15th October 2024
Share

TUMAKURU:SHAKTHIPEETA FOUNDATION

REPORT BY H.V.GURUSIDDARADYA

  ಅನಾದಿಕಾಲದಿಂದಲೂ ಮಾನವ ಪ್ರಕೃತಿಯ ಮೇಲೆಯೇ ಅವಲಂಬಿತ ಪ್ರಕೃತಿಯನ್ನು ಪ್ರತಿಬಿಂಬಿಸುವ ಪಂಚಭೂತಗಳಲ್ಲಿ ಸರ್ವಸ್ವವು ಅಡಗಿರಬಹುದು ಮಾನವನ ನಂಬಿಕೆ ಅಂತೆಯೇ ನೆಲ ಜಲ ಸೂರ್ಯ ಚಂದ್ರ ಅಗ್ನಿ ವಾಯು ವರುಣ ಇವು ಮಾನವನ ಆರಾಧ್ಯ ದೈವಗಳಾಗಿ ರೂಪುಗೊಂಡವು ತರುಲತೆಗಳನ್ನು ಗಿಡಮೂಲಿಕೆಗಳನ್ನು ಹಾಗೂ ಪಕ್ಷಿಗಳನ್ನು ಜನರು ಪೂಜಿತ ತೊಡಗಿದರು ತಮ್ಮ ಬದುಕಿಗೆ ಆಸರೆಯಾಗಿ ನಿಲ್ಲುವ ಯಾವುದೇ ಚೈತನ್ಯಶೀಲ ವಸ್ತುಗಳನ್ನು ಸಕಲ ಮರ್ಯಾದೆಗಳೆಂದು ಪೂಜಿಸುವುದು ಸಂಪ್ರದಾಯವಾಗಿತ್ತು ಕಾಲ ಉರುಳಿದಂತೆ ವನದೇವತೆಯನ್ನು ಪಕ್ಷಿಗಳನ್ನು ಪೂಜಿಸುವ ದೃಷ್ಟಿಯಿಂದ ಮತ್ತು ಸಂರಕ್ಷಣೆಯ ದೃಷ್ಟಿಯಿಂದ ದೇವರ ಕಾಡು, ಪವಿತ್ರವನಗಳು  1.ಅಷ್ಟ ದಿಕ್ಪಾಲಕ ವನ

2. ನವಗ್ರಹವನ 3. ನಕ್ಷತ್ರ ವನ 3. ರಾಶಿ ವನ 4. ಶಿವಪಂಚಾಯತ್ವನ 5. ಸಪ್ತ ಋಷಿ ವನ.

      ನಾಗವನಗಳು ಮತ್ತು ಮುಖ್ಯವಾಗಿ ಪಂಚವಟಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸುತ್ತಿದ್ದರು. ಪರಿಸರ ಸಂರಕ್ಷಣೆ ಮತ್ತು ಔಷಧೌಪಚಾರದಲ್ಲಿ ಪವಿತ್ರ ಪಂಚವಟಿ ವನದ ಪಾತ್ರ ಬಹುಮುಖ್ಯವಾಗಿದೆ ಪಂಚವಟಿ ಎಂದರೆ ಐದು ಪವಿತ್ರ ಹಾಗೂ ಜನ ಇದಕಾರಿ ಪರಿಸರ ಮಾಲಿನ್ಯವನ್ನು ನಿವಾರಣೆ ಮಾಡುವ ಮತ್ತು ಮಾನವನ ರೋಗವುಗಳನ್ನು ಗುಣಪಡಿಸುವ ಶ್ರೇಷ್ಠ ಗುಣವುಳ್ಳ ಗಿಡಗಳ ಒಂದು ಗುಂಪು ಇಂತಹ ಪಂಚವಟಿಯನ್ನು ಪ್ರಾಚೀನ ಕಾಲದಿಂದಲೂ ಋಷಿಮುನಿಗಳು ಆಯುರ್ವೇದ ಪಂಡಿತರು ಮತ್ತು ಬುದ್ಧಿಜೀವಿಗಳು   ಪಂಚವಟಿಯನ್ನು ನಿರ್ಮಿಸುತ್ತಿದ್ದಾರೆ ಎಂದು ಪ್ರದೀತಿದೆ.

    ಧಾರ್ಮಿಕ ವೃಕ್ಷ ಗಳನ್ನು ಪೂಜಿಸುವುದರಿಂದಲೂ ಹಾಗೂ ಆಯಾ ವ್ಯಕ್ತಿಗಳಿಗೆ ಸಂಬಂಧಿಸಿದ ವೃಕ್ಷಗಳ ಬಳಿ ಕುಳಿತು ಧ್ಯಾನ ಮಾಡುವುದರಿಂದಲೂ ಆರೋಗ್ಯ ಭಾಗ್ಯ ಹಾಗೂ ಸಕಲ ಸನ್ಮಂಗಳವನ್ನು ಪಡೆಯಬಹುದು ಮಹಾನ್ ವ್ಯಕ್ತಿಗಳಾದ ಬುದ್ಧ ಮಹಾವೀರ ಏಸುಕ್ರಿಸ್ತ ಮೊಹಮ್ಮದ್ ಪೈಗಂಬರ್ ಮೊದಲಾದವರು ವೃಕ್ಷಗಳ ಕೆಳಗೆ ಕುಳಿತು ಧ್ಯಾನ ಮಾಡಿ ಜ್ಞಾನವನ್ನು ಪಡೆದುಕೊಂಡರು ವೃಕ್ಷಗಳು ಟೆಲಿವಿಷನ್ ಆಂಟಿನಾದ ರೀತಿಯಲ್ಲಿ ಕೆಲಸ ಮಾಡಿ ಮಾನವನ ಪ್ರಾರ್ಥನೆಯನ್ನು ದೇವರಿಗೆ ತಲುಪಿಸುವಲ್ಲಿ ಹಾಗೂ ದೇವರಿಂದ ಬಂದ ಆಶೀರ್ವಾದವನ್ನು ವಾಪಸ್ಸು ಮಾನವನಿಗೆ ಮುಟ್ಟಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಆದುದರಿಂದ ಪ್ರತಿ ಮನೆ ಅಂಗಳದಲ್ಲಿ ತೋಟದಲ್ಲಿ ಹೊಲಗದ್ದೆಗಳಲ್ಲಿ ಗ್ರಾಮಗಳಲ್ಲಿ ಧಾರ್ಮಿಕ ವೃಕ್ಷಗಳನ್ನು ಬೆಳೆಸಿ ಪೂಜಿಸಿ ಧ್ಯಾನಿಸಿ ಸಕಲ ಸನ್ಮಂಗಗಳನ್ನು ಪಡೆಯಬಹುದಾಗಿದೆ.

   ಪಂಚವಟಿ ಎಂಬ ಹೆಸರು ಹಿಂದಿ ಪದಗಳಾದ ಪಂಚ್ ಅಂದರೆ ಐದು ಮತ್ತು ಒಟಿ ಎಂದರೆ ಆರದ ಮರದಿಂದ ಬಂದಿದೆ.

    ಪಂಚವಟಿಯು ಭಾರತದ ನಾಸಿಕ್ ನಲ್ಲಿರುವ ಗೋದಾವರಿ ನದಿಯ ದಡದಲ್ಲಿರುವ ಆಧ್ಯಾತ್ಮಿಕವಾಗಿ ಮಹತ್ವದ ತಾಣವಾಗಿದೆ ಇದು ಶ್ರೀಮಂತ ಪುರಾಣ ಮತ್ತು ಇತಿಹಾಸದೊಂದಿಗೆ ಸಂಬಂಧಿಸಿದೆ ಭಗವಾನ್ ರಾಮ ಭಗವಾನ್ ಲಕ್ಷ್ಮಣ ಮತ್ತು ಸೀತಾದೇವಿಯು ಅಲ್ಲಿ ಕೆಲವು ವರ್ಷಗಳ ವನವಾಸವನ್ನು ಕಳೆದ ಕಥೆಯನ್ನು ಒಳಗೊಂಡಿದೆ ಪಂಚವಟಿಯ ಬಗ್ಗೆ ತಿಳಿಯಬೇಕಾದ ಇತರ ಕೆಲವು ವಿಷಯಗಳು.

ಸೀತೆಯ ಗುಹೆ ಪಂಚವಟಿಯಲ್ಲಿದ್ದು ಇಲ್ಲಿಯೇ ಸೀತಾದೇವಿಯು ರಾವಣನಿಂದ ಬಂದಿಸಲಾಗಿದ್ದಳು ಎಂದು ಹೇಳಲಾಗುತ್ತದೆ ಲಕ್ಷ್ಮಣ ರೇಖಾ ಸೀತೆಯ ರಕ್ಷಣೆಗಾಗಿ ಭಗವಾನ್ ಲಕ್ಷ್ಮಣನು ಚಿತ್ರಿಸಿದ ರೇಖೆಯ ಗುಹೆಯ ಬಳಿ ಇದೆ.

ಶ್ರೀರಾಮಕೃಷ್ಣ ಸಾಧನೆ ಮಾಡಲು ಹಳೆಯ ಪಂಚವಟಿಗಳ ಬಳಿ ಹೊಸ ಪಂಚವಟಿಕೆಗಳನ್ನು ನೆಟ್ಟರು.

   ಭಗವಾನ್ ರಾಮನು ತನ್ನ 14 ವರ್ಷಗಳ ದೀರ್ಘ ವನವಾಸದ ಕೆಲವು ವರ್ಷಗಳನ್ನು ಪಂಚವಟಿಯಲ್ಲಿ ಕಳೆದನು ಇದು ರಾಮಾಯಣದಲ್ಲಿ ಸೀತೆಯ ಹರಣ ಮತ್ತು ಅದಕ್ಕೆ ಕಾರಣವಾಗುವ ಅನೇಕ ಘಟನೆಗಳಿಗೆ ಹೆಸರುವಾಸಿಯಾಗಿದೆ ಭಾರತದ ಎರಡನೇ ಅತಿ ಉದ್ದವಾದ ನದಿಯಾದ ಗೋದಾವರಿ ದಡದಲ್ಲಿದೆ ಪಂಚವಟಿ ಶ್ರೀಮಂತ ಪುರಾಣ ಮತ್ತು ಇತಿಹಾಸಗಳೊಂದಿಗೆ ಸಂಬಂಧಿಸಿದೆ .

    ಕಲಾ ರಾಮ ಮಂದಿರ ನೀವು ಕೇವಲ ಕಲರಾಮ ದೇವಾಲಯದ ಮೂಲಕ ನಡೆದರು ಸಹ ನೀವು ಎರಡು ಬಾರಿ ಆನಂದವನ್ನು ಅನುಭವಿಸುವಿರಿ ಎಂದು ಹೇಳಲಾಗುತ್ತದೆ ರಾಮನು ಸೀತೆ ಮತ್ತು ಲಕ್ಷ್ಮಣನೊಂದಿಗೆ ತನ್ನ ಗುಡಿಸಲನ್ನು ಸ್ಥಾಪಿಸಿದನೆಂದು ನಂಬಲಾದ ಸ್ಥಳದಲ್ಲಿಯೇ ಈ ದೇವಾಲಯವನ್ನು ನಿರ್ಮಿಸಲಾಗಿದೆ ದೇವಾಲಯದ ಹೆಸರಿನ ಇಂದಿನ ಕಥೆ ಎಂದರೆ ಪಂಚವಟಿಯ ಋಷಿಯುಗಳು ಈ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ರಾಕ್ಷಸರು ಅಥವಾ ರಾಕ್ಷಸರನ್ನು ತೊಳೆದು ಹಾಕಲು ರಾಮನಲ್ಲಿ ಮನವಿ ಮಾಡಿದರು ನಂತರ ರಾಮನು ತನ್ನ ಕಲಾ ರೂಪವನ್ನು ತೆಗೆದುಕೊಂಡನು ಅಥವಾ ಅವನನ್ನು ಕೊಲ್ಲಲು ಮತ್ತು ಸೋಲಿಸಲು ತನ್ನ ಕರಾಳ ಮುಖವನ್ನು ಆಹ್ವಾನಿಸಿದನು.

         ಸೀತಾ ಗುಫಾ ಸೀತಾ ಗುಹೆ ಸೀತಾ ಶಿವಭಕ್ತ ಮತ್ತು ಸೀತಾ ಗುಹೆ ಎಂದು ಕರೆಯಲ್ಪಡುವ ಗುಹೆಗೋಳಗೆ ಅವನನ್ನು ಪ್ರಾರ್ಥಿಸುತ್ತಿದ್ದರು ಎಂದು ಹೇಳಲಾಗುತ್ತದೆ ಗುಹೆವು ಮೇಕಪ್ ಕೋಣೆ ಅಥವಾ ಶೃಂಗಾರ ಗೃಹಗಳನ್ನು ಹೊಂದಿದೆ ಅಲ್ಲಿ ಅವಳು ತನ್ನ ಕೆಲವು ಸಮಯವನ್ನು ಕಳೆದಿದ್ದಾಳೆ ಎಂದು ಹೇಳಲಾಗುತ್ತದೆ, ಮಹಾನ್ ರಾವಣನು ಸೀತೆಯನ್ನು ಅಪಹರಿಸಿದ ಸ್ಥಳ ಸೀತಾ ಗುಹೆ ಎಂದು ನಂಬಲಾಗಿದೆ.

   ಅರಣ್ಯ ಇಲಾಖೆ ಹರಿಯಾಣವು ಪ್ರತಿ ಹಳ್ಳಿಯಲ್ಲಿ ಪಂಚವಟಿ ತೋಪುಗಳನ್ನು ನೆಡಲು ರಾಜ್ಯಾದ್ಯಂತ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಇದನ್ನು ದೇವಾಲಯ ಗಳು, ಕೊಳಗಳು ಮತ್ತು ಸಾಮಾನ್ಯ ಜಮೀನಿನ ಉದ್ದಕ್ಕೂ ನೀಡಲಾಗುತ್ತದೆ 2021 ರಿಂದ ಈ ತೋಪುಗಳನ್ನು ನೆಡಲು ಹಳ್ಳಿಗಳಲ್ಲಿ ಭೂಮಿಯನ್ನು ಗುರುತಿಸಲಾಯಿತು ಇದನ್ನು ಗ್ರಾಮಸ್ಥರು ನೋಡಿಕೊಳ್ಳುತ್ತಾರೆ.

      ವಾರಣಾಸಿ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ವಾರಣಾಸಿ ಪ್ಯಾರಾ ಮೆಲಿಟರಿ ಕೇಂದ್ರಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಪಂಚವಟಿಗಳನ್ನು ಸ್ಥಾಪಿಸಲು ಯೋಜಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಅಧಿಕಾರಿಗಳು ಈ ಪಂಚವಟಿಗಳು ಪರಿಸರ ಧಾರ್ಮಿಕ ಮತ್ತು ಔಷಧಿಯ ಪ್ರಾಮುಖ್ಯತೆಯ ಇತರ ಸಸ್ಯಗಳನ್ನು ಹೊಂದಿವೆ ಎಂದು ಭಾವಿಸುತ್ತಾರೆ ವಾರಣಾಸಿ ಪ್ರವಾಸದ ವೇಳೆ ಪ್ರಧಾನಿಯವರು ಜಿಲ್ಲೆಯ ಪ್ರತಿಗ್ರಾಮಗಳಲ್ಲಿ ಪಂಚವಟಿಗಳನ್ನು ಸ್ಥಾಪಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಇದಕ್ಕಾಗಿ ಭೂಮಿಯನ್ನು ಗುರುತಿಸಲಾಗುತ್ತಿದೆ ಮತ್ತು ಪ್ರಧಾನಮಂತ್ರಿಗಳ ಕಚೇರಿ ನಮಗೆ ನಿರ್ದೇಶನ ನೀಡಿದಾಗ ನಾವು ಯೋಜನೆ ಕೆಲಸ ಪ್ರಾರಂಭಿಸುತ್ತೇವೆಂದು ಜಿಲ್ಲಾಧಿಕಾರಿ ಸುರೇಂದ್ರ ಹೇಳಿದರು ಸಿಂಗ್ ಹೇಳಿದರು.

       ವಿದ್ಯಾಪೀಠದ ಬ್ಲಾಕ್ ಅಭಿವೃದ್ಧಿ ಅಧಿಕಾರಿ ರಮಾಕಾಂತ್ ತಿವಾರಿ ಮಾತನಾಡಿ ಗ್ರಾಮದ ನಿರ್ದಿಷ್ಟ ಪ್ರದೇಶವನ್ನು ಪಂಚವಟಿಗಳಿಗೆ ತೊಟ್ಟಿಲಾಗಿ ಬಳಸಲಾಗುವುದು ಸಸಿಗಳನ್ನು ನೆಟ್ಟು 5 ವರ್ಷಗಳ ನಂತರ ನಿರ್ದಿಷ್ಟ ರಚನೆಯನ್ನು ನಿರ್ಮಿಸಲಾಗುವುದು 39 ಸಸ್ಯಗಳ ಪಂಚವಟಿಗಳು ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿವೆ, ಯೋಜನೆಯ ನೀಲಿ ನಕ್ಷೆ ಸಿದ್ಧವಾಗಿದೆ. ಎಲ್ಲಾ ಗ್ರಾಮಗಳಿಗೆ ಪಂಚವಟಿಗಳನ್ನು ಅರಳಲಾಗುವುದು ಕೆರೆಗಳ ಬಳಿಯೂ ಇದನ್ನು ಅಭಿವೃದ್ಧಿಪಡಿಸಲಾಗುವುದು ಇದಲ್ಲದೆ ಕಲ್ಲು ಬೆಂಚುಗಳು ಮತ್ತು ನೆರಳು ನೀಡುವ ಮರಗಳನ್ನು ಸ್ಥಾಪಿಸಲಾಗುವುದು ಪಂಚವಟಿಯಲ್ಲಿ ಔಷಧಿ ಹಾಗೂ ಧಾರ್ಮಿಕ ಮಹತ್ವವುಳ್ಳ ಮರಗಳನ್ನು ನೆಟ್ಟು ಮಾನವರು ಅವುಗಳನ್ನು ರಕ್ಷಿಸಿ ಪೋಷಿಸಬೇಕು ಎಂದರು ಸರ್ಕಾರಿ ಜಮೀನಿನ ನಾಲ್ಕು ಮೂಲೆಗಳಲ್ಲಿ ಸಸಿಗಳನ್ನು ನೀಡಲಾಗುವುದು ಮಧ್ಯದಲ್ಲಿ ನಾಲ್ಕು ಬಿಲ್ವ ಗಿಡಗಳು ನಾಲ್ಕು ಮೂಲೆಗಳಲ್ಲಿ ಒಂದು ಆಲದ ಗಿಡ ವೃತ್ತಾಕಾರದಲ್ಲಿ ಐದು ಅಶೋಕ ಗಿಡಗಳು ದಕ್ಷಿಣ ದಿಕ್ಕಿನಲ್ಲಿ ಎರಡು ಆಮ್ಲ ಗಿಡಗಳು ಮತ್ತು ನಾಲ್ಕು ದಿಕ್ಕುಗಳಲ್ಲಿ ಪೀಪಲ್ ಗಿಡಗಳು ನೀಡಲಾಗುತ್ತದೆ ಎಂದು ತಿವಾರಿ ತಿಳಿಸಿದರು.

     ವಾರಣಾಸಿ ಪ್ರವಾಸದ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಅಧಿಕಾರಿಗಳಿಗೆ ಪಂಚವಟಿ ಮರಗಳನ್ನು ಸ್ಥಾಪಿಸುವ ಅವಕಾಶವನ್ನು ಮೋದಿ ವ್ಯಕ್ತಪಡಿಸಿದರು.

      ಅಧಿಕೃತ ಮೂಲಗಳ ಪ್ರಕಾರ ಜಿಲ್ಲೆಯ 760 ಗ್ರಾಮಗಳಲ್ಲಿ ಯೋಜನೆಗಾಗಿ ಭೂಮಿಯನ್ನು ಗುರುತಿಸಲಾಗುತ್ತಿದೆ ವಾರಣಾಸಿಯಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಇದನ್ನು ಭಾರತದ ಇತರ ಜಿಲ್ಲೆಗಳಲ್ಲಿ  ವಿಸ್ತರಿಸಲಾಗುವುದು.

 ಪಂಚವಟ್ಟಿ ಎಂಬ ಹೆಸರನ್ನು ಸೂಚಿಸುವ 5 ಗಿಡಗಳೆಂದರೆ 1.ಬಿಲೋಪತ್ರ 2.ಬನ್ನಿ 3.ಬೇವು 4.ಅರಳಿ 5 .ಹತ್ತಿ

1. ಬಿಲ್ವಪತ್ರೆ  :-ಬಿಲ್ವಪತ್ರೆಯ ಗಿಡಗಳಲ್ಲಿ ಇವನ್ನು ನೆಲೆಸಿರುವನೆಂಬ ನಂಬಿಕೆ ಅನೇಕ ಜನರಲ್ಲಿದೆ ಆದುದರಿಂದಲೇ ಪೂಜಿಸುವಲ್ಲಿ ತ್ರಿದಾಳ ತ್ರಿಗುಣಾಕಾರಂ ತ್ರಿನೇತ್ರಂ ಕ್ಷತ್ರಿಯ ಯುಧಂ ತ್ರಿಜನ್ಮಂ ಪಾಪಸಂಹಾರ ಏಕ ಬಿಲ್ವಂ ಶಿವಾರ್ಪಣಂ ಎಂಬ ಶ್ಲೋಕವನ್ನು ಹೇಳುವುದು ರೂಢಿಯಲ್ಲಿದೆ ಪತ್ರೆಯ ಔಷಧೋಪ ಯುಕ್ತ ಗುಣಗಳೆಂದರೆ ಎಲೆ ಕಾಂಡ ಬೇರು ತೊಗಟೆ ಮತ್ತು ಹಣ್ಣುಗಳ ಬಳಕೆಯನ್ನು ಅರಿತು ಉಪಯೋಗಗಳನ್ನು ಪಡೆಯುತ್ತಾರೆ ಅಲ್ಲದೆ ಒಣಕಾಯಿಗಳನ್ನು ಪೂಜೆ ಮಾಡಿ ಅದನ್ನು ಧೂಪದಂತೆ ಬೆಂಕಿಯ ಮೇಲೆ ಹಾಕಿದರೆ ಬರುವ ಹೊಗೆಯಿಂದ ಮನೆಯಲ್ಲಿ ಸೊಳ್ಳೆ ಮತ್ತು ನೊಣಗಳನ್ನು ನಾಶ ಮಾಡಬಹುದು ಪತ್ರೆ ಗಿಡದ ಸಂಸ್ಕೃತದ ಹೆಸರು ಬಿಲ್ವ ಇದನ್ನು ಉತ್ತರ ಕರ್ನಾಟಕದ ಭಾಗದಲ್ಲಿ ಇದನ್ನು ಪ್ರತಿ ಅಂತಲೂ ಕರೆಯುತ್ತಾರೆ.

2. ಬನ್ನಿ:- ಪಂಚವಟಿ ವನದಲ್ಲಿ ಎರಡನೇ ಸ್ಥಾನವನ್ನು ಪಡೆದಿರುವುದು ಬನ್ನಿ ಪಾಂಡವರು ವನವಾಸದಲ್ಲಿದ್ದಾಗ ತಮ್ಮ ಶಸ್ತ್ರಾಸ್ತ್ರ ಆಯುಧಗಳನ್ನು ಅವರ ಅಜ್ಞಾತವಾಸ ಮುಗಿಯುವವರೆಗೂ ಈ ಮರದಲ್ಲಿ ಇಟ್ಟಿದ್ದರು ಎನ್ನಲಾಗುತ್ತಿದೆ ಆ ಆಯುಧಗಳನ್ನು ಮತ್ತೆ ತೆಗೆದುಕೊಂಡ ದಿನವೇ ಆಯುಧ ಪೂಜಾ ದಸರಾ ದಿನವಾಗಿದೆ ಇಂದಿಗೂ ಈ ಎಲೆಯನ್ನು ಬಂಗಾರ ಎಂದು ದಸರಾ ಹಬ್ಬದ ವಿಜಯದಶಮಿ ದಿನದಂದು ಪರಸ್ಪರರಲ್ಲಿ ಬನ್ನಿ ಎಲೆಗಳನ್ನು ಕೊಟ್ಟು ತೆಗೆದುಕೊಂಡು ಬಂಗಾರದ ಹಾಗೆ ಬಾಂಧವ ಇರಲೆಂದು ಹೇಳುವ ಮೂಲಕ ತಮ್ಮಲ್ಲಿರುವ ವೈರತ್ವವನ್ನು ಮರೆಯುತ್ತಾರೆ ಈ ಮರದಲ್ಲಿ ಗಾಳಿಮಾತೆಯು ವಾಸ ಸ್ಥಳವಾಗಿದೆ ಎಂಬ ನಂಬಿಕೆ ಇದೆ ಪರ್ವತಾದ ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ ಔಷದೋಪಚಾರದಲ್ಲಿ ಸಂತಾನಕ್ಕಾಗಿ ಉಪಯೋಗಿಸುತ್ತಾರೆ ಆಯುರ್ವೇದ ತಜ್ಞರ ಪ್ರಕಾರ ಹೇಳುವುದಾದರೆ ಈ ಗಿಡದ ಕೆಳಗೆ ಸುತ್ತುವರೆದರೆ ಮಹಿಳೆಯರೇ ಎಷ್ಟೋ ರೋಗಗಳು ಗುಣವಾಗುತ್ತವೆ ಮಹಿಳೆಯರು ಬನ್ನಿ ಮರವನ್ನು ಹೆಚ್ಚು ಭಕ್ತಿಯಿಂದ ಪ್ರದಕ್ಷಣೆ ಮಾಡುವವರು ಬನ್ನಿ ಗಿಡವನ್ನು ಸಂಸ್ಕೃತದಲ್ಲಿ ಕ್ಷಮೆ ಎಂದು ಕರೆಯುತ್ತಾರೆ.

3. ಬೇವು:-  ಬೇವು ಬಹಳ ಪ್ರಾಮುಖ್ಯತೆಯನ್ನು ಪಡೆದ ವೃಕ್ಷ ಭಾರತದಲ್ಲಿ ಸಂವತ್ಸರದ ಅಥವಾ ವರ್ಷ ಆರಂಭದ ಮೊದಲು ದಿನದಂದು ಯುಗಾದಿ ಹಬ್ಬವನ್ನು ಆಚರಿಸುವಾಗ ಬೇವಿನ ಹೂವು ಮತ್ತು ಬೆಲ್ಲವನ್ನು ಕೊಟ್ಟು ತೆಗೆದುಕೊಳ್ಳುತ್ತಾರೆ ಬೇವಿನ ಮಹತ್ವವನ್ನು ಅನೇಕರು ಅರಿತವರಾಗಿದ್ದಾರೆ ವೈಜ್ಞಾನಿಕ ಜಗತ್ತು ಅಷ್ಟು ಮುಂದುವರೆದಿದ್ದರೂ ಸಹ ನಾವು ಇಂದಿನ ತಲೆಮಾರುಗಳ  ನಿರ್ದೇಶನ ಮಾರ್ಗದರ್ಶನವನ್ನು ಅವಲಂಬಿಸಿಕೊಂಡು ಬಂದಿರುವುದು ಬಹಳ ಮುಖ್ಯವಾದ ವಿಷಯ ಅದರಲ್ಲಿ ಬೇವಿನ ಪಾತ್ರ ಅತಿ ಮುಖ್ಯವಾದದ್ದು ಇಂದು ಪರಿಸರ ಮಾಲಿನ್ಯ ರಕ್ಷಣೆಯಿಂದ ಹಿಡಿದು ಕ್ರಿಮಿಕೀಟಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಬೇವಿನ ಮರಗಳ ಮೊರೆ ಹೋಗುವುದು ಜಗತ್ತಿನ ಜಗ ಜಾಹಿರಾತಾಗಿದೆ ಅಲ್ಲದೆ ಧಾರ್ಮಿಕ ದೃಷ್ಟಿಯಿಂದ ಇದರ ಮಹತ್ವ ಉತ್ತಮವಾಗಿದೆ ಬೇವಿನ ಎಲೆ ಕಾಯಿ ಹಣ್ಣುಗಳಲ್ಲಿ ಕೀಟನಾಶಕ ಗುಣಗಳು ಇರುವುದನ್ನು ಋಷಿಮುನಿಗಳು ಕಾಲದಿಂದಲೇ ತಿಳಿಯಲಾಗಿದೆ ಇದು ಕೊಳೆಯನ್ನು ಹಾಗೂ ಚರ್ಮರೋಗ ನಿವಾರಣ ಗುಣವನ್ನು ಹೊಂದಿರುವುದರಿಂದ ಹೆರಿಗೆಯಾದ ಬಾಣಂತಿಯರಿಗೆ ಬೇವಿನ ಎಲೆಯ ರಸವನ್ನು ತೆಗೆದು ಸ್ನಾನ ಮಾಡಿಸುವುದು ಪದ್ಧತಿ ರೂಢಿಯಲ್ಲಿದೆ

4. ಅರಳಿ :-  ಭಾರತದಲ್ಲಿ ಅರಳಿ ವೃಕ್ಷವು ಪವಿತ್ರವೂ ಪೂಜ್ಯನೀಯವೂ ಆಗಿದೆ ಮೂಲತಃ ಬ್ರಹ್ಮ ರೂಪಾಯ ಮಧ್ಯಮ ವಿಷ್ಣು, ಗ್ರೂಪಿಣಿ ಆಗ್ರತೋ ಶಿವ ರಾಜಾಯತೇ ನಮಃ ಅಂದರೆ ಅರಳಿರುಕ್ಷದ ಬುಡದಲ್ಲಿ ಬ್ರಹ್ಮನಿರುವನೆಂದು ಮಧ್ಯದಲ್ಲಿ ವಿಷ್ಣುವಿನ ವಾಸವೆಂದು ಅಗ್ರತಹ ಮೇಲ್ತುದಿಯ ಭಾಗದಲ್ಲಿ ಶಿವನು ನೆಲೆಸಿರುವನೆಂದು ಒಟ್ಟಿನಲ್ಲಿ ತ್ರಿಮೂರ್ತಿಗಳ ಆವಾಸಸ್ಥಾನವೆಂದು ಹಾಗೂ ಈ ಮರವನ್ನು ವೃಕ್ಷರಾಜನೆಂದು ಕರೆದಿದ್ದಾರೆ ಎಲ್ಲಿ ದೇವಸ್ಥಾನಗಳು ಇರುವುದಿಲ್ಲವೋ ಅಲ್ಲಿ ಅರಳಿ ಮರ ಇದ್ದೇ ಇರುತ್ತದೆ ಮನೆ ಕಟ್ಟಡ ಒಗಟುಗಳಲ್ಲಿ ಸಿಮೆಂಟ್ ಇನ ಗೋಡೆಗಳ ಮೇಲೆಯೂ ಬೆಳೆಯುತ್ತದೆ ಇದು ಅತ್ಯಧಿಕ ಆಮ್ಲಜನಕವನ್ನು ಉತ್ಪಾದಿಸುತ್ತದೆ ಇದರ ಕೆಳಗೆ ಬುದ್ಧ ತಪಸ್ಸು ಮಾಡಿ ಜ್ಞಾನೋದಯಗೊಳಿಸಿದ್ದರಿಂದ ಈ ಮರಕ್ಕೆ ಬೋಧಿ ವೃಕ್ಷ ಎಂಬ ಹೆಸರು ಬಂದಿದೆ ಈ ವೃಕ್ಷಕ್ಕೆ ಆಯುರ್ವೇದ ಶಾಸ್ತ್ರದಲ್ಲಿ ಅಗ್ರಸ್ಥಾನವನ್ನು ಕೊಟ್ಟಿದ್ದಾರೆ ಈ ಮರದ ತೊಗಟೆಯ ಕಷಾಯವು ಔಷಧೌಪಚಾರಿಯಾಗಿ ಬಳಸಲ್ಪಟ್ಟಿರುತ್ತದೆ ಮೂತ್ರ ರೋಗದ ಉಪಚಾರದಲ್ಲಿ ಉತ್ತಮ ಔಷಧಿಯಾಗಿದೆ ಅರಳಿ ಗಿಡದ ಸಂಸ್ಕೃತದ ಹೆಸರು ಅಶ್ವಥ.

5. ಹತ್ತಿ:-  ಹತ್ತಿ ಮರಕ್ಕೆ ದತ್ತಾತ್ರೆಯ ವೃಕ್ಷವೆಂದು ಕರೆಯುತ್ತಾರೆ ಎಲ್ಲಿ ವೃಕ್ಷವಿದೆಯೋ ಅಲ್ಲಿ ನೀರಿನ ಆಶ್ರಯವಿದೆ ಎಂದು ನಂಬಲಾಗಿದೆ ಇದು ಆಲದ ಮರದ ಸೋದರ ಬಂಧು ಎಂದು ತಿಳಿಯಲಾಗಿದೆ ಹತ್ತಿಯ ಸಣ್ಣ ಕೊಂಬೆಗಳನ್ನು ಮದುವೆ ಸಮಾರಂಭದಲ್ಲಿ ಬಳಸುತ್ತಾರೆ ಹತ್ತಿ ಹಣ್ಣುಗಳು ತುಂಬಾ ಔಷಧಿ ಹೊಂದಿದೆ ವರ್ಷಕ್ಕೊಮ್ಮೆ ಆದರೂ ಈ ಹಣ್ಣನ್ನು ತಿನ್ನಬೇಕಂತೆ ಇದು ರಕ್ತ ವೃದ್ಧಿಯನ್ನು ಉಂಟುಮಾಡುವ ಗುಣವನ್ನು ಹೊಂದಿರುತ್ತದೆ ಕಣ್ಣು ಸ್ವಚ್ಛವಾಗಿ ಹೊಳೆಯುವಂತೆ ಮಾಡುತ್ತದೆ ಆದ್ದರಿಂದ ಹಿರಿಯರು ಹತ್ತಿ ಹಣ್ಣುಗಳನ್ನು ತಿಂದರೆ ಕಣ್ಣಿನ ಯಾವ ರೋಗವು ಬರುವುದಿಲ್ಲವೆಂದು ಹೇಳುತ್ತಾರೆ ಅತ್ತಿಗಿಡದ ಸಂಸ್ಕೃತ ಹೆಸರು ಹೌದುಂಬರ.