TUMAKURU:SHAKTHIPEETA FOUNDATION
ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಸಂಶೋಧನೆಗೆ ವಿಶೇಷ ಒತ್ತು ನೀಡಿದ್ದಾರೆ. ಮುಂದಿನ 5 ವರ್ಷಗಳ ಅವಧಿಗೆ ಒಂದು ಲಕ್ಷ ಕೋಟಿ ಅನುದಾನ ನೀಡಲಾಗಿದೆ ಎಂಬ ಮಾಹಿತಿ ಭಾರಿ ಸದ್ದು ಮಾಡುತ್ತಿದೆ.
ಕರ್ನಾಟಕದಲ್ಲಿ ಕೃಷಿ ಆಶ್ರಮಗಳಲ್ಲಿ/ ಸಾವಯವ ರೈತರು/ ರೈತ ಸಂಶೋದಕರು ಅದ್ಭುತವಾಗಿ ಸಂಶೋದನೆ ಮಾಡುತ್ತಿದ್ದಾರೆ, ಕೆಲವರು ಸದ್ದು ಮಾಡುತ್ತಿದ್ದಾರೆ, ಕೆಲವರು ಮೌನವಾಗಿ ಕ್ರಾಂತಿ ಮಾಡುತ್ತಿದ್ದಾರೆ. ಆದರೇ ಅವರ ಸಂಶೋದನೆಗಳಿಗೆ ಸರ್ಕಾರಗಳಿಂದ ಮನೆ ಬಾಗಿಲಿಗೆ ಸರ್ಟಿಫೀಕೇಟ್ ಕೊಡುವಂತಾಗಬೇಕು ಎಂಬ ಕನಸು ನನ್ನದಾಗಿದೆ.
ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಸ್ಥಾಪನೆಗಾಗಿ, ಕೃಷಿ ಆಶ್ರಮಗಳ ನಿಯೋಗ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್.ಭೋಸರಾಜ್ ರವರನ್ನು ಖುದ್ದು ಭೇಟಿಯಾಗಿ ಸಮಾಲೋಚನೆ ನಡೆಸಿದ್ದೇವೆ. ಕಳೆದ ಒಂದು ವರ್ಷ ಈ ಸಚಿವಾಲಯ ನನ್ನ ತವರು ಮನೆಯಂತಾಗಿದೆ. ಅದೇಕೋ ಏನೋ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಕಡತಕ್ಕೆ ಗ್ರಹಣ ಹಿಡಿದಿದೆ ಎಂದರೆ ತಪ್ಪಾಗಲಾರದು.
ದೆಹಲಿಯಲ್ಲಿ ಅನುಸಂಧಾನ್ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಕಚೇರಿಗೆ ಹೋಗಿ ಚರ್ಚೆ ನಡೆಸಬೇಕು ಎನಿಸಿತು. ಕಳೆದ ವಾರ ದೆಹಲಿಗೆ ಹೋಗಿದ್ದಾಗ ಕಚೇರಿಗೆ ಹೋಗಿ ಸ್ವಾಗತಕಾರರ ಬಳಿ ಹೋಗಿ ಮುಖ್ಯಸ್ಥರನ್ನು ಭೇಟಿಯಾಗಲು ಮನವಿ ಮಾಡಿದೆ. ಆತ ಕಚೇರಿಗೆ ಫೋನ್ ಹಚ್ಚಿ ಮಾತನಾಡಿದರು.
ಸಾರ್ ಯಾರಾದರೂ ಅಪಾಯಿಂಟ್ ಮೆಂಟ್ ನೀಡಿದ್ದಾರಾ, ಮೊದಲೇ ಫಿಕ್ಸ್ ಮಾಡಿಸಬೇಕಂತೆ ಎಂದರು. ನಾನು ಅವರಿಗೆ ಹೇಳಿದೆ ನಾನೊಬ್ಬ ರೈತ ಬೆಂಗಳೂರಿನಿAದ ಬಂದಿದ್ದೇನೆ, ನನಗೆ ಅದೆಲ್ಲಾ ಗೊತ್ತಿಲ್ಲ, ನಾನು ಭೇಟಿಯಾಗಲೇ ಬೇಕು ಎಂದೆ. ಆತ ಮತ್ತೆ ಅವರಿಗೆ ಫೋನ್ ಮಾಡಿ ಹೇಳಿದರು.
ಅವರು ಇಲ್ಲ ಬಿಳ್ಕೊಡಿಗೆ ಸಮಾರಂಭದಲ್ಲಿ ಇದ್ದಾರೆ, ನಾಳೆ ಬನ್ನಿ ಎಂದು ಹೇಳುತಿದ್ದಾರೆ ಎಂದರು, ನಾನು ನನ್ನ ವಿಮಾನದ ಟಿಕೇಟ್ ತೋರಿಸಿ ಸಂಜೆ ಬೆಂಗಳೂರಿಗೆ ಹೋಗಲೇ ಬೇಕು, ಯಾರಿದ್ದಾರೊ ಅವರೊಂದಿಗೆ ಸಮಾಲೋಚನೆ ನಡೆಸುತ್ತೇನೆ ಎಂದಾಗ ಮತ್ತೆ ಅವರು ಮಾತನಾಡಿದರು.
ಮತ್ತೆ ನನಗೆ ಅವರು ಹೇಳಿದ್ದು, ಅದೇ ಕತೆ ಅದೇ ಹಾಡು, ನಾನು ಅವರಿಗೆ ಅವರ ಇಂಟರ್ ಕಾಮ್ ಕೊಡಲು ಮನವಿ ಮಾಡಿದೆ, ಪಾಪ ಆತ ಒಳ್ಳೆಯ ಮಾನವೀಯತೆ ಉಳ್ಳವರು, ನನಗೆ ಕೊಟ್ಟರು ನನ್ನ ಬಾಷೆಯಲ್ಲಿ, ಇದು ಸರ್ಕಾರಿ ಕಚೇರಿನೋ, ಖಾಸಗಿ ಕಚೇರಿನೋ ಎಂದು ಕೇಳಿದೆ. ನಾನೊಬ್ಬ ರೈತ ನಿಮ್ಮ ಕಟ್ಟಡಕ್ಕೆ ಬಂದಿದ್ದೇನೆ, ಮುಖ್ಯಸ್ಥರ ನಂತರದ ವಿಜ್ಞಾನಿ ಅಥವಾ ಅಧಿಕಾರಿಯನ್ನು ಅಥವಾ ನಿಮ್ಮನ್ನು ಬೇಟಿಯಾಗಲೇ ಬೇಕು ಎಂದಾಗ ಅವರು ಅನುಮತಿ ನೀಡಿ, ಸ್ವಾಗತ ಕಾರರಿಗೆ ಫೋನ್ ಕೊಡಲು ಹೇಳಿದರು.
ಅವರು ಪಾಸ್ ನೀಡಿ, ಅವರ ಕಚೇರಿ ಮಾಹಿತಿ ನೀಡಿದರು. ಆಗ ಆತ ನನಗೆ ಕೇಳಿದ್ದು ಸಾರ್ ನಿಜವಾಗಲೂ ನೀವೂ ರೈತರ ಎಂದರು, ಯಾಕೆ ಎಂದು ಕೇಳಿದಾಗ, ಆತ ನಕ್ಕು ರೈತರಿಗೆ ಇಷ್ಟು ಶಕ್ತಿ ಇಲ್ಲ ಎಂದು ಕೊಂಡಿದ್ದೇನೆ ಎಂದರು.
ನಾನು ಹೋದಾಗ ಪುದುಚೇರಿಯ ಒಬ್ಬ ಹಿರಿಯ ವಿಜ್ಞಾನಿ ಸಂಪರ್ಕ ಮಾಡಿಸಿದರು, ನಾನು ಮೊದಲು ಕೇಳಿದ್ದು ಇಲ್ಲಿ ಕರ್ನಾಟಕದವರು ಯಾರಾದರೂ ಇದ್ದಾರೆಯೇ ಎಂದಾಗ ಅವರು ಮಾಹಿತಿ ಇಲ್ಲ ಎಂದರು, ತಾವೂ ಯಾವ ರಾಜ್ಯದವರು ಎಂದಾಗ ಪುದುಚೇರಿ ಎಂದರು, ಆಗ ನೀವೂ ದಕ್ಷಿಣ ರಾಜ್ಯದವರು ನಮ್ಮ ಪಕ್ಕದವರು ಎಂದಾಗ ಅವರ ಮುಖ ಭಾವನೆಯೇ ಬದಲಾಯಿತು.
ಸುಮಾರು 2 ಗಂಟೆಗಳ ಕಾಲ ಬಹಳಷ್ಟು ವಿಚಾರ ವಿನಿಮಯ ಮಾಡಿಕೊಂಡೆವು. ಆದರೂ ಮುಖ್ಯಸ್ಥರು ಬರಲಿಲ್ಲ. ನಾನು ಹೊರಟು ಲಿಪ್ಪ್ಗೆ ಬಂದಾಗ, ಅಲ್ಲೊಬ್ಬ ಕರ್ನಾಟಕ ಭವನದಲ್ಲಿ ಕೆಲಸ ಮಾಡುತ್ತಿದ್ದ ಪವನ್ ಎಂಬ ಹುಡುಗ ನನ್ನ ಗುರುತು ಹಿಡಿದು ಅರೆ ಬರೆ ಕನ್ನಡದಲ್ಲಿ ಮಾತನಾಡಿದರು.
ಕ್ಯಾಂಟೀನ್ ಚೆನ್ನಾಗಿದೆ, ಬನ್ನಿ ಸಾರ್ ಊಟ ಮಾಡೋಣ ಎಂದಾಗ ನಾನು ಅವರ ಜೊತೆ ಊಟ ಮಾಡಿದೆ, ನಂತರ ಊಟ ಮಾಡುವಾಗ ನನಗೆ ಹಲವಾರು ವಿಜ್ಞಾನಿಗಳ ಪರಿಚಯವಾಯಿತು.
ಸಂಶೋಧನೆ ಎಂದರೆ ಗುಜರಾತ್, ಪಶ್ಚಿಮ ಬಂಗಾಳ, ಕರ್ನಾಟಕ ಎಂದು ಹೇಳಿದರು. ಅತಿ ಹೆಚ್ಚು ಅನುದಾನ ಪಡೆಯುವ ರಾಜ್ಯಗಳು ಇವು ಎಂದರು, ನಾನು ಬೆಂಗಳೂರಿಗೆ ಬಂದು, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರೊಂದಿಗೆ ಮಾತನಾಡಿ ಎಲ್.ಎ.ಕ್ಯೂ ಹಾಕಲು ಮನವಿ ಮಾಡಿದೆ.
ಅವರು ಸಕಾರಾತ್ಮಕವಾಗಿ ಸ್ಪಂಧಿಸಿದರು, ಅವರಿಗೆ ಕೊಟ್ಟಿರುವ ಉತ್ತರ ಕೇಂದ್ರ ಸರ್ಕಾರದ ಅನುಸಂಧಾನ್ ನ್ಯಾಷನಲ್ ರೀಸರ್ಚ್ ಫೌಂಡೇಷನ್‌ಗೆ ಯಾವ ಪ್ರಸ್ತಾವನೆಯನ್ನು ಕಳುಹಿಸಿಲ್ಲ, ಅನುದಾನವೂ ಬಂದಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ.
ರಾಜ್ಯ ಸರ್ಕಾರಕ್ಕೆ ಗೊತ್ತಿಲ್ಲದೇ, ರಾಜ್ಯಕ್ಕೆ ಅನುದಾನ ಬರುವುದಾರೆ, ರಾಜ್ಯ ಸರ್ಕಾರ ಏಕೆ ಬೇಕು ?
ಫೆಡರಲ್ ಸಿಸ್ಟಂನಲ್ಲಿ ಹೀಗೂ ಉಂಟೆ ?
ಇದರ ಹಿನ್ನಲೆ ಬೆನ್ನು ಹತ್ತಿ, ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಶಾಸಕರಾದ ಶ್ರೀನಿವಾಸ್ ರವರು, ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ, ಸಚಿವರಾದ ಶ್ರೀ ಎನ್.ಎಸ್.ಬೋಸ್‌ರಾಜ್‌ರವರ ಜೊತೆ ಸಮಾಲೋಚನೆ ನಡೆಸಲಾಗಿದೆ. ಸಚಿವರ ಆಪ್ತಕಾರ್ಯದರ್ಶಿ ಶ್ರೀ ವೀರಭಧ್ರ ಹಂಚಿನಾಳರವರು ಇದ್ದರು.
ನನ್ನ ಗುರಿ ಅತಿ ಹೆಚ್ಚು ಅನುದಾನವನ್ನು ಕೃಷಿ ಸಂಶೋದನೆಗಳಿಗೆ ಪಡೆಯಲೇ ಬೇಕು ಎಂಬುದಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಯರ‍್ಯಾರು ಹೇಗೆ ಚರ್ಚೆ ಮಾಡುತ್ತಾರೋ ಕಾದು ನೋಡೋಣ?
