8th December 2024
Share

2022  ಕ್ಕೆ ರೈತರ ಆದಾಯ ದುಪ್ಪಟ್ಟು ಮಾಡುವ ಸಲುವಾಗಿ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಯಾವ ಬೆಳೆ ಹೆಚ್ಚಾಗಿ ಬೆಳೆಯುತ್ತಾರೆ, ಅಲ್ಲಿ ಮೌಲ್ಯವರ್ದಿತ ಉತ್ಪನ್ನಗಳ ಕ್ಲಸ್ಟರ್ ಮಾಡುವ ಮೂಲಕ ರೈತರ ನೆರವಿಗೆ ಬನ್ನಿ ಎಂದು ರಾಜ್ಯ ಸರ್ಕಾರಕ್ಕೆ ಖಡಕ್ ವಾರ್ನಿಂಗ್ ನೀಡಿದರು.

ಕೇಂದ್ರ ನೆರವು ನೀಡಲಿಲ್ಲ ಎಂದು ಏಕೆ ಅಬ್ಬರಿಸುತ್ತೀರಿ ಕ್ಲಸ್ಟರ್ ಪ್ರಸ್ತಾವನೆ ಸಲ್ಲಿಸಿ ಹಣ ಪಡೆದುಕೊಳ್ಳಿ ಎಂದು ಚಾಟಿ ಬೀಸಿದರು. ಕ್ಲಸ್ಟರ್ ಮಾಡಲು ಕೇಂದ್ರ ಸರ್ಕಾರ ಸಾಕಷ್ಟು ಆರ್ಥಿಕ ನೆರವು ನೀಡಲಿದೆ. ಅದನ್ನು ಉಪಯೋಗಿಸಿಕೊಳ್ಳಿ ಎಂದು ಪರೋಕ್ಷವಾಗಿ ಕೇಂದ್ರದ ನೆರವು ಪಡೆಯಲು ದಾರಿ ತೋರಿದರು.

  ಒಬ್ಬ ಪ್ರಧಾನಿ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಗುಲಾಬಿ, ಕೋಲಾರದಲ್ಲಿ ತರಕಾರಿ, ಮಂಗಳೂರಿನಲ್ಲಿ ಮೀನು, ಚಿಕ್ಕಮಂಗಳೂರಿನಲ್ಲಿ ಕಾಫಿ, ಗಂಗಾವತಿಯಲ್ಲಿ ಅಕ್ಕಿ ಹೀಗೆ ಎಲ್ಲಾ ಜಿಲ್ಲಾವಾರು ಬೆಳೆಗಳ ಮಾಹಿತಿಯನ್ನು  ಹೇಳುವ ಮೂಲಕ ರಾಜ್ಯದ ನಾಯಕರನ್ನು ತಬ್ಬಿಬ್ಬು ಮಾಡಿದಂತಿತ್ತು.

ಶಕ್ತಿಪೀಠ ಫೌಂಡೇಷನ್ ತುಮಕೂರು ಸ್ಮಾರ್ಟ್ ಸಿಟಿಯ ಸ್ಕಿಲ್ ಸಿಟಿಯಲ್ಲಿ ಇದೇ ಯೋಜನೆಗಳ ಅಧ್ಯಯನ ಕೇಂದ್ರ, 342  ರೈತರ ಉತ್ಪನ್ನಗಳ ಕ್ಲಸ್ಟರ್, ರಫ್ತು ಇನ್‌ಕ್ಯುಬೇಷನ್ ಕೇಂದ್ರ, ಅಗ್ರಿ ಸ್ಟಾರ್ಟ್‌ಅಫ್ ಹಬ್, ಒಂದೇ ಕಡೆ ಮಾಡುವುದು,  ಎರಡನೇ ಹಂತದಲ್ಲಿ ಜಿಲ್ಲೆಯ ಸ್ಥಳೀಯ ಸಂಸ್ಥೆವಾರು ಮತ್ತು ಮೂರನೇ ಹಂತದಲ್ಲಿ ರಾಜ್ಯದ ವಿಧಾನಸಭಾ ಕ್ಷೇತ್ರವಾರು ಮಾಡಿ ಎಂದು ಬೊಬ್ಬೆ ಹೊಡೆಯುತ್ತಿರುವುದು. ಬಹುಷಃ ಮೋದಿಜಿ ಬಾಯಲ್ಲಿ ಈ ಮಾತು ಯೋಜನೆಗೆ ಸ್ಪೀಡ್ ಆಗಲಿದೆಯೇ ಕಾದು ನೋಡೋಣ.