20th December 2024
Share

ಲೆಕ್ಕವೇ ಇಲ್ಲ, ಮೀಟಿಂಗ್ ಮೀಟಿಂಗ್

ಒಂದು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೆಡಿಪಿ ಸಭೆ. ಜಿಲ್ಲಾ ಪಂಚಾಯತ್ ಸಮಿತಿ, ಲೋಕಸಭಾ ಸದಸ್ಯರ ಅಧ್ಯಕ್ಷತೆಯ ದಿಶಾ ಸಮಿತಿ, ಶಾಸಕರ ಅಧ್ಯಕ್ಷತೆಯ ಕೆಡಿಪಿ ಸಭೆ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಭೆಗಳು. ಜೊತೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಮತ್ತು ಸಿಇಓ ಅಧ್ಯಕ್ಷತೆಯ ವಿವಿಧ ಸಮಿತಿಗಳ ಸಭೆಗಳು ನಿರಂತರವಾಗಿ ನಡೆಯುತ್ತಿವೆ.

ನಾಚಿಕೆಯ ವಿಷಯವೆಂದರೆ ಇದೂವರೆಗೂ ಆಯಾ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯದ ಯಾವ, ಯಾವ ಅನುದಾನದಲ್ಲಿ ಏನೇನು ಕೆಲಸ ನಡೆಯುತ್ತಿದೆ ಎಂದು ಎಲ್ಲೂ ಒಂದು ಕಡೆ ಲೆಕ್ಕ ಇಲ್ಲ, ಒಂದೊಂದು ಒಂದೊಂದು ಕಡೆ ಇದೆ, ಇವರೆಲ್ಲರೂ ಏನು ಮಾಡುತ್ತಾರೆ. ಯಾವುದೋ ಒಂದು ವಿಷಯದ ಬಗ್ಗೆ ಒಂದಿಬ್ಬರ ಅಧಿಕಾರಿಗಳನ್ನು ಬೈಯುತ್ತಾರೆ, ಊಟ ಮಾಡಿ ಎದ್ದು ಹೋಗುತ್ತಾರೆ. ಇದಕ್ಕೆ ಸಾವಿರಾರು ರೂ ಖರ್ಚು.

 ರಾಜ್ಯದಲ್ಲೂ ಅದೇ ಕತೆ, ಕೇಂದ್ರದಿಂದ ಅನುದಾನ ಬಿಡುಗಡೆಯಾಗಿಲ್ಲ, ಮಲತಾಯಿ ಧೋರಣೆ ಎಂದು ಬೊಬ್ಬೆ ಹೊಡೆಯುತ್ತಾರೆ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ, ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ, ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ, ಸಚಿವರ ಅಧ್ಯಕ್ಷತೆಯ ಸಭೆ, ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಭೆ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ.

ಕೇಂದ್ರದ ಪ್ರತಿ ಇಲಾಖೆ, ನಿಗಮ, ಮಂಡಳಿ, ಬೋರ್ಡ್ ಮತ್ತು ಎನ್.ಜಿ.ಓ ಗಳ ಹಣದ ವಿವರ ಯಾರ ಬಳಿ ಇರಬೇಕು. ಮೋದಿಯವರು ಯಾವ ಪುರುಷಾರ್ಥಕ್ಕೆ ದಿಶಾ ಸಮಿತಿ ಸಭೆ ರಚಿಸಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ.

ದೆಹಲಿ ಪ್ರತಿನಿಧಿ, ದೆಹಲಿಯಲ್ಲಿ ರೆಸಿಡೆಂಟ್ ಕಮೀಷನರ್, ಎಂಪಿ ಸೆಲ್, ಮುಖ್ಯ ಮಂತ್ರಿಗಳ ಕಚೇರಿಯಲ್ಲಿ ದೆಹಲಿ ಪತ್ರ ವ್ಯವಹಾರದ ವಿಭಾಗ. ಹೀಗೆ ಎಲ್ಲರೂ ಯಜಮಾನರೇ ಆದರೆ ಒಟ್ಟು ಲೆಕ್ಕ ಒಂದೇ ಕಡೆ ಎಲ್ಲೂ ಇಲ್ಲ.  ತುಮಕೂರು ದಿಶಾ ಸಮಿತಿ ರಾಜ್ಯದ ಮತ್ತು ಎಲ್ಲಾ ಜಿಲ್ಲೆಗಳ ಅಧಿಕಾರಿಗಳು ದಿಶಾ ಸಮಿತಿಯ ಗೈಡ್ ಲೈನ್ ಈಗ ಓದುವ ಸ್ಥಿತಿಗೆ ಬಂದಿದ್ದಾರೆ. ಅಂಕಿ ಅಂಶಗಳ ಮತ್ತು ಯೋಜನಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಈಗ  ಗೈಡ್ ಲೈನ್ ಓದುತ್ತಿದ್ದಾರೆ, ಹೌದು ನೀವು ಹೇಳುವ ಲೆಕ್ಕ ಎಲ್ಲೂ ಇಲ್ಲ ಈಗ ಒಂದೇ ಕಡೆ ತರಬೇಕು ಎಂಬ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ.

ಯಾವುದೇ ಪಕ್ಷದ ಸರ್ಕಾರವಿರಲಿ ವಿರೋಧ ಪಕ್ಷಗಳ ನಾಯಕರು ಇರುವುದು ಏಕೆ. ಇವೆಲ್ಲಾ ನೋಡಲು ಅವರಿಗೆ ಸಮಯವಿಲ್ಲವೇ?