TUMAKURU:SHAKTHIPEETA FOUNDATION
ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯ ಆವರಣದಲ್ಲಿರುವ ಸರ್ಕಾರಿ ಕರಾಬು ಜಮೀನಿನಲ್ಲಿ ಒಂದು ಅದ್ಭುತ ಕಾಡು ತೋಟ ತಲೆ ಎತ್ತಿದೆ. ಪಂಚವಟಿ ಗಿಡಗಳನ್ನು ಹಾಕುವ ಮೂಲಕ 2023 ರಲ್ಲಿ ಚಾಲನೆ ನೀಡಲಾಗಿದೆ.
ವಿಜಯನರ ಜಿಲ್ಲೆಯಶ್ರೀ ಶ್ರೀನಿವಾಸರಾವ್ ದೇಶಪಾಂಡೆಯವರ ಮತ್ತು ಬಿಹಾರ ರಾಜ್ಯದ ಶ್ರೀ ಸುನಿಲ್ ಕುಮಾರ್ ಶ್ರೀವತ್ಸ ರವರ ಕಾಯಕ ಅದ್ಭುತವಾಗಿದೆ.
ಇವರ ಜೊತೆಗೆ ಶ್ರಮದಾನ ಮಾಡುವ, ಹತ್ತಾರು ಜನರು ಇಲ್ಲಿ ವಿವಿಧ ರೀತಿಯ ಗಿಡಗಳನ್ನು ಹಾಕುತ್ತಿದ್ದಾರೆ. ವಿವಿಧ ಪ್ರಾತ್ಯಾಕ್ಷಿಕೆ ಪ್ರದರ್ಶನ ಮಾಡುತ್ತಿದ್ದಾರೆ, ಅವರೆಲ್ಲರ ವಿವರಗಳ ಪಟ್ಟಿ ಮಾಡಲಾಗುತ್ತಿದೆ. ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು.
ಪಿಜೆಸಿ ನಿವಾಸಿ ಮಂಡ್ಯ ಜಿಲ್ಲೆಯ ಕೃಷಿ ವಿಜ್ಞಾನಿ ಡಾ.ಚಂದ್ರಶೇಖರ್ ರವರು, ಶಕ್ತಿಪೀಠ ಕ್ಯಾಂಪಸ್ ನಲ್ಲಿ 1120 ಪ್ರಭೇದಗಳ ಪ್ರಾತ್ಯಾಕ್ಷಿಕೆ ಮಾಡುವ ಮಹತ್ಕಾರ್ಯಕ್ಕೆ, ನಮ್ಮ ಒಂದು ತಂಡದ ವತಿಯಿಂದ ತಲಾ 2 ಗಿಡಗಳಂತೆ 2240 ಗಿಡಗಳನ್ನು ದಾನವಾಗಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ ರೀತಿ ವಿಶಿಷ್ಠವಾಗಿತ್ತು. ಅವರ ಸಂದರ್ಶನವನ್ನು ವಿವರವಾಗಿ ಪ್ರಕಟಿಸಲಾಗುವುದು.
ಯಾವ ಗಿಡ ಬೇಕು, ಎಲ್ಲಿ ಸಿಗುತ್ತವೆ, ಬೆಲೆ ಎಷ್ಟು ಎಂಬ ಬಗ್ಗೆ ಮಾಹಿತಿ ನೀಡಿ, ನಂತರ ಕಾರ್ಯ ಪ್ರವೃತ್ತವಾಗುತ್ತೇವೆ. ಪಂಚವಟಿ ಪಾರ್ಕ್‍ನಲ್ಲೂ ಇನ್ನೂ ಹಲವಾರು ಜಾತಿಯ ಗಿಡಗಳನ್ನು ಹಾಕಲು ನಿರ್ಧರಿಸಲಾಗಿದೆ. ಇದೊಂದು ‘ನಗರ ಮಟ್ಟದ ಕೃಷಿ ಆಶ್ರಮ’ ಪರಿಕಲ್ಪನೆಯಾಗಲಿದೆ.
ನನ್ನ ಜೊತೆ ಮಂಡ್ಯ ಜಿಲ್ಲೆಯ ಕೃಷಿ ವಿಜ್ಞಾನಿ ಡಾ.ಚಂದ್ರಶೇಖರ್ ರವರು, ವಿಜಯನರ ಜಿಲ್ಲೆಯ ಶ್ರೀನಿವಾಸರಾವ್ ದೇಶಪಾಂಡೆಯವರು, ತುಮಕೂರು ಜಿಲ್ಲೆಯ ಶ್ರೀ ಸಿದ್ಧಗಂಗಪ್ಪನವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ರಾಮಚಂದ್ರಪ್ಪನವರು ಇದ್ದರು.
