ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರಾದ ಮಾನ್ಯ ಶ್ರೀ ಕೆ.ಎಸ್.ಈಶ್ವರಪ್ಪನವರು ಮೋದಿಜಿ ನೀವು ಹೇಳಿದ್ದೆಲ್ಲಾ ಮಾಡಕಾಗುತ್ತಾ ಎನ್ನುವ ರೀತಿಯಲ್ಲಿ ರಾಜ್ಯ ಮಟ್ಟದ ದಿಶಾ ಸಮಿತಿಯ ಕಡತವನ್ನು ನೋಡೇ ಇಲ್ಲ.
ಮುಖ್ಯ ಮಂತ್ರಿಯವರ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿಯನ್ನು ರಚನೆ ಮಾಡಲು ಮಾನ್ಯಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪವನರ ಕಚೇರಿಯಿಂದ ಕಡತ ಕಳುಹಿಸಿದ್ದರೂ ಏಕೋ ಎನೋ ಅವರ ದೃಷ್ಠಿ ಕಡತದ ಕಡೆ ಇನ್ನೂ ಬಿದ್ದಿಲ್ಲ.
ಈಶ್ವರಪ್ಪನವರಿಗೆ ದಿಶಾ ಸಮಿತಿಯ ಮಹತ್ವ ತಿಳಿದಿಲ್ಲ, ಒಂದು ವೇಳೆ ತಿಳಿದಿದ್ದರೆ ಅವರು ಇಷ್ಠರ ವೇಳೆಗೆ ಸಭೆ ನಡೆಸಿ ಢಾಂ, ಢೂಂ ಎನ್ನಿಸುತ್ತಿದ್ದರು ಎಂದು ಅವರ ಇಲಾಖೆಯ ಅಧಿಕಾರಿಯೊಬ್ಬರು ನಗುತ್ತಿದ್ದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಎಲ್.ಕೆ.ಅತೀಕ್ ಅವರು ದಕ್ಷತೆಯ ಅಧಿಕಾರಿ, ಮಾನ್ಯ ಪ್ರಧಾನ ಮಂತ್ರಿಯವರ ಕಚೇರಿಯಲ್ಲಿ ಕೆಲಸಮಾಡಿದ್ದಾರೆ, ಮಾನ್ಯ ಮುಖ್ಯಮಂತ್ರಿಯವರ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ಸಾಹೇಬರನ್ನು ತಾವು ಏಕೆ ಈ ವಿಚಾರದಲ್ಲಿ ಭೇಟಿ ಮಾಡಬಾರದು ಎಂದು ಅವರ ಇಲಾಖೆಯ ಅಧಿಕಾರಿಯೊಬ್ಬರು ಗಂಭೀರವಾಗಿ ಹೇಳಿದರು.
ಮೊದಲು ಸಚಿವರಾದ ಶ್ರೀ ಈಶ್ವರಪ್ಪನವರನವರೊಂದಿಗೆ ಸಮಾಲೋಚನೆ ನಡೆಸಿ, ನಿಮ್ಮ ಸಾಹೇಬರನ್ನು ಭೇಟಿ ಮಾಡುವುದಾಗಿ ತಿಳಿಸಿದೆ. ಈ ಬಗ್ಗೆ ಸಚಿವರ ಆಪ್ತ ಕಾರ್ಯದರ್ಶಿವರೊಂದಿಗೆ ದಿಶಾ ಸಮಿತಿಯ ಮಹತ್ವದ ಬಗ್ಗೆ ಸಮಾಲೋಚನೆ ನಡೆಸಿದಾಗ ಅವರು ಶೀಘ್ರವಾಗಿ ಸಮಿತಿ ರಚಿಸಿ ದೇಶಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಿದ್ದಾರೆ.