19th September 2023
Share

ಕೇಂದ್ರ ಸರ್ಕಾರ ಅಟಲ್ ಭೂಜಲ್  ಯೋಜನೆ ಜಾರಿಗೊಳಿಸಿ ಪ್ರತಿ ಗ್ರಾಮ ಪಂಚಾಯಿತಿಯ ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ ಮಾಡುವುದಾಗಿ ಘೋಶಿಸಿದೆ.

ಈಗಾಗಲೇ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಾರಿಗೊಳಿಸಿ ಸುಳ್ಳು ಡೇಟಾ ಗಳಿಂದ ಕೂಡಿದ ಡಿಸ್ಟ್ರಿಕ್ಟ್ ಇರ್ರಿಗೇಷನ್ ಪ್ಲಾನ್ ಮಾಡಿ ಇಟ್ಟಿದೆ.

ಈಗಲೂ ಅದು ಆಗಬಾರದು ಎಂದು ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಲಗ್ರಾಮ ಕ್ಯಾಲೆಂಡರ್ ಬಗ್ಗೆ ಪಿಪಿಟಿ ಪ್ರದರ್ಶಿಸಿದ್ದು, ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲರೂ ಬೆಂಬಲ ಸೂಚಿಸಿದ್ದರು.

ಈಗ ತುಮಕೂರು ತಾಲ್ಲೂಕು, ಸ್ವಾಂದೇನಹಳ್ಳಿ ಗ್ರಾಮದ ಜಲಗ್ರಾಮ ಕ್ಯಾಲೆಂಡರ್‌ನ್ನು   ಸಿದ್ಧಪಡಿಸಿದ್ದು,   ಈ ಮ್ಯಾಪ್ ರಚಿಸಿದ ತಂಡಕ್ಕೆ ಸಾರ್ವಜನಿಕ ಸನ್ಮಾನ ಮಾಡಲು ಸಹ ಚಿಂತನೆ ನಡೆದಿದೆ.

ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರಿಗೆ ಸಲ್ಲಿಸಲು ಸಿದ್ಧತೆ ನಡೆದಿದೆ.