TUMAKURU:SHAKTHI PEETA FOUNDATION
ಬಿಹಾರ ಮ್ಯೂಸಿಯಂ ಮಾಡೆಲ್, ತುಮಕೂರು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯದ ಇತಿಹಾಸದ ನನೆಪುಗಳ ‘ಮ್ಯೂಸಿಯಂ’ ನಿರ್ಮಾಣ ಮಾಡುವ ಕನಸು ಹೊತ್ತಿದ್ದಾರೆ, ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀಮತಿ ತುಳಸಿ ಮದ್ದಿನೇನಿರವರು.
ದಿನಾಂಕ:07.10.2024 ರಂದು ಬೆಂಗಳೂರಿನ ಬಹುಮಹಡಿಗಳ ಕಟ್ಟಡದಲ್ಲಿನ ಅವರ ಕಚೇರಿಯಲ್ಲಿ, ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಯೋಜನೆಗಳÀ ಸಮಾಲೋಚನೆ ನಡೆಸುವಾಗ, ಅವರ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಅವರು ಕಳೆದ ಚುನಾವಣೆಯಲ್ಲಿ ಬಿಹಾರಕ್ಕೆ ಹೋಗಿದ್ದಾಗ, ಪಾಟ್ಣಾದಲ್ಲಿ ಇರುವ ಬಿಹಾರ ಮ್ಯೂಸಿಯಂಗೆ ಭೇಟಿ ನೀಡಿದ್ದಾಗ, ಅವರ ಅಧ್ಯಯನ ಮತ್ತು ಸಂಶೋಧನೆ ವಿಶೇಷ ಗಮನ ಸೆಳೆದಿದೆ.
ತುಮಕೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ, ಶ್ರೀ ಕೆ.ಪಿ.ಮೋಹನ್ ರಾಜ್ ರವರು ಗುಜರಾತ್ ಚುನಾವಣೆಗೆ ಹೋಗಿದ್ದಾಗ, ಅವರು ಅಲ್ಲಿನ ಫೆರಿ-ಫೆರಿಯಲ್ ರಿಂಗ್ ರಸ್ತೆ ನೋಡಿದಾಗ, ಅಲ್ಲಿಂದ ಬಂದ ತಕ್ಷಣ ‘ಬೆಂಗಳೂರಿನ ಫೆರಿ-ಫೆರಿಯಲ್ ರಿಂಗ್ ರಸ್ತೆ’ ಬಗ್ಗೆ ಕನಸು ಕಂಡಿದ್ದರು. ಅಷ್ಟೆ ಅಲ್ಲ ಅವರು ನನ್ನೊಡನೆ ವಿಷಯ ಹಂಚಿಕೊಂಡ ರೀತಿಯೇ ವಿಶಿಷ್ಠವಾಗಿತ್ತು.
ತುಮಕೂರು ರೀಸರ್ಚ್ ಫೌಂಡೇಷನ್ @ 2047 ನ ಅಂತರ ರಾಷ್ಟ್ರೀಯ ಮಟ್ಟದ ಕ್ಯಾಂಪಸ್, ತುಮಕೂರು ಜಿಲ್ಲೆಯ 3 ಜನ ಲೋಕಸಭಾ, ಒಬ್ಬರು ರಾಜ್ಯಸಭಾ, 11 ವಿಧಾನಸಭಾ, 4 ವಿಧಾನ ಪರಿಷತ್, ಸದಸ್ಯರುಗಳ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿ.ಇ.ಓ ನೇತೃತ್ವದಲ್ಲಿ, ಅವರವರ ವ್ಯಾಪ್ತಿಯಲ್ಲಿ, 1947 ರಿಂದ ಇದೂವರೆಗೂ ಆಡಳಿತ ನಡೆಸಿದ ಯಾರ್ಯಾರ ಅವಧಿಯಲ್ಲಿ ಏನೇನು ಕೆಲಸ ಆಗಿದೆ, 2047 ರ ವರೆಗೆ ಏನೇನು ಕೆಲಸ ಮಾಡಬೇಕು ಎಂಬ ಅಧ್ಯಯನ ನಡೆಸಲು, ಉದ್ದೇಶಿತ 22 ಅಧ್ಯಯನ ಪೀಠಗಳ ಸ್ಥಾಪನೆ ಆಲೋಚನೆ.
ಕೇಂದ್ರ ಸಚಿವರಾದ ಶ್ರೀ ಪಿಯೋಷ್ ಗೋಯೆಲ್ ರವರು ಸಲಹೆ ನೀಡಿರುವಂತೆ, ಚಿತ್ರದುರ್ಗ-ಚನ್ನೈ ಇಂಡಸ್ಟ್ರಿಯಲ್ ಕಾರಿಡಾರ್‍ನಲ್ಲಿ ‘ಸಿಲಿಕಾನ್ ಸಿಟಿ ಆಫ್ ಇಂಡಿಯಾ’ ನಿರ್ಮಾಣದ ಪ್ರಸ್ತಾವನೆ, ಹೀಗೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಕೇಂದ್ರ ಸಚಿವರಾದ ಶ್ರೀ ವಿ.ಸೋಮಣ್ಣನವರು, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು, ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರು ಮತ್ತು ತುಮಕೂರು ಜಿಲ್ಲೆಯ ಎಲ್ಲಾ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ವಿಶೇಷ ಆಸಕ್ತಿ ವಹಿಸುವುದು ಸೂಕ್ತವಾಗಿದೆ.
ತುಮಕೂರು ವಿಶ್ವ ವಿದ್ಯಾನಿಲಯದಲ್ಲಿನ, ತುಮಕೂರು ರೀಸರ್ಚ್ ಫೌಂಡೇಷನ್ @ 2047 ನಿಯೋಗ, ಬಿಹಾರ ಮ್ಯೂಸಿಯಂಗೆ ಭೇಟಿ ನೀಡಲು ಚಿಂತನೆ ನಡೆಸಲಾಗಿದೆ. ಅವರ ಸ್ವಂತ ಖರ್ಚಿನಲ್ಲಿ ಬರುವವರು ಸಂಪರ್ಕಿಸಲು ಮನವಿ ಮಾಡಲಾಗಿದೆ.
–ಕುಂದರನಹಳ್ಳಿ ರಮೇಶ್.