4th February 2026
Share

TUMAKURU:SHAKTHIPEETA FOUNDATION

ಕೃಷಿ ಆಶ್ರಮ ಪರವಾನಗಿ ಪತ್ರ ಎಲ್ಲಿಂದ ? ಎಂಬ ಕೂಗು ಬಲವಾಗಿ ಕೇಳುತ್ತಿದೆ. ದಯವಿಟ್ಟು ಸ್ವಲ್ಪ ಕಾಯಿರಿ, ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಡಾ.ಅಶೋಕ್ ದಳವಾಯಿರವರು, ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಪರಿಕಲ್ಪನಾ ವರದಿಯಲ್ಲಿ ಮತ್ತು ಆಯವ್ಯಯ ಪತ್ರದಲ್ಲಿ ಪ್ರಕಟಣೆ ಮಾಡುವ ಅಂಶದಲ್ಲಿ ಎಲ್ಲವನ್ನು ಸಿದ್ಧಪಡಿಸುವ ಅಥವಾ ಆಯವ್ಯಯದಲ್ಲಿ ಮಂಡನೆಯಾದ ನಂತರ ಸರ್ಕಾರಿ ಆದೇಶದಲ್ಲಿ ಪ್ರಕಟಿಸಬೇಕಿದೆ.

ಈಗ ಕೃಷಿ ಆಶ್ರಮ ಆರಂಭಿಸಿರುವ ಬಗ್ಗೆ, ಯಾವ ಇಲಾಖೆಯವರು ತಮ್ಮನ್ನು ಪರವಾನಗಿ ಕೇಳುತ್ತಿದ್ದಾರೆ ಎಂಬ ಮಾಹಿತಿ ನೀಡಿದರೆ. ಆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ಆಯೋಜಿಸಿ, ಪರಿಹಾರ ಕಂಡುಕೊಳ್ಳೋಣ.

ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದೇವೆ, ಕೃಷಿ ಆಶ್ರಮಗಳ ಸದ್ಧು ಎಲ್ಲೆಡೆ ಮಾಡುತ್ತಿದೆ. ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂಧಿಸುತ್ತಿದ್ದಾರೆ, ಇದೊಂದು ಒಳ್ಳೆಯ ಬೆಳವಣಿಗೆ ಆಗಿದೆ.

ಡಾ.ನಾಗಭೂಷಣ್‌ರವರು ನೀಡುವ ಕೃಷಿ ಆಶ್ರಮಗಳ ಪಟ್ಟಿಯ ಸಹಿತ, ಡಾ.ಜಗನ್ನಾಥ್‌ರವರು ನೀಡುವ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಆರಂಭಿಸುವವರ ಪಟ್ಟಿಯ ಸಹಿತ, ಸತ್ಯಾನಂದ್ ಎಸ್ ರಾಜ್ ರವರು ಸಿದ್ಧಪಡಿಸುತ್ತಿರುವ ಡಿಜಿಟಲ್ ಪ್ಲಾಟ್ ಫಾರಂನಲ್ಲಿ ಮಾಹಿತಿ ಅಫ್ ಲೋಡ್ ಮಾಡಿರುವ ಅಂಶಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಪ್ರಸ್ತಾವನೆಯಲ್ಲಿ ಇರುತ್ತವೆ. ಇಲ್ಲವಾದರೆ ಯೋಜನೆ ಜಾರಿ ನಂತರ ಕೃಷಿ ಆಶ್ರಮಗಳು ಮೂಕ ಪ್ರೇಕ್ಷಕರಂತೆ ಆಗುವ ಸಂಭವವೂ ಇದೆ.

ಈಗ ನಮ್ಮ ಗುರಿ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ, ತಲಾ 5 ರಂತೆ, 1120 ಕೃಷಿ ಆಶ್ರಮಗಳ/ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್‌ಗಳನ್ನು ಸ್ಥಾಪಿಸುವ ರೈತರನ್ನು ಗುರುತಿಸುವುದಾಗಿದೆ. ದಯವಿಟ್ಟು ಈ ಆಂದೋಲನದಲ್ಲಿ ಎಲ್ಲರೂ ಕೈಜೋಡಿಸಿ.

ಕಡೇ ಪಕ್ಷ 28 ಲೋಕಸಭಾ ಸದಸ್ಯರ, 14 ರಾಜ್ಯ ಸಭಾ ಸದಸ್ಯರ, 225 ವಿಧಾನಸಭಾ ಸದಸ್ಯರ, 75 ವಿಧಾನ ಪರಿಷತ್ ಸದಸ್ಯರ, ಇಬ್ಬರು ದೆಹಲಿ ವಿಶೇಷ ಪ್ರತಿ ನಿಧಿ ಸೇರಿದಂತೆ 344 ಚುನಾಯಿತ ಜನಪ್ರತಿನಿಧಿಗಳ ವ್ಯಾಪ್ತಿಗೆ, ಒಂದರAತೆ 344 ಕೃಷಿ ಆಶ್ರಮ/ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಪಟ್ಟಿಯನ್ನು ಸಿದ್ಧಪಡಿಸಲೇ ಬೇಕಿದೆ.