16th April 2026
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದಲ್ಲಿ ವಿನೂತನವಾದ ಎನ್.ಆರ್.ಫಾರ್ಮರ್ ಸ್ಮಾರ್ಟ್ ವಿಲೇಜ್ ಅಥವಾ ಎನ್.ಆರ್.ಫಾರ್ಮರ್ ಸ್ಮಾರ್ಟ್ ಸಿಟಿ’ ತಲೆ ಎತ್ತಲಿದೆ. ನನ್ನ  ಫೆಬ್ರವರಿ 2026 ರ ದೆಹಲಿ ಪ್ರವಾಸದಲ್ಲಿ, ಸರಣೆ ಸಭೆಗಳನ್ನು ನಡೆಸಲಾಗಿದೆ. ಪ್ರತ್ಯೇಕವಾಗಿ ಫಾರ್ಮರ್ ಸಿಟಿ’ ಇರಲಿ. ಈ ಹೆಸರಿನಲ್ಲಿ ಫಾರ್ಮರ್’ ಬೇಡ ಎಂಬ ಸಲಹೆಗಳು ಬರುತ್ತಿವೆ. ಈ ಬಗ್ಗೆ ಪ್ರಜಾಪ್ರಭುತ್ವದ ಅಡಿಯಲ್ಲಿ, ಆಸಕ್ತರ ಸಲಹೆ ಮೇರೆಗೆ ತೀರ್ಮಾನ ಮಾಡಲು ಚಿಂತನೆ ನಡೆಸಲಾಗಿದೆ. ಇದೊಂದು ಬಹುಪಯೋಗಿ ಉದ್ದೇಶ ಹೊಂದಿದೆ.

ನಮ್ಮ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರ ಕನಸು, ನಂಬರ್ ಒನ್ ಕರ್ನಾಟಕ @ 2047’ ನಮ್ಮ ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಕನಸು ವಿಕಸಿತ ಭಾರತ @ 2047’, ನಾನೂ ಸಹ  ಈ ಬಗ್ಗೆ ವಿಶೇಷ ಅಧ್ಯಯನ ಮಾಡುತ್ತಿದ್ದೇನೆ.

ನಮ್ಮ ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ರವರು, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣವರು ಮತ್ತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಕನಸು ಕಾಣುತ್ತಿರುವುದು ‘ಗ್ರೇಟರ್ ತುಮಕೂರು’ ಆಗಿದೆ.

ಈ ಬಗ್ಗೆ ದೆಹಲಿಯಲ್ಲಿ ಸಮಾಲೋಚನೆ ನಡೆಸಲು, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ವಿ.ಸೋಮಣ್ಣವರೊಂದಿಗೆ ಸಮಯ ನಿಗಧಿ ಆಗಿದ್ದರೂ, ವಿವಿಧ ಕಾರಣಗಳಿಂದ ಭೇಟಿ ಸಾಧ್ಯವಾಗಲಿಲ್ಲ.  ಪರಮೇಶ್ವರ್ ರವರು, ತುಮಕೂರು ನಗರವನ್ನು  ಗ್ರೇಟರ್ ಬೆಂಗಳೂರಿನ ಒಂದು ಭಾಗವಾಗಿ ಮಾಡಲು ಮುಂದಾಗಿದ್ದೂ ಇತಿಹಾಸ.

ರಾಜಕೀಯ ಕಾರಣಗಳಿಂದ ಪರ – ವಿರೋಧ ಇದ್ದರೂ, ಮುಂದೆ ಒಂದು ದಿನ ತುಮಕೂರು ರಾಜ್ಯದ ಅಭಿವೃದ್ಧಿಯ ಮೆದುಳು’ ಆಗಲಿದೆ. ಸಿಲಿಕಾನ್ ಸಿಟಿ ಆಫ್ ಇಂಡಿಯಾ’ ಕ್ಕೆ ಮುನ್ನುಡಿ ಬರೆಯಲಿದೆ. ನನ್ನ 38 ವರ್ಷಗಳ ಸುಧೀರ್ಘ ಅಭಿವೃದ್ಧಿ ತಪಸ್ಸಿನ ಪಲವನ್ನು ರಾಜ್ಯದ ಅಭಿವೃದ್ಧಿಗೆ ಮೀಸಲೀಡಲೇ ಬೇಕಿದೆ.

ಬೆಂಗಳೂರು- ಪುಣೆ ಹೆದ್ಧಾರಿಯ ಅಕ್ಕ ಪಕ್ಕದಲ್ಲಿ, ಬೆಂಗಳೂರಿನಿAದ – ಬೆಳಗಾವಿ ಜಿಲ್ಲೆಯ ಕರ್ನಾಟಕದ ಗಡಿವರೆಗೆ  ಹಾಗೂ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ, ಸುಮಾರು 2725 ಕೀಮೀ ಫಾರ್ಮರ್ ಕಾರಿಡಾರ್’ ಗುರುತಿಸಲಾಗಿದೆ. ಈ ಭಾಗದಲ್ಲಿ, ಸುಮಾರು 9 ಕಡೆ 50 ರಿಂದ 100 ಎಕರೆ ವರೆಗಿನ ಜಮೀನುಗಳನ್ನು ಈಗಾಗಲೇ ಗುರುತಿಸಲಾಗಿದೆ. ಸರ್ಕಾರದ ಜಮೀನುಗಳ ಹಿಂದೆ ಬೀಳದೆ, ಖಾಸಗಿ ಜಮೀನನ್ನು, ಜಮೀನು ಮಾಲೀಕರ ಒಪ್ಪಿಗೆ ಮೇರೆಗೆ, ಭೂ ಸ್ವಾಧೀನ ಪಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಕೃಷಿ ಆಶ್ರಮಗಳ ನೇತಾರರು ಸಹಕರಿಸುತ್ತಿದ್ದಾರೆ.

ವಿಶ್ವದಲ್ಲಿ 212 ದೇಶಗಳಿವೆ ಎಂದು ಕೆಲವು ದಾಖಲೆಗಳಲ್ಲಿದೆ, ಕೆಲವು ದಾಖಲೆಗಳಲ್ಲಿ 195 ದೇಶಗಳಿವೆ ಎಂದಿದೆ, ನಮ್ಮ ರಾಜ್ಯದವರು ಸುಮಾರು 185 ದೇಶಗಳಲ್ಲಿ ಇದ್ದಾರಂತೆ, ನಾನಾ ತಂಡಗಳು ಅನಿವಾಸಿ ಭಾರತೀಯರ ಮತ್ತು ಕನ್ನಡಿಗರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ.

ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು,  88 ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ, ಇಳಿವಯಸ್ಸಿನಲ್ಲಿಯೂ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಇಲಾಖೆಯ ಸಚಿವರು ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಕಚೇರಿಗೆ ಬರುವ ಭರವಸೆ ನೀಡಿದ್ದಾರೆ. ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂಧಿಸುತ್ತಿದೆ, ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಬಂದರೆ ಸ್ಪಂಧಿಸುವ ಭರವಸೆ ನೀಡಿದ್ದಾರೆ. ಮುಂದಿನ ಲೋಕಸಭಾ ಅಧಿವೇಶನದ ವೇಳೆ ರಾಜ್ಯ ಪ್ರತಿನಿಧಿಸುವ ಕೇಂದ್ರದ ಸಚಿವರುಗಳು, ಪಕ್ಷಾತೀತವಾಗಿ ಎಲ್ಲಾ ಸಂಸದರ ಮತ್ತು ಸರ್ವ ಪಕ್ಷಗಳ, ನೇತೃತ್ವದಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲು ಭರದ ಸಿದ್ಧತೆ ನಡೆದಿದೆ.

ಆಸಕ್ತ ಸಂಸ್ಥೆಗಳೊ0ದಿಗೆ, ಪ್ರಸ್ತಾವನೆ ಸಿದ್ಧಪಡಿಸಲು ಮುಂದಿನ ವಾರದೊಳಗೆ ಎಂ.ಓ.ಯು ಮಾಡಿಕೊಳ್ಳಲು, ಶಕ್ತಿಪೀಠ ಫೌಂಡೇಷನ್ ಮುಂದಾಗಿದೆ.

ಆಸಕ್ತರು ಸಂಪರ್ಕಿಸಲು ಬಹಿರಂಗ ಮನವಿ ಮಾಡಲಾಗಿದೆ.