23rd February 2025
Share

TUMKURU:SHAKTHIPEETA FOUNDATION

ಗುಬ್ಬಿ ತಾಲ್ಲೋಕು ಕಚೇರಿಯಲ್ಲಿ, ಕುಂದರನಹಳ್ಳಿ ಸರ್ವೇ ನಂಬರ್ 15 ಮತ್ತು 16 ಫೈಲ್ ಮಿಸ್ಸಿಂಗ್ ಆಗಿದೆ ಎಂದು ಅಧಿಕಾರಿಗಳು ಕಳೆದ 7 ತಿಂಗಳಿನಿಂದ, ಕುಂದರನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ನೀಡಿರುವ ಮನವಿ ಸಂಸದರ ನಿಧಿಯಿಂದ ನಿರ್ಮಾಣ ಮಾಡಿರುವ ಡಾ.ಶಿವಕುಮಾರಸ್ವಾಮಿಗಳ ತಪೋವನ ಸಂರಕ್ಷಣೆ ಹಾಗೂ ಪವಿತ್ರವನ ನಿರ್ಮಾಣ  ಮತ್ತು ಇತರರ ಮನವಿಯನ್ನು ಪೆಂಡಿಂಗ್ ಇಟ್ಟುಕೊಂಡಿದ್ದಾರೆ.

ಗುಬ್ಬಿ ತಹಶೀಲ್ಧಾರ್ ಮತ್ತು ತುಮಕೂರು ಉಪವಿಭಾಗಾಧಿಕಾರಿರವರಿಗೆ ಹಲವಾರು ಭಾರಿ ಮನವಿ ಮಾಡಿದರು, ಫೈಲ್ ಇಟ್ಟುಕೊಳ್ಳ ಬೇಕಾದವರ, ಪೈಲ್ ಕದ್ದಿರುವವg ಮೇಲೆ ಕಾನೂನು ಕ್ರಮಕೈಗೊಂಡು ಮನವಿದಾರರಿಗೆ ನ್ಯಾಯ ಒದಗಿಸಲು ವಿಳಂಭ ಮಾಡುತ್ತಿರುವ ಹಿನ್ನಲೆಯಲ್ಲಿ. ದಿನಾಂಕ:03.07.2023 ರಂದು ಜಿಲ್ಲಾದಿಕಾರಿಗಳಿಗೆ ಮನವರಿಕೆ ಮಾಡುವುದು ಮತ್ತು ಸರ್ಕಾರದ ಗಮನಕ್ಕೆ ತರಲು ದಿನಾಂಕ:28.06.2023 ರಂದು ಕುಂದರನಹಳ್ಳಿ ಗ್ರಾಮಸ್ಥರು ಸಭೆ ನಡೆಸಿ ನಿರ್ಧಾರ ಕೈಗೊಂಡಿದ್ದಾರೆ.

ಗುಬ್ಬಿ ತಾಲ್ಲೋಕು ಕಚೇರಿಯಲ್ಲಿ ಫೈಲ್ ಮಿಸ್ಸಿಂಗ್ ಒಂದು ದಂಧೆಯಾಗಿದೆಯಂತೆ, ನೊಂದವರು ಗಮನಕ್ಕೆ ತರಲು ಮನವಿ.