23rd December 2024
Share

   ನಮ್ಮ ದೇಶ ಮತ್ತು ರಾಜ್ಯ ಬಡತನದಿಂದ ಮೇಲ್ದರ್ಜೆಗೆ ಏರಿಸಿರುವ ಕೆಳಕಂಡ ಅಂಕಿ- ಅಂಶಗಳನ್ನು ನೀಡಿದ್ದಾರೆ. ಯಾವ ಯೋಜನೆಗಳ ಆಧಾರದ ಮೇಲೆ ಅನುಷ್ಠಾನ ಸಾಧ್ಯವಾಗಿದೆ. ಇವುಗಳ ಸತ್ಯಾ ಸತ್ಯತೆ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯ ಮಾಡಿರುವ ಅನುದಾನ ತಾರತಮ್ಯದ ಬಗ್ಗೆಯೂ ಜನರಿಗೆ ಮಾಹಿತಿ ನೀಡುವುದು ಸೂಕ್ತವಾಗಿದೆ.

ಈ ಮೂರು ವಿಚಾರಗಳ ಅಧ್ಯಯನ ವರದಿ ಸಿದ್ಧಪಡಿಸಲು ಆಸಕ್ತಿ ಇರುವ ವ್ಯಕ್ತಿ ಅಥವಾ ಸಂಸ್ಥೆಗಳು ಸಂಪರ್ಕಿಸಲು ಮನವಿ.

1.ಕಳೆದ 10 ವರ್ಷಗಳಲ್ಲಿ ಸುಮಾರು 25 ಕೋಟಿ ಜನರನ್ನು ಹಲವು ಆಯಾಮಗಳಿಂದ ಬಡತನದಿಂದ ಮೇಲೆತ್ತಲಾಗಿದೆ.

(ಕೇಂದ್ರ ಆರ್ಥಿಕ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಂ ಮಂಡಿಸಿದ 2024-25 ನೇ ಸಾಲಿನ ಆಯವ್ಯಯದ ವರದಿಯಲ್ಲಿ ದಿನಾಂಕ:02.02.2024 ರ ವಿಜಯವಾಣಿ ಪತ್ರಿಕೆ ವರದಿ.)

2.ಕೇವಲ 9 ತಿಂಗಳಲ್ಲಿ 1.5 ಕೋಟಿ ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬಂದಿವೆ

(ಮಾನ್ಯ ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ದಿನಾಂಕ:20.02.2024 ರಂದು ವಿಜಯವಾಣಿ ಪತ್ರಿಕೆಯಲ್ಲಿ ಸಕಾಲಿಕ ಕಾಲಂನಲ್ಲಿ ಬರದು ಕೊಂಡಿರುವ  ಪ್ರಕಾರ)

3.ಕೇಂದ್ರ ಸರ್ಕಾರದ ಅನ್ಯಾಯದಿಂದ ಕರ್ನಾಟಕಕ್ಕೆ 2017-18 ರಿಂದ ಆದ ನಷ್ಟ ರೂ 1,87,000 ಕೋಟಿ.

(ದಿನಾಂಕ:06.02.2024 ರಂದು  ವಿಜಯವಾಣಿ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ರವರು  ಅಥವಾ ಕರ್ನಾಟಕ ಸರ್ಕಾರ ನೀಡಿರುವ ಚಲೋದಿಲ್ಲಿ  ಪ್ರಕಟಣೆ)

–      ಅಗೋಚರ ಶಕ್ತಿ