24th December 2024
Share

 ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಜಿಯವರು ತುಮಕೂರಿನಲ್ಲಿ 2 ನೇ ತಾರಿಖು ಈ ರೀತಿ ಭಾಷಣ ಆರಂಭಿಸಲಿ ಎನ್ನುವುದು ಕರ್ನಾಟಕ ಜನತೆಯ ಆಶಯ

 ’ಕರ್ನಾಟಕದ ಸೋದರ ಸೋದರಿಯರೇ ನಿಮ್ಮ ಮುಖ್ಯಮಂತ್ರಿಯವರಾದ ಮಾನ್ಯ ಯಡಿಯೂರಪ್ಪಾಜಿ, ತುಮಕೂರು ಎಂಪಿ ಬಸವರಾಜ್‌ಜಿ ಯವರು ಊರಿಗೊಂದು ಕೆರೆ- ಆಕೆರೆಗೆ ನದಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲು ಮನವಿ ಸಲ್ಲಿಸಿದ್ದಾರೆ, ಯೋಜನೆ ಪ್ರಸ್ತಾವನೆ ಸಲ್ಲಿಸಿದರೆ ನಮ್ಮ ಸರ್ಕಾರ ಪೈಲಟ್ ಯೋಜನೆಯಾಗಿ ಮಂಜೂರು ಮಾಡುತ್ತದೆ.’ ಎಂಬುದಾಗಿದೆ.

ಮಾನ್ಯ ಶ್ರೀ ನರೇಂದ್ರ ಮೋದಿಜಿಯವರು ಈ  ಅವಧಿಯಲ್ಲಿ ರೈತರಿಗೆ ನೀರಿನ ಯೋಜನೆ ಜಾರಿಗೊಳಿಸಲು ಮುಂದಾಗಿದ್ದಾರೆ.

ಮಾನ್ಯ ಶ್ರೀ ಅಮಿತ್‌ಷಾ ರವರ ನೇತೃತ್ವದ ಬಿಜೆಪಿ ಪಕ್ಷ ದೇಶದ ಜನೆತೆಗೆ ನೀರಾವರಿ ಯೋಜನೆ ಅಜೆಂಡಾ ರೂಪಿಸಲಿ.

ಆರ್.ಎಸ್.ಎಸ್, ನ ಪ್ರಮುಖ ಅಜೆಂಡಾಗಳೆಲ್ಲವನ್ನು ಮೋದಿಜಿ ಸರ್ಕಾರ ಹಿಡೇರಿಸುತ್ತಾ ಬಂದಿದೆ, ಹೊಸದಾಗಿ ಆರ್.ಎಸ್.ಎಸ್ ನ ಪ್ರಮುಖ ಅಜೆಂಡಾ ದೇಶದ ಜಲಸಂಗ್ರಹಾಗಾರಗಳನ್ನು ಗಂಗಾಮಾತೆ ದೇವಾಲಯಗಳೆಂದು ಘೋಶಿಸಿ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಶ್ರಮಿಸುವುದಾಗಲಿ.

ಕರ್ನಾಟಕದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂಪ್ಪನವರು ರಾಜ್ಯದ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆಗೆ ಚಾಲನೆ ನೀಡಲಿದ್ದಾರೆ.

ನಮ್ಮ ರಾಜ್ಯದ ರೈತರ ಶ್ರೇಯೋಭಿವೃದ್ಧಿಗಾಗಿ ಇವರೆಲ್ಲರ ಕನಸುಗಳನ್ನು  ಕರ್ನಾಟಕ ರಾಜ್ಯದ 28 ಜನ ಲೋಕಸಭಾ ಸದಸ್ಯರು, 12 ಜನ ರಾಜ್ಯಸಭಾ ಸದಸ್ಯರು, 225 ಜನ ವಿಧಾನ ಸಭಾ ಸದಸ್ಯರು ಮತ್ತು 75 ಜನ ವಿಧಾನಪರಿಷತ್ ಸದಸ್ಯರು ಮತ್ತು ಇಬ್ಬರು ದೆಹಲಿ ಪ್ರತಿನಿಧಿಗಳು ಸೇರಿದಂತೆ 342 ಜನರ ಸಹಕಾರದಿಂದ ಯಶಸ್ವಿ ಅನುಷ್ಠಾನಕ್ಕೆ 108 ಶಕ್ತಿಪೀಠಗಳ ದೇವತೆಗಳ ಅನುಗ್ರಹದಂತೆ ತುಮಕೂರಿನ ಶಕ್ತಿಪೀಠ ಫೌಂಡೇಷನ್ ಅವಿರತವಾಗಿ ಶ್ರಮಿಸಲು ಮುಂದಾಗಿದೆ. ಅದಕ್ಕೋಸ್ಕರವೇ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು, ಜೆಜಿ ಹಳ್ಳಿ ಹೋಬಳಿ, ಕೆ.ಆರ್.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡನಹಳ್ಳಿ ಗ್ರಾಮದ ಪಕ್ಕದಲ್ಲಿರುವ ಬಗ್ಗನಡು ಕಾವಲ್‌ನಲ್ಲಿ ಜಲಭಾರತ ಪ್ರಾತ್ಯಕ್ಷಿಕಿಯೊಂದಿಗೆ ಜಲಪೀಠ ಆರಂಭವಾಗಿದೆ. ತಾವೂ ಸಹಕರಿಸಲು ಮನವಿ.