TUMAKURU:SHAKTHIPEETA FOUNDATION
ತುಮಕೂರು ಫಾರ್ಮರ್ ಸಿಟಿ, ತುಮಕೂರು ಫಾರ್ಮರ್ ಕಾರಿಡಾರ್ ರೈತ ಗ್ಯಾರಂಟಿ/ರೈತ ಶಕ್ತಿ ಯೋಜನೆಗೆ ಪೂರಕವಾದ ಯೋಜನೆಗಳ ಸಂಶೋಧನೆಗೆ ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿಯಿಂದ ಪ್ರತಿ ವರ್ಷ ಸಂಗ್ರಹವಾಗುವ ಹಣ ಬಳಸಿಕೊಳ್ಳುವ ಬಗ್ಗೆ ಮೂವರು ಸಚಿವರಿಗೆ ಮನವಿ ಮಾಡಲಾಗಿದೆ.
ಕ್ರಮಾಂಕ:ಫಾಸಿ/1/2025 ದಿನಾಂಕ:05.12.2025
ಗೆ.
ಶ್ರೀ ಎನ್.ಎಸ್.ಬೋಸರಾಜ್ ರವರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವರು.
ಕರ್ನಾಟಕ ಸರ್ಕಾರ, ವಿಕಾಸ ಸೌಧ, ಬೆಂಗಳೂರು.
ಮಾನ್ಯರೇ
ವಿಷಯ: ತುಮಕೂರು ಫಾರ್ಮರ್ ಸಿಟಿ, ತುಮಕೂರು ಫಾರ್ಮರ್ ಕಾರಿಡಾರ್ ರೈತ ಗ್ಯಾರಂಟಿ/ರೈತ ಶಕ್ತಿ ಯೋಜನೆಗೆ ಪೂರಕವಾದ ಯೋಜನೆಗಳ ಸಂಶೋಧನೆಗೆ ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿಯಿಂದ ಪ್ರತಿ ವರ್ಷ ಸಂಗ್ರಹವಾಗುವ ಹಣ ಬಳಸಿಕೊಳ್ಳುವ ಬಗ್ಗೆ.
ಮೇಲ್ಕಂಡ ವಿಷಯಗಳಿಗೆ ಸಂಭಂದಿಸಿದಂತೆ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್‍ರವರು ಮತ್ತು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರಿಗೆ ಬರೆದಿರುವ ಪತ್ರಗಳನ್ನು ಲಗತ್ತಿಸಿದೆ.
ತುಮಕೂರು ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಕಂಟ್ರೋಲ್ ಕಮ್ಯಾಂಡ್ ಸೆಂಟರ್ (ಐಸಿಸಿಸಿ) ನಿಂದ ತುಮಕೂರು ನಗರದಲ್ಲಿ ನಿಯಮ ಉಲ್ಲಂಘಿಸಿದ ವಾಹನಗಳ ದಂಡದ ಹಣ ಸುಮಾರು ರೂ 20 ಕೋಟಿಗೂ ಹೆಚ್ಚು ಸಂಗ್ರಹವಾಗಿದೆ. ಪ್ರತಿ ವರ್ಷವೂ ಸಂಗ್ರಹವಾಗಲಿದೆ. ಬಹಳಷ್ಟು ಸ್ಮಾರ್ಟ್ ಸಿಟಿಗಳು, ಶೇ 50 ರಷ್ಟು ಹಣಕಾರ್ಪೋರೇಷನ್‍ಗೆ ಹಸ್ತಾಂತರಿಸಿಸಲು ಕೇಂದ್ರ ಸರ್ಕಾರದ ನಿಯಮದಲ್ಲಿಯೇ ಅವಕಾಶವಿದೆ.
ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ರಚಿಸಿರುವ ‘ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್’ ಕಚೇರಿಯ ಘಟಕವನ್ನು, ತುಮಕೂರಿನಲ್ಲಿ ಆರಂಭಿಸಿ, ವಾರ್ಷಿಕ ಐಸಿಸಿಸಿ ಯಿಂದ ಉತ್ಪತ್ತಿಯಾಗುವ ಹಣವನ್ನು ಸಂಶೋದನೆ ಮತ್ತು ಅಭಿವೃದ್ಧಿಗೆ ಬಳಸಿಕೊಳ್ಳಲು ಮಾನ್ಯ ಮುಖ್ಯಮಂತ್ರಿಯವರಿಗೆ ಸಚಿವ ಸಂಪುಟದಲ್ಲಿ ನಿರ್ಣಯ ಮಾಡಲು, ತಾವೂ ಅಗತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಕೋರಿದೆ.
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ
(ಕುಂದರನಹಳ್ಳಿ ರಮೇಶ್)
ರಾಜ್ಯ ಮಟ್ಟದ ದಿಶಾ ಸಮಿತಿ ಮಾಜಿ ಸದಸ್ಯ ಹಾಗೂ ಸಲಹಾ ಸಮಿತಿ ಸದಸ್ಯ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ, ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು.
ಕ್ರಮಾಂಕ:ಫಾಸಿ/1/2025 ದಿನಾಂಕ:05.12.2025
ಗೆ.
ಶ್ರೀ ವಿ.ಸೋಮಣ್ಣನವರು.
ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಸಚಿವರು
ಹಾಗೂ
ಅಧ್ಯಕ್ಷರು, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ. ತುಮಕೂರು.
ಮಾನ್ಯರೇ
ವಿಷಯ: ತುಮಕೂರು ಫಾರ್ಮರ್ ಸಿಟಿ, ತುಮಕೂರು ಫಾರ್ಮರ್ ಕಾರಿಡಾರ್ ರೈತ ಗ್ಯಾರಂಟಿ/ರೈತ ಶಕ್ತಿ ಯೋಜನೆಗೆ ಪೂರಕವಾದ ಯೋಜನೆಗಳ ಅನುಷ್ಠಾನಕ್ಕೆ ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿಯಿಂದ ಪ್ರತಿ ವರ್ಷ ಸಂಗ್ರಹವಾಗುವ ಹಣ ಬಳಸಿಕೊಳ್ಳುವ ಬಗ್ಗೆ.
ಮೇಲ್ಕಂಡ ವಿಷಯಗಳಿಗೆ ಸಂಭಂದಿಸಿದಂತೆ, ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು, ಮಾನ್ಯ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರಿಗೆ ಸೂಚಿಸಿದ್ದಾರೆ. ಮುಖ್ಯ ಕಾರ್ಯದರ್ಶಿಯವರು, ಕೃಷಿ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್‍ರವರು ಮತ್ತು ಲೋಕೋಪಯೋಗಿ ಕಾರ್ಯದರ್ಶಿಯವರಾದ ಶ್ರೀ ಸತ್ಯನಾರಾಯಣ್‍ರವರಿಗೆ ಅಗತ್ಯ ಕ್ರಮ ಕೈಗೊಳ್ಳಲು ರವಾನಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾgದÀ, ಮಾನ್ಯ ಕೃಷಿ ಸಚಿವರಾದ ಶ್ರೀ ಎನ್.ಚಲುವರಾಯಸ್ವಾಮಿರವರು. ತುಮಕೂರು ಫಾರ್ಮರ್ ಸಿಟಿ, ತುಮಕೂರು ಫಾರ್ಮರ್ ಕಾರಿಡಾರ್, ರೈತ ಗ್ಯಾರಂಟಿ/ರೈತ ಶಕ್ತಿ ಯೋಜನೆಗೆ ಪೂರಕವಾದ ಯೋಜನೆಗಳ ಅನುಷ್ಠಾನಕ್ಕೆ ಪರಿಣಿತ ತಜ್ಞರ ಸಲಹೆ ಪಡೆದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉನ್ನತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಈಗಾಗಲೇ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರವರು, ‘ತುಮಕೂರು ಕೃಷಿ ಸಂಶೋದನಾ ನಗರ’ ನಿರ್ಮಾಣ ಮಾಡಲು ತುಮಕೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ತಾವೂ ಸಹ ಕೇಂದ್ರ ಸಚಿವರಾದ ಶ್ರೀ ನೀತಿನ್ ಗಡ್ಕರಿಯವರಿಗೆ ಪತ್ರ ಬರೆದಿರುವುದು ಹೆಮ್ಮೆಯ ವಿಚಾರ. ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಹ ಪತ್ರ ಬರೆದಿದ್ದಾರೆ.
ಈಗಾಗಲೇ ಮಾನ್ಯ ಉಪಮುಖ್ಯ ಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು, ‘ಮೇಕೆದಾಟು’ ಯೋಜನೆಗೆ, ಅವರ ರಾಜಕೀಯ ಇಚ್ಚಾ ಶಕ್ತಿಯಿಂದ ಕಚೇರಿ ಆರಂಭಿಸಿರುವ ಮಾದರಿಯಲ್ಲಿ, ತಮ್ಮ ರಾಜಕೀಯ ಇಚ್ಚಾ ಶಕ್ತಿ ಪ್ರದರ್ಶಿಸಿ ‘ತುಮಕೂರು ಫಾರ್ಮರ್ ಸಿಟಿ’ ಕಚೇರಿಯನ್ನು, ತುಮಕೂರು ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಕಂಟ್ರೋಲ್ ಕಮ್ಯಾಂಡ್ ಸೆಂಟರ್ ಕಟ್ಟಡದಲ್ಲಿ ಆರಂಭಿಸಿ, ತಮ್ಮ ಕನಸಿನ ದೇಶದಲ್ಲಿಯೇ ಮಾದರಿಯಾಗಿ ರೂಪಿಸುವ ತುಮಕೂರು ಲೋಕಸಭಾ ಕ್ಷೇತ್ರ, ತುಮಕೂರು ಜಿಲ್ಲಾ ಸಮಗ್ರ ಅಭಿವೃದ್ಧಿ ಮತ್ತು ರಾಜ್ಯ ರೈತರ ವಿವಿದ ಅಂಶಗಳ ಅಧ್ಯಯನ ಮತ್ತು ಸಂಶೋಧನೆಗಾಗಿ ಬಳಸುವುದು ಸೂಕ್ತವಾಗಿದೆ.
ಐಸಿಸಿಸಿಯಿಂದ ತುಮಕೂರು ನಗರದಲ್ಲಿ ನಿಯಮ ಉಲ್ಲಂಘಿಸಿದ ವಾಹನಗಳ ದಂಡದ ಹಣ ಸುಮಾರು ರೂ 20 ಕೋಟಿಗೂ ಹೆಚ್ಚು ಸಂಗ್ರಹವಾಗಿದೆ. ಪ್ರತಿ ವರ್ಷವೂ ಸಂಗ್ರಹವಾಗಲಿದೆ. ಬಹಳಷ್ಟು ಸ್ಮಾರ್ಟ್ ಸಿಟಿಗಳು, ಶೇ 50 ರಷ್ಟು ಹಣ ಕಾರ್ಪೋರೇಷನ್‍ಗೆ ಹಸ್ತಾಂತರಿಸಿಸಲು ಕೇಂದ್ರ ಸರ್ಕಾರದ ನಿಯಮದಲ್ಲಿಯೇ ಅವಕಾಶವಿದೆ.
ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ರಚಿಸಿರುವ ‘ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್’ ಸಹಭಾಗಿತ್ವದಲ್ಲಿ ತುಮಕೂರು ವಿಶ್ವ ವಿದ್ಯಾನಿಲಯವೂ ಸೇರಿದಂತೆ, ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳ, ವಿದ್ಯಾರ್ಥಿಗಳ ಮೂಲಕ ಸಂಶೋದನೆ ಮಾಡಲು, ದಂಡದ ಎಲ್ಲಾ ಹಣವನ್ನು ಬಳಸಿಕೊಳ್ಳಲು, ಅಗತ್ಯ ಕ್ರಮ ಕೈಗೊಂಡು, ತುಮಕೂರು ನಗರದ, ತುಮಕೂರು ಜಿಲ್ಲೆಯ ಮತ್ತು ಕರ್ನಾಟಕ ರಾಜ್ಯದ ರೈತರಿಗೆ ಸಹಕರಿಸಲು ಈ ಮೂಲಕ ಕೋರಿದೆ.
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ
(ಕುಂದರನಹಳ್ಳಿ ರಮೇಶ್)
ರಾಜ್ಯ ಮಟ್ಟದ ದಿಶಾ ಸಮಿತಿ ಮಾಜಿ ಸದಸ್ಯ ಹಾಗೂ ಸಲಹಾ ಸಮಿತಿ ಸದಸ್ಯ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ, ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು.
ಕ್ರಮಾಂಕ:ಫಾಸಿ/1/2025 ದಿನಾಂಕ:05.12.2025
ಗೆ.
ಶ್ರೀ ಡಾ.ಜಿ.ಪರಮೇಶ್ವರ್ ರವರು
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರು.
ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು.
ಮಾನ್ಯರೇ
ವಿಷಯ: ತುಮಕೂರು ಫಾರ್ಮರ್ ಸಿಟಿ, ತುಮಕೂರು ಫಾರ್ಮರ್ ಕಾರಿಡಾರ್ ರೈತ ಗ್ಯಾರಂಟಿ/ರೈತ ಶಕ್ತಿ ಯೋಜನೆಗೆ ಪೂರಕವಾದ ಯೋಜನೆಗಳ ಅನುಷ್ಠಾನಕ್ಕೆ ತುಮಕೂರು ಸ್ಮಾರ್ಟ್ ಸಿಟಿ ಐಸಿಸಿಸಿಯಿಂದ ಪ್ರತಿ ವರ್ಷ ಸಂಗ್ರಹವಾಗುವ ಹಣ ಬಳಸಿಕೊಳ್ಳುವ ಬಗ್ಗೆ.
ಮೇಲ್ಕಂಡ ವಿಷಯಗಳಿಗೆ ಸಂಭಂದಿಸಿದಂತೆ, ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು, ಮಾನ್ಯ ಮುಖ್ಯ ಕಾರ್ಯದರ್ಶಿಯವರಾದ ಶ್ರೀಮತಿ ಶಾಲಿನಿ ರಜನೀಶ್ ರವರಿಗೆ ಸೂಚಿಸಿದ್ದಾರೆ. ಮುಖ್ಯ ಕಾರ್ಯದರ್ಶಿಯವರು, ಕೃಷಿ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್‍ರವರು ಮತ್ತು ಲೋಕೋಪಯೋಗಿ ಕಾರ್ಯದರ್ಶಿಯವರಾದ ಶ್ರೀ ಸತ್ಯನಾರಾಯಣ್‍ರವರಿಗೆ ಅಗತ್ಯ ಕ್ರಮ ಕೈಗೊಳ್ಳಲು ರವಾನಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾgದÀ, ಮಾನ್ಯ ಕೃಷಿ ಸಚಿವರಾದ ಶ್ರೀ ಎನ್.ಚಲುವರಾಯಸ್ವಾಮಿರವರು. ತುಮಕೂರು ಫಾರ್ಮರ್ ಸಿಟಿ, ತುಮಕೂರು ಫಾರ್ಮರ್ ಕಾರಿಡಾರ್, ರೈತ ಗ್ಯಾರಂಟಿ/ರೈತ ಶಕ್ತಿ ಯೋಜನೆಗೆ ಪೂರಕವಾದ ಯೋಜನೆಗಳ ಅನುಷ್ಠಾನಕ್ಕೆ ಪರಿಣಿತ ತಜ್ಞರ ಸಲಹೆ ಪಡೆದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉನ್ನತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಈಗಾಗಲೇ ತಾವೂ ಸಹ ‘ತುಮಕೂರು ಕೃಷಿ ಸಂಶೋದನಾ ನಗರ’ ನಿರ್ಮಾಣ ಮಾಡಲು ತುಮಕೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದು ಹೆಮ್ಮೆಯ ವಿಚಾರ. ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣನವರು, ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಪತ್ರ ಬರೆಯುವ ಮೂಲಕ ಬೆಂಬಲ ನೀಡಿದ್ದಾರೆ.
ಈಗಾಗಲೇ ಮಾನ್ಯ ಉಪಮುಖ್ಯ ಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು, ‘ಮೇಕೆದಾಟು’ ಯೋಜನೆಗೆ, ಅವರ ರಾಜಕೀಯ ಇಚ್ಚಾ ಶಕ್ತಿಯಿಂದ ಕಚೇರಿ ಆರಂಭಿಸಿರುವ ಮಾದರಿಯಲ್ಲಿ, ತಮ್ಮ ರಾಜಕೀಯ ಇಚ್ಚಾ ಶಕ್ತಿ ಪ್ರದರ್ಶಿಸಿ ‘ತುಮಕೂರು ಫಾರ್ಮರ್ ಸಿಟಿ’ ಕಚೇರಿಯನ್ನು, ತುಮಕೂರು ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಕಂಟ್ರೋಲ್ ಕಮ್ಯಾಂಡ್ ಸೆಂಟರ್ ಕಟ್ಟಡದಲ್ಲಿ ಆರಂಭಿಸಿ, ತಮ್ಮ ಕನಸಿನ ಗ್ರೇಟರ್ ತುಮಕೂರು, ತುಮಕೂರು ಜಿಲ್ಲಾ ಸಮಗ್ರ ಅಭಿವೃದ್ಧಿ ಮತ್ತು ರಾಜ್ಯ ರೈತರ ವಿವಿದ ಅಂಶಗಳ ಅಧ್ಯಯನ ಮತ್ತು ಸಂಶೋಧನೆಗಾಗಿ ಬಳಸುವುದು ಸೂಕ್ತವಾಗಿದೆ.
ಐಸಿಸಿಸಿಯಿಂದ ತುಮಕೂರು ನಗರದಲ್ಲಿ ನಿಯಮ ಉಲ್ಲಂಘಿಸಿದ ವಾಹನಗಳ ದಂಡದ ಹಣ ಸುಮಾರು ರೂ 20 ಕೋಟಿಗೂ ಹೆಚ್ಚು ಸಂಗ್ರಹವಾಗಿದೆ. ಪ್ರತಿ ವರ್ಷವೂ ಸಂಗ್ರಹವಾಗಲಿದೆ. ಬಹಳಷ್ಟು ಸ್ಮಾರ್ಟ್ ಸಿಟಿಗಳು, ಶೇ 50 ರಷ್ಟು ಹಣಕಾರ್ಪೋರೇಷನ್‍ಗೆ ಹಸ್ತಾಂತರಿಸಿಸಲು ಕೇಂದ್ರ ಸರ್ಕಾರದ ನಿಯಮದಲ್ಲಿಯೇ ಅವಕಾಶವಿದೆ.
ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ರಚಿಸಿರುವ ‘ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್’ ಸಹಭಾಗಿತ್ವದಲ್ಲಿ ತುಮಕೂರು ವಿಶ್ವ ವಿದ್ಯಾನಿಲಯವೂ ಸೇರಿದಂತೆ, ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳ, ವಿದ್ಯಾರ್ಥಿಗಳ ಮೂಲಕ ಸಂಶೋದನೆ ಮಾಡಲು, ದಂಡದ ಎಲ್ಲಾ ಹಣವನ್ನು ಬಳಸಿಕೊಳ್ಳಲು, ತಾವು ‘ಸಚಿವ ಸಂಪುಟದಲ್ಲಿ ಐತಿಹಾಸಿಕ ನಿರ್ಣಯ ಮಾಡಿಸಿ’ ತುಮಕೂರು ನಗರದ, ತುಮಕೂರು ಜಿಲ್ಲೆಯ ಮತ್ತು ಕರ್ನಾಟಕ ರಾಜ್ಯದ ರೈತರಿಗೆ ಸಹಕರಿಸಲು ಈ ಮೂಲಕ ಕೋರಿದೆ.
ವಂದನೆಗಳೊಂದಿಗೆ ತಮ್ಮ ವಿಶ್ವಾಸಿ
(ಕುಂದರನಹಳ್ಳಿ ರಮೇಶ್)
ರಾಜ್ಯ ಮಟ್ಟದ ದಿಶಾ ಸಮಿತಿ ಮಾಜಿ ಸದಸ್ಯ ಹಾಗೂ ಸಲಹಾ ಸಮಿತಿ ಸದಸ್ಯ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ, ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು.