇಲಾಖೆ.

ಆಯಾ ಜಿಲ್ಲೆಯ ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಕೋವಿಡ್ ಕೇರ್ ಸೆಂಟರ್‍ಗಳಿಗೆ, ಆಸ್ಪತ್ರೆಗಳಿಗೆ, ನರ್ಸ್, ಆಯಾ, ಆಶಾ ಕಾರ್ಯಕರ್ತೆಯರು, ಅಂಬುಲೆನ್ಸ್ ಡ್ರೈವರ್‍ಗಳಿಗೆ, ಸ್ಮಶಾನಗಳಲ್ಲಿ ಶವ ಸುಡುವವರು ಅಥವಾ ಹೂಳುವವರು  ಹೀಗೆ ಯಾವುದೇ ಉದ್ಯೋಗಿಗಳಿಗೆ ಅಗತ್ಯವಿರುವಷ್ಟು ತರಬೇತಿ ನೀಡಲು ಯೋಜನೆ ರೂಪಿಸುವುದು,

23. ಉದ್ಯೋಗ ವಿನಿಮಯ ಕೇಂದ್ರಗಳು

ಆಯಾ ಜಿಲ್ಲೆಯ ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಕೋವಿಡ್ ಕೇರ್ ಸೆಂಟರ್‍ಗಳಿಗೆ, ಆಸ್ಪತ್ರೆಗಳಿಗೆ, ಅಂಬುಲೆನ್ಸ್‍ಗಳಿಗೆ ಹೀಗೆ ಯಾವುದೇ ಉದ್ಯೋಗಳ ಅಗತ್ಯಕ್ಕೆ ಅನುಗುಣವಾಗಿ ಆಸಕ್ತರ ಮಾಹಿತಿ ಸಂಗ್ರಹಿಸಿಟ್ಟು ಕೊಳ್ಳುವುದು.

24.ಕನ್ನಡ ಮತ್ತು ಸಂಸ್ಕøತಿ ಇಲಾಖೆ.

ಆಯಾ ಜಿಲ್ಲೆಯ ಗ್ರಾಮವಾರು, ಗ್ರಾಮ ಪಂಚಾಯಿತಿವಾರು ಮತ್ತು ನಗರ ಸ್ಥಳೀಯ ಪ್ರದೇಶಗಳ ವಾರ್ಡ್‍ವಾರು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಕೊರೊನಾ ಸೋಂಕಿತರಿಗೆ ಆತ್ಮ ಸ್ಥೈರ್ಯ ತುಂಬುವಂತಹ ಕಾರ್ಯಕ್ರಮಗಳನ್ನು ರೂಪಿಸುವುದು.

ಕೊರೊನಾ ನಿವಾರಣೆ, ಆಯುಷ್ಮಾನ್ ಕಾರ್ಡ್ ವಿತರಣೆ ಮತ್ತು ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಸಾಮೂಹಿಕವಾಗಿ ಯಾವುದಾದರೂ ಒಂದು ಅರೋಗ್ಯ  ಇನ್ಸುರೆನ್ಸ್ ಇರಲೇ ಬೇಕು ಜೊತೆಗೆ ಲಾಕ್‍ಡೌನ್ ಅವಧಿಯಲ್ಲಿ ಹಸಿರು ಕರ್ನಾಟಕ ಯೋಜನೆಯಡಿಯಲ್ಲಿ ಔಷಧಿ ಗಿಡ ಹಾಕುವ ಆಂದೋಲನ ರೂಪಿಸಬಹುದಾಗಿದೆ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

ವಂದನೆಗಳೊಂದಿಗೆ                                                                       ತಮ್ಮ ವಿಶ್ವಾಸಿ

                                            ಕುಂದರನಹಳ್ಳಿ ರಮೇಶ್,

                                      ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯ.