TUMKURU:SHAKTHIPEETA FOUNDATION
ಹುಬ್ಬಳ್ಳಿಯ ಕೆ.ಎಲ್.ಇ. ಟೆಕ್ನಾಲಾಜಿಕಲ್ ಯೂನಿವರ್ಸಿಟಿಯ ಪ್ರೋ.ಚಾನ್ಸಲರ್ ಡಾ. ಆಶೋಕ್ ಎಸ್ ಶೆಟ್ಟರ್ ರವರೊಂದಿಗೆ ‘ಕರ್ನಾಟಕ ರಾಜ್ಯದ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ’ಯ ಬಗ್ಗೆ ಸುಧೀರ್ಘ ಸಮಾಲೋಚನೆ ನಡೆಯಿತು. ಅವರು ಈ ಕಾರ್ಯಪಡೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.
ನನಗೆ ಇದ್ದ ಗೊಂದಲಗಳು, ಅರ್ಥವಾಗದೆ ಇದ್ದ ಅಂಶಗಳ ಬಗ್ಗೆ ಅವರೊಂದಿಗೆ ಮುಖಾಮುಖಿ ಚರ್ಚೆ ನಡೆ¸ಲಾಯಿತು. ಅವರು ಹೇಳಿದ ಎಲ್ಲಾ ಅಂಶಗಳು ನನಗೆ ಖುಷಿ ಎನಿಸಿತು.
ನಾನು ಸಿದ್ಧಪಡಿಸಿದ್ದ ‘ನಂಬರ್ ಒನ್ ಕರ್ನಾಟಕ @ 2047 ಮತ್ತು ಕೃಷಿ ಆಶ್ರಮ’ಗಳ ಪಿಪಿಟಿ ಯ ಎಲ್ಲಾ ಅಂಶಗಳನ್ನು ಅವರು ಗಮನಿಸಿದರು, ಅವರು ಹೇಳಬೇಕಾದ್ದನ್ನು ನೇರವಾಗಿ ಹೇಳಿದ್ದೂ ಹರ್ಷ ತಂದಿದೆ.
ಅವರ ಮನದಾಳದ ಮಾತುಗಳು ಮತ್ತು ಅವರ ಮುಖಭಾವನೆಯಂತೆ ನನಗೆ ಅನಿಸಿದ ಅಂಶಗಳು.
ಇದು ಅಷ್ಟು ಸುಲಭದ ಪರಿಕಲ್ಪನೆಯಲ್ಲ, ಸುಲಭವೂ ಹೌದು, ಕಷ್ಟವೂ ಹೌದು, ರಾಜ್ಯದಲ್ಲಿ ಯಾವುದೇ ಸರ್ಕಾರವಿರಲಿ, ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ, ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆ ಸದಸ್ಯರ ಸಹಕಾರದೊಂದಿಗೆ, ರಾಜ್ಯದ ಮುಖ್ಯಮಂತ್ರಿಯವರು ಮತ್ತು ಪ್ರಧಾನ ಮಂತ್ರಿಯವರ ಸಹಕಾರ ಬೇಕು.
ಗ್ರಾಮ ಆqಳಿತ ಅಧಿಕಾರಿಯಿಂದ – ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ- ಕೇಂದ್ರ ಸರ್ಕಾರದ ಕ್ಯಾಬಿನೇಟ್ ಕಾರ್ಯದರ್ಶಿಯವರಿಗೂ, ನೇರ ಸಂಪರ್ಕ ಇಟ್ಟುಕೊಂಡು, ಯಾವುದೇ ಪಲಾಪೇಕ್ಷೆ ಇಟ್ಟು ಕೊಳ್ಳದೆ, ಹಣದ ಆಮಿಷ, ಅಧಿಕಾರದ ಆಮಿಷ ಬಿಟ್ಟು ಎಲ್ಲರೊಂದಿಗೆ ಕ್ರೀಡಾ ಮನೋಭಾವದಿಂದ ಶ್ರಮಿಸಿದರೆ, ವಿಶ್ವಕ್ಕೆ ಮಾದರಿಯಾಗುವ ಯೋಜನೆ ಇದಾಗಲಿದೆ.
ಎಲ್ಲಾ ವಿಶ್ವ ವಿದ್ಯಾನಿಲಯಗಳು, ಅವರ ಕಾರ್ಯವ್ಯಾಪ್ತಿಯ ಪ್ರತಿಯೊಂದು ಗ್ರಾಮ/ಬಡಾವಣೆಯಲ್ಲಿ ವಿದ್ಯಾರ್ಥಿಗಳ ಮೂಲಕ ಪ್ರಾಜೆಕ್ಟ್ ವರ್ಕ್, ಇಂಟರ್ನ್ ಷಿಪ್, ಆಕ್ಟಿವಿಟಿ ಪಾಯಿಂಟ್ಸ್, ಪಿಎಚ್‍ಡಿ, ಐಎಸ್ ಆರ್‍ವರ್ಕ್, ಎನ್.ಎಸ್.ಎಸ್ ವರ್ಕ್, ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಅಂಶಗಳನ್ನು ಪ್ರಾಮಾಣಿಕವಾಗಿ ಮಾಡಿದರೆ ಇದೊಂದು ಸಮುದಾಯದ ಯೋಜನೆಯಾಗಲಿದೆ ಎಂಬಂತೆ ಇತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಣ್ಣನವರು ಸಭೆಯ ನಂತರ ಹೇಳಿದ ಮಾತು ಇಬ್ಬರ ಮಾತುಗಳು ‘ಎ.ಕೆ-47 ಗನ್‍ನಂತೆ ನೇರವಾಗಿ ಇತ್ತು’ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.

ಸಭೆಯ ನಂತರ ಗ್ರೂಪ್ ಪೋಟೋ ತೆಗೆಸಿದಾಗ, ಡಾ. ಆಶೋಕ್ ಎಸ್ ಶೆಟ್ಟರ್‍ರವರು ನನ್ನೊಬ್ಬನನ್ನೇ ಕರೆದು ಜೊತೆಯಲ್ಲಿ ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಳ್ಳುವಾಗ, ‘ಎಷ್ಟು ಆಳವಾಗಿ ಆಧ್ಯಯನ ಮಾಡಿದ್ದೀರಿ’ ಎಂದು ಹೇಳಿದ ಮಾತು ನನಗೆ ಅತೀವ ಆನಂದವಾಯಿತು.

ಗುಬ್ಬಿಯ ಸಿ.ಐ.ಟಿ ಕಾಲೀಜಿನ ಸಹಭಾಗಿತ್ವದಲ್ಲಿ ನಡೆಯುವ ಕಾರ್ಯಾಗಾರಕ್ಕೆ ಆಹ್ವಾನಿಸಿದಾಗ ಅವರು ಭಾಗವಹಿಸುವುದಾಗಿ ಹೇಳಿದರು.
ಡಾ.ನಾಗಭೂಷಣ್‍ರವರು ಕೃಷಿ ಆಶ್ರಮಗಳ ವಿಷಯಗಳನ್ನೂ, ಡಾ.ಜಗನ್ನಾಥ್‍ರಾವ್‍ರವರು ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಯ ಮಹತ್ವಗಳನ್ನು ಅವರೊಂದಿಗೆ ಹಂಚಿಕೊಂಡರು.
ದಿನಾಂP:À06.09.2025 ರಂದು ಹುಬ್ಬಳ್ಳಿಯ ಅವರ ಕಚೇರಿಯಲ್ಲಿ ನಡೆದ ಚರ್ಚೆಯಲ್ಲಿ ನಿಯೋಗದಲ್ಲಿ ನಮ್ಮ ಜೊತೆ ಹುಬ್ಬಳ್ಳಿಯ ನಾಗರಾಜ್ ಜಾಲಿಹಳ್ಳಿರವರು, ಹೊಸಪೇಟೆ ಜಿಲ್ಲೆಯ ಡಾ.ನಾಗಭೂಷಣ್‍ರವರು, ಬಳ್ಳಾರಿ ಜಿಲ್ಲೆಯ ಡಾ.ಜಗನ್ನಾಥ್‍ರಾವ್‍ರವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಣ್ಣನರವರು, ತುಮಕೂರು ಜಿಲ್ಲೆಯ ಸುಹೃತ್‍ರವರು, ಧಾರವಾಡದ ಶಿವಪ್ರಸಾದ್‍ರವರು, ಅಪೂರ್ವ ಶಿವಪ್ರಸಾದ್‍ರವರು ಇದ್ದರು.