7th December 2023
Share

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಅತಿ ಹೆಚ್ಚು ಅನುದಾನ ಪಡೆಯಲು ಪಣ ತೊಟ್ಟಿರುವ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ದಿಶಾ ಟಾಸ್ಕ್ ಫೋರ್ಸ್ ರಚಿಸಲು ಮುಂದಾಗಿದ್ದಾರೆ ಎಂಬ ಕುತೂಹಲಕಾರಿ ಅಂಶ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ದಿಶಾ ಟಾಸ್ಕ್ ಫೋರ್ಸ್ ಚೇರ್‍ಮನ್ ಹುದ್ದೆಯನ್ನು ಪಕ್ಷದ ಚುನಾಯಿತ ಜನಪ್ರತಿನಿಧಿಗಳಿಗೆ ನೀಡಬೇಕೆ? ಪಕ್ಷದ ಕಾರ್ಯಕರ್ತರಿಗೆ ನೀಡಬೇಕೆ ?  ಅಥವಾ ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಹೋಗುವ ಸಾಮಾರ್ಥ್ಯ ಇರುವ ಪಕ್ಷಾತೀತ ವ್ಯಕ್ತಿಗೆ ನೀಡಬೇಕೆ ಎಂಬ ಚಿಂತನೆ ನಡೆಯುತ್ತಿದೆಯಂತೆ.

ಯಾವುದೇ ಹಣಕಾಸು ವ್ಯವಹಾರ ಇರದ ಈ ಹುದ್ದೆಗೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಅಭಿವೃದ್ಧಿ ಯೋಜನೆಗಳ ಸಂಶೋಧನೆ ಮಾಡುವ ಚಾಕಚಾಕ್ಯತೆ ಇರುವವರಿಗೆ ನೀಡುವುದು ಸೂಕ್ತವಾಗಿದೆ ಎಂಬ ಚರ್ಚೆಯೂ ನಡೆಯುತ್ತಿದೆಯಂತೆ.

ದಿಶಾ ಟಾಸ್ಕ್ ಫೋರ್ಸ್ ಚೇರ್‍ಮನ್‌ರವರ ಆಪ್ತ ಕಾರ್ಯದರ್ಶಿ ಹುದ್ದೆಗೆ ಸಮರ್ಥ ಅಧಿಕಾರಿಯೊಬ್ಬರ ಆಯ್ಕೆ ಮತ್ತು ಈ ಕಚೇರಿಯ ನೌಕರರ ವರ್ಗವೇ ಅಭಿವೃದ್ಧಿ ವಿಷನ್ ಗ್ರೂಪ್‌ನಂತೆ ಕಾರ್ಯ ನಿರ್ವಹಿಸಬೇಕು ಎಂಬ ಧೃಡ ನಿಲುವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

About The Author