4th February 2026
Share

TUMAKURU:SHAKTHIPEETA FOUNDATION

ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ, ರಾಜ್ಯದ 19 ಜಿಲ್ಲೆಗಳಿಗೆ ಹೆಬ್ಬಾಗಿಲಿನಂತಿರುವ ತುಮಕೂರು ಜಿಲ್ಲೆಗೆ, ಹೇಮಾವತಿ, ಎತ್ತಿನಹೊಳೆ, ಭದ್ರಾಮೇಲ್ದಂಡೆ ಮೂರು ನದಿಗಳ ನೀರಿನ ಯೋಜನೆ ಇದ್ದರೂ, ತುಮಕೂರು ಜಿಲ್ಲೆ ಕೃಷಿಯಲ್ಲಿ ಪ್ರಗತಿ ಸಾಧಿಸಿಲ್ಲ, ಪ್ರಧಾನ ಮಂತ್ರಿ ಧನ ಧಾನ್ಯ ಯೋಜನೆಯಡಿಯಲ್ಲಿ ತುಮಕೂರು ಜಿಲ್ಲೆ ಆಯ್ಕೆಯಾಗಿರುವುದೇ ಇದಕ್ಕೆ ಸಾಕ್ಷಿ.

ಪ್ರಧಾನ ಮಂತ್ರಿ ಧನ ಧಾನ್ಯ ಯೋಜನೆಯಡಿಯಲ್ಲಿ ಆಯ್ಕೆ ಮಾಡಿರುವ ದೇಶದ 100 ಜಿಲ್ಲೆಗಳಲ್ಲಿ, ರಾಜ್ಯದ ಆರು ಜಿಲ್ಲೆಗಳಾದ ಚಿಕ್ಕಾಬಳ್ಳಾಪುರ, ತುಮಕೂರು. ಚಿತ್ರದುರ್ಗ, ಹಾವೇರಿ, ಕೊಪ್ಪಳ, ಗದಗ ಜಿಲ್ಲೆಗಳು ಕೃಷಿಯಲ್ಲಿ ಹಿಂದುಳಿದಿರುವದರಿ0ದ ಆಯ್ಕೆ ಮಾಡಲಾಗಿದೆ, ಈ ಯೋಜನೆಯಿಂದ ಜಿಲ್ಲೆಯ ಕೃಷಿ ಅಭಿವೃದ್ಧಿಗೆ ವರದಾನವಾಗಲಿದೆ.

ಇದೂವರೆಗೂ ಜಿಲ್ಲೆಯಲ್ಲಿ ಕೃಷಿಗೆ ಸಂಭAಧಿಸಿದ ವಿಶ್ವ ವಿದ್ಯಾನಿಲಯ ಇರಲಿ, ಯಾವುದೇ ಒಂದು ಕೃಷಿ ಕಾಲೇಜು ಇಲ್ಲದೇ ಇರುವುದು ವಿಷಾದನೀಯ ಎಂಬ ಪ್ರಗತಿಪರ ರೈತರ ಧ್ವನಿಗೆ ಅಧಿಕಾರಿಗಳು ಮೌನವಹಿಸಿದರು.

ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯವರಾದ ಸಿದ್ಧರಾಮಯ್ಯನವರು, ಕೃಷಿ ಸಚಿವರಾದ ಚಲುವರಾಯ ಸ್ವಾಮಿರವರ, ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ.ಅಶೋಕ್ ದಳವಾಯಿರವರ ನೇತೃತ್ವದಲ್ಲಿ ಒಂದು ವೈಜ್ಞಾನಿಕ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸ ಬೇಕಾಗಿದೆ.

ಈ ಹಿನ್ನಲೆಯಲ್ಲಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಶ್ರಮಿಸುತ್ತಿರುವ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಂಡ, ಐಐಹೆಚ್‌ಆರ್ ಅಧಿಕಾರಿಗಳಾದ ವಾಸುಕಿರವರು, ಅಟಾರಿ ಅಧಿಕಾರಿಗಳಾದ ಗಂಗಾಧರಯ್ಯನವರು, ಕೃಷಿ ಇಲಾಖೆಯ ಜಂಟಿನಿರ್ದೇಶಕರಾದ ಲಕ್ಷö್ಮಣ್‌ರವರು ಅತ್ಯುತ್ತಮ ವರದಿ ಸಿದ್ಧಪಡಿಸಲು ಸಂಪೂರ್ಣವಾಗಿ ಸಹಕರಿಸುವ ಭರವಸೆ ನೀಡಿದರು. ಭಾಗವಹಿಸಿದ್ದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಹಮತ ವ್ಯಕ್ತ ಪಡಿಸಿದರು.

ಪ್ರಧಾನ ಮಂತ್ರಿ ಧನ ಧಾನ್ಯ ಯೋಜನೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ, ತುಮಕೂರು ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಲಕ್ಷö್ಮಣ್‌ರವರ ಪಾತ್ರ ಬಹಳ ಪ್ರಮುಖವಾಗಿದೆ. ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಲೈನ್ ಡಿಪಾರ್ಟ್ ಮೆಂಟ್‌ಗಳು ಸಹಕರಿಸಲು ಪ್ರಗತಿಪರ ರೈತರು ಸಲಹೆ ನೀಡಿದರು.

ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ ಸುಮಾರು 55 ಮತ್ತು 11 ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 11 ರೈತರು ಸೇರಿದಂತೆ 66 ರಿಂದ 75 ರೈತರ ಸಹಭಾಗಿತ್ವದಲ್ಲಿ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಗೆ ಪೂರಕವಾಗಿ ತುಮಕೂರು ಜಿಲ್ಲೆಯಲ್ಲಿ ಬೆಳೆಯುವ ಎಲ್ಲಾ ಕಳೆ- ಬೆಳೆಗಳ ಬಗ್ಗೆಯೂ  ವಿಶೇಷ ಯೋಜನೆ ರೂಪಿಸಲು ವಿವರವಾದ ಚರ್ಚೆ ನಡೆಯಿತು.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೋಕಿನ ಹೆಚ್.ಎ.ಎಲ್ ಬಳಿ ಇರುವ 100 ಎಕರೆ ಸರ್ಕಾರಿ ಜಮೀನನ್ನು, ಕೇಂದ್ರ ಸರ್ಕಾರಕ್ಕೆ ನೀಡಿ ಅಂತರರಾಷ್ಟಿಯ ಮಟ್ಟದ ಕೃಷಿ ಪ್ರವಾಸೋಧ್ಯಮ ಕೇಂದ್ರ’ವಾಗಿ ಅಭಿವೃದ್ಧಿಸುವ ಬಗ್ಗೆಯೂ ಚರ್ಚೆ ನಡೆಯಿತು. ಪ್ರಾಯೋಗಿಕವಾಗಿ ಹೀರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿಯೇ ‘ಕೃಷಿ ಪ್ರವಾಸೋಧ್ಯಮ’ ಆರಂಭಿಸುವ ಬಗ್ಗೆಯೂ ಚರ್ಚೆ ನಡೆಯಲಾಯಿತು.

ತುಮಕೂರು ಜಿಲ್ಲೆಯ ಸಮಗ್ರ ಕೃಷಿ ಅಭಿವೃದ್ಧಿಗೆ ಫಾರ್ಮರ್ ಸಿಟಿ, ತುಮಕೂರು ಫಾರ್ಮರ್ ಕಾರಿಡಾರ್, ಪ್ರಧಾನ ಮಂತ್ರಿ ಧನ ಧಾನ್ಯ ಯೋಜನೆ ಜಿಲ್ಲೆಗಳ ಸಂಪರ್ಕಿಸುವ ಫಾರ್ಮರ್ ಕಾರಿಡಾರ್, ಕೃಷಿ ವಿಶ್ವ ವಿದ್ಯಾನಿಲಯಗಳ ಸಂಪರ್ಕಿಸುವ ಕಾರಿಡಾರ್, ಕೃಷಿ ಸಂಶೋಧನಾ ನಗರ, ಕೃಷಿ ಆಶ್ರಮ/ಕೃಷಿ ಪ್ರವಾಸೋಧ್ಯಮ, ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಹೀಗೆ ಹಲವಾರು ಯೋಜನೆಗಳ ಅನುಷ್ಠಾನಕ್ಕೆ, ಎಲ್ಲಾ ಲೈನ್ ಡಿಪಾರ್ಟ್ಮೆಂಟಗಳ ಸಹಭಾಗಿತ್ವದಲ್ಲಿ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಯೋಜನೆ ರೂಪಿಸುವ ಬಗ್ಗೆಯೂ ಸಮಾಲೋಚನೆ ನಡೆಯಿತು.

ಬಹುತೇಕ ಎಲ್ಲಾ ಇಲಾಖೆಯ ಅಧಿಕಾರಿಗಳು ರೈತರಂತೆ ಹಲವಾರು ವಿಚಾರಗಳ ಬಗ್ಗೆ ನಿರ್ಭೀತವಾಗಿ ಚರ್ಚಿಸಿ ರಾಸಾಯನಿಕ ಕೃಷಿಯಿಂದ- ರಾಸಾಯನಿಕ ಮುಕ್ತ ಕೃಷಿ’ ಬಗ್ಗೆ ಸುಧೀರ್ಘವಾದ ಚರ್ಚೆ ನಡೆಯಿತು. ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ಮರ್ ನಾಲೇಡ್ಜ್ ಬ್ಯಾಂಕ್’ ಡಿಜಿಟಲ್ ಪ್ಲಾಟ್ ಫಾರಂ ಪ್ರದರ್ಶನ ಮಾಡಲಾಯಿತು.

ಸರ್ಕಾರಗಳ ಬಿಸಿಯೂಟ, ಅಂಗನವಾಡಿ ಮಕ್ಕಳ ಆಹಾರ, ಮುಖ್ಯಮಂತ್ರಿಯವರೂ ನಡೆಸುವ ಸಭೆಗಳೂ ಸೇರಿದಂತೆ,  ಎಲ್ಲಾ ಸರ್ಕಾರಿ ಸಭೆ ಸಮಾರಂಭಗಳಿಗೆ ಸಾವಯವ ಕೃಷಿಕರ ಮೌಲ್ಯವರ್ಧಿತ ಉತ್ಪನ್ನಗಳನ್ನು ಬಳಸುವಂತೆ ಹಾಜರಿದ್ದ ರೈತರು ಅಧಿಕಾರಿಗಳ ಸಲಹೆ ನೀಡಿದರು, ಅಧಿಕಾರಿಗಳು ಇದು ನಮ್ಮ ಮಟ್ಟದಲ್ಲಿ ತೀರ್ಮಾನವಾಗುವ ವಿಷಯವಲ್ಲ ಎಂದಾಗ ಭಾಗವಹಿಸಿದ್ದ, ರೈತವರ್ಗ ಕುಂದರನಹಳ್ಳಿ ರಮೇಶ್ ರವರೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯ ಬೇಕು ಎಂಬ ಸಲಹೆ ನೀಡಿದರು. ಇದೊಂದು ಒಳ್ಳೆಯ ಸಲಹೆ.

ದಿನಾಂಕ:30.01.2026 ರಂದು ತುಮಕೂರು ಜಿಲ್ಲೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ 15 ನೇ ವೈಜ್ಞಾನಿಕ ಸಲಹಾ ಸಮಿತಿಯಲ್ಲಿ ಐಐಹೆಚ್‌ಆರ್, ಅಟಾರಿ, ಕೃಷಿ ಇಲಾಖೆ, ನಬಾರ್ಡ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕಾ ಇಲಾಖೆ, ಬೆಂಗಳೂರು ಕೃಷಿ ವಿಶ್ವ ವಿಶ್ವದ್ಯಾಲಯ, ರೇಷ್ಮೆ ಇಲಾಖೆ, ಪಶುಸಂಗೋಪನಾ ಇಲಾಖೆ, ಮೀನುಗಾರಿಕಾ ಇಲಾಖೆ, ಪ್ರಗತಿಪರ ರೈತರು, ಸಂಘಸ0ಸ್ಥೆಗಳು, ರೈತ ಉಧ್ಯಮಿಗಳು ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಲೋಗಾನಂದ್, ಡಾ.ಜಗದೀಶ್, ಡಾ.ರಮೇಶ್. ಡಾ. ಪ್ರಶಾಂತ್ ಇನ್ನೂ ಮುಂತಾದವರು ಕೆವಿಕೆ ಕೈಗೊಂಡಿರುವ ಹಲವಾರು ಯೋಜನೆಗಳ ಮಾಹಿತಿ ಹಂಚಿಕೊಳ್ಳುವುದರ ಜೊತೆಗೆ, ಭಾಗ ವಹಿಸಿದ್ದವರ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಅತ್ಯಂತ ವ್ಯವಸ್ಥಿತವಾಗಿ ಸಭೆ ಆಯೋಜಿಸಿದ್ದು ಭಾಗವಹಿಸಿದ್ದವರ ಮೆಚ್ಚುಗೆಗೆ ಪಾತ್ರವಾಗಿತ್ತು.