28th March 2024
Share

TUMAKURU:SHAKTHIPEETA FOUNDATION

ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ಜೊತೆ ದಿನಾಂಕ:24.08.2021 ರಂದು ರಾತ್ರಿ 8.50 ರಿಂದ ಸುಮಾರು 36 ನಿಮಿಷ 53 ಸೆಕೆಂಡ್ ಗಳ ಕಾಲ ಮೊಬೈಲ್ ಮೂಲಕ ಸುಧೀರ್ಘ ಚರ್ಚೆ ನಡೆಸಲಾಯಿತು.

ತುಮಕೂರು ಲೋಕಸಭಾ ಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್‍ರವರ ಜೊತೆ ಅತ್ಯಂತ ಕೆಟ್ಟ ಸಮಯದಲ್ಲಿ ನಡೆದ ಮಾತಿನ ಚಕಮಕಿ, ನಂತರ ನಾನು ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರ ವಿರುದ್ಧ ಮಾಡಿದ ಪತ್ರಿಕಾಘೋಷ್ಠಿ ನಂತರ ಅವರು ನನ್ನ ವಿರುದ್ಧ ಮಾಡಿದ ಆರೋಪಗಳು ಹಾಗೂ ಇತಿಹಾಸದ ಘಟನೆಗಳ ಬಗ್ಗೆಯ ಒಬ್ಬರಿಗೊಬ್ಬರು ಮನವರಿಕೆ ಮಾಡಿಕೊಳ್ಳಲಾಯಿತು.

ಮಾತಿನ ಮಧ್ಯೆ ಸವಾಲುಗಳು, ಖಡಕ್ ಮಾತುಗಳು ಮತ್ತು ಘಟನಾವಳಿಗಳ ಸತ್ಯಾಂಶಗಳ ಬಗ್ಗೆಯೂ ಚರ್ಚಿಸಲಾಯಿತು. ಅಂತಿಮವಾಗಿ ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರ ಫ್ಯಾನ್ ಫೇಸ್ ಬುಕ್ ಪ್ರಕಟಣೆಗಳ ಬಗ್ಗೆ ಶಾಸಕರು ಸಹ ಅಸಮಾಧಾನ ವ್ಯಕ್ತ ಪಡಿಸಿದರು.

ನಾನು ಅಂತಿಮವಾಗಿ ಈ ಪೇಜ್ ಮಾಡುತ್ತಿರುವವರಿಗೆ ಮೊದಲು ಬುದ್ದಿ ಹೇಳಿ, ಉಳಿದ ಘಟನೆಗಳ ಬಗ್ಗೆ ನೀವೂ ಸಹ ಮಾತನಾಡುವುದಿಲ್ಲ ಎಂದು ಹೇಳಿದ್ದೀರಿ, ನಾವೂ ಸಹ ಮಾತನಾಡುವುದಿಲ್ಲ, ಆದರೇ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ. ಜೀವನದ ಅತ್ಯಂತ ಕೆಟ್ಟ ನಡವಳಿಕೆಗಳ ಘಟನೆಗಳ ಬಗ್ಗೆ ಮರೆಯೋಣ.ಗುಬ್ಬಿ ತಾಲ್ಲೂಕಿನ ಬಿದರೆ ಹಳ್ಳ ಕಾವಲ್ ಗ್ರಾಮದಲ್ಲಿ ಮಾಡಲು ಉದ್ದೇಶಿಸಿರುವ ಕ್ರೀಡಾ ಗ್ರಾಮದ ಸ್ಥಾಪನೆಗೆ ಒಗ್ಗಟ್ಟಾಗಿ ಶ್ರಮಿಸಲು ಸಮಾಲೋಚನೆ ನಡೆಸಲಾಯಿತು.

ಇಬ್ಬರ ನಡುವೆ ನಡೆದ ಮಾತು ಕತೆ ಬಗ್ಗೆ ಬಹಿರಂಗ ಗೊಳಿಸುವುದು ಸೂಕ್ತವಲ್ಲದಿದ್ದರೂ ಇಷ್ಟು ಹೇಳಲೇ ಬೇಕು. ಶಾಸಕರೇ ಕರೆ ಮಾಡಿ ಮಾತನಾಡಿದಾಗ, ಘಟನೆ ನಡೆದ ತಕ್ಷಣ ನೀನೇ ಫೋನ್ ಮಾಡಿ ಮಾತನಾಡಬಹುದಿತ್ತು, ಅದು ಬಿಟ್ಟು ನೀನು ಪ್ರೆಸ್ ಮೀಟ್ ಮಾಡಿ ನನಗೆ ಆ ರೀತಿ ಹೇಳಿದ್ದು ಸರಿಯೇ ಎಂದಾಗ ‘ನಾನು ಚಿಕ್ಕವನಾದೆ ಎನಿಸಿತು’.

ಶಾಸಕರು ನಾನು ಬುದ್ದಿ ಕಂಡಾಗಿನಿಂದಲೂ ಈ ರೀತಿ ಯಾವತ್ತೂ ನಡೆದಿರಲಿಲ್ಲ, ಹೆಚ್.ಎ.ಎಲ್ ಕೈಗಾರಿಕೆ ಸ್ಥಾಪನೆ ಮಾಡುವಾಗ ಹಾಗೂ ಇತರೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸುವಾಗ, ಅವರು ಹೇಳುತ್ತಿದ್ದೂ ನೀನು ಏನು ಮಾಡಿದರು ನನ್ನ ಸಹಕಾರವಿದೆ, ಒಳ್ಳೆಯ ಕೆಲಸ ಮಾಡುತ್ತಿದ್ದೀಯ ಮಾಡು ಎನ್ನುತ್ತಿದ್ದರು. ಸಾಕ್ಷಿಯಾಗಿ ಕಾವೇರಿ ಲೋಕೇಶ್ ಮತ್ತು ವಿಜಯಕುಮಾರ್ ಇರುತ್ತಿದ್ದರು.

ಇಂದು ಸಹ ನೀನು ಅಭಿವೃದ್ಧಿ ವಿಚಾರಗಳ ಬಗ್ಗೆ ಮಾತನಾಡಿದ್ದು ನನಗೆ ಬೇಜಾರು ಇಲ್ಲ, ಆದರೇ —– ಎಂದಾಗ ನನಗೂ ಬೇಸರ ಆಗಿದೆ. ನಾನು ನಿಮ್ಮ ಮನೆಗೆ ಬಂದು ಮಾತನಾಡುತ್ತೇನೆ ಎಂದು ಹೇಳಿದೆ.

 ಈ ಘಟನೆ ನಡೆದಿದ್ದು ಸಂಸದರ ಮತ್ತು ಶಾಸಕರು ವಿಚಾರ ಅಲ್ಲ ಎಂದು ನನಗೆ ಈಗ ಅರಿವಾಗಿದೆ.  ಸರ್ಕಾರಿ ಕಾರ್ಯಕ್ರಮಗಳಿಗೆ ಸಂಸದರು ಪಕ್ಷದ ಪದಾಧಿಕಾರಿಗಳನ್ನು ಕರೆದುಕೊಂಡು ಹೋಗುವುದೇ ಪ್ರಮುಖ ಅಂಶ ಎಂಬ ಮನವರಿಕೆ ಆಗಿದೆ.

ಈಗಾಗಲೇ ನಾನು ಸಂಸದರ ಜೊತೆಯೂ ಮಾತನಾಡಿದ್ದೇನೆ, ನೀವು ಯಾರನ್ನೇ ಕರೆದು ಕೊಂಡು ಹೋದರೂ ಅವರು ಕಾರಿನಲ್ಲಿ ಇರಲಿ, ಅಥವಾ ಜನರೊಟ್ಟಿಗೆ ಇರಲಿ, ಆದರೇ ಸರ್ಕಾರಿ ಕಾರ್ಯಕ್ರಮಕ್ಕೆ ವೇದಿಕೆ ಮೇಲೆ ಕರೆಯುವುದು, ಶಂಕುಸ್ಥಾಪನೆ ಮಾಡಿಸುವುದು ಸೂಕ್ತವಲ್ಲ ಎಂದು ಮಾತನಾಡಿರುವ ಅಂಶಗಳ ಬಗ್ಗೆಯೂ ವಿಚಾರ ವಿನಿಮಯ ಮಾಡಿಕೊಂಡೆವು.

ಸಂಸದರು ಜಿಲ್ಲೆಯ ಹಿರಿಯಣ್ಣನಂತೆ ಯಾರ ಬಗ್ಗೆಯೂ ಯಾವುದೇ ವಿಚಾರ ಮಾತನಾಡದೆ ಪಕ್ಷಾತೀತವಾಗಿ ಎಲ್ಲರ ಜೊತೆಯಲ್ಲೂ ಚೆನ್ನಾಗಿ ಇರುವುದರ ಬಗ್ಗೆಯೂ ಈಗಾಗಲೇ ಸಾಕಷ್ಟು ಮಾತುಕತೆಗಳು ನಡೆದಿವೆ.ಒಂದು ವೇಳೆ ಮಾತನಾಡಿದರೂ ದೊಡ್ಡವರು ಎಂದು ಮೌನವೇ ಅಸ್ತ್ರ ಎಂಬ ಬಗ್ಗೆಯೂ ಮಾತನಾಡಿದೆವು.

ದ್ವೇಷದ ರಾಜಕಾರಣ ಯಾರಿಗೂ ನೆಮ್ಮದಿ ತರುವುದಿಲ್ಲ.ಯಾರು ಶಾಶ್ವತವಾಗಿ ಇರುವುದಿಲ್ಲಾ, ಆತ್ಮಾವಾಲೋಕನ ಮಾಡಿಕೊಂಡು ಜೀವನ ನಡೆಸುವುದು ಸರಿಯಾದ ಮಾರ್ಗ.