TUMAKURU:SHAKTHI PEETA FOUNDATION
ಬೆಂಗಳೂರು ಉತ್ತರ ಲೋಕಸಭಾ ಕೇತ್ರದ ವ್ಯಾಪ್ತಿಯ, ಯಶವಂತಪುರÀ ವಿಧಾನಸಭಾ ಕೇತ್ರದ, ಕೆ.ಗೊಲ್ಲಹಳ್ಳಿ ಗ್ರಾಮಪಂಚಾಯಿತಿಯ, ಕುಂಬಳಗೋಡು ಸಮೀಪದ ಗೋಣಿಪುರ ಗ್ರಾಮzಲ್ಲಿ, ಶ್ರೀ ಲೋಕೇಶ್, ಶ್ರೀ ಮಧುರನಾಥ್, ಶ್ರೀ ಶಿವಕುಮಾರ್ ಮತ್ತು ಅವರ ತಂಡದ ನೇತೃತ್ವದಲ್ಲಿ, ದಿನಾಂಕ:25.10.2025 ರಂದು ನುಗ್ಗೆ ಗಿಡಕ್ಕೆ ನೀರು ಎರೆಯುವ ಮೂಲಕ ‘ನುಗ್ಗೆ ಪ್ರಪಂಚ’ ಕ್ಕೆ ಚಾಲನೆ ನೀಡಲಾಗಿದೆ.
ಡಾ.ಸ್ಮೀತಾರವರು ಅವರ ಜೀವನದ ಇತಿಹಾಸದಲ್ಲಿಯೇ, ಒಬ್ಬರು ಕೃಷಿಕರ ತೋಟದಲ್ಲಿ 84 ಸ್ಲೈಡ್ ಗಳ ಪಿಪಿಟಿಯನ್ನು ನುಗ್ಗೆ ಬೆಳೆಗಾರರ, ಸಂಶೋಧಕರ, ಉಧ್ಯಮಿಗಳಿಗೆ ಪ್ರದರ್ಶನ ಮಾಡಿ, ಉಪನ್ಯಾಸ ಮಾಡಿ, ‘ನುಗ್ಗೆ ಕನಸುಗಾರರಿಗೆ ಜ್ಞಾನದಾನ’ ಮಾಡುವ ಮೂಲಕ, ಇತಿಹಾಸ ನಿರ್ಮಿಸಿದರು.
ಈ ಸಭೆಯಲ್ಲಿ ‘ನುಗ್ಗೆ ಪ್ರಪಂಚ’ ದ ಬಗ್ಗೆ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ, ಆಕ್ಷನ್ ಪ್ಲಾನ್ ಸಹಿತ ಶೀಘ್ರದಲ್ಲಿ ವರದಿ ಪ್ರಕಟಿಸಲಾಗುವುದು.
ಸಭೆಯಲ್ಲಿ ಈ ಪೋಟೋದಲ್ಲಿರುವ ಎಲ್ಲರೂ ಭಾಗವಹಿಸಿದ್ದರು.

