5th December 2024
Share

  ಕೇಂದ್ರ ಸರ್ಕಾರ ತಾನು ನೀಡಿದ ಅನುದಾನ ಸಮರ್ಪಕವಾಗಿ ನಿಗದಿತ ಅವಧಿಯಲ್ಲಿ, ಯಾವುದೇ ಲೋಪದೋಷಗಳಾಗದೆ ಖರ್ಚು ಮಾಡಲು ಆಯಾ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ದಿಶಾ

(DISHA  – DISTRICT DEVELOPMENT COORDINATION AND MONITORING COMMITTEE ) ಸಮಿತಿಯನ್ನು ರಚಿಸಿದೆ,

  ಆದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ದಿಶಾ ಸಮಿತಿಯನ್ನೇ ರಚಿಸಿಲ್ಲ, ಜಿಲ್ಲಾ ಪಂಚಾಯತ್ ಸಿಇಓ ಗಳು ದಿಶಾ ಸಮಿತಿಯ ಸದಸ್ಯಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಬೇಕು, ಸಭೆ ನಡೆಸಲು ಲೋಕಸಭಾ ಸದಸ್ಯರು ಸಿಇಓಗಳಿಗೆ ಸಿಕ್ಕಿಲ್ಲವೋ ಅಥವಾ ಎಂಪಿಗಳಿಗೆ ಸಮಯ ಸಿಕ್ಕಿಲ್ಲವೋ ಗೊತ್ತಿಲ್ಲ.

    ಮೋದಿಯವರು 2022 ಕ್ಕೆ ನವಭಾರತದ ಕನಸು ನನಸು ಮಾಡಬೇಕು ಎನ್ನುತ್ತಿದ್ದಾರೆ. ಹಲವಾರು ಯೋಜನೆಗಳ ಜಾರಿಗೆ ಇದೇ ಅವಧಿಯ ಗಡುವು ನೀಡಿದ್ದಾರೆ. ಆದರೇ ಅವರ ಪಕ್ಷದ ಎಂಪಿಗಳೇ 25  ಜನ ಇದ್ದರೂ ಈವರೆಗೂ ಎಲ್ಲಾ ಜಿಲ್ಲೆಗಳಲ್ಲಿ ದಿಶಾ ಸಮಿತಿಯನ್ನೇ ರಚಿಸಿಲ್ಲ.

   ಎಲ್ಲಾ ಎಂಪಿಗಳು ಮೋದಿಯವರ ಯೋಜನೆಗಳ ಬಗ್ಗೆ ಅಧ್ಯಯನ ಮಾಡಿ ಸೂಕ್ತ ಪ್ರಸ್ತಾವನೆ ಸಲ್ಲಿಸದಿದ್ದಲ್ಲಿ ನವಭಾರತದ ಕನಸು ಬರೀ ಭಾಷಣದಲ್ಲಿ ಮಾತ್ರ ಇರಲಿದೆ.

  ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಅವರ ಅಧ್ಯಕ್ಷತೆಯಲ್ಲಿ ರಚಿಸಬೇಕಾದ ರಾಜ್ಯ ಮಟ್ಟದ ದಿಶಾ ಸಮಿತಿಯನ್ನೆ ಇನ್ನೂ ರಚಿಸಿಲ್ಲ ನಮ್ಮದೇನು ಮಹಾ ಎಂಬ ಭಾವನೆ ಎಂಪಿಗಳಿಗೆ ಇರಬೇಕು?

ಎಂಪಿಯವರಿಗೆ ಸರ್ಕಾರ ಆಪ್ತ ಸಹಾಯಕರು ಸೇರಿದಂತೆ ದೆಹಲಿ ಮತ್ತು ಲೋಕಸಭಾ ಕ್ಷೇತ್ರದಲ್ಲಿ ಒಂದು ದಂಡು ನೌಕರರನ್ನು ನೀಡಿದೆ. ಅವರಿಗೂ ಈ ಬಗ್ಗೆ ಅರಿವಿಲ್ಲವೇ? ಮೊದಲು ಅವರೆಲ್ಲಾ ದಿಶಾ ಸಮಿತಿಯ ಗೈಡ್‌ಲೈನ್ ಓದಬೇಕಾಗಿದೆ.

ಕೇಂದ್ರವನ್ನು ಪ್ರತಿನಿಧಿಸುವ ರಾಜ್ಯದ ನಾಲ್ಕು ಜನ ಸಚಿವರಿದ್ದಾರೆ ಅವರು ಯಾಕೆ ಈ ಬಗ್ಗೆ ಗಮನ ಹರಿಸಿಲ್ಲ ಎನ್ನುವುದು ಒಂದು ಯಕ್ಷಪ್ರಶ್ನೆ.