22nd December 2024
Share

ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರಸಿಂಗ್ ಶೇಖಾವತ್ ರವರ ಅಧ್ಯಕ್ಷತೆಯಲ್ಲಿ   ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯದ Consultative Committee For The Ministry Of Jalashakthi  ಸಭೆಯು ನವದೆಹಲಿಯಲ್ಲಿ ದಿನಾಂಕ:07.01.2020  ರಂದು ನಡೆಯಿತು.

 ಈ ಸಭೆಯಲ್ಲಿ ಸಮಿತಿಯ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕು ಕಸಬಾ ಹೋಬಳಿಯ ಸ್ವಾಂದೇನಹಳ್ಳಿ ಗ್ರಾಮದ ಜಲಕ್ಯಾಲೆಂಡರ್‌ನ್ನು ಪ್ರದರ್ಶಿಸಿದ್ದಾರೆ. ಸಚಿವರು ಬಹಳ ಉತ್ತಮವಾದ ಮಾಹಿತಿಯಿದೆ, ಈ ಮ್ಯಾಪ್ ಮಾಡಲು ಎಷ್ಟು ಸಮಯ ತೆಗೆದುಕೊಂಡಿದೆ, ವಾಟರ್ ಆಡಿಟ್, ವಾಟರ್ ಬಡ್ಜೆಟ್ ಮತ್ತು ವಾಟರ್ ಸ್ಟ್ರಾಟಜಿ ಬಗ್ಗೆ ಸಂಗ್ರಹಿಸಿರುವ ಮಾಹಿತಿಗಳನ್ನು ಯಾವ ಆಧಾರದಲ್ಲಿ ಹೇಗೆ ಮಾಡಲಾಗಿದೆ, ಎಂಬ ವಿಷಯಗಳನ್ನು ಬಸವರಾಜ್ ರವರಿಂದ ಪಡೆದಿದ್ದಾರೆ.

 ಕಾರ್ಯದರ್ಶಿ ಸೇರಿದಂತೆ ಉನ್ನತಮಟ್ಟದ ಅಧಿಕಾರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಅಟಲ್ ಭೂಜಲ್ ಯೋಜನೆಯಡಿಯಲ್ಲಿ ದೇಶಾಧ್ಯಾಂತ ಈ ಮ್ಯಾಪ್ ಮಾಡಲು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

 ಬಸವರಾಜ್‌ರವರು ದೆಹಲಿಗೆ ಹೋಗುವಾಗ ಮ್ಯಾಪ್ ಮರೆತು ಕೊಟ್ಟಿರಲಿಲ್ಲ, ಅಲ್ಲಿಂದ ದೂರವಾಣಿ ಕರೆಮಾಡಿ ಇ ಮೇಲ್‌ನಲ್ಲಿ ಮ್ಯಾಪ್ ಕಳುಹಿಸಲು ಸೂಚಿಸಿದರು. ದೆಹಲಿಯಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿ ತುಮಕೂರಿನವರೇ ಆದ ಶ್ರೀ ಆರ್.ಮುರುಳಿಧರ್ ನಾಯಕ್‌ರವರು ಸಕಾಲಕ್ಕೆ ಮ್ಯಾಪ್ ಪ್ರಿಂಟ್ ತೆಗೆಸಿ ತಂದು ಕೊಟ್ಟಿದ್ದಾರೆ. ಮ್ಯಾಪ್ ಸಿದ್ಧಪಡಿಸಿ ನೀಡಿದ್ದಕ್ಕೆ ಬಸವರಾಜ್‌ರವರು ಸಭೆಯಿಂದ ಹೊರಬಂದ ತಕ್ಷಣ ಹರ್ಷ ವ್ಯಕ್ತಪಡಿಸಿದರು.

ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಈ ಮ್ಯಾಪ್ ಅಗತ್ಯದ ಬಗ್ಗೆ ಪಿಪಿಟಿ ಪ್ರದರ್ಶಿಸಿದಾಗ   ಜಿಲ್ಲಾಧಿಕಾರಿಗಳಾದ ಡಾ. ರಾಕೇಶ್ ಕುಮಾರ್‌ರವರು ಮತ್ತು ಜಿಲ್ಲಾ ಪಂಚಾಯಿತ್ ಸಿಇಓ ರವರಾದ ಶ್ರೀ ಮತಿ ಶುಭ ಕಲ್ಯಾಣ್‌ರವರು ಪ್ರೇರಣೆಗೊಂಡು ಹೋಬಳಿಗೊಂದು ಗ್ರಾಮದಂತೆ 50 ಗ್ರಾಮಗಳ ಜಲ ಕ್ಯಾಲೆಂಡರ್ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದರು ಪಲಿತಾಂಶ?

ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂನ ಕನಸಿನ ಈ ಯೋಜನೆಗೆ ಇಂಜಿನಿಯರ್‌ಗಳಾದ ಶ್ರೀ ಡಿ.ಎಸ್.ಹರೀಶ್, ಶ್ರೀ ಹೆಚ್.ಬಿ.ಮಲ್ಲೇಶ್ ರವರ ಸಲಹೆ ಮೇರೆಗೆ ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಷನ್ ತಂಡದ ಶ್ರೀ ಸತ್ಯಾನಂದ್, ಶ್ರೀ ಗಂಗಣ್ಣ, ಶ್ರೀ ಎಂ.ಪಿ.ರಾಜಶೇಖರಯ್ಯ, ಶ್ರೀ ಶಶಿಧರ್ ತಂಡದವರು ಸಿದ್ಧಪಡಿಸಿ ಸಂಸದರಿಗೆ ನೀಡಿದ್ದರು.

 ಎತ್ತಿನಹೊಳೆ ಮುಖ್ಯ ಇಂಜಿನಿಯರ್ ಶ್ರೀ ಮಾಧವರವರು ಸಹ ಪರಿಶೀಲಿಸಿ ಅಟಲ್ ಭೂಜಲ್ ಯೋಜನೆಯಡಿಯಲ್ಲಿ ಈ ಮ್ಯಾಪ್‌ಗಳನ್ನು ಪ್ರತಿ ಗ್ರಾಮಕ್ಕೂ ಮಾಡುವ ಅಗತ್ಯದ ಬಗ್ಗೆ ಪ್ರತಿಪಾದಿಸಿದ್ದಾರೆ.   ಬಸವರಾಜ್‌ರವರ ಮನವಿ ಮೇರೆಗೆ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂಪ್ಪನವರು ಜಲಗ್ರಾಮ ಕ್ಯಾಲೆಂಡರ್ ಮಾಡಲು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಶ್ರೀ ಮೃತ್ಯುಂಜಯ ಸ್ವಾಮಿರವರಿಗೆ ಸೂಚಿಸಿದ್ದಾರೆ. ಅವರು ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರದ ನಿರ್ಧೇಶಕರಾದ ಶ್ರೀ ಶಿವಸ್ವಾಮಿರವರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಪಲಿತಾಂಶ?

  ಕಡಿಮೆ ಇರುವ ನೀರನ್ನು ಯಾವ ರೀತಿ ಸಂಗ್ರಹಿಸ ಬಹುದಾಗಿದೆ ಎಂಬ ಬಗ್ಗೆ ನೀರಿಗೆ ಸಂಬಂದಿಸಿದ ಗ್ರಾಮೀಣಾಭಿವೃದ್ಧಿ ನೀರು ಸರಬರಾಜು ಇಲಾಖೆ, ನಗರಾಭಿವೃದ್ಧಿ ನೀರು ಸರಬರಾಜು ಮಂಡಳಿ, ಕೃಷಿ, ತೋಟಗಾರಿಕೆ, ರೇಷ್ಮೆ, ಅಂತರ್ಜಲ ಅಭಿವೃದ್ಧಿ ಇಲಾಖೆ, ಜಲಶಕ್ತಿ ಸಚಿವಾಲಯ, ವಿದ್ಯುತ್ ಕಂಪನಿಗಳು, ಗ್ರಾಮಪಂಚಾಯಿತ್, ಸಣ್ಣ ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ, ಸಂಘ ಸಂಸ್ಥೆಗಳು ಗ್ರಾಮದ ಜನತೆ ಒಟ್ಟಿಗೆ ಕುಳಿತು ನಿರ್ಧಾರ ಕೈಗೊಳ್ಳುವುದು, ಎಲ್ಲಾ ಇಲಾಖೆಗಳು ಅಧ್ಯಯನ ಮಾಡಿ ವರದಿ ಮಾಡುವುದು, ನಂತರ ಅಗತ್ಯ ಕ್ರಮಕೈಗೊಳ್ಳುವುದು ಅಟಲ್ ಭೂಜಲ್ ಯೋಜನೆಯ ಪ್ರಮುಖ ಅಂಶವಾಗಿದೆ.