TUMAKURU:SHAKTHIPEETA FOUNDATION
ಒಂದು ಕಾಲದಲ್ಲಿ ದಿ.ನಜೀರ್ ಸಾಬ್ ಕರ್ನಾಟಕದ ಪಾಲಿಗೆ ನೀರ್ ಸಾಬ್ ಆಗಿದ್ದರು. ಅವರು ಅಂದು ಕೈಗೊಂಡ ನಿರ್ಧಾರ ಸರಿ ಇರಬಹುದು ಇಂದು ಇಡೀ ಕರ್ನಾಟಕವೇ ಮರುಭೂಮಿ ಆಗುವತ್ತಾ ಸಾಗಿರುವುದು ವಿಪರ್ಯಾಸ.
ಇಂದಿನ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ ಬೊಮ್ಮಾಯಿಯರವರು ‘ವಾಟರ್ ಗ್ರಿಡ್ ಬೊಮ್ಮಾಯಿ’ ಆಗಬೇಕೆಂದರೆ ನಾಗಾಲೋಟದಲ್ಲಿ ರಾಜ್ಯದ ನದಿ ಜೋಡಣೆ ಯೋಜನೆ ರೂಪಿಸಿ, ರಾಜ್ಯದ ಪ್ರತಿಯೊಂದು ಗ್ರಾಮದ ಕೆರೆ-ಕಟ್ಟೆಗಳಿಗೂ ನದಿ ನೀರು ಅಲೋಕೇಷನ್ ಮಾಡುವ ಮೂಲಕ ‘ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ’ ಒದಗಿಸುವುರೇ ಕಾದು ನೋಡಬೇಕು.
ಬಸವರಾಜ ಬೊಮ್ಮಾಯಿಯವರಿಗೆ ಜಲಸಂಪನ್ಮೂಲ ಖಾತೆ ಎಂದರೆ ಪಂಚಪ್ರಾಣ. ನೀರಿನ ಬಗ್ಗೆ ಆಳವಾದ ಜ್ಞಾನವಿದೆ. ರಾಜ್ಯದ ಜಲವಿವಾದಗಳ ಬಗ್ಗೆಯೂ ಅರಿವು ಇದೆ. ಈಗ ಕಾಲ ಪಕ್ವವಾಗಿದೆ. ನೀರಿನ ಜ್ಞಾನ ಇರುವವರು ಮುಖ್ಯಮಂತ್ರಿಯಾಗಿದ್ದಾರೆ. ಪಕ್ಕದ ತೆಲಂಗಾಣ ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಕೆ.ಚಂದ್ರಶೇಖರ್ ರಾವ್ ರವರು ಜಲಕ್ರಾಂತಿ ಮಾಡಿ ತೋರಿಸಿದ್ದಾರೆ. ‘ನನ್ನನ್ನು ಬೀಟ್ ಮಾಡಲು ಸಾಧ್ಯವೇ ಎಂದು ಅಣಕಿಸುವಂತಾ ಯೋಜನೆಯ ಜನಕರಾಗಿದ್ದಾರೆ. ಇವರನ್ನು ಸೈಡ್ ಹೊಡೆಯುವ ತಾಕತ್ತು ಬೊಮ್ಮಾಯಿರವರಿಗೂ ಇದೆ’.
‘ಇಂದಿನ ರಾಜಕೀಯ ಸ್ಥಿತಿ ಅವಲೋಕನ ಮಾಡಿದರೆ, ರಾಜ್ಯದ ಮುಖ್ಯ ಮಂತ್ರಿಯವರ ಅವಧಿ ದಿನಗಳೋ, ತಿಂಗಳುಗಳೋ, ವರ್ಷಗಳೋ ಖಚಿತವಾಗಿ ಯಾರು ಹೇಳುವ ಸ್ಥಿತಿಯಲ್ಲಿ ಇಲ್ಲ. ಆದರೂ ಬೊಮ್ಮಾಯಿಯವರು ಸೂರ್ಯ ಚಂದ್ರ ಇರೂವವರೆಗೂ ನಾಡಿನ ಜನರ ಮನದಲ್ಲಿ ಇರಬೇಕಾದರೆ, ಸಂಪೂರ್ಣ ಯೋಜನೆ ಸಾಧ್ಯವಿಲ್ಲದಿದ್ದರೂ, ಪ್ರತಿಯೊಂದು ಗ್ರಾಮಗಳಿಗೂ ನದಿ ನೀರಿನ ಅಲೋಕೇಷನ್ ಮಾಡಿ, ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರು ಒದಗಿಸಲು ‘ಜಲಜೀವನ್ ಮಿಷನ್ ವಾಟರ್ ಗ್ರಿಡ್’ ಎಂದು ಯೋಜನೆ ರೂಪಿಸ ಬಹುದಾಗಿದೆ’.
ರಾಜ್ಯದ ನದಿ ಜೋಡಣೆ ರೂಪಿಸಿ ಎನ್.ಪಿ.ಪಿ ಯೋಜನೆ ಎಂದಾದರೂ ಕರೆಯ ಬಹುದು. ಈ ಯೋಜನೆ ಜಾರಿಗೆ ‘ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿರವರು ತುದಿಗಾಲಲ್ಲಿ ನಿಂತಿದ್ದಾರೆ’. ಅವರು ಅಂತಹ ಉನ್ನತ ಸ್ಥಾನದಲ್ಲಿದ್ದಾರೆ. ಯಾವುದೇ ಸಚಿವರಾದರೂ ಜೋಷಿಯವರ ಮಾತನ್ನು ಕೇಳುವ ಅವಕಾಶವಿದೆ. ಮೋದಿಯವರ ನಿಕಟ ಸಂಪರ್ಕಲ್ಲಿದ್ದಾರೆ. ರಾಜ್ಯದ ಜನತೆಗೆ ನದಿ ಜೋಡಣೆ ಕೊಡುಗೆ ನೀಡಲೇ ಬೇಕು ಎಂಬ ಮನದಾಳದ ಮಾತನ್ನು ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ ಅವರ ಮನಗೆ ಹೋದಾಗ ಅವರೇ ವ್ಯಕ್ತಪಡಿಸಿದ್ದನ್ನು ನಾನು ಗಮನಿಸಿದ್ದೇನೆ.
ಸೂಕ್ತ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ನಿರಂತರವಾಗಿ ಕಡತದ ಹಿಂದೆ ಬೀಳಬೇಕು. ಬೊಮ್ಮಾಯಿರವರ ಬಳಿ ಒಳ್ಳೆಯ ‘ಜಲ ತಾಂತ್ರಿಕ ತಂಡದ ದಂಡೇ’ ಇದೆ. ಅವರು ಸಹ ನಮ್ಮ ಕಾಲದಲ್ಲಿ ಏನಾದರೂ ಮಾಡಲೇ ಬೇಕು ಎಂಬ ಹಂಬಲ/ಹಠದಲ್ಲಿ ಇದ್ದಾರೆ. ಅಂದು ಬೊಮ್ಮಾಯಿಯವರು ಗೃಹ ಸಚಿವÀರಾಗಿದ್ದಾಗ ಅವರ ಜಲ ತಾಂತ್ರಿಕ ಪರಿಣಿತರ ತಂಡ, ನಾವು ಇಲ್ಲಿಂದ ಕೇಂದ್ರಕ್ಕೆ ಕಳುಹಿಸುತ್ತೇವೆ, ಲೋಕಸಭಾ ಸದಸ್ಯರ ಸಹಕಾರದಿಂದ ಕೇಂದ್ರದಿಂದ ಮಂಜೂರು ಮಾಡಿಸಲು ಶ್ರಮಿಸಿ ಎಂದು ನನಗೆ ಹೇಳಿದ್ದು ಉಂಟು. ಆದರೇ ಇಂದು ಅವರೇ ಮುಖ್ಯ ಮಂತ್ರಿ ಆಗಿರುವುದರಿಂದ ಎಲ್ಲವೂ ಅವರಿಗೆ ಸಾಧ್ಯ.
ಈಗಾಗಲೇ ಅವರು ತಮ್ಮ ‘ಜಲ ವರಸೆ’ಯನ್ನು ಆರಂಭಿಸಿದ್ದಾರೆ. ಜಲಸಂಪನ್ಮೂಲ ಖಾತೆ ಅವರ ಬಳಿ ಇಲ್ಲದಿದ್ದರೂ ಸಜ್ಜನರಾದ ಶ್ರೀ ಗೋವಿಂದ ಕಾರಜೋಳರ ಬಳಿ ಇದೆ. ಇಬ್ಬರೂ ಒಂದೇ ದಾರಿಯಲ್ಲಿ ಸಾಗುವರೇ ಕಾದು ನೋಡಬೇಕು. ಶ್ರೀ ಜಿ.ಎಸ್.ಬಸವರಾಜ್ ರವರ ರಾಜ್ಯದ ನದಿ ಜೋಡಣೆ ಕನಸು ನನಸಾಗುವ ಕಾಲ ಈಗ ಬಂದಿದೆ ಎಂದರೆ ತಪ್ಪಾಗಲಾರದು.