12th February 2026
Share

TUMAKURU:SHAKTHI PEETA FOUNDATION

ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ, ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ರವರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಕೃಷಿ ಆಶ್ರಮ, ಕೃಷಿ ಪ್ರವಾಸೋಧ್ಯಮ, 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಬಗ್ಗೆ ಸ್ಪಂಧಿಸಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ಕೃಷಿ ಸಚಿವರಾದ ಶ್ರೀ ಚೆಲುವರಾಯ ಸ್ವಾಮಿ ರವರ ಸೂಚನೆಯಂತೆ. ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಅಶೋಕ್ ಎಂ ದಳವಾಯಿರವರು ಮಹತ್ವದ ನಿರ್ಧಾರದೊಂದಿಗೆ ಈ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರಕ್ಕೆ ರಾಜ್ಯದ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಇದು ಸಾಮಾನ್ಯವಾದ ಪತ್ರವಲ್ಲ, ಇದೂವರೆಗೂ ರೈತರ ಮತ್ತು ವಿವಿಧ ಸಂಘಟನೆಗಳ ಕೂಗು ಯೋಜನೆಗಳನ್ನು ರೂಪಿಸುವಾಗ ನಮ್ಮೊಂದಿಗೆ ಚರ್ಚಿಸಿ, ಎ.ಸಿ.ರೂಮಿನಲ್ಲಿ ಕುಳಿತು ಯೋಜನೆ ರೂಪಿಸ ಬೇಡಿ ಎಂಬ ಆಗ್ರಹಗಳು ಕೇಳಿ ಬರುತ್ತಿದ್ದವು. ಈ ಪತ್ರದ ಮೂಲಕ ಅವರ ಮಾತಿಗೆ ಬೆಲೆ  ಬಂದಿದೆ.

ಮುಂದಿನ ಕ್ರಮಗಳ ಬಗ್ಗೆ ರೂಪುರೇಷೆ ನಿರ್ಧರಿಸಲು, ಈ ಬಗ್ಗೆ ವಿಶೇಷ ಸಭೆ ಕರೆಯಲು ಡಾ.ಬಿ.ಎಂ.ನಾಗಭೂಷಣ್ ರವರು ಮತ್ತು ಡಾ. ಜಗನ್ನಾಥ್ ರವರೊಂದಿಗೆ ಸಮಾಲೋಚನೆ ನಡೆಸಲಾಗಿದೆ.

ಯಾವುದಾದರೂ ಕೃಷಿ ಆಶ್ರಮದಲ್ಲಿ ಎರಡು ದಿವಸದ ಸಭೆ ಆಯೋಜಿಸಲು ಆಸಕ್ತಿ ಇರುವವರು, ಡಾ.ಬಿ.ಎಂ.ನಾಗಭೂಷಣ್ ರವರೊಂದಿಗೆ ಚರ್ಚಿಸಲು ಮನವಿ ಮಾಡಲಾಗಿದೆ.