30th October 2024
Share

ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಐ.ಎ.ಎಸ್ ಅಧಿಕಾರಿ ಶ್ರೀ ಭೂಬಾಲನ್ ತುಮಕೂರಿನ ಕೆಲವು ಜನತೆಯ ಪಾಲಿಗೆ ಪಬ್ಲಿಕ್ ಹೀರೋ.

   ನನಗೆ ಗೊತ್ತಿರುವ ಪ್ರಕಾರ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು, ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳು ಅವರು ಕೈಗೊಳ್ಳುವ ಮಹತ್ತರ ಯೋಜನೆಗಳಿಗೆ ಅಡ್ಡಬರುವುದಿಲ್ಲಾ ಎಂಬುದು ನನ್ನ ಭಾವನೆ.

   ಅವರ ವರ್ಗಾವಣೆ ಆದಾಗ ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು, ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ವರ್ಗಾವಣೆ ಮಾಡಿಸಿದ್ದಾರೆ ಎಂಬ ಚರ್ಚೆ ನಡೆಯಿತು.

   ಕಾಕತಾಳೀಯವಾಗಿ ತುಮಕೂರು ಸ್ಮಾರ್ಟ್ ಸಿಟಿಗೆ ಪುಕ್ಕಲ ಅಧಿಕಾರಿ ಶ್ರೀ ಆದರ್ಶ ಕುಮಾರ್ ನೇಮಕ ಆಗಿದ್ದು ಸಹ ರೆಕ್ಕೆ ಪುಕ್ಕೆಗಳಿಗೆ ಇಂಬು ನೀಡಿತ್ತು. ಆದರೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಭೂಬಾಲನ್ ವರ್ಗಾವಣೆ ಯಾರಿಗೂ ಬೇಕಿರಲಿಲ್ಲ. ಆದರೂ ವರ್ಗಾವಣೆಯಲ್ಲಿ ಒಂದು ರಹಸ್ಯ ಇದೆ.

   ಹಿಂದಿನ ಸರ್ಕಾರ ನೇಮಿಸಿದ್ದ ಜಿಲ್ಲಾಧಿಕಾರಿ ಶ್ರೀ ಡಾ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ಶ್ರೀಮತಿ ಶುಭಕಲ್ಯಾಣ್ ಮತ್ತು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಭೂಬಾಲನ್ ವರ್ಗಾವಣೆ ಬಗ್ಗೆ ಬಹಳಷ್ಟು ಜನ ಹೇಳಿದರೂ ಯಾವ ಜನಪ್ರತಿನಿಧಿಗಳು  ತಲೆಕೆಡಿಸಿಕೊಳ್ಳಲಿಲ್ಲ.

   ಸರ್ಕಾರ ದಿನ ಬೆಳಗಾಗುವುದರೊಳಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಸಾವಿರಾರು ಉದಾಹರಣೆಗಳಿವೆ. ಆದರೆ ಇವರೆಲ್ಲಾ ಉತ್ತಮ ಕೆಲಸ ಮಾಡುತ್ತಾರೆ ಎಂಬ ಭಾವನೆ ಇರಬಹುದು. ಇಲ್ಲಿ ಜಾತಿ ರಾಜಕಾರಣವೂ, ಪಕ್ಷ ರಾಜಕಾರಣವೂ ಬರಲೇ ಇಲ್ಲ.

 ತುಮಕೂರು ನಗರ  ಬೆಂಗಳೂರು ನಂತರ ರಾಜಧಾನಿಯ ಒಂದು ಭಾಗದಂತೆ ಇದ್ದರೂ ಇಲ್ಲಿ ಜನತೆ ಬಯಸಿದಷ್ಟು ಅಭಿವೃದ್ಧಿ ಆಗಿಲ್ಲ. ಹಾಗಂತ ಅಭಿವೃದ್ಧಿಯೇ ಅಗಿಲ್ಲ ಎನ್ನುವಂತೆಯೂ ಇಲ್ಲ.

   ಈ ರೀತಿ ಅಧಿಕಾರ ಯಾವತ್ತೂ ಬಂದಿರಲಿಲ್ಲ, ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳು ಮತ್ತು ಪ್ರಧಾನ ಮಂತ್ರಿಗಳು ಒಂದೇ ಪಕ್ಷದವರೇ ಇದ್ದಾರೆ. ತುಮಕೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದರೂ ಅಭಿವೃದ್ಧಿಯ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲಾ. ಎಲ್ಲರೂ ಸಹಕರಿಸುವ ವಾತವಾರಣವಿದೆ.

  ತುಮಕೂರಿನಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ಕಾನೂನು ಮತ್ತು ತಾಂತ್ರಿಕ ಭ್ರಷ್ಠಾಚಾರ ಎಗ್ಗಿಲ್ಲದೆ ನಡೆಯುತ್ತಾ ಬಂದಿದೆ. ಇರುವ ಅಂಕಿ ಅಂಶಗಳೆಲ್ಲಾ ಶುದ್ಧ ಸುಳ್ಳು. ಲಂಚವಿಲ್ಲದೆ ಯಾವ ಕೆಲಸವೂ ಆಗುವುದಿಲ್ಲಾ. ಇದು ನಗರದ ಜನತೆಯ ಅಭಿಪ್ರಾಯ.

   ಇಂತಹ ಸಂದರ್ಭದಲ್ಲಿ ಮಹತ್ತರವಾದ ಬದಲಾವಣೆ ಜನತೆಯ ನೀರಿಕ್ಷೆ, ಸಾಮಾಜಿಕ ನ್ಯಾಯ, ಬಡವರ ಸೇವೆ, ಪಾರದರ್ಶಕ ಆಡಳಿತವೇ ಸ್ಮಾರ್ಟ್ ಸಿಟಿ ಮೊದಲ ಗುರಿ. ದಿಟ್ಟ ನಿರ್ಧಾರ ? ಪ್ರತಿಯೊಂದು ಯೋಜನೆಯಲ್ಲೂ ಶೇಕಡವಾರು ಸಾಧನೆ ಅಗತ್ಯ.

  ತುಮಕೂರು ಜಿಲ್ಲೆಯ ದಿಶಾ ಸಮಿತಿ ದೇಶದಲ್ಲಿಯೇ ಉತ್ತಮವಾಗಿ ಕಾರ್ಯ ನಿರ್ವಹಿಸುವ ಹಾದಿಯಲ್ಲಿ ಸಾಗುತ್ತಿದೆ. ನಗರದಲ್ಲಿ ಮೋದಿಜಿಯವರ ೨೦೨೨ ರ ಗುರಿ ಸಾಧನೆ ಆಗುವುದೇ ಕಾದು ನೋಡೋಣ.