26th July 2024
Share

ಕಸವನ್ನು ರಸ ಮಾಡುವ ವಿನೂತ ಚಿಂತನೆಯ ಯೋಜನೆಗೆ ತಾವು ಸಲಹೆ ನೀಡಬಹುದು.

ತುಮಕೂರಿನಲ್ಲಿರುವ ಎಲ್ಲಾ ಬಡಾವಾಣೆಗಳ ನಾಗರಿಕ ಸಮಿತಿಗಳ ಪಾತ್ರ ಮಹತ್ತರವಾಗಿದೆ, ಯಾಕೆ ಎಂಬುದನ್ನು ಬಿಡಿಸಿ ಹೇಳುವುದಿಲ್ಲಾ.

  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ನಗರದ ಘನತ್ಯಾಜ್ಯ ವಸ್ತು ಘಟಕವಿರುವ ಅಜ್ಜಗೊಂಡನಹಳ್ಳಿ ಸುತ್ತಮುತ್ತಲಿನ ಮೂರು ಕಿ.ಮೀ ವ್ಯಾಪ್ತಿಯಲ್ಲಿರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಜನತೆಯ ಬೇಡಿಕೆಗಳಿಗೆ ಅನುಗುಣವಾಗಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲು ನಿರ್ಧಾರ ಕೈಗೊಂಡಿದ್ದಾರೆ. ಜನತೆಯ ಸಲಹೆಗಳ ಮೇಲೆ ಬದಲಾವಣೆ ಮಾಡಲು ಅವಕಾಶವಿದೆ. ಆರಂಭದಲ್ಲಿಯೇ ಚರ್ಚೆ ಅಗತ್ಯ.

ವಿಧಾನಸಭಾ ಸದಸ್ಯರ ಸಲಹೆ ಪಡೆಯಲು ಸಹ ಗ್ರಾಮದ ಜನತೆಗೆ ಸಂಸದರು ಸೂಚಿಸಿದ್ದಾರೆ.

 ದೇಶದ ಯಾವುದೇ ಲೋಕಸಭಾ ಸದಸ್ಯರು ಇಂಥಹ ನಿರ್ಧಾರ ಕೈಗೊಂಡಿರಲಿಕ್ಕಿಲ್ಲ, ಒಂದು ವೇಳೆ ತೆಗೆದು ಕೊಂಡಿದ್ದಲ್ಲಿ ಸಂಶೋಧಕರು ಅಧ್ಯಯನ ಮಾಡಿ ಮಾಹಿತಿ ನೀಡಲು ಮನವಿ.

  ಗ್ರಾಮಗಳ ಆಯ್ಕೆಯಿಂದ ಆರಂಭಿಸಿ, ಯಾವ ಗ್ರಾಮದಲ್ಲಿ ಯಾವ ಯೋಜನೆಯನ್ನು, ಯಾವ ಇಲಾಖೆಯ ಅನುದಾನದಲ್ಲಿ ಕೈಗೊಳ್ಳಬಹುದು ಎಂಬುದನ್ನು ಸಹ ಗ್ರಾಮದ ಜನತೆಯೇ ಅಧ್ಯಯನ ಮಾಡಿ ವರದಿ ನೀಡುವ ಷರತ್ತನ್ನು ಸಹ ಸಂಸದರು ನೀಡಿದ್ದಾರೆ.

   ತುಮಕೂರಿನ ಸ್ಪೆಕ್ಟ್ರಾ ಅಸೋಶಿಯೇಷನ್‌ನ ಶ್ರೀ ಸತ್ಯಾನಂದ್, ಶ್ರೀ ಗಂಗಣ್ಣ ಮತ್ತು ತಂಡದವರು ಬೇಸ್ ಮ್ಯಾಪ್ ಮಾಡುವ ಕೆಲಸವನ್ನು ಆರಂಭಿಸಿದ್ದಾರೆ. ಜೊತೆಗೆ ಟೆಕ್ನೋಕಾನ್‌ನ ಶ್ರೀ ರಾಮಮೂರ್ತಿರವರ ತಂಡ ಪ್ರತಿ ಗ್ರಾಮದಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳ, ನಾಗರಿಕರ, ಚುನಾಯಿತ ಜನಪ್ರತಿನಿಧಿಗಳ ಮತ್ತು ಪರಿಣಿತ ತಜ್ಞರುಗಳ ಸಹಕಾರದಿಂದ ಪರಿಕಲ್ಪನಾ ವರದಿಯನ್ನು ಸಿದ್ಧಪಡಿಸುವ ಕೆಲಸವನ್ನೂ ಆರಂಭಿಸಿದ್ದಾರೆ.

ತುಮಕೂರು ಜಿಲ್ಲಾ ದಿಶಾ ಸಮಿತಿಯ ನಾಮನಿರ್ಧೇಶನ ಸದಸ್ಯರುಗಳ ಸಹಕಾರ ಪಡೆಯಲು ನಾಗರೀಕರು ಒಲವು ತೋರಿದ್ದಾರೆ. ಈ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಎಐಸಿಟಿ ಮಾರ್ಗದರ್ಶಿ ಸೂತ್ರದ ಪ್ರಕಾರ ಒಂದು ಇಂಜಿನಿಯರಿಂಗ್ ಕಾಲೇಜು ಈ ಗ್ರಾಮಗಳ ದತ್ತು ತೆಗೆದುಕೊಳ್ಳಲು ಸಮಾಲೋಚನೆ ನಡೆಯುತ್ತಿದೆ.

 ಯೋಜನೆಗಳ ಅನಾಲೀಸಸ್ ಮಾಡಲು ಬೆಂಗಳೂರಿನ ಐಸಿಎಸ್‌ಟಿ ಸಂಸ್ಥೆಯೊಂದಿಗೆ ಚರ್ಚೆ ನಡೆಯುತ್ತಿದೆ.

ಇವರೆಲ್ಲಾ ಸಿದ್ಧಪಡಿಸಿ ನೀಡಿದ ವರದಿಯ ಆಧಾರದ ಮೇಲೆ ಆರ್ಥಿಕ ಸ್ಥಿಗತಿಗೆ ಅನುಗುಣವಾಗಿ, ಅಗತ್ಯದ ಮೇರೆಗೆ ಜಿಲ್ಲಾಡಳಿತ ಮತ್ತು ನಗರಾಡಳಿತ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕಿದೆ. 

 ಅಧಿಕಾರಿಗಳ ಪಾತ್ರ, ಗ್ರಾಮದ ಜನತೆ ಕೊಟ್ಟ ವರದಿಯ ನಂತರ ಬರಲಿದೆ, ಪೂರ್ವ ಭಾವಿಯಾಗಿ ಎಲ್ಲಾ ಇಲಾಖೆಯ ಮಾಹಿತಿಗಳನ್ನು ನೀಡುವ ಕೆಲಸವನ್ನು ಮಾತ್ರ ಮಾಡ ಬೇಕಾಗಿದೆ. 

  ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಸೇರಿದಂತೆ ಅನೇಕ ಸಂಸ್ಥೆಗಳ ಸಹಕಾರ ಪಡೆಯಲು ಚಿಂತನೆ ನಡೆಸಲಾಗಿದೆ. 

 ಯಾವುದೇ ಒಂದು ಸಂಸ್ಥೆ ಈ ಯೋಜನೆಗಳ ಅನುಷ್ಠಾನಕ್ಕಾಗಿ ಪಿಪಿಪಿ ಮಾದರಿಯಲ್ಲಿ ಶ್ರಮಿಸಲು ಮುಂದೆ ಬಂದಲ್ಲಿ, ಸೂಕ್ತ ಪ್ರಸ್ತಾವನೆ ಸಲ್ಲಿಸಿದಲ್ಲಿ, ಸರ್ಕಾರದ ಮಟ್ಟದಲ್ಲಿ ಒಂದು ವಿನೂತನವಾದ ಯೋಜನೆಗೆ ಅನುಮತಿ ಕೊಡಿಸಲು ಸಹ ಸಂಸದರು ಚಿಂತನೆ ನಡೆಸಿದ್ದಾರೆ.