TUMAKURU:SHAKTHI PEETA FOUNDATION
ದಿನಾಂಕ: 05.08.2025 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಔಷಧಿಗಿಡಗಳ ಪ್ರಾಧಿಕಾರದಿಂದ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಪರಿಚಯವಾಯಿತು. ಅವರ ಮಾತುಗಳನ್ನು ಕೇಳಿದ ನಾನು, ದಿನಾಂಕ: 11.08.2025 ರಂದು ಅವರ ಕಚೇರಿಗೆ ಹೋಗಿ ಅವರ ಕನಸುಗಳ ಬಗ್ಗೆ ಸಮಾಲೋಚನೆ ಮಾಡಿದೆನು.

ಅಂದು ಅವರೊಂದಿಗೆ ಬೆಂಗಳೂರಿನಲ್ಲಿ ಪಶ್ಚಿಮಘಟ್ಟಗಳ ಮ್ಯೂಸಿಯಂ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಿದೆವು. ದಿನಾಂಕ: 25.08.2025 ರಂದು ಮತ್ತೆ ಅವರ ಕಚೇರಿಗೆ ಭೇಟಿ ನೀಡಿ, ಪಶ್ಚಿಮಘಟ್ಟಗಳ ಮ್ಯೂಸಿಯಂ ನಿರ್ಮಾಣದ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಸುಧೀರ್ಘ ಸಮಾಲೋಚನೆ ಮಾಡಿದೆವು.
ಪಶ್ಚಿಮಘಟ್ಟಗಳ ಮ್ಯೂಸಿಯಂ ಪರಿಕಲ್ಪನಾ ವರಧಿ ಸಿದ್ಧಪಡಿಸಿ, ಮೊದಲು ಬೆಂಗಳೂರಿನಲ್ಲಿ ಅಥವಾ ಬೆಂಗಳೂರು ಸುತ್ತ-ಮುತ್ತ ಪಶ್ಚಿಮಘಟ್ಟಗಳ ಮ್ಯೂಸಿಯಂ ನಿರ್ಮಾಣ ಮಾಡಲು ಅಗತ್ಯ ಇರುವ ಜಮೀನು ಕಾಯ್ದಿರಿಸಲು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಿರಿ.
ನಂತರ ಸೂಕ್ತ ಜಮೀನು ನೋಡಿಕೊಂಡು ವಿವರವಾದ ಯೋಜನಾ ವರಧಿ ಸಿದ್ಧಪಡಿಸಲು ನಿರ್ಧರಿಸಿದೆವು. ಬೆಂಗಳೂರಿನಲ್ಲಿ KARNATAKA WESTERN GHATS CONSERVATION TASK FORCE ವತಿಯಿಂದ WESTERN GHATS MUSEUM ಆರಂಭಿಸಲು, ಸೂಕ್ತ ಜಮೀನು ಮಂಜೂರು ಮಾಡಲು ದಿನಾಂಕ: 04.09.2025 ನೇ ಗುರುವಾರ ಪತ್ರ ಬರೆದು ಪ್ರತಿಯನ್ನು ನನಗೆ ಕಳುಹಿಸುವುದಾಗಿ ಅಧ್ಯಕ್ಷ ಶ್ರೀ MOHAMMED TABREZ ALAM SHARIFF ತಿಳಿಸಿದ್ದಾರೆ.
ಅವರ ಪತ್ರ ಬಂದ ಮೇಲೆ ಸರ್ಕಾರದಿಂದ ಜಮೀನು ಮಂಜೂರು ಮಾಡುವವರೆಗೂ ನಿರಂತರವಾಗಿ, ಅವರೊಂದಿಗೆ ಶಕ್ತಿಪೀಠ ಫೌಂಡೇಷನ್ ಶ್ರಮಿಸಲಿದೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯ 10 ಜಿಲ್ಲೆಗಳ ಕೃಷಿ ಆಶ್ರಮಗಳು ಈ ಯೋಜನೆಗೆ ಸಂಪೂರ್ಣ ಸಹಕಾರ ನೀಡಲು ಬಹಿರಂಗ ಮನವಿ ಮಾಡಲಾಗಿದೆ.
ಆಸಕ್ತರು ಸಂಪರ್ಕಿಸಲು ಈ ಮೂಲಕ ಕೋರಿದೆ.