20th April 2024
Share

TUMAKURU:SHAKTHIPEETA FOUNDATION

ದಿನಾಂಕ:01.11.2021 ರಂದು ಸಂಜೆ 5 ಗಂಟೆಗೆ ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಸಾಯಿಬಾಬಾ ಆವರಣದಲ್ಲಿ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ. ಮಣುವಿನ ಕುರಿಕೆ ಪುಸ್ತಕ ಬರೆದಿರುವ ಶ್ರೀ ಎಂ.ಪಿ. ಶಂಕರಪ್ಪನವರು ಮತ್ತು ತಂಡ ಭಾಗವಹಿಸಿ ಚರ್ಚೆ ನಡೆಸಲಿದ್ದಾರೆ.

ಒಂದು ಗ್ರಾಮದ ಪುಸ್ತಕದಲ್ಲಿ ಏನೇಲ್ಲಾ ಇರಬೇಕು ಎಂಬ ಬಗ್ಗೆ ಒಂದು ಟೆಂಪ್ಲೇಟ್ ಮಾಡಿ, ಅವುಗಳನ್ನು ಭರ್ತಿ ಮಾಡುವ ಕೆಲಸವನ್ನು ಜೀವಿ ವೈವಿಧ್ಯತೆ ದಾಖಲಾತಿ  ಮಾರ್ಗದರ್ಶಿ ಸೂತ್ರದಂತೆ ಆಯಾ ಗ್ರಾಮದ ನಾಲೆಡ್ಜಬಲ್ ಪರ್ಸನ್ ಮತ್ತು ನಾಟಿ ವೈದ್ಯರು, ಹಕೀಮರು ಮತ್ತು ಪಾರಂಪರಿಕ ವೈದ್ಯರು ಸೇರಿಂದಂತೆ ಆಸಕ್ತರು ರಚನೆ ಮಾಡಬೇಕಿದೆ.’ ತುಮಕೂರು ಜಿಲ್ಲೆಯಲ್ಲಿರುವ ಸುಮಾರು 352 ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಯನ್ನು ಚುರುಕುಗೊಳಿಸಬೇಕಿದೆ.

ಸರ್ಕಾರಿ ಹಣ ಪಡೆದು ಕಾಟಾಚಾರದ ಪಿಬಿಆರ್ ಮಾಡಿರುವ ಎಲ್ಲಾ 352 ಪಿಬಿಆರ್ ಗಳ ಮೌಲ್ಯಮಾಪನ ಮಾಡಿ ಸರಿ ಪಡಿಸಲು ರೂಪುರೇಷೆ ಸಿದ್ಧಪಡಿಸಬೇಕಿದೆ. ‘ಊರಿಗೊಬ್ಬ ಬಯೋಡೈವರ್ಸಿಟಿ ಮಿತ್ರ ‘ರನ್ನು ನೇಮಕ ಮಾಡ ಬೇಕಾಗುತ್ತದೆ.  ಈ ಬಗ್ಗೆ ಆಸಕ್ತಿ ಇರುವವರು ಈ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಸಂಸದರ ಆಪ್ತ ಸಹಾಯಕ ಶ್ರೀ ಉಮಾಶಂಕರ್ ತಿಳಿಸಿದ್ದಾರೆ.

ಸ್ವಲ್ಪ ಗಮನಿಸಿ

ಪ್ರಧಾನಿ ಶ್ರೀ ನರೇಂದ್ರಮೋದಿಯವರ ಡಿಟಿಟಲ್ ಇಂಡಿಯಾ ಮತ್ತು  ಮಾಜಿ ಪ್ರಧಾನಿ ಶ್ರೀ ಮನೋಮೋಹನ್ ಸಿಂಗ್ ರವರ  ಜೀವಿ ವೈವಿಧ್ಯ ದಾಖಲಾತಿ ಇವುಗಳ ಜೊತೆಗೆ ಸ್ವಾತಂತ್ರ್ಯ ಬಂದ ದಿವಸದಿಂದ ವ್ಯಕ್ತಿ, ಕುಟುಂಬ ಮತ್ತು ಗ್ರಾಮಗಳ ಅಭಿವೃದ್ಧಿಗಾಗಿ ಇರುವ ನೂರಾರು ಯೋಜನೆಗಳ ಡಾಟಾ ಬೇಸ್, ಮೌಲ್ಯಮಾಪನವೇ ಊರಿಗೊಂದು ಇತಿಹಾಸ ಪುಸ್ತಕದ ತಿರುಳು.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು 5 ನೇ ಭಾರಿ ಸಂಸದರಾದ ಆರಂಭದಲ್ಲಿಯೇ 2022 ಆಗಸ್ಟ್ 15 ರಂದು ತುಮಕೂರು ಜಿಲ್ಲೆಯನ್ನು ಡಾಟಾ ಜಿಲ್ಲೆಯಾಗಿ ಘೋಶಿಸ ಬೇಕೆಂದು ಪಟ್ಟು ಹಿಡಿದಿದ್ದಾರೆ. ದಿಶಾ ಸಮಿತಿಯಲ್ಲಿ ಪ್ರಗತಿ ಪರೀಶೀಲನೆ ಮಾಡುತ್ತಿದ್ದಾರೆ. ಕೊರೊನಾ ಮಹಾಮಾರಿ ಬಂದು ಸುಮಾರು ಒಂದುವರೆ ವರ್ಷ  ಸಮಯ ಹಾಳಾಗಿದೆ.

ತುಮಕೂರು ಸ್ಮಾರ್ಟ್ ಸಿಟಿ ಜಿಐಎಸ್ ಲೇಯರ್ ಗಳಿಗಾಗಿ ಪ್ರತಿ ವಾರದ ಶುಕ್ರವಾರ ಸಂಜೆ 5 ಗಂಟೆಗೆ ಸಂಸದ ಶ್ರೀ ಜಿ.ಎಸ್.ಬಸವರಾಜ್ ರವರು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ಹಿಂದಿನ ಜಿಲ್ಲಾಧಿಕಾರಿ ಶ್ರೀ ರಾಕೇಶ್ ಕುಮಾರ್ ಸೇರಿದಂತೆ ಅಧಿಕಾರಿಗಳು ಮತ್ತು ದಿಶಾ ಸಮಿತಿ ಸದಸ್ಯರು ಸೇರಿ ಚರ್ಚೆ ನಡೆಸುತ್ತಿದ್ದೆವು.

ಅದೇ ರೀತಿ ಜಿಲ್ಲಾ ಪಂಚಾಯತ್ ಸಿಇಓ ರವರು ಸಹ ಪ್ರತಿವಾರ ಹಲವಾರು ಇಲಾಖೆಗಳ ಜೊತೆ ಸಭೆ ನಡೆಸಿ ಚರ್ಚೆ ಮಾಡಿ ಜಿಐಎಸ್ ಲೇಯರ್ ಮಾಡಲು ಶ್ರಮಿಸುತ್ತಿದ್ದರು. ಕೊರೊನಾ ಬಂದ ಹಿನ್ನಲೆಯಲ್ಲಿ ಸಭೆಗಳು ನಿಂತು ಹೋದವು.

ಸುಮಾರು ರೂ 60-70 ಕೋಟಿ ವೆಚ್ಚದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್ ನಲ್ಲಿ ತುಮಕೂರು ಜಿಲ್ಲಾ ದಿಶಾ ಮಾನಿಟರಿಂಗ್ ಸೆಲ್ ಮತ್ತು ಎಂಪಿ ಪೋರ್ಟಲ್ ಆರಂಭಿಸಲು ಸಾಕಷ್ಟು ಕಸರತ್ತು ನಡೆದಿದೆಇದು ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಒಂದು ಜಿಲ್ಲೆ- ಒಂದು ನಕ್ಷೆ ಮತ್ತು ಒಂದು ಜಿಲ್ಲೆ-ಒಂದೇ ಡಾಟಾ ನಿರಂತರವಾಗಿ ಲೈವ್ ಡಾಟಾ ಒಂದೇ ಕಡೆ ದೊರೆಯುವುದೇ ಡಾಟಾ ಜಿಲ್ಲೆಯ ಕನಸು’.

‘ಬೋಗಸ್ ಡಾಟಾ, ಕಟ್ ಅಂಡ್ ಪೇಸ್ಟ್ ಡಾಟಾ, ನಕಲಿ ಡಾಟಾ ಗಳಿಗೆ ತಿಲಾಂಜಿ ಇಡಲೇಬೇಕು ಎನ್ನುವುದು ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರದ ದೃಢ ನಿಲುವು. ಮೋದಿಯವರಂತು ಡಿಜಿಟಲ್ ಇಂಡಿಯಾ ಘೋಷಣೆ ಮಾಡಿ ಡಿಜಿಟಲ್ ಡಾಟಾ ಗೆ ಮೊದಲ ಆಧ್ಯತೆ ನೀಡಿದ್ದಾರೆ’.

ಇದನ್ನು ಶೇ 100 ರಷ್ಟು ಜಾರಿಗೆ ತಂದ ಕೀರ್ತಿ ತುಮಕೂರು ಜಿಲ್ಲೆಗೆ ಬರಬೇಕು. ದೇಶದಲ್ಲಿಯೇ ತುಮಕೂರು ಜಿಲ್ಲಾ ದಿಶಾ ಸಮಿತಿ ಮಾದರಿಯಾಗ ಬೇಕು ಎಂಬ ಕನಸು ಬಸವರಾಜ್ ರವರದ್ದು. ಊರಿಗೊಂದು ಇತಿಹಾಸ ಪುಸ್ತಕ ಮಾಡುವುದು ಡಾಟಾ ಜಿಲ್ಲೆ-2022 ಕ್ಕೆ ಪೂರಕವಾಗಿದೆ.         

  1. ವಿಲೇಜ್-1
  2. ಜಲಗ್ರಾಮ ಕ್ಯಾಲೆಂಡರ್
  3. ಸಂಸದರ ಆದರ್ಶ ಗ್ರಾಮ ಯೋಜನೆ.
  4. ನಮ್ಮ ಗ್ರಾಮ- ನಮ್ಮ ಯೋಜನೆ.
  5. ಮಿಷನ್ ಅಂತ್ಯೋದಯ
  6. ವಾಟರ್ ಬಡ್ಜೆಟ್-ವಾಟರ್ ಆಡಿಟ್-ವಾಟರ್ ಸ್ಟ್ರಾಟಜಿ.
  7. ಮನೆ-ಮನೆಗೆ ನಲ್ಲಿ ಮೂಲಕ  ಗಂಗಾಮಾತೆ.
  8. ಜಾತಿ ಗಣತಿ ಸಮೀಕ್ಷೆ.
  9. ಆರ್ಥಿಕ ಸಮೀಕ್ಷೆ.           
  10. ವಿವಿಧ ರೋಗ ಸಮೀಕ್ಷೆ
  11. ಕಲೆ.
  12. ಸಂಸೃತಿ.
  13. ಇತಿಹಾಸ.
  14. ಪ್ರವಾಸೋಧ್ಯಮ ಸ್ಥಳಗಳ ಸಮೀಕ್ಷೆ.
  15. ಕುಶಲ ಕರ್ಮಿ ಸಮೀಕ್ಷೆ.
  16. ಅಂಗವಿಕಲರ ಸಮೀಕ್ಷೆ.
  17. ಹಿರಿಯ ನಾಗರೀಕರ ಸಮೀಕ್ಷೆ.

ಹೀಗೆ ಇರುವ ಎಲ್ಲಾ ಯೋಜನೆಗಳ ಮಾಹಿತಿ ಊರಿಗೊಂದು ಇತಿಹಾಸ ಪುಸ್ತಕದಲ್ಲಿ ಇರಬೇಕು. ಊರಿಗೊಂದು ಪಿಬಿಆರ್ ಆಗಬೇಕು. ಆಯಾ ಊರಿನ ಡಿಜಿಟಲ್ ಡಾಟಾ ಸಂಗ್ರಹಣೆಯೇ ತುಮಕೂರು ಡಾಟಾ ಜಿಲ್ಲೆ-2022 ರ ಮೆಟ್ಟಿಲುಗಳಾಗಬೇಕು. ನೋಡಿ ಈ ಪತ್ರಗಳನ್ನು ಗಮನಿಸಿ, ಸಂಸದರು  ಈ ಯೋಜನೆ ಜಾರಿಗೆ ಎಷ್ಟು ಶ್ರಮ ಹಾಕುತ್ತಿದ್ದಾರೆ ಎಂಬುದು ತಿಳಿಯುತ್ತಿದೆ.