15th September 2025
Share

TUMAKURU:SHAKTHIPEETA FOUNDATION

ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕೈಪಿಡಿ-2025  ರ ಬಗ್ಗೆ, ಎಲ್ಲಾ ರಾಜಕೀಯ ಪಕ್ಷಗಳು, ಒಂದೊಂದು ಸಮಿತಿ ರಚಿಸಿ, ಅಧ್ಯಯನ ಮಾಡಿ, ಸರ್ಕಾರಕ್ಕೆ ಸೂಕ್ತ ಸಕಾರತ್ಮಕ ಸಲಹೆಗಳನ್ನು  ಲಿಖಿತವಾಗಿ ನೀಡುವುದು ಅಗತ್ಯವಾಗಿದೆ.

ರಾಜ್ಯ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಸಮೀಕ್ಷಾ ಕೈಪಿಡಿ-2025 ರ ಅಂಶಗಳ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರುವುದು ಸೂಕ್ತವಾಗಿದೆ. ಇಲ್ಲಿ ಯಾರಿಗೂ ಪ್ರತಿಷ್ಟೆ ಬರಬಾರದು. ರಾಜಕೀಯ ಬೆರೆಸ ಬಾರದು.

ನಮ್ಮ ಸಂಸ್ಥೆ ಮೂಲಕ ಸರ್ಕಾರಕ್ಕೆ ಕೆಳಕಂಡ ಮನವಿ ಸಲ್ಲಿಸಲಾಗಿದೆ. ಸಾಕಷ್ಟು ಜ್ಞಾನಿಗಳು ಸಲಹೆ ನೀಡುತ್ತಿದ್ದಾರೆ. ಇನ್ನೂ ಸಮಯ ಬೇಕಾಗಿದೆ. ಆದರೆ ಶೀಘ್ರವಾಗಿ ಸಮೀಕ್ಷೆ ಆರಂಭವಾಗುವ ಹಿನ್ನಲೆಯಲ್ಲಿ ಈ ಮನವಿ ಸಲ್ಲಿಸಲಾಗಿದೆ.