TUMAKURU:SHAKTHIPEETA FOUNDATION
ನಾನೊಬ್ಬ ಅಲೆ ಮಾರಿ ಕೃಷಿಕ, ಕಳೆದ 25 ವರ್ಷದಿಂದ ಕರ್ನಾಟಕ ರಾಜ್ಯ ಸಮಗ್ರ ನೀರಾವರಿ ಅಧ್ಯಯನ, ಹೋರಾಟ ಮತ್ತು ಸರ್ಕಾರಗಳೊಂದಿಗೆ ಜಟಾ ಪಟಿ ಮಾಡಿ ಅನುಷ್ಠಾನ ಮಾಡಿಸುವುದು ನನ್ನ ಪ್ರವೃತ್ತಿ.
ಜೊತೆಗೆ ಕಳೆದ 38 ವರ್ಷಗಳಿಂದ ತುಮಕೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಅಧ್ಯಯನ, ಹೋರಾಟ ಮತ್ತು ಸರ್ಕಾರಗಳೊಂದಿಗೆ ಜಟಾ ಪಟಿ ಮಾಡಿ ಅನುಷ್ಠಾನ ಮಾಡಿಸುವುದು ನನ್ನ ಪ್ರವೃತ್ತಿ.
ಕರ್ನಾಟಕ ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಕೃಷಿ ಆಶ್ರಮಗಳ ಹರಿಕಾರರ ಜೊತೆ ಒಂದು ಅಧ್ಯಯನ ಆರಂಭಿಸಿದ್ದೇನೆ. ಯಾವ ಬೆಳೆಗೆ ವೈಜ್ಞಾನಿಕವಾಗಿ ಎಷ್ಟು ನೀರು ಬೇಕು. ರೈತರು ಎಷ್ಟು ನೀರು ಬಳಸುತ್ತಿದ್ದಾರೆ ಎಂಬ ಮಾಹಿತಿ ನನಗೆ ಅವಶ್ಯಕತೆ ಇದೆ.
ನಂಬರ್ ಒನ್ ಕರ್ನಾಟಕ @ 2047 ಗೆ ಪೂರಕವಾಗಿ, ಕೃಷಿಗೆ ಆಧ್ಯತೆ ದೊರೆಯ ಬೇಕು ಎಂಬುದು ನನ್ನ ಅನಿಸಿಕೆ. ನನಗೆ ರಾಜ್ಯ ಮತ್ತು ಕೇಂದ್ರದಲ್ಲಿ ಯಾವುದೇ ಪಕ್ಷದ ಆಡಳಿತ ಇರಲಿ, ಯಾವುದೇ ಜಾತಿಯವರು ಇರಲಿ. ಮುಖ್ಯಮಂತ್ರಿಯವರು ನಮ್ಮ ರಾಜ್ಯದ ದೊರೆ. ಪ್ರಧಾನ ಮಂತ್ರಿಯವರು ನಮ್ಮ ದೇಶದ ದೊರೆ. ಉಳಿದ ವಿಚಾರ ನನಗೆ ಶೂನ್ಯ.
ಆಡು ಮುಟ್ಟದ ಸೊಪ್ಪಿಲ್ಲ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕೈಹಾಕದ ಕೆಲಸವಿಲ್ಲ ಎಂಬ ಮಾತು ತುಮಕೂರು ಜಿಲ್ಲೆಯಲ್ಲಿದೆ. ಕಳೆದ 38 ವರ್ಷಗಳಿಂದ ನನಗೆ ತುಮಕೂರು ಮಾಜಿ ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಕಳೆದ 29 ವರ್ಷಗಳಿಂದ ಅವರು ನಿಧನರಾಗುವರೆಗೂ, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅತ್ಯಂತ ಹತ್ತಿರದ ಸಂಪರ್ಕ ನನ್ನ ಸಾಧನೆ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ.
ಈಗ ಕೃಷಿ ವಿಚಾರದಲ್ಲಿ ನನಗೆ ಮೆಚ್ಚುಗೆ ಆದವರು ಕನ್ನೇರಿ ಶ್ರೀಗಳು ಮತ್ತು ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಕೃಷಿ ಜ್ಞಾನಿ ಡಾ.ಅಶೋಕ್ ದಳವಾಯಿರವರು.
ಕೆಲವು ವಿವಾದವಾದಗ, ಕನ್ನೇರಿ ಶ್ರೀಗಳ ಪರ-ವಿರೋಧ ಎರಡು ಬಗೆಯ ಮಾತುಗಳನ್ನು ನನ್ನೊಂದಿಗೆ ಆತ್ಮೀಯರು ಹಂಚಿಕೊಂಡಾಗ, ನಾನು ಅವರಿಗೆ ಹೇಳಿದ್ದು ವೈಯಕ್ತಿಕ ವಿಚಾರದ ಬಗ್ಗೆ ನನಗೆ ಆಸಕ್ತಿ ಇಲ್ಲ. ಅವರ ಕೃಷಿ ಜ್ಞಾನ ಮಾತ್ರ ನನಗೆ ಮೆಚ್ಚುಗೆ, ನಾನು ಉಳಿದ ವಿಚಾರದ ಬಗ್ಗೆ ಮಾತನಾಡುವುದಿಲ್ಲ ಎಂದು ಸ್ಪಷ್ಠವಾಗಿ ಹೇಳಿದೆ.
ಇಂದು ದಿನಾಂಕ:31.01.2026 ರಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರ ಆಹ್ವಾನದಿಂದ ಫರ್ಮಾಕಲ್ಚರ್ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ. ನಾನು ಸ್ವಲ್ಪ ವಿಳಂಭವಾಗಿ ಹೋಗಿದ್ದರಿಂದ ಅಧಿಕಾರಿಯವರು ಬೇರೆ ಕಾರ್ಯನಿಮಿತ್ತ ಹೊರಗಡೆ ಹೋಗಿದ್ದರು.
ನಾನು ಸೈಲೆಂಟ್ ಆಗಿ ಹೋಗಿ ಕುಳಿತೆ. ಟೀ ಬ್ರೇಕ್ ಬಿಡುವವರೆಗೂ ಇದ್ದೆ. ಟೀ ಕುಡಿದ ನಂತರ ಒಳಗೆ ಹೋದಾಗ ಹಾಜರಿದ್ದವರ ಪರಿಚಯ ಕಾರ್ಯಕ್ರಮವಿತ್ತು, ನಾನು ಪರಿಚಯ ಮಾಡಿಕೊಂಡಿದ್ದು, ನಾನು ಕೃಷಿ ಆಶ್ರಮಗಳ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಮೂಲಕ ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ಮರ್ ನಾಲೇಡ್ಜ್ ಬ್ಯಾಂಕ್’ ಸ್ಥಾಪಿಸಲು ಶ್ರಮಿಸುತ್ತಿದ್ದೇನೆ, ನಿಮ್ಮ ಜ್ಞಾನವನ್ನು ಸರ್ಕಾರಕ್ಕೆ ನೀಡಲು ವಿಷಯ ಹಂಚಿಕೊಳ್ಳಲು ಇಲ್ಲಿಗೆ ಬಂದಿದ್ದೇನೆ ಎಂದಾಗ, ಅಲ್ಲಿದ್ದ ಮಹಿಳೆಯೊಬ್ಬರು ಬೇರೆ ಸಂಘಟನೆ ವಿಚಾರ ಇಲ್ಲಿ ಬೇಡ, ಸಾವಿರಾರು ಖರ್ಚು ಮಾಡಿ ಈ ತರಬೇತಿ ಮಾಡುತ್ತಿದ್ದೇವೆ ಎಂದರು. ನಾನು ಕರ್ನಾಟಕ ಸರ್ಕಾರ ಬೇರೆ ಸಂಘಟನೆ ಹೇಗೆ ಆಗುತ್ತದೆ ಎಂದೇ, ಸರ್ಕಾರದ ವಿಚಾರ ನನಗೆ ಗೊತ್ತಿದೆ ಎಂದರು.
ನಾನು ಇದು ಕೇಂದ್ರ ಸರ್ಕಾರದ ಕಚೇರಿ, ಈ ರೀತಿ ಹೇಳಿದರೆ ಹೇಗೆ ಎಂದಾಗ, ಈ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತನಾಡಿ ಎಂದರು. ಅಲ್ಲಿ ಬೇರೆ ದೇಶದ ಜ್ಞಾನಿಯೊಬ್ಬರು ಸಂಪನ್ಮೂಲ ವ್ಯಕ್ತಿ ಆಗಿದ್ದರು. ರಾಜ್ಯದ ಮೂಲೆ ಮೂಲೆಯಿಂದ ಶಿಭಿರಾರ್ಥಿಗಳು ಹಾಜರಿದ್ದರು, ಇವರ ಮುಂದೆ ಮಾತನಾಡಬಾರದು ಭಾರತ ದೇಶದ ವಿಷಯ ಎಂಬುದನ್ನು ಅರಿತು, ಮೌನವಾಗಿ ಹೊರಗಡೆ ಬಂದೆ.
ಅಧಿಕಾರಿಯವರಿಗೆ ವಿಷಯ ತಿಳಿಸಿದಾಗ, ನಾನು ಅವರೊಂದಿಗೆ ಮಾತನಾಡುತ್ತೇನೆ, ಅವರು ಖಾಸಗಿ ಸಂಸ್ಥೆಯವರು ಅವರಿಗೆ ಗೊತ್ತಿಲ್ಲ ಸಾರ್ ಎಂದರು. ಸರಿ ಸಾರ್ ಅವರೊಂದಿಗೆ ನಾನು ಮಾತನಾಡಬೇಕು, ಅವರಿಗೆ ಸರ್ಕಾರಗಳ ಬಗ್ಗೆ ದ್ವೇಷ ಏಕೆ ? ಕೃಷಿ ಆಶ್ರಮಗಳ ಬಗ್ಗೆ ದ್ವೇಷ ಏಕೆ? ಅಥವಾ ನನ್ನ ಬಗ್ಗೆ ದ್ವೇಷ ಏಕೆ ? ಕೃಷಿ ಜ್ಞಾನ ಹಂಚಿಕೊಳ್ಳಲು ಅಸೂಯೇ ಏಕೆ? ಏನು ತೊಂದರೆ ಎಂಬ ಮಾಹಿತಿ ನನಗೆ ಕುತೋಹಲವಾಗಿದೆ ಎಂದಾಗ, ಅವರು ಖಂಡಿತಾ ಸೋಮವಾರ ಬನ್ನಿ ಸಾರ್ ಅವರೊಂದಿಗೆ ಸಮಾಲೋಚನೆ ನಡೆಸೋಣ ಎಂದಿದ್ದಾರೆ.
ಕಾದು ನೋಡೋಣ, ಅವರಿಗೆ ಯಾರ ಮೇಲೆ, ಏಕೆ ದ್ವೇಷವಿದೆ ಎಂಬ ವಿಚಾರ ತಿಳಿದು ಕೊಳ್ಳಲೇ ಬೇಕು ?
