28th January 2026
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ, 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್  ಸ್ಥಾಪನೆ ನಮ್ಮ ಗುರಿ.

ನಾನು ವೈಯಕ್ತಿಕವಾಗಿ ನನ್ನ ಕುಟುಂದ ಜಮೀನಿನನಲ್ಲಿ ಶಕ್ತಿಪೀಠ ಫೌಂಡೇಷನ್ ಗೆ ಲೋಕೊಪಯೋಗಿ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ನಿಗಧಿ ಪಡಿಸುವ ಬಾಡಿಗೆ/ಗುತ್ತಿಗೆ ಆಧಾರದಲ್ಲಿ ಪಡೆದು, ಅಡಿಕೆ ನಾಲೇಡ್ಜ್ ಬ್ಯಾಂಕ್   ಮತ್ತು 1120 ಕಳೆ-ಬೆಳೆ ಪ್ರಾತ್ಯಾಕ್ಷಿಕೆ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಅಧಿಕೃತವಾಗಿ ದಿನಾಂಕ:26.01.2026 ರಂದು ಕಾರ್ಯಾರಂಭ ಮಾಡಲಾಗುತ್ತಿದೆ. ಈ ಜಮೀನುಗಳ ಮತ್ತು ನಮ್ಮ ಸಂಸ್ಥೆಗೆ ಮೇಲ್ಕಂಡ ಆಧಾರದಲ್ಲಿ ಬಾಡಿಗೆ ಅಥವಾ ಗುತ್ತಿಗೆ ನೀಡುವ ಕರ್ನಾಟಕ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿನ ಜಮೀನುಗಳಲ್ಲಿ ಶಕ್ತಿಪೀಠ ಫಾರ್ಮರ್ ಕಾರಿಡಾರ್’ ಹೆಸರಿನಲ್ಲಿ ನನ್ನ ನೈಜ ‘ಕೃಷಿ ಆಶ್ರಮ ಯಾತ್ರೆ’ ಆರಂಭವಾಗಲಿದೆ.

  1. ರೈತ
  2. ರೈತ ಉಧ್ಯಮಿ
  3. ರೈತ ವ್ಯಾಪಾರಿ
  4. ರೈತ ರಫ್ತು
  5. ರೈತ ಸ್ಟಾರ್ಟ್ ಅಫ್
  6. ರೈತ ಸಂಶೋಧಕ
  7. ರೈತ ವಿಜ್ಞಾನಿ
  8. ರೈತ ಡಾಕ್ಟರೇಟ್
  9. ರೈತ ಪ್ರಚಾರಕ.(ರಾಸಾಯಿನಿP ಕೃಷಿ- ರಾಸಾಯಿನಿಕ ಮುಕ್ತ ಕೃಷಿ ಮಾದರಿ ಅದಾಯ-ಖರ್ಚು ವೆಚ್ಚಗಳ ವಿಶ್ಲೇಷಣೆಯೊಂದಿಗೆ)

ಈ 9 ಅಂಶಗಳ ಆಧಾರದ ಮೇಲೆ (ಹೆಚ್ಚು ಕಡಿಮೆ ಆಗಬಹುದು) ಈ ಸಂಭಂದವಾಗಿ ಕೆಳಕಂಡ ಸಂಸ್ಥೆಗಳ ಜೊತೆ ಎಂ.ಓ.ಯು ಮಾಡಿಕೊಳ್ಳಲಾಗುವುದು. ಅದೇ ರೀತಿ ವಿವಿಧ ಜಮೀನುಗಳ ವ್ಯಾಪ್ತಿಯ ಸಂಸ್ಥೆಗಳಲ್ಲೂ ಎಂ.ಓ.ಯು ಮಾಡಿಕೊಳ್ಳಲಾಗುವುದು.

  1. ಕೃಷಿ ವಿಶ್ವ ವಿದ್ಯಾನಿಲಯ ಬೆಂಗಳೂರು.
  2. ಕೃಷಿ ವಿಜ್ಞಾನ ಕೇಂದ್ರ ಹೀರೇಹಳ್ಳಿ.
  3. ತೋಟಗಾರಿಕಾ ಇಲಾಖೆ, ಗುಬ್ಬಿ.
  4. ರೈತ ಸಂಪರ್ಕ ಕೇಂದ್ರ, ನಿಟ್ಟೂರು.
  5. ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ.
  6. ಡಾಟಾ ಅನಾಲೀಸಿಸ್ ಸ್ಟಾರ್ಟ್ ಅಫ್ ಕಂಪನಿಗಳು.
  7. ಅನುಭವಿ ರೈತ ಜ್ಞಾನಿಗಳು.
  8. ರೈತ ಕಾರ್ಮಿಕರು.
  9. 3 ನೇ ವ್ಯಕ್ತಿ ತಪಾಸಣೆ ಸಂಘಟನೆಗಳು.

ಈಗಾಗಲೇ ಕಳೆ-ಬೆಳೆ ಆಯ್ಕೆ ಮಾಡಿಕೊಂಡಿರುವ, ಆಸಕ್ತ ಕೃಷಿ ಆಶ್ರಮಗಳು ಅಥವಾ ರೈತರು ನನ್ನ ಮಾದರಿಯಲ್ಲಿ ತಾವೂ ಮಾಡಬೇಕಾಗುತ್ತದೆ. ನಿಮಗೆ ಯಾವುದೇ ಮಟ್ಟದ ಅಧಿಕಾರಿಗಳು ಸ್ಪಂಧಿಸದೇ ಇದ್ದಲ್ಲಿ ನನ್ನನ್ನು ನೇರವಾಗಿ ಸಂಪರ್ಕಿಸ ಬಹುದು. (9886774477), ತಜ್ಞರ ಸಲಹೆ ಮೇರೆಗೆ ಬದಲಾವಣೆಗಳು ಆಗಲಿವೆ. ಇದು ಒಂದು ಲೈವ್ ಸಂಶೋಧನೆ.

ಎಲ್ಲಾ ಹಂತಗಳ ವ್ಯವಸ್ಥೆ ಸಂಪೂರ್ಣವಾಗಿ, ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗ ಮತ್ತು ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಅಡಿಯಲ್ಲಿ ನಡೆಯಲಿದೆ.

ಮೇಲ್ಕಂಡ ಎರಡು ಯೋಜನೆಗಳಿಗೆ ಸೇವಾ ಶುಲ್ಕ ಆಧಾರಿತ ಅಥವಾ ಜ್ಞಾನದಾನ ಆಧಾರಿತ ಸೇವೆ ಮಾಡುವವರು ಸಂಪರ್ಕಿಸ ಬಹುದು. ಎಲ್ಲಾ ನಡವಳಿಕೆಗಳು ನೇರವಾಗಿ ರಾಜ್ಯದ ಮುಖ್ಯಮಂತ್ರಿಯವರು ಮತ್ತು ದೇಶದ ಪ್ರಧಾನ ಮಂತ್ರಿಯವರ ಕಚೇರಿಗೆ ನಿರಂತರವಾಗಿ ತಲುಪಲಿವೆ.

ಶೀಘ್ರದಲ್ಲಿ ಎಲ್ಲಾ ಲೈವ್ ಡಿಜಿಟಲ್ ಮಾದರಿ ಅಫ್ ಡೇಟ್ ಆಗಲಿದೆ.