15th September 2024
Share

ಕರ್ನಾಟಕ ರಾಜ್ಯಕ್ಕೆ ಜನವರಿ 2  ಮತ್ತು 3 ನೇ ತಾರೀಖು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರು ಆಗಮಿಸುವುದರಿಂದ ಹಾಗೂ ತುಮಕೂರಿಗೂ ಬರುವುದರಿಂದ ಈ ಅವಕಾಶವನ್ನು ಬಳಸಿಕೊಂಡು ತುಮಕೂರು ಜಿಲ್ಲೆಗೆ ಮತ್ತು ಕರ್ನಾಟಕ ರಾಜ್ಯಕ್ಕೆ ಅನೂಕೂಲವಾಗುವ ನೀರಿನ ಯೋಜನೆಗಳ ಬಗ್ಗೆ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡುವ ಸಂಬಂದ ದಿನಾಂಕ:26.12.2019 ರಂದು ತುಮಕೂರಿನ ಶ್ರೀ ಸಾಯಿಬಾಬಾ ದೇವಾಲಯದಲ್ಲಿ ಸಭೆ ನಡೆಸಿದರು.

  ತುಮಕೂರು ಜಿಲ್ಲೆಗೆ ಅನೂಕೂಲವಾಗುವ ಯೋಜನೆಗಳ ಬಗ್ಗೆ ಒಂದು ಮನವಿ ಮಾಡಿ ಜಿಲ್ಲಾಡಳಿತ ಮತ್ತು ಮುಖ್ಯ ಕಾರ್ಯದರ್ಶಿವರ ಮುಖಾಂತರ ಮೊದಲೇ ಪತ್ರ ಸಲ್ಲಿಸುವುದು.

  ಕರ್ನಾಟಕ ರಾಜ್ಯದಲ್ಲಿ ಅಟಲ್ ಭೂಜಲ್ ಯೋಜನೆ ಜಾರಿ, ಊರಿಗೊಂದು ಕೆರೆ- ಆಕೆರೆಗೆ ನದಿ ನೀರು, ಕರ್ನಾಟಕ ರಾಜ್ಯದ ನದಿ ಜೋಡಣೆ ಯೋಜನೆ ಬಗ್ಗೆ ಮನವಿ ಪತ್ರ ಮಾಡಿ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಮೂಲಕ ಹಾಗೂ ಕೇಂದ್ರವನ್ನು ಪ್ರತಿನಿಧಿಸುವ ರಾಜ್ಯದವರೇ ಆದ ಶ್ರೀಮತಿ ನಿರ್ಮಲಾಸೀತಾರಾಂ. ಶ್ರೀ ಡಿ.ವಿ.ಸದಾನಂದಾಗೌಡರವರು, ಶ್ರೀ ಪ್ರಹ್ಲಾದ್ ಜೋಷಿಯವರು ಮತ್ತು ಶ್ರೀ ಸುರೇಶ್ ಅಂಗಡಿಯವರಿಗೂ ಹಾಗೂ ಕರ್ನಾಟಕ ಬಿಜೆಪಿ ಪಕ್ಷದ  ರಾಜ್ಯಾಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಪಾಟೀಲ್‌ರವರಿಗೂ ಪತ್ರ ಬರೆಯಲು ಅಗತ್ಯ ಕ್ರಮಕೈಗೊಳ್ಳಲು ಅಭಿವೃದ್ಧಿ ವಿಷನ್ ಗ್ರೂಪ್‌ಗೆ ಸೂಚಿಸಿದರು.

  ಈ ಸಂಬಂದ ಮಾನ್ಯ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ದಿನಾಂಕ:21.10.2019 ರ ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯ, ದಿನಾಂಕ:30.11.2019 ರಂದು ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ ನಡೆದ ಸಭೆ ನಿರ್ಣಯಗಳ ಅಂಶಗಳನ್ನು ಗಣನೆಗೆ ತೆಗೆದು ಕೊಳ್ಳಲು ಸೂಚಿಸಿದರು.

  ಈಗಾಗಲೇ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಯವರಿಗೆ ದಿನಾಂಕ:10.10.2019  ರಂದು ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ ಜಾರಿಗೊಳಿಸಲು ಹಾಗೂ ದಿನಾಂಕ:12.10.2019 ರಂದು ನದಿ ಜೋಡಣೆ ಬಗ್ಗೆ ಬರೆದ ಪತ್ರಗಳ ಅಂಶಗಳನ್ನು ಗಣನೆಗೆ ತೆಗೆದು ಕೊಂಡು ಮನವಿ ಸಿದ್ಧಪಡಿಸಲು ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಕೇಶ್ ಸಿಂಗ್ ರವರಿಗೆ ದೂರವಾಣಿಯಲ್ಲಿ ಸಮಾಲೋಚನೆ ನಡೆಸಿದರು. ಈ ಪತ್ರವನ್ನು ಮಾನ್ಯ ಮುಖ್ಯ ಮಂತ್ರಿಗಳು, ಮಾನ್ಯ ಪ್ರಧಾನ ಮಂತ್ರಿಗಳಿಗೆ ನೀಡುವುದು ಅಗತ್ಯವಾಗಿದೆ ಎಬ ಬಗ್ಗೆಯೂ ಚರ್ಚಿಸಿದರು.