7th December 2024
Share

ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ನೀತಿ ಆಯೋಗ 2022 ಕ್ಕೆ ಗಡುವು ನೀಡಿ ಸ್ಟ್ರಾಟಜಿ ಫಾರ್ 75 ಎಂಬ ವಿನೂತ ಯೋಜನೆಯನ್ನು ಘೋಶಿಸಿದೆ. ಜೊತೆಗೆ ಜಿಡಿಪಿ ಬೆಳವಣಿಗೆಗೆ 5 ಟ್ರಿಲಿಯನ್ @ 2024-2025 ಎಂಬ ಘೋಷಣೆಯೊಂದಿಗೆ ಭಧ್ರಾ ಬುನಾದಿ ಹಾಕುವ ಕನಸು ಕಂಡಿದ್ದಾರೆ.

ಇದಕ್ಕೆ ಯಾವುದೇ ಮಲತಾಯಿ ದೊರಣೆ ಇಲ್ಲದೆ ಎಲ್ಲಾ ರಾಜ್ಯಗಳು ಹಗಲಿರಳು ಶ್ರಮಿಸಿದರೆ ಮಾತ್ರ ಗುರಿ ತಲುಪಬಹುದು, ಇಲ್ಲದೆ ಇದ್ದಲ್ಲಿ ಯೋಜನೆಗಳು ಘೋಷಣೆಯಾಗಿಯೇ ಮುಂದುವರೆಯಲಿವೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಹೆಚ್ಚು ಹೆಚ್ಚು ಪ್ರಸ್ತಾವನೆಗಳನ್ನು ಸಲ್ಲಿಸಲು ಮೋದಿಯವರು ರಾಜ್ಯದ ಮುಖ್ಯ ಮಂತ್ರಿಗಳಿಗೆ ರಹಸ್ಯವಾಗಿ ಸೂಚಿಸಿದ್ದಾರೆ ಎನ್ನಲಾಗಿದೆ.

ವಿಶೇಷವಾಗಿ ಕರ್ನಾಟಕಕ್ಕೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ರಾಜ್ಯಕ್ಕೆ ಮೋದಿ ಗಿಫ್ಟ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು  ರಾಜ್ಯ ಮುಂಗಡ ಪತ್ರಕ್ಕೆ ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಲು ಪಕ್ಷಾತೀತವಾಗಿ ರಾಜ್ಯದ 28 ಜನ ಲೋಕಸಭಾ ಸದಸ್ಯರು, 12  ಜನ ರಾಜ್ಯಸಭಾ ಸದಸ್ಯರು, 225 ಜನ ವಿಧಾನಸಭಾ ಸದಸ್ಯರು ಹಾಗೂ 75  ಜನ ವಿಧಾನಪರಿಷತ್ ಸದಸ್ಯರೂ ಸೇರಿದಂತೆ 340 ಜನರಿಗೂ ಪತ್ರ ಬರೆಯಲು ಸೂಚಿಸಿದ್ದಾರೆ ಎನ್ನಲಾಗಿದೆ.

ತಾವುಗಳು ಮುಂದಿನ ನಿಮ್ಮ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಕನಿಷ್ಟ ಪಕ್ಷ ತಲಾ 5 ಯೋಜನೆಗಳಿಗೆ ಗುರಿಯಿಟ್ಟು ಕೊಂಡು ಪ್ರಸ್ತಾವನೆ ಸಲ್ಲಿಸಿದಲ್ಲಿ ಒಂದು ಗುರಿ ತಲುಪಬಹುದು. ಪ್ರಸ್ತಾವನೆಗೂ ಮುನ್ನ ನಿರ್ಧಿಷ್ಠ ಯೋಜನೆಗೆ ಅಗತ್ಯವಿರುವ ಭೂಮಿಯ ಮಾಹಿತಿಗಳೊಂದಿಗೆ ಮಾಹಿತಿ ನೀಡಿ ಎಂಬ ಟಿಪ್ಪಣೆ ರೆಡಿಯಾಗಲಿದೆಯಂತೆ. 

ರಹಸ್ಯವಾಗಿ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನತೆಗೆ ಅಗತ್ಯವಿರುವ ಯೋಜನೆಗಳನ್ನು ಆಯ್ಕೆ ಮಾಡಿ ಪಟ್ಟಿಕಳುಹಿಸಲು ಪಕ್ಷದ ಘಟಕಗಳ ಅಧ್ಯಕ್ಷರಿಗೆ ಸೂಚನೆ ಹೋಗಲಿದೆಯಂತೆ. ಕೇಂದ್ರ ಸರ್ಕಾರದ ಯೋಜನೆಗಳು ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೆ ಜಾಣ ಎಂಬಂತೆ ಇರುತ್ತವೆ, ಸೂಕ್ತ ಪ್ರಸ್ತಾವನೆ ಕಳುಹಿಸಿ ಕಡತದ ಅನುಸರಣೆ ಮಾಡಿದರೆ ಗ್ಯಾರಂಟಿ ಪ್ರತಿಫಲ ದೊರಲಿಯಿದೆ.