TUMAKURU:SHAKTHI PEETA FOUNDATION
ದಿನಾಂಕ:01.08.1988 ರಂದು ಕುಂದರನಹಳ್ಳಿ ಗಂಗಮಲ್ಲಮ್ಮನ ದೇವರನ್ನು ಪೂಜಿಸಿ, ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ನನ್ನ ಹುಟ್ಟೂರು ಕುಂದರನಹಳ್ಳಿಗೆ ಹೊಂದಿಕೊಂಡಿರುವ ಬಿದರೆಹಳ್ಳಕಾವಲ್ ನ ಸರ್ಕಾರಿ ಜಮೀನಿನನಲ್ಲಿ ಯಾವುದಾದರೂ ಒಂದು ಬೃಹತ್ ಕೈಗಾರಿಕೆ ಸ್ಥಾಪಿಸಬೇಕೆಂಬ ನನ್ನ ಕನಸಿಗೆ ಮುಕ್ತಿ ಸಿಕ್ಕಿದ್ದು, ಸುಮಾರು 6400 ಕೋಟಿ ವೆಚ್ಚದ, ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಸ್ವಾಮ್ಯದ ಹೆಚ್.ಎ.ಎಲ್ ಘಟಕ ಸ್ಥಾಪನೆ ಆದಾಗ.
ತುಮಕೂರಿನ ಮಾಜಿಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಒಡನಾಟ ನನ್ನ ಜೀವನದಲ್ಲಿ ಮರೆಯಲಾಗದ ಅನುಭವ, ಅವರ ಸಹಕಾರದಿಂದ ಹೆಚ್.ಎ.ಎಲ್ ಘಟಕ, ಕುಂದರನಹಳ್ಳಿ ಗ್ರಾಮದ ಅಭಿವೃದ್ಧಿ ಯೋಜನೆಗಳು, ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ಶ್ರೀ ತೀರ್ಥರಾಮೇಶ್ವರ ವಜ್ರದ ಅಭಿವೃದ್ಧಿ ಯೋಜನೆಗಳು, ತುಮಕೂರು ನಗರದ ಅಭಿವೃದ್ಧಿ ಯೋಜನೆಗಳು, ತುಮಕೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಯೋಜನೆಗಳು, ತುಮಕೂರು ಜಿಲ್ಲೆಯ ಅಭಿವೃದ್ಧಿ ಯೋಜನೆಗಳು,ಕರ್ನಾಟಕ ರಾಜ್ಯದ ಅಭಿವೃದ್ಧಿ ಯೋಜನೆಗಳು, ಭಾರತ ದೇಶದ ಅಭಿವೃದ್ಧಿ ಯೋಜನೆಗಳಿಗೆ ಶ್ರಮಿಸುವಷ್ಟು ಜ್ಞಾನ ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ.
ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಒಡನಾಟ ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಜೊತೆಗೆ, ಕೇಂದ್ರ ಸರ್ಕಾರದ ನದಿಜೋಡಣೆ ಯೋಜನೆಗಳ ಬಗ್ಗೆ ಮಾತನಾಡುವಷ್ಟು ಜ್ಞಾನ ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ.
ಮಹಾರಾಷ್ಟ್ರದ ಕನ್ನೇರಿ ಮಠದ ಶ್ರೀಗಳ ಒಡನಾಟ ಕೃಷಿ ಆಶ್ರಮಗಳ ಬಗ್ಗೆ ಮಾತು ಆರಂಭಿಸುವಷ್ಟು ಜ್ಞಾನ ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ.
ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿರುವ ಶ್ರೀಮತಿ ಶಾಲಿನಿರಜನೀಶ್ ರವರ ಒಡನಾಟ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ಕಾರ್ಯತಂತ್ರದ ಬಗ್ಗೆ ಜ್ಞಾನ ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ.
ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಡೃಢ ನಿರ್ಧಾರದಿಂದ ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಸ್ಥಾಪನೆಯಾಗಿದೆ.
ಈ ಕೆಳಕಂಡ 3 ಸಂಸ್ಥೆಗಳೊಂದಿಗೆ ಎಂ.ಓ.ಯು ಮಾಡಿಕೊಂಡು, ರಾಜ್ಯಾದ್ಯಾಂತ ರಚಿಸುತ್ತಿರುವ ಕೃಷಿ ಆಶ್ರಮಗಳ ಸಹಭಾಗಿತ್ವದಲ್ಲಿ, ವಿಧ್ಯಾರ್ಥಿಗಳ ನೇತೃತ್ವದಲ್ಲಿ ನಂಬರ್ ಒನ್ ಕರ್ನಾಟಕ @ 2047 ನಮ್ಮ ಗುರಿ ತಲುಪುವ ಮಹದಾಸೆ ನನ್ನದಾಗಿದೆ.
1. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ, ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು.
2. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ.
3. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಯೋಜನೆ, ಕಾರ್ಯಕ್ರಮ ಮತ್ತು ಸಾಂಖ್ಯಿಕ ಇಲಾಖೆ. , ಕರ್ನಾಟಕ ಸರ್ಕಾರ.
ಕೃಷಿ ಆಶ್ರಮಗಳ ಹರಿಕಾರರಾದ ಡಾ.ಬಿ.ಎಂ.ನಾಗಭೂಷಣ್ ರವರು ದಿನಾಂಕ:31.07.2025 ರಂದು ನಿವೃತ್ತಿ ನಂತರದ, ಮುಂದುವರೆದ ವೃತ್ತಿಯ ನಿವೃತ್ತಿ ಪಡೆಯುತ್ತಿದ್ದಾರೆ. ಅವರನ್ನು ಈ ಎಲ್ಲಾ ಯೋಜನೆಗಳ ಅಧ್ಯಯನ ಕೇಂದ್ರಗಳ ನಿರ್ದೇಶಕರಾಗಿ/ಮುಖ್ಯಸ್ಥರಾಗಿ ಮಾಡಿ, ಅಗತ್ಯವಿರುವ ನೌಕರರನ್ನು ನೇಮಿಸಿಕೊಂಡು, ಕೃಷಿ ಆಶ್ರಮಗಳ ಸಹಭಾಗಿತ್ವದಲ್ಲಿ ಶ್ರಮಿಸಲು/ಮುಂದುವರೆಸಲು ಯೋಚಿಸಲಾಗಿದೆ.
ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಾಮುನುಸಾರ, ವೇತನ ಸಹಿತ ತುಮಕೂರಿನ ಶಕ್ತಿಭವನದಲ್ಲಿ, ವಸತಿ ಸಹಿತ ರಾಜ್ಯ ಮಟ್ಟದ ಸುಸಜ್ಜಿತ ಕಚೇರಿ, ತುಮಕೂರು ಇಂಡಸ್ಟ್ರಿಯಲ್ ನೋಡ್‍ನಲ್ಲಿ ರೈತರ ಮೌಲ್ಯವರ್ಧೀತ ಉತ್ಪನ್ನಗಳ ರಫ್ತುಭವನ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೋಕು, ಬಗ್ಗನಡುವಿನಲ್ಲಿ ಬಹುಪಯೋಗಿ ಶಕ್ತಿಪೀಠ ಕ್ಯಾಂಪಸ್ ಹೊಣೆಗಾರಿಕೆ ನೀಡುವ ಬಗ್ಗೆ ಅವರೊಂದಿಗೆ ಚರ್ಚೆ ಆರಂಭವಾಗಿದೆ.
ದಿನಾಂಕ:01.08.2025 ರಂದು, ವಿಶ್ವದ 108 ಶಕ್ತಿಪೀಠಗಳಿಗೆ ಪೂಜೆ ಸಲ್ಲಿಸಿ, ಅಧಿಕೃತವಾಗಿ, ಕಚೇರಿ, ರಫ್ತುಭವನ, ಕ್ಯಾಂಪಸ್‍ಗಳಿಗೆ, ದುಡಿಮೆ ಬಂದರೆ ಮಾತ್ರ, ಲೋಕೊಪಯೋಗಿ ಇಲಾಖೆ ನಿಗಧಿ ಪಡಿಸುವ ಬಾಡಿಗೆ ಪಡೆಯುವ ಮತ್ತು ದುಡಿಮೆ ಬಂದರೆ ಮಾತ್ರ ವೇತನ ಪಡೆಯುವ ಎಂ.ಓ.ಯು ನೊಂದಿಗೆ ನಂಬರ್ ಒನ್ ಕರ್ನಾಟಕ @ 2047 ನಮ್ಮ ಗುರಿಗೆ ಅಧಿಕೃತವಾಗಿ ಚಾಲನೆ ನೀಡುವ ಗುರಿಹೊಂದಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ, ಸಿ.ಎಸ್.ಫಂಡ್ ಇತರೆ ಮೂಲಗಳಿಂದ, ಅಗತ್ಯವಿರುವ ಆರ್ಥೀಕ ನೆರವು ದೊರಕಿಸುವ ಷರತ್ತು ಸಹಿತ, ಎಂ.ಓ.ಯು ಮಾಡಿಕೊಂಡು ಆರಂಭದಲ್ಲಿ ನಮ್ಮದೇ ಖರ್ಚುವೆಚ್ಚ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡುವ ಗುರಿಯೂ ಇದೆ.
ಈ ಬಗ್ಗೆ ಕೃಷಿ ಆಶ್ರಮಗಳು ಸೇರಿದಂತೆ, ನಂಬರ್ ಒನ್ ಕರ್ನಾಟಕ @ 2047 ಗುರಿಗೆ ಸಹಕಾರ ನೀಡಲು ಆಸಕ್ತಿ ಇರುವವರು ಖುದ್ದಾಗಿ ಮುಕ್ತವಾಗಿ ಚರ್ಚಿಸಲು ಬಹಿರಂಗ ಮನವಿ ಮಾಡಲಾಗಿದೆ.
ಮೊದಲು ಕೃಷಿ ಆಶ್ರಮಗಳ ಹರಿಕಾರರಾದ ಡಾ.ಬಿ.ಎಂ.ನಾಗಭೂಷಣ್‍ರವರ ಕುಟುಂಬದವರೊಂದಿಗೆ ಸಮಾಲೋಚನೆ ಮಾಡಲಾಗುವುದು.