22nd December 2024
Share
ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಿದ್ಧಪಡಿಸಿದ್ದ ತುಮಕೂರು ಸ್ಮಾರ್ಟ್ ಸಿಟಿ ಪ್ರಸ್ತಾವನೆಯ ಬಿಡುಗಡೆ ಚಿತ್ರ

  ಕೇಂದ್ರ ಸರ್ಕಾರ ಏನೇನೋ ಪರಿಕಲ್ಪನೆ ಇಟ್ಟುಕೊಂಡು ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಿತು. ತುಮಕೂರು ನಗರವೂ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಯಿತು. ದೇಶಾದ್ಯಂತ 100 ಸ್ಮಾರ್ಟ್ ಸಿಟಿಗಳಲ್ಲಿ ನಂಬರ್ -1 ಸ್ಮಾರ್ಟ್  ಸಿಟಿ ಮಾಡಲೇ ಬೇಕು ಎಂಬುದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕನಸಾಗಿದೆ. ಇದೆ ಹೆಸರಿನಲ್ಲಿ ಒಂದು ವಾಟ್ಸ್ ಅಫ್ ಗ್ರೂಪ್ ಸಹ ರಚನೆಯಾಗಿದೆ.

 ಕಳೆದ ಕೆಲವು ದಿವಸಗಳಿಂದ ತುಮಕೂರು ಸ್ಮಾರ್ಟ್ ಸಿಟಿ ಬಗ್ಗೆ ಧಾರವಾಹಿ ಮಾದರಿಯಲ್ಲಿ ಅವ್ಯವಹಾರ, ಭ್ರಷ್ಠಾಚಾರ, ತಾಂತ್ರಿಕ ಭ್ರಷ್ಠಾಚಾರ, ಕಾನೂನು ಭ್ರಷ್ಠಾಚಾರ ಬಗ್ಗೆ ಮಾದ್ಯಮಗಳಲ್ಲಿ ಪರ-ವಿರೋಧ, ಸೋಶಿಯಲ್ ಮೀಡಿಯಾಗಳಲ್ಲಿ ಪರ- ವಿರೋಧ ಹೀಗೆ ಸ್ವಾರಸ್ಯಕರವಾಗಿ ಚರ್ಚೆ ನಡೆದಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿದ್ದ ಶ್ರೀಮತಿ ಶಾಲಿನಿ ರಜನೀಶ್ ವರ್ಗಾವಣೆಯೂ ಆಯಿತು. ಹೊಸದಾಗಿ ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಾರ್ಯನಿರ್ವಹಿಸಿದ್ದ ಶ್ರೀ ರಾಕೇಶ್‌ಸಿಂಗ್ ರವರು ಬಂದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ ಮಾಧುಸ್ವಾಮಿಯವರ ಅಧ್ಯಕ್ಷತೆಯ ಸಮಿತಿ, ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯ ದಿಶಾ ಸಮಿತಿ, ತುಮಕೂರು ಮಹಾನಗರಪಾಲಿಕೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ  ಈ ನಾಲ್ಕು ಸಮಿತಿಗಳಲ್ಲಿ ಇದೂವರೆಗೂ ಯಾರು ತಪ್ಪು ಮಾಡಿದ್ದಾರೆ, ಏನು ತಪ್ಪು ಮಾಡಿದ್ದಾರೆ ಎಂಬುದು ದಾಖಲಾಗಿಲ್ಲ. ಎನ್ನುವುದು ಅಧಿಕಾರಿಗಳ ಮೌಖಿಕ ಉತ್ತರ.

ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಅವರ ಶಕ್ತಿ ಮೀರಿ ಕೆಲವು ಅನುಪಯುಕ್ತ ಯೋಜನೆಗಳ ಬದಲಾವಣೆ ಮಾಡಿದ್ದಾರೆ, ಪ್ರಸ್ತುತ ಯಾವ ಕೆಲಸ ಅನಗತ್ಯ, ಯಾವುದು ಬೇಡ, ಯಾವುದು ಬೇಕು ಎಂಬ ಬಗ್ಗೆ ಚರ್ಚೆಯಾಗಲೇಬೇಕು. ಪೂರ್ಣಗೊಂಡಿರುವ ಯೋಜನೆಗಳ ಬಗ್ಗೆಯೂ ಪರಾಮರ್ಶೆ ನಡೆಯಲೇ ಬೇಕು.

  ಹಾಗೇಯೇ ಇದೂವರೆಗೂ ಮಾಜಿ ಶಾಸಕರಾದ ಶ್ರಿ ಸೊಗಡು ಶಿವಣ್ಣನವರು ಮತ್ತು ಶ್ರೀ ರಫೀಕ್ ಅಹಮ್ಮದ್ ರವರು ಪತ್ರಿಕಾ ಹೇಳಿಕೆ ನೀಡಿ ಸುಮ್ಮನಾಗಿದ್ದಾರೆಯೇ ಹೊರತು ಲಿಖಿತ ದೂರು ನೀಡಿಲ್ಲವಂತೆ, ಯಾವ ಮಾಧ್ಯಮದವರಾಗಲಿ, ಯಾವುದೇ ಸಂಘ ಸಂಸ್ಥೆಗಳಾಗಲಿ, ಯಾವೊಬ್ಬ ವ್ಯಕ್ತಿಯೂ ಸಹ ನಿರ್ಧಿಷ್ಠ ದೂರು ನೀಡದೆ ಶಿಕ್ಷೆ ಯಾರಿಗೆ? ಯಾವುದೇ ತಪ್ಪು ಆಗಿಲ್ಲ ಎಂದರೇ ಇದೂವರೆಗೂ ಇಷ್ಟೊಂದು ಅಬ್ಬರ ಏಕೆ ಆಯಿತು ಎಂಬುದು ಒಂದು ಯಕ್ಷ ಪ್ರಶ್ನೆಯಾಗಿ ಉಳಿಯಲಿದೆ.

 ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸದಸ್ಯನಾಗಿ ಮತ್ತು ತುಮಕೂರು ಜಿಲ್ಲಾ ದಿಶಾ ಸಮಿತಿಯ ಸದಸ್ಯನಾಗಿ ಸೇವೆ ಸಲ್ಲಿಸುವ ಅವಕಾಶವೂ ದೊರೆತಿದೆ. ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸಹ ಆರಂಭದಲ್ಲಿಯೇ ತನ್ನ ಕನಸುಗಳ ಪ್ರಸ್ತಾವನೆಯನ್ನು ಸಹ ನೀಡಿದೆ. ಈಗ ಜನತೆಗೆ ಪ್ರತಿಯೊಂದು ಯೋಜನೆಗಳ ವಸ್ತು ಸ್ಥಿತಿ ಬಗ್ಗೆ ತಿಳಿಸುವುದು ಸಹ ಸಾಂಧರ್ಭಿಕವಾಗಿದೆ.