12th September 2024
Share

ಅಟಲ್ ಭೂ ಜಲ್ ಯೋಜನೆ ಜಾರಿಗೊಳಿಸಿ ಕಿಸಾನ್ ಸಮ್ಮಾನ್ ಯೋಜನೆ ರೈತರ ಸಮಾವೇಶಕ್ಕೆ ಕರ್ನಾಟಕ ರಾಜ್ಯದ ತುಮಕೂರು ನಗರಕ್ಕೆ ಭೇಟಿ ನೀಡುವ ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ನೀಡುವ ಪತ್ರದ ಪೂರ್ವ ತಯಾರಿಯೇ ಒಂದು ವಿಶಿಷ್ಠವಾಗಿತ್ತು.

ತುಮಕೂರು ಲೋಕಸಭಾ ಸದಸ್ಯ ಹಾಗೂ ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮೊದಲು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ತೆಗೆದುಕೊಂಡು   ಪ್ರತಿಗ್ರಾಮದಲ್ಲಿರುವ ಜಲಸಂಗ್ರಹಾಗಾರಗಳು, ಹಳ್ಳ ಕರಾಬು, ಕೊಳವೆ ಭಾವಿ ಮತ್ತು ಭಾವಿಗಳ ಡಿಜಿಟಲ್ ಮಾಹಿತಿ ಸಂಗ್ರಹಿಸಿ ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ ಮಾಡುವುದು ಹಾಗೂ ಪ್ರತಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ವೃಕ್ಷಪ್ರಾಧಿಕಾರ ರಚಿಸಿ ಗಿಡಗಳ   ಡಿಜಿಟಲ್ ಮಾಹಿತಿಯುಳ್ಳ ಜಲಗ್ರಾಮ ಕ್ಯಾಲೆಂಡರ್ ರಚಸಿಲು ಒಂದು ಮನವಿ ಪತ್ರ ನೀಡಿದ್ದರು. ಈ ಮಾಹಿತಿ ತಯಾರಿಸಲು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಶ್ರೀ ಮೃತ್ಯುಂಜಯ ಸ್ವಾಮಿರವರಿಗೆ ಮುಖ್ಯ ಮಂತ್ರಿಗಳು ಆದೇಶ ನೀಡಿದ್ದರು.

  ರಾಜ್ಯದ ಕೆರೆಗಳಿಗೆ ನದಿ ನೀರು ತುಂಬಿಸಲು ಮತ್ತು ಯಾವ ನದಿ ಮೂಲಗಳ ಯೋಜನೆ ಜಾರಿಗೊಳಿಸ ಬಹುದು ಎಂಬ ಬಗ್ಗೆ ಯೋಜನಾವಾರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಪತ್ರ ನೀಡಿದ್ದರು. ಈ ಮಾಹಿತಿ ತಯಾರಿಸಲು ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಕೇಶ್ ಸಿಂಗ್ ಮತ್ತು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಶ್ರೀ ಮೃತ್ಯುಂಜಯ ಸ್ವಾಮಿರವರಿಗೆ ಮುಖ್ಯ ಮಂತ್ರಿಗಳು ಆದೇಶ ನೀಡಿದ್ದರು.

ಜಿ.ಎಸ್.ಬಸವರಾಜ್‌ರವರು ಮಾನ್ಯ ಮುಖ್ಯ ಮಂತ್ರಿಗಳ ಆದೇಶದ ಮೇರೆಗೆ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ವಿಷಯ ಮಂಡಿಸಿ, ರಾಜ್ಯಾಧ್ಯಾಂತ ಪರಿಣಿತ ತಜ್ಞರನ್ನು ಕರೆಸಿ ಸಮಾಲೋಚನೆ ನಡೆಸಿದ್ದರು. ಎರಡು ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದ್ದರು.

ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ತೆಗೆದು ಕೊಂಡು ನಂತರ ರಾಜ್ಯ ಮಟ್ಟಕ್ಕೆ ವಿಸ್ತರಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರಿಂದ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಕೇಶ್‌ಸಿಂಗ್‌ರವರ ಅಧ್ಯಕ್ಷತೆಯಲ್ಲಿ ಕಾವೇರಿ ನೀರಾವರಿ ನಿಗಮದಲ್ಲಿ ಸಭೆಯನ್ನು ನಡೆಸಲಾಗಿತ್ತು.

ಸಭೆಯ ನಿರ್ಣಯ ಮತ್ತು ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯ ಹಾಗೂ ಶ್ರೀ ಜಿ.ಎಸ್.ಬಸವರಾಜ್ ರವರ ಪತ್ರಗಳ ವಿಷಯದ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ಮಾನ್ಯ ಪ್ರಧಾನ ಮಂತ್ರಿಯವರಿಗೆ ಮಾನ್ಯ ಮುಖ್ಯ ಮಂತ್ರಿಗಳು  ಬರೆಯುವ ಪತ್ರಕ್ಕೆ ಪೂರಕವಾಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಕೆ.ಜೈಪ್ರಕಾಶ್ ರವರ ನೇತೃತ್ವದ  ಒಂದು ತಂಡ ಶ್ರೀ ರಾಕೇಶ್ ಸಿಂಗ್ ಮತ್ತು ಶ್ರೀ ಲಕ್ಷ್ಮಣರಾವ್ ಪೇಶ್ವೆರವರ ಹಾಗೂ ಶ್ರೀ ಮೃತ್ಯುಂಜಯ ಸ್ವಾಮಿರವರ ಸಲಹೆಗಳನ್ನು ಒಳಗೊಂಡಂತೆ

ಶ್ರೀ ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕದಲ್ಲಿ ಕೈಗೊಳ್ಳುವ ಕೆರೆಗಳಿಗೆ ನದಿ ನೀರು ಬೃಹತ್ ಯೋಜನೆ ಮತ್ತು ಜಲಸಂಗ್ರಹಾಗಾರಗಳ ಅಭಿವೃದ್ಧಿ ಮತ್ತು ಸಂರಕ್ಷಣೆ ಯೋಜನೆ ಮಾಹಿತಿಯನ್ನು ಸಿದ್ಧಗೊಳಿಸಿ ಮಾನ್ಯ ಮುಖ್ಯ ಮಂತ್ರಿಯವರಿಗೆ ನಿಯಮ ಪ್ರಕಾರ ಸಲ್ಲಿಸಿದೆ. 

ಶ್ರೀ ಜಿ.ಎಸ್.ಬಸವರಾಜ್‌ರವರು ಕೇಂದ್ರ ಸರ್ಕಾರದ ಕಳೆದ ಮುಂಗಡ ಪತ್ರಗಳ ಅಂಶ ಹಾಗೂ ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ   ಭರವಸೆ ನೀಡಿದ ಅಂಶಗಳನ್ನು ಗಣನೆಗೆ ತೆಗೆದು ಕೊಂಡು ವರದಿಯಲ್ಲಿನ ಪ್ರತಿಯೊಂದು ಪದಗಳನ್ನು ಅಧ್ಯಯನ ಮಾಡಿ ಸಲಹೆ ಸೂಚನೆ ನೀಡಿದ್ದು ಅವಿಸ್ಮರಣೀಯವಾಗಿತ್ತು. ಶ್ರೀ ಮೋದಿಜಿಯವರು ತುಮಕೂರಿಗೆ ಬರುವ ದಿನಾಂಕ ನಿಗದಿ ಮಾಡಿದ ದಿನದಿಂದ ಪ್ರತಿ ದಿನ ಒಂದೇ ಸಮನೆ ಶ್ರಮಿಸಿದ ಅವಕಾಶ ನಿಜಕ್ಕೂ ತಂಡದ ಎಲ್ಲರಿಗೂ ತೃಪ್ತಿ ತಂದಿದೆ.