25th April 2024
Share

TUMAKURU:SHAKTHIPEETA FOUNDATION

ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನರಿಗೊಂದು ಬಹಿರಂಗ ಸವಾಲು.

ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ, ಮಲತಾಯಿ ಧೋರಣೆ ಮಾಡಿದ್ದಾರೆ, ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂಪ್ಪನವರ ಸರ್ಕಾರ ಸತ್ತು ಹೋಗಿದೆ, ನಾನೇ ಸಭೆ ಮಾಡಿ ಪರಿಶೀಲಿಸುತ್ತೇನೆ/ಮಾಹಿತಿ ಸಂಗ್ರಹಿಸುತ್ತೇನೆ ನನಗೆ ಅನುಮತಿ ಕೊಡಿ, ಇಲ್ಲ ಹಕ್ಕುಚ್ಯುತಿ ಮಂಡಿಸುತ್ತೇನೆ. ಎಂದು ಟ್ವಿಟ್ಟರ್ ಬಾಂಬ್‍ಗಳು ಗುಡುಗು, ಮಿಂಚು ಸಹಿತ ಸಿಡಿಯುತ್ತಿವೆ. ನಾವೂ ಒಪ್ಪಲೇ ಬೇಕು ವಿರೋಧ ಪಕ್ಷದ ನಾಯಕರ ಈ ಆರ್ಭಟವೇ ಅವರ ಕರ್ತವ್ಯ.

ಸ್ವಾಮಿ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಒಂದು ರೂಪಾಯಿ ಸಹ ಸರಿಯಾಗಿ ಬಳಕೆ ಆಗಿದಿಯೇ, ಕಾಲಮಿತಿಯೊಳಗೆ ಖರ್ಚು ಆಗಿದಿಯೇ, ದುರುಪಯೋಗ ಆಗಿದಿಯೇ? ಅಥವಾ ಕೇಂದ್ರ ಸರ್ಕಾರ ನಿಮಗೆ ಇನ್ನೇನು ಕೊಡಬೇಕು ಎಂದು ಅಧಿಕಾರಯುಕ್ತವಾಗಿ  ಪ್ರಗತಿ ಪರಿಶೀಲಿಸಿ ಎಂದು ಇದೇ ಮೋದಿಯವರು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ದಿಶಾ ಸಮಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ಸಂಸದರುಗಳ ಅಧ್ಯಕ್ಷತೆಯಲ್ಲಿ ಸಭೆ ರಚಿಸಿದ್ದಾರೆ.

ರಾಜ್ಯದ 28 ಜನ ಲೋಕಸಭಾ ಸದಸ್ಯರು ಮತ್ತು 12 ಜನ ರಾಜ್ಯಸಭಾ ಸದಸ್ಯರು ಅಧ್ಯಕ್ಷರು ಅಥವಾ ಉಪಾದ್ಯಕ್ಷರಾಗಿದ್ದಾರೆ. 225 ಜನ ವಿಧಾನ ಸಭಾ ಸದಸ್ಯರು ಹಾಗೂ 75 ಜನ ವಿಧಾನಪರಿಷತ್ ಸದಸ್ಯರು ಸದಸ್ಯರಾಗಿರುತ್ತಾರೆ. ‘ತಾವೂ ಸಹ ಬಾಗಲಕೋಟೆ ಜಿಲ್ಲಾ ದಿಶಾ ಸಮಿತಿ ಸದಸ್ಯರು’

ಕೊರೊನಾ ಆರಂಭದಿಂದ ಇಲ್ಲಿಯವರೆಗೂ ಕೇಂದ್ರ ಸರ್ಕಾರ ನೀಡಿರುವ ಅನುದಾನ, ಉಪಕರಣಗಳು, ಸಲಕರಣೆಗಳು ಇತ್ಯಾದಿ ಬಗ್ಗೆ ಏಕೆ ಚರ್ಚಿಸಿಲ್ಲ ಅಥವಾ ಚರ್ಚೆ ನಡೆದಿದ್ದಲ್ಲಿ ಅಧಿಕೃತ ಮಾಹಿತಿ ನಿಮ್ಮ ಸರ್ವಪಕ್ಷಗಳ  340 ಜನ ಚುನಾಯಿತ ಜನಪ್ರತಿನಿಧಿಗಳ ಬಳಿ ಇರಬೇಕಲ್ಲವೇ? ‘ಸಭೆ ಮಾಡದಿದ್ದರೆ ಅಥವಾ ಸಭೆಗೆ ಗೈರಾಗಿದ್ದರೆ ಹೊಣೆ ಯಾರದು ಸ್ವಾಮಿ’

‘340 ಜನರ ಮೇಲೂ ಸಾರ್ವಜನಿಕರಿಗೆ/ಮತದಾರ ಪ್ರಭುಗಳಿಗೆ ಉತ್ತರದಾಯಿತ್ವ ಇದೆಯೋ? ಇಲ್ಲವೋ ತಿಳಿಸುವಿರಾ? ಇದು ಮತದಾರರ ಬಹಿರಂಗ ಸವಾಲು ಎಂದು ಸ್ವೀಕರಿಸುವಿರಾ? ‘

ಮೋದಿಯವರು ಕೊಟ್ಟ ಬ್ರಹ್ಮಾಸ್ತ್ರ ದಿಶಾ, ಯಡಿಯೂರಪ್ಪನವರು ಪದೇ, ಪದೇ ಹೇಳುವಂತೆ ಕೊಟ್ಟ ಕುದುರೆ ಏರದವನೂ, ಧೀರನೂ ಅಲ್ಲ, ಶೂರನೂ ಅಲ್ಲ. ವಿರೋಧ ಪಕ್ಷದ ನಾಯಕರು ದಿಶಾ ಸಭೆಗಳ ಲೋಪ ಎತ್ತಿಹಿಡಿಯುವ ಕೆಲಸ ಮಾಡಬೇಕೋ ಅಥವಾ ಮಾಡಲು ಅವಕಾಶವಿಲ್ಲವೋ ಬಹಿರಂಗವಾಗಿ ತಿಳಿಸುವಿರಾ? ‘ಆರ್ಥಿಕ ಗುರುಗಳೇ’