10th March 2026
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಸ್ಥಾಪನೆ ಮಹತ್ವ ಕುರಿತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸದನದ ಗಮನ ಸೆಳೆಯಲು ಮುಂದಾಗಿರುವ ಪ್ರಮುಖ ಅಂಶಗಳ ಪಕ್ಷಿನೋಟ.

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 2023ರಲ್ಲಿ ಅನುಸಂಧಾನ್ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಆರಂಭ ಮಾಡಿದೆ. ದೇಶದಲ್ಲಿ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ, ಸಂಶೋಧನಾ ಸಂಸ್ಥೆಗಳು, ಲ್ಯಾಬೊರೇಟರಿಗಳಿಗೆ ಹೊಸ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹಿಸುವ ವ್ಯವಸ್ಥೆಯನ್ನು ಕಲ್ಪಿಸಿದೆ. ಇದಕ್ಕಾಗಿ ದೇಶದ ಪ್ರತಿಯೊಂದು ರಾಜ್ಯಕ್ಕೂ  ಅನುದಾನವನ್ನೂ ಸಹ ನೀಡುತ್ತದೆ. ಪಡೆದುಕೊಳ್ಳಬೇಕಾದ್ದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ.

ಕರ್ನಾಟಕ ರಾಜ್ಯದಲ್ಲೂ ಕರ್ನಾಟಕ ರೀಸರ್ಚ್, ಡೆವಲಪ್‍ಮೆಂಟ್ ಅಂಡ್ ಇನೋವೇಷನ್ ಪಾಲಿಸಿ’ ಯನ್ನು 2022 ರಲ್ಲಿ ರಾಜ್ಯ ಸರ್ಕಾರ ತಂದಿದೆ. ಆರ್ಥಿಕ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ವಾಣಿಜ್ಯ ಮತ್ತ ಕೈಗಾರಿಕಾ ಇಲಾಖೆ, ಕೃಷಿ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹೀಗೆ ಪ್ರತಿಯಂದು ಇಲಾಖೆಗಳ ವಿಚಾರಧಾರೆಗಳನ್ನು ಸಹ ಇದರಲ್ಲಿ ಅಡಕ ಮಾಡಲಾಗಿದೆ.

ಆದ್ದÀರಿಂದ ನಮ್ಮ ರಾಜ್ಯದಲ್ಲಿಯೂ ಸಂಶೋಧನೆ ಮತ್ತು ಅಭಿವೃದ್ಧಿ, ಆವಿಷ್ಕಾರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿ ‘ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್’ ಸ್ಥಾಪಿಸಿ,   ಕೇಂದ್ರ ಸರ್ಕಾರದ ಹೆಚ್ಚಿನ ಅನುದಾನವನ್ನು ಪಡೆಯುವುದು ಸೂಕ್ತವಾಗಿದೆ.

ರಾಜ್ಯದಲ್ಲಿ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಸ್ಥಾಪಿಸಿ, ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಪ್ರಯೋಗಾಲಯಗಳು ಎಲ್ಲ ಕಡೆಗಳಲ್ಲಿ ನಡೆಯುವ ಅಧ್ಯಯನ, ಸಂಶೋಧನೆಗಳನ್ನು ಒಂದೇ ಸೂರಿನ ಅಡಿ’ಯಲ್ಲಿ ತರಬೇಕಾಗಿದೆ.

ಕಟ್ ಅಂಡ್ ಪೇಸ್ಟ್ ಸಂಶೋಧನೆಗಳಿಗೆ ಕಡಿವಾಣ ಹಾಕಿ, 2047 ವೇಳೆಗೆ ದೇಶದಲ್ಲಿಯೇ ನಂಬರ್ ಒನ್ ಕರ್ನಾಟಕ ಆಗಬೇಕಾದಲ್ಲಿ, ಕಾಲಮಿತಿ ನಿಗಧಿಗೊಳಿಸಿ’ 

  1. ಕರ್ನಾಟಕ ರೀಸರ್ಚ್, ಡೆವಲಪ್‍ಮೆಂಟ್ ಅಂಡ್ ಇನೋವೇಷನ್ ಪಾಲಿಸಿ 2022 ರ ಅನುಷ್ಠಾನ,
  2. ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಸ್ಥಾಪನೆ,
  3. ರಾಜ್ಯದ ಪ್ರತಿಯೊಂದು ಇಲಾಖೆಗಳಲ್ಲೂ ಜಿಡಿಪಿ ಆಧಾರಿತ ಶೇಕಡ 0.6- 0.7 ಅನುದಾನ ನಿಗಧಿಗೊಳಿಸುವುದು,
  4. ಕೇಂದ್ರ ಸರ್ಕಾರದ ಅನುಸಂಧಾನ್ ನ್ಯಾಷನಲ್ ರೀಸರ್ಚ್ ಫೌಂಡೇಷನ್‍ನಿಂದ. ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಮೂಲಕವೇ, ರಾಜ್ಯಕ್ಕೆ ಹೆಚ್ಚಿನ ಅನುದಾನ ಪಡೆದು ಸಂಶೋಧನೆ ಮತ್ತು ಅಭಿವೃದ್ಧಿ, ಆವಿಷ್ಕಾರ, ಅಧ್ಯಯನಗಳಿಗೆ ಪ್ರೋತ್ಸಾಹಿಸುವ ಕುರಿತು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
  5. ಈ ಉದ್ದೇಶಕ್ಕಾಗಿಯೇ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಮ್ಯೂಸಿಯಂ ಮತ್ತು ಕಚೇರಿ ಸ್ಥಾಪಿಸಲು ಬೆಂಗಳೂರು ನಗರದಲ್ಲಿ ಸ್ವಂತ ಕಟ್ಟಡ ನಿರ್ಮಾಣ.
  6. ಪ್ರತಿಯೊಂದು ಗ್ರಾಮ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಬಡಾವಣೆಗಳ ಸಂಶೋಧಕರನ್ನು ಗುರುತಿಸಿ, ಪ್ರೋತ್ಸಾಹಿಸಿ, ಅಭಿವೃದ್ಧಿ ಆಧಾರಿತ ಸಂಶೋಧನೆಗಳಿಗೂ ಹೆಚ್ಚಿನ ಆಸಕ್ತಿ ಮೂಡಿಸಲು ಆಂದೋಲನ ಹಮ್ಮಿಕೊಳ್ಳುವುದು.
  7. ಸ್ವಾತಂತ್ರ್ಯ ಬಂದಾಗಿನಿಂದ ನಡೆಸಿರುವ ಎಲ್ಲಾ ಇಲಾಖೆಗಳ, ಸಂಶೋಧನೆಗಳನ್ನು ಒಂದೇ ಸೂರಿನಲ್ಲಿ ಅಡಿಯಲ್ಲಿ ತರುವುದು.
  8. ಉತ್ತಮ ಆರೋಗ್ಯಕ್ಕಾಗಿ, ರಾಸಾಯನಿಕ ಕೃಷಿಯಿಂದ ರಾಸಾಯನಿಕ ಮುಕ್ತ ಕೃಷಿ ಸಂಶೋಧನೆಗಳಿಗೆ ಒತ್ತು.
  9. ಅನಿವಾಸಿ ಭಾರತೀಯರು. ಅನಿವಾಸಿ ಕರ್ನಾಟಕದವರು, ಆಸಕ್ತರು ಅವರ ಹುಟ್ಟೂರಿನ ಅಭಿವೃದ್ಧಿ ವಿಷಯಗಳಿಗೆ ವಿವಿಧ ದೇಶಗಳ/ವಿವಿಧ ರಾಜ್ಯಗಳ ಮಾದರಿಯ ಸಹಭಾಗಿತ್ವದ ಸಂಶೋಧನೆಗೆ ಒತ್ತು.

ಮೇಲ್ಕಂಡ 9 ಅಂಶಗಳ ಬಗ್ಗೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಿಂದ ಮಾಹಿತಿಯನ್ನು ಬಯಸಿ ಗಮನ ಸೆಳೆಯಲು ಬಯಸುತ್ತೇನೆ.