4th March 2025
Share

TUMAKURU:SHAKTHIPEETA FOUNDATION

   ಕೃಷಿ ತಂತ್ರಜ್ಞರ ಸಂಸ್ಥೆ ಮತ್ತು ಕೆಪೆಕ್ ಸಂಸ್ಥೆ ವತಿಯಿಂದ ದಿನಾಂಕ:19.02.2025 ರಂದು ಬೆಂಗಳೂರಿನ ಕ್ವೀನ್ ರಸ್ತೆಯಲ್ಲಿ ಇರುವ ಕೃಷಿ ತಂತ್ರಜ್ಞರ ಸಂಸ್ಥೆಯ ಡಾ. ಹೆಚ್.ಆರ್. ಅರಕೇರಿ ಸಭಾಂಗಣದಲ್ಲಿ ನಡೆದ ಸಾವಯವ ಕೃಷಿ, ಉತ್ಪಾದನೆ, ಪ್ರಮಾಣೀಕರಣ,ಮೌಲ್ಯವರ್ಧನೆ, ಮಾರುಕಟ್ಟೆ ಮತ್ತು ರಫ್ತು’ ಕಾರ್ಯಾಗಾರದಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ, ಕರ್ನಾಟಕ ಕೃಷಿ ಬೆಲೆ ಆಯೋಗದ  ಅಧ್ಯಕ್ಷರಾದ  ಶ್ರೀ ಡಾ.ಅಶೋಕ ದಳವಾಯಿರವರೊಂದಿಗೆ ದಿನಾಂಕ:25.02.2025 ರಂದು ಬೆಂಗಳೂರಿನ ಅವರ ಕಚೇರಿಯಲ್ಲಿ ಸಮಾಲೋಚನೆ ನಡೆಸಲಾಯಿತು.

  ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿಯೂ, ಸಾವಯವ ಕೃಷಿಕರ ಬೆಳೆ ಆಧಾರಿತ ಸಂಶೋಧನೆ ನಡೆಸಿ, ಖರ್ಚು ವೆಚ್ಚಗಳ ಅವಲೋಕನದೊಂದಿಗೆ, ಸಾವಯವ ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡಲು ‘ರೈತರ, ವಿಜ್ಞಾನಿಗಳ ಮತ್ತು ಅಧಿಕಾರಿಗಳ  ಸಹಭಾಗಿತ್ವದೊಂದಿಗೆ ವಿಶೇಷ ಯೋಜನೆ’ ಜಾರಿಗೊಳಿಸಲು ಚರ್ಚಿಸಲಾಯಿತು.

  ಕಾರ್ಯಾಗಾರದಲ್ಲಿ ಮೂಡಿ ಬಂದ ಎಲ್ಲರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲು ಕರಡು ಪ್ರತಿ ಸಿದ್ಧಪಡಿಸಿ, ಡಾ.ಅಶೋಕ ದಳವಾಯಿರವರ ಅಧ್ಯಕ್ಷತೆಯಲ್ಲಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಸಾವಯವ ಕೃಷಿಕರೊಂದಿಗೆ ಮತ್ತೊಮ್ಮೆ ಸಭೆ ನಡೆಸಿ ಅಂತಿಮ ಗೊಳಿಸಲು ಯೋಚಿಸಲಾಯಿತು.

  ಕರ್ನಾಟಕ ರಾಜ್ಯದಲ್ಲಿ ಬೆಳೆಯುವ ಆಹಾರ ಬೆಳೆ, ವಾಣಿಜ್ಯ ಬೆಳೆ, ಔಷಧಿಗಿಡಗಳು, ಕಾಡು ಕೃಷಿ, ಸೇರಿದಂತೆ ಪ್ರತಿಯೊಂದು ಬೆಳೆವಾರು 1947 ಕ್ಕಿಂತ ಮೊದಲು ಯಾವ ಪದ್ಧತಿ ಇತ್ತು, 1947 ರಿಂದ 2024 ರವರೆಗೆ ಯಾವ ಪದ್ಧತಿ ಬಂತು, 2047 ರ ವೇಳೆಗೆ ಯಾವ ನಿರ್ಧಿಷ್ಠ ಗುರಿಯೊಂದಿಗೆ ಅಭಿವೃದ್ಧಿ ಹೆಜ್ಜೆ ಹಾಕಬೇಕು ಎಂಬ ಬಗ್ಗೆ ಸಂಶೋಧನಾ ವರಧಿಗಳ ಆಧಾರದಲ್ಲಿ ಮುಂದುವರೆಯುವ ಅವಶ್ಯಕತೆಯ ಬಗ್ಗೆಯೂ ಚಿಂತನೆ ನಡೆಯಿತು.

ಸಾವಯವ ಕೃಷಿ, ಉತ್ಪಾದನೆ, ಪ್ರಮಾಣೀಕರಣ,ಮೌಲ್ಯವರ್ಧನೆ, ಮಾರು ಕಟ್ಟೆ ಮತ್ತು ರಫ್ತು’ ತಂತ್ರಗಾರಿಕೆ, ರಾಜ್ಯದ ಪ್ರತಿಯೊಂದು ಗ್ರಾಮ ಮತ್ತು ಬಡಾವಣೆವರೆಗೂ ತಲುಪಬೇಕು. ಸಾವಯವ ಕೃಷಿಕರ ನೂರಾರು ಸೋಶಿಯಲ್ ಮೀಡಿಯಾ ಗುಂಪುಗಳಿವೆ, ಸಾವಿರಾರು ಜನರು ಮೌನ ಆಂದೋಲನ ಕೈಗೊಂಡಿದ್ದಾರೆ, ಎಲ್ಲರ ಅಭಿಪ್ರಾಯಗಳೊಂದಿಗೆ ರೈತರ ಆದಾಯ ದುಪ್ಪಟ್ಟು ಮಾಡುವುದರ ಜೊತೆಗೆ, ಗ್ರಾಹಕರಿಗೂ ವಿಷಮುಕ್ತ ಆಹಾರ ಪಾರದರ್ಶಕ ರೀತಿಯಲ್ಲಿ, ನೇರವಾಗಿ ಮನೆ ಬಾಗಿಲಿಗೆ ತಲುಪುವ ವ್ಯವಸ್ಥೆ ಬಗ್ಗೆಯೂ ವಿಶೇಷ ಗಮನ ಹರಿಸಲಾಯಿತು.

ನಂಬರ್ ಒನ್ ಕರ್ನಾಟಕ @ 2047 ಪೂರಕವಾಗಿ, ಪ್ರತಿಯೊಬ್ಬ ವ್ಯಕ್ತಿಯ, ಪ್ರತಿಯೊಂದು ಕುಟುಂಬದ ಆದಾಯ/ಆರೋಗ್ಯ ಸಧೃಢವಾಗಿಸಲು ವಿಷಮುಕ್ತ ಪಂಚಭೂತ’ ಆಂದೋಲನ ಮೊದಲ ಹೆಜ್ಜೆಯಾಗಲಿದೆ.