27th January 2026
Share

TUMAKURU:SHAKTHI PEETA FOUNDATION

ಕಳೆ-ಬೆಳೆ ಆಯ್ಕೆ ಮಾಡಿಕೊಂಡಿರುವ ಪ್ರಗತಿ ಪರ ರೈತರು ಮತ್ತು ಕೃಷಿ ಆಶ್ರಮಗಳ ನೇತಾರರು, 2 ನೇ ಹಂತದಲ್ಲಿ ನಿಮ್ಮ ಆಯ್ಕೆ ಕಳೆ- ಬೆಳೆಯ ತಾಲ್ಲೋಕು ಮಟ್ಟದ ಅಧಿಕಾರಿಗಳನ್ನು ಭೇಟಿ  ಮಾಡಿ ಸಮಾಲೋಚನೆ ಮಾಡಿ, ಅವರಿಗೆ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್, ಕೃಷಿ ಆಶ್ರಮದ ಬಗ್ಗೆ ಮಾಹಿತಿ ಹಂಚಿಕೊಳ್ಳಿ.

ನಿಮ್ಮ ವಿಧಾನಸಭಾ ವ್ಯಾಪ್ತಿಯಲ್ಲಿ ಎಷ್ಟು ಗ್ರಾಮ ಪಂಚಾತಿಯಿಗಳು ಇವೆ ಎಂಬ ಬಗ್ಗೆ ಪಟ್ಟಿ ಮಾಡಿ, 5 ಗ್ರಾಮ ಪಂಚಾಯಿತಿಯಂತೆ ವಿಭಾಗ ಮಾಡಿ, ಗ್ರಾಮ ಪಂಚಾಯಿತಿಗಳು 4 ಅಥವಾ 5 ಅಥವಾ 6 ಬರಲಿವೆ, ಸರಿಯಾಗಿ 5 ಗ್ರಾಮಪಂಚಾಯಿತಿಗಳು ಬರುವುದು ಅಪರೂಪ.

ಆಯಾ ವಿಧಾನಸಭಾ ಕ್ಷೇತ್ರದ ಪ್ರಗತಿಪರ ರೈತರು ಸೇರಿದಂತೆ ಕೆಳಕಂಡ ಗ್ರಾಮ ಮಟ್ಟದ ಅಧಿಕಾರಿ/ ನೌಕರರಿಂದ ಆರಂಭಿಸಿ, ಒಂದು ವಾಟ್ಸ್ ಅಫ್ ಗ್ರೂಪ್ ರಚಿಸಿಕೊಳ್ಳಿ.

  1. ತಾಲ್ಲೋಕು ಮಟ್ಟದ ಅಧಿಕಾರಿ
  2. ಹೋಬಳಿ ಮಟ್ಟದ ಅಧಿಕಾರಿ.
  3. ರೈತ ಸಂಪರ್ಕ ಕೇಂದ್ರ.
  4. ಗ್ರಾಮ ಪಂಚಾಯಿತಿಗಳ ಪಿಡಿಓ
  5. ಗ್ರಾಮ ಅಧಿಕಾರಿ/ ವಿಲೇಜ್ ಅಕೌಂಟೆಂಟ್
  6. ಬಾಪೂಜಿ ಸೇವಾ ಕೇಂದ್ರ.
  7. ಗಾಂಧಿ ಗ್ರಾಮ ಸೇವಾ ಕೇಂದ್ರ.
  8. ಸಧಾರ್ ಪಟೇಲ್ ಗ್ರಾಮಸೇವಾ ಕೇಂದ್ರ.
  9. ವಿನೋಭ ಭಾವೆ ಗ್ರಾಮ ಸೇವಾ ಕೇಂದ್ರ
  10. ಜೆ.ಪಿ.ವಿಕಾಸ ಕೇಂದ್ರ.
  11. ಲಾಲ್ ಬಹುದ್ದೂರ್ ಶಾಸ್ರ್ತಿ ಸೇವಾ ಕೇಂದ್ರ.
  12. ಗ್ರಾಮ ಕಲೃಷಿ ಸೇವಾ ಕೇಂದ್ರ
  13. ಕೃಷಿ ಜ್ಞಾನ ಕೇಂದ್ರ
  14. ರೈತ ಸಹಾಯ ಕೇಂದ್ರ.
  15. ಕೃಷಿ ಸಲಹಾ ಕೇಂದ್ರ.
  16. ಕೃಷಿ ಆಶ್ರಮ ಸೇವಾ ಕೇಂದ್ರ.
  17. ಕೃಷಿ ತಂತ್ರಜ್ಞಾನ ಕೇಂದ್ರ
  18. ಗ್ರಾಮ ಜ್ಞಾನ ಕೇಂದ್ರ
  19. ರೈತ ಜ್ಞಾನ ಭಂಡಾರ.
  20. ಗ್ರಾಮ ಅಧ್ಯಯನ ಕೇಂದ್ರ.
  21. ಕೃಷಿ ತರಭೇತಿ ಕೇಂದ್ರ.
  22. ಗ್ರಾಮ ಸೇವಾ ಕೇಂದ್ರ
  23. ಜನಸೇವಾ ಕೇಂದ್ರ
  24. ಡಿಜಿಟಲ್ ಗ್ರಾಮ ಕೇಂದ್ರ
  25. ಇ-ಕೃಷಿ ಕೇಂದ್ರ
  26. ಸೇವಾ ಸಿಂದು ಗ್ರಾಮ ಕೇಂದ್ರ
  27. ಪಶು ಸಖಿ
  28. ಕೃಷಿ ಸಖಿ
  29. ಬಯೋ ರೀಸರ್ಚ್ ಸೆಂಟರ್
  30. ಪಾರ್ಮರ್ ಫೀಲ್ಡ್ ಸ್ಕೂಲ್
  31. ಪಾರ್ಮರ್ ಮಾಸ್ಟರ್ ಟ್ರೈನೀಸ್
  32. ಲ್ಯಾಬ್ ಟು ಫೀಲ್ಡ್

ಹೀಗೆ ಯಾವ ಯಾವ ಗ್ರಾಮ ಮಟ್ಟದ, ಗ್ರಾಮ ಪಂಚಾಯಿತಿ ಮಟ್ಟದ, ಹೋಬಳಿ ಮಟ್ಟದ, ವಿಧಾನಸಭಾ ಕ್ಷೇತ್ರ ಮಟ್ಟದ, ತಾಲ್ಲೋಕು ಮಟ್ಟದ, ಲೋಕಸಭಾ ಕ್ಷೇತ್ರ ಮಟ್ಟದ, ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ, ದಕ್ಷಿಣ ರಾಜ್ಯಗಳ ಮಟ್ಟದ, ದೇಶ ಮಟ್ಟದ ಇಲಾಖೆಗಳು, ಸರ್ಕಾರಿ ಸಂಸ್ಥೆಗಳು ನಿಮ್ಮ ಕಳೆ-ಬೆಳೆಗೆ ಸಂಭಂದಿಸಿದವರ ಪಟ್ಟಿ ಮಾಡಿ

ಆಗ್ರೋ ಏರೋಸ್ಪೇಸ್ ಗೋವಿಂದ ರಾಜುರವರು ಈ ತರಹದ ಇನ್ನೂ ಆನೇಕ ಪಟ್ಟಿ ಮಾಡಿದ್ದಾರೆ. ಈ ಬಗ್ಗೆ ಆಸಕ್ತರು ಒಂದು ವರದಿ ನೀಡಲು ಮನವಿ ಮಾಡಲಾಗಿದೆ.

ಒಂದೊಂದು ಕಳೆ-ಬೆಳೆಗೂ ಇದು ಪ್ರತ್ಯೇಕ ಇರುತ್ತದೆ. ಬಹುತೇಕ ಎಲ್ಲಾ ಕಳೆ-ಬೆಳೆಗಳಿಗೂ ಒಂದೇ ಪಟ್ಟಿ ಮಾಡಿ, ಡಿಜಿಟಲ್ ಪೋರ್ಟಲ್ ನಲ್ಲಿ ಹಾಕಿ, ಅವರ ಬೆಳೆಗೆ ಸಂಭಂದಿಸಿದವರನ್ನು ಆಯ್ಕೆ ಮಾಡುವಂvಹÀ ವ್ಯವಸ್ಥೆಯನ್ನು ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಂಸ್ಥೆ ಮಾಡಬೇಕಾಗುತ್ತದೆ.

ಡಾ.ನಾಗಭೂಷಣ್ ಮತ್ತು ಡಾ.ಜಗನ್ನಾಥ್ ರವರು, ಗೋವಿಂದ ರಾಜು ಮತ್ತು ಆಸಕ್ತರ ಸಮಿತಿ ರಚಿಸಿ ಶೀಘ್ರವಾಗಿ ಈ ಪಟ್ಟಿಯನ್ನು ಅಂತಿಮ ಗೊಳಿಸುವುದು ಸೂಕ್ತವಾಗಿದೆ.

ಅಲ್ಲಿಯವರೆಗೂ ಎಷ್ಟು ಜನರು ಸಿಗುತ್ತಾರೋ ಅಷ್ಟು ಜನರ ಪಟ್ಟಿ ಮಾಡುವುದು ಒಳ್ಳೆಯದು.

ಆ ಬಗ್ಗೆ ಆಸಕ್ತರು 9886774477 ಕರೆ ಮಾಡಿ