ಮಾಜಿ ಸಚಿವರಾದ ಮಾನ್ಯ ಶ್ರೀ ಟಿ.ಬಿ.ಜಯಚಂದ್ರರವರು ಅಧಿಕಾರದಲ್ಲಿದ್ದಾಗ ದಕ್ಷಿಣ ಭಾರತದ ನದಿ ಜೋಡಣೆ ಮಾಡುವ ಕನಸು ಹೊತ್ತಿದ್ದರು. ಆಗಿಂದಾಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಪ್ರಸ್ತಾಪಿಸುತ್ತಿದ್ದರು. ಚುನಾವಣೆಯಲ್ಲಿ ಸೋತ ನಂತರ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಿದರು ಅಷ್ಟು ಎಫೆಕ್ಟ್ ಕಾಣಲಿಲ್ಲ.ವಿಷಯ ತಿಳಿದವರು ಸುಮ್ಮನೇ ಕೂರಬಾರದು, ಅಧಿಕಾರ ಇಲ್ಲದೇ ಇದ್ದಾಗ ಬಹಳಷ್ಟು ಸಮಯವಿರುತ್ತದೆ.
ತಾವು ಮೋದಿಯವರಿಗೆ ಬರೆದ ಪತ್ರ ನೋಡಿದ್ದೇನೆ, ತಮ್ಮ ಕಳಕಳಿ ಬಗ್ಗೆ ಹೆಮ್ಮೆಯಿದೆ, ಆದರೆ ಮನವಿ ಮಾಡಿದರೇ ಸಾಲದು ಬೀದಿಗೂ ಇಳಿಯಬೇಕು ಸ್ವಾಮಿ.
ಜೊತೆಗೆ ಕೇಂದ್ರ ಸರ್ಕಾರ ಮಾಡಲು ಉದ್ದೇಶಿಸಿರುವ ನದಿ ಜೋಡಣೆಯಿಂದ ನಮ್ಮ ರಾಜ್ಯಕ್ಕೆ ಅರೆ ಕಾರಿಸಿನ ಮಜ್ಜಿಗೆ ಎಂಬ ಗಾದೆ ಮಾತಿನಂತಿದೆ. ರಾಜ್ಯಾಧ್ಯಾಂತ ಯಾವ, ಯಾವುದೋ ವಿಚಾರಗಳಿಗೆ ಕಾಂಗ್ರೆಸ್ ಬೀದಿಗಿಳಿದು ಮಾನ ಕಳೆದು ಕೊಳ್ಳುವ ಬದಲು ನದಿ ಜೋಡಣೆ ಬಗ್ಗೆ ಸಕ್ರೀಯವಾಗಿ ಬೀದಿಗಿಳಿಯಿರಿ ಸ್ವಾಮಿ.